AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರು ಇಂದು ಸಣ್ಣ ಮಟ್ಟಿನ ಮೋಸ ಹೋಗುವ ಸಂಭವವಿದೆ!

ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 18ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ವೃತ್ತಿ, ಹಣಕಾಸು, ಸಂಬಂಧಗಳು ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಜನ್ಮಸಂಖ್ಯೆಯವರಿಗೆ ಎದುರಾಗುವ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಗಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರು ಇಂದು ಸಣ್ಣ ಮಟ್ಟಿನ ಮೋಸ ಹೋಗುವ ಸಂಭವವಿದೆ!
ದಿನ ಭವಿಷ್ಯ
ಸ್ವಾತಿ ಎನ್​ಕೆ
| Edited By: |

Updated on: Jan 18, 2026 | 12:20 AM

Share

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ತೆರಳಬೇಕು ಎಂದು ಪ್ರಯತ್ನಿಸುತ್ತಾ ಇರುವವರಿಗೆ ಯಾವುದಾದರೂ ಮೂಲದಿಂದ ಮುಖ್ಯವಾದ ಮಾಹಿತಿ ದೊರೆಯಲಿದೆ. ನಿಗೂಢ ಅಥವಾ ರಹಸ್ಯವಾದ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿರುತ್ತದೆ. ಆನ್ ಲೈನ್ ವ್ಯವಹಾರಗಳಲ್ಲಿ ಸಣ್ಣ ಮಟ್ಟಿನ ಮೋಸ ಹೋಗುವ ಸಂಭವವಿರುವುದರಿಂದ ಜಾಗ್ರತೆ ಇರಲಿ. ವಾಹನದಲ್ಲಿ ಸಂಚರಿಸುವಾಗ ದಾಖಲೆಗಳನ್ನು ಮರೆಯಬೇಡಿ. ಸಂಜೆ ವೇಳೆ ಮನೆಯಲ್ಲಿ ಸಣ್ಣ ಮಟ್ಟಿನ ವಾಗ್ವಾದ ನಡೆಯಬಹುದು, ಮೌನವೇ ಅದಕ್ಕೆ ಉತ್ತಮ ಪರಿಹಾರ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಹೊಸಬರ ಪರಿಚಯದಿಂದ ನಾನಾ ಬಗೆಯಲ್ಲಿ ಅನುಕೂಲ ಆಗುವ ಯೋಗವಿದೆ. ನೀವು ಹೊಸ ತಂತ್ರಜ್ಞಾನ ಅಥವಾ ಸಾಮಾಜಿಕ ಜಾಲತಾಣದ ಮೂಲಕ ಲಾಭದಾಯಕ ಸುದ್ದಿಯೊಂದನ್ನು ಪಡೆಯುವಿರಿ. ಹಳೆಯ ಗೆಳೆಯರೊಂದಿಗೆ ಸೇರಿ ಪಿಕ್ನಿಕ್ ಹೋಗಲು ಅಥವಾ ಔತಣಕೂಟ ಆಯೋಜಿಸಲು ಇದು ಸಕಾಲ. ನಿಮ್ಮ ಮಾತಿನ ಚಾಕಚಕ್ಯತೆಯಿಂದ ನಿಂತುಹೋಗಿದ್ದ ಕಾರ್ಯವೊಂದಕ್ಕೆ ಮರುಜೀವ ಸಿಗಲಿದೆ. ಆರೋಗ್ಯದ ದೃಷ್ಟಿಯಿಂದ ನಿದ್ರೆಯ ಕಡೆಗೆ ಹೆಚ್ಚಿನ ಗಮನ ಹರಿಸುವುದು ಮುಖ್ಯ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಖರ್ಚನ್ನು ಕಡಿಮೆ ಮಾಡಬೇಕು ಎಂದು ದಿನದ ಆರಂಭದಲ್ಲಿಯೇ ಅಂದುಕೊಳ್ಳಲಿದ್ದೀರಿ. ಆದರೆ ನಿಮ್ಮ ಮನಸ್ಸು ಅಲಂಕಾರ ಮತ್ತು ಸೌಂದರ್ಯದ ಕಡೆಗೆ ಹೆಚ್ಚು ವಾಲುವುದರಿಂದ ಸ್ವಂತಕ್ಕಾಗಿ ಅಥವಾ ಮನೆಯ ಅಲಂಕಾರಕ್ಕಾಗಿ ಖರ್ಚು ಮಾಡುವಿರಿ. ಪ್ರೇಮ ಸಂಬಂಧಗಳಲ್ಲಿ ಇದ್ದ ಒಡಕುಗಳು ದೂರವಾಗಿ ಹೊಸ ಒಪ್ಪಂದಗಳು ಏರ್ಪಡಲಿವೆ. ಮನೆಯಲ್ಲಿ ಮದುವೆ ಪ್ರಸ್ತಾವ ಮಾಡುವ ಯೋಗ ಸಹ ಇದೆ. ಮಹಿಳೆಯರಿಗೆ ತವರು ಮನೆಯಿಂದ ವಿಶೇಷ ಕಾಣಿಕೆ ಸಿಗಬಹುದು. ಆಹಾರದಲ್ಲಿ ಸಿಹಿ ಪದಾರ್ಥಗಳ ಅತಿಯಾದ ಸೇವನೆ ಬೇಡ.

ಲೇಖನ- ಸ್ವಾತಿ ಎನ್.ಕೆ.