Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರಿಗೆ ಆದಾಯದ ಹೊಸ ಮೂಲ ಸೃಷ್ಟಿಯಾಗಲಿವೆ
ಜನವರಿ 14ರಂದು ಜನ್ಮಸಂಖ್ಯೆ 1, 2, 3ರ ಜನರಿಗಾಗಿ ಸಂಖ್ಯಾಶಾಸ್ತ್ರ ಆಧಾರಿತ ದಿನಭವಿಷ್ಯ ಇಲ್ಲಿದೆ. ಜನ್ಮಸಂಖ್ಯೆ 1ಕ್ಕೆ ವೃತ್ತಿ ಪ್ರಗತಿ, ಹೊಸ ಆದಾಯದ ಮೂಲ, ಸಾಮಾಜಿಕ ಗೌರವ ಸೂಚಿಸಿದರೆ, ಜನ್ಮಸಂಖ್ಯೆ 2ಕ್ಕೆ ಸೃಜನಶೀಲತೆ, ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ. ಜನ್ಮಸಂಖ್ಯೆ 3 ವೈಯಕ್ತಿಕ, ವೃತ್ತಿ ಜೀವನದಲ್ಲಿ ಸಮತೋಲನ, ಆರ್ಥಿಕ ಸ್ಥಿರತೆ ತರುವ ಬಗ್ಗೆ ಮಾಹಿತಿ ನೀಡುತ್ತದೆ. ನಿಮ್ಮ ಭವಿಷ್ಯವನ್ನು ಇಲ್ಲಿ ಓದಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ನಿಮ್ಮ ದಕ್ಷತೆ, ಕಾರ್ಯಕ್ಷಮತೆಗೆ ಹೊಸ ರೂಪ ಸಿಗಲಿದೆ. ವೃತ್ತಿ ಕ್ಷೇತ್ರದಲ್ಲಿ ಗುರಿ ತಲುಪಲು ಸುಲಭವಾದ ಹಾದಿ ಗೋಚರಿಸಲಿದೆ. ಸ್ವಂತ ಉದ್ಯೋಗದವವರಿಗೆ ಹೊಸ ಗ್ರಾಹಕರಿಂದ ದೊಡ್ಡ ಮೊತ್ತದ ಆರ್ಡರ್‌ಗಳು ಬರುವ ಸಾಧ್ಯತೆ ಇದೆ. ಆರ್ಥಿಕವಾಗಿ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ನೀವು ಪ್ರವಾಸಕ್ಕೆ ಸಿದ್ಧತೆ ನಡೆಸುತ್ತಿದ್ದರೆ ಅದಕ್ಕೆ ಪೂರಕ ಸನ್ನಿವೇಶಗಳು ಒದಗಿ ಬರಲಿವೆ. ಸಾಮಾಜಿಕವಾಗಿ ನಿಮ್ಮ ವ್ಯಕ್ತಿತ್ವಕ್ಕೆ ವಿಶೇಷ ಗೌರವ ಲಭಿಸಲಿದ್ದು, ಪ್ರಮುಖ ವ್ಯಕ್ತಿಗಳೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ಸಿಗಬಹುದು.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ನಿಮ್ಮ ಕಲ್ಪನಾ ಶಕ್ತಿಯು ಉನ್ನತ ಮಟ್ಟದಲ್ಲಿ ಇರಲಿದ್ದು, ಕಲಾತ್ಮಕ ವೃತ್ತಿಯಲ್ಲಿರುವವರಿಗೆಲಾಭದಾಯಕ ಸಮಯ. ಹಣಕಾಸಿನ ವಿಚಾರದಲ್ಲಿ ಇಂದು ತರಾತುರಿಯ ನಿರ್ಧಾರ ಬೇಡ, ಹೂಡಿಕೆ ಮಾಡುವ ಮೊದಲು ನಂಬಿಕಸ್ತರಿಂದ ಸಲಹೆ ಪಡೆಯಿರಿ. ಕಚೇರಿಯಲ್ಲಿ ಸಹೋದ್ಯೋಗಿಗಳ ನಡುವೆ ಉಂಟಾಗಿದ್ದ ಸಣ್ಣಪುಟ್ಟ ಸಂಘರ್ಷಗಳು ನಿಮ್ಮ ಮಧ್ಯಸ್ಥಿಕೆಯಿಂದ ಬಗೆಹರಿಯಲಿವೆ. ಮನೆಗೆ ಅಗತ್ಯವಿರುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಲು ಇಂದು ಮನಸ್ಸು ಮಾಡುವಿರಿ. ಹಳೆಯ ಗೆಳೆಯರ ಭೇಟಿಯಿಂದ ಮನಸ್ಸಿಗೆ ಮುದ ಸಿಗಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ವೈಯಕ್ತಿಕ ಮತ್ತು ವೃತ್ತಿ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವಿರಿ. ಆರ್ಥಿಕವಾಗಿ ಸ್ಥಿರತೆ ಇರಲಿದ್ದು, ದೀರ್ಘಕಾಲದ ಸಾಲದ ಸುಳಿಯಿಂದ ಹೊರಬರಲು ದಾರಿ ಸುಗಮವಾಗಲಿದೆ. ನೀರಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಸಕಾರಾತ್ಮಕ ಫಲಿತಾಂಶ ದೊರೆಯುವ ಸಾಧ್ಯತೆ ಇದೆ. ನಿಮ್ಮ ಮಾರ್ಗದರ್ಶನದಿಂದ ಇತರರ ಬದುಕಿನಲ್ಲಿ ಬದಲಾವಣೆ ತರುವ ಅವಕಾಶ ದೊರೆಯಲಿದೆ. ಮನೆಯಲ್ಲಿ ಸಡಗರದ ವಾತಾವರಣವಿರಲಿದ್ದು, ಶುಭ ಸಮಾರಂಭಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಿರಿ.
ಲೇಖನ- ಸ್ವಾತಿ ಎನ್.ಕೆ.
