Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈಜನ್ಮಸಂಖ್ಯೆಯವರಿಗೆ ಇಂದು ಹಠಾತ್ ಧನಲಾಭ!
ಜನ್ಮಸಂಖ್ಯೆ 4, 5, 6ರ ಜನವರಿ 10ರ ದಿನಭವಿಷ್ಯ ಇಲ್ಲಿದೆ. ಜನ್ಮಸಂಖ್ಯೆ 4 ರವರಿಗೆ ಅನಿರೀಕ್ಷಿತ ಫಲಿತಾಂಶ, ತಾಂತ್ರಿಕ ಕ್ಷೇತ್ರದಲ್ಲಿ ಶುಭ ಸುದ್ದಿ ಇರಲಿದೆ. ಜನ್ಮಸಂಖ್ಯೆ 5 ರವರು ಹಠಾತ್ ಧನಲಾಭ, ಉದ್ಯೋಗ ಬದಲಾವಣೆಗೆ ಅವಕಾಶ ಕಾಣಬಹುದು. ಜನ್ಮಸಂಖ್ಯೆ 6 ರವರಿಗೆ ವ್ಯಕ್ತಿತ್ವದ ಆಕರ್ಷಣೆ, ಐಷಾರಾಮಿ ಖರ್ಚು ಮತ್ತು ವಿವಾಹ ಯೋಗವಿದೆ. ಆರೋಗ್ಯದ ಕಡೆ ಗಮನವಿಡಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ನೀವು ಅಂದುಕೊಂಡಿದ್ದಕ್ಕಿಂತ ಭಿನ್ನವಾದ ಫಲಿತಾಂಶಗಳು ಸಿಗಲಿವೆ. ಒಂದು ವೇಳೆ ಸೋಲನ್ನು ಕಂಡಲ್ಲಿ ಎದೆಗುಂದಬೇಡಿ, ಅದು ನಿಮಗೆ ಹೊಸ ಪಾಠವನ್ನು ಕಲಿಸಲಿದೆ. ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ವಿದೇಶಿ ಮೂಲದಿಂದ ಸಕಾರಾತ್ಮಕ ಸುದ್ದಿ ಸಿಗಬಹುದು. ಆಸ್ತಿ ಖರೀದಿ ಅಥವಾ ಬಾಡಿಗೆ ಮನೆ ಬದಲಾಯಿಸುವ ಆಲೋಚನೆ ಇದ್ದರೆ ಈ ದಿನ ಚಾಲನೆ ನೀಡಿ. ಮಧ್ಯಾಹ್ನದ ನಂತರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಮನೆಯ ಹಿರಿಯರ ಸಲಹೆಗಳು ನಿಮ್ಮ ಗೊಂದಲಗಳನ್ನು ಪರಿಹರಿಸಲಿವೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ನಿಮ್ಮ ಬುದ್ಧಿವಂತಿಕೆಗೆ ದೊಡ್ಡ ಸವಾಲು ಎದುರಾಗಲಿದೆ. ಯಾವುದೇ ಹೊಸ ಬಿಜಿನೆಸ್ ಐಡಿಯಾ ಇದ್ದರೆ ಅದನ್ನು ಪ್ರಭಾವಿ ವ್ಯಕ್ತಿಗಳ ಮುಂದೆ ಮಂಡಿಸಲು ಇದು ಸರಿಯಾದ ಸಮಯ. ಆರ್ಥಿಕವಾಗಿ ಹಠಾತ್ ಧನಲಾಭದ ಲಕ್ಷಣಗಳಿವೆ, ಆದರೆ ಅದು ನಿಮ್ಮ ಜೇಬಿನಲ್ಲಿ ಉಳಿಯುವುದು ನಿಮ್ಮ ಶಿಸ್ತಿನ ಮೇಲೆ ನಿರ್ಧಾರವಾಗುತ್ತದೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನಿಸುತ್ತಿರುವವರಿಗೆ ಸಂದರ್ಶನ ಕರೆ ಬರಬಹುದು. ಕಣ್ಣಿನ ದೋಷ ಅಥವಾ ತಲೆನೋವು ಈ ದಿ ಸ್ವಲ್ಪ ತೊಂದರೆ ಕೊಡಬಹುದು.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ನಿಮ್ಮ ವ್ಯಕ್ತಿತ್ವದ ಆಕರ್ಷಣೆ ಈ ದಿನ ಹೆಚ್ಚಾಗಲಿದೆ, ಇದರಿಂದ ಹೊಸ ಸ್ನೇಹ ಸಂಬಂಧಗಳು ಏರ್ಪಡುತ್ತವೆ. ಐಷಾರಾಮಿ ವಸ್ತುಗಳ ಮೇಲೆ ಮೋಹ ಹೆಚ್ಚಾಗಲಿದ್ದು, ಬಜೆಟ್ ಮೀರಿ ಖರ್ಚು ಮಾಡುವ ಸಾಧ್ಯತೆ ಇದೆ. ಅವಿವಾಹಿತರಿಗೆ ವಿವಾಹ ಸಂಬಂಧಗಳ ರೆಫರೆನ್ಸ್ ಸಿಗುವ ಸಂಭವವಿದೆ. ಮನೆಯ ಅಲಂಕಾರಕ್ಕಾಗಿ ಅಥವಾ ಗೃಹಪ್ರವೇಶದಂತಹ ಕೆಲಸಗಳಿಗೆ ಈ ದಿ ಸಮಯ ಮೀಸಲಿಡುವಿರಿ. ದೈಹಿಕ ವ್ಯಾಯಾಮಕ್ಕೆ ಮನ್ನಣೆ ನೀಡಿ, ಇಲ್ಲದಿದ್ದರೆ ಆಲಸ್ಯ ನಿಮ್ಮ ಕೆಲಸಗಳನ್ನು ಕೆಡಿಸಬಹುದು.
ಲೇಖನ- ಎನ್.ಕೆ.ಸ್ವಾತಿ
