Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 19ರ ದಿನಭವಿಷ್ಯ
ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 19ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ವೃತ್ತಿ, ಹಣಕಾಸು, ಸಂಬಂಧಗಳು ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಜನ್ಮಸಂಖ್ಯೆಯವರಿಗೆ ಎದುರಾಗುವ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ಶೀತ, ಕಫ, ಕೆಮ್ಮು ಇಂಥವುಗಳು ಹೆಚ್ಚಾಗಿ, ವೈದ್ಯರ ಬಳಿ ತೆರಳಲೇ ಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮಗೆ ಸ್ವಲ್ಪ ಕೂಡ ಇಷ್ಟ ಇಲ್ಲದ ವ್ಯಕ್ತಿಯ ಜೊತೆಯಾಗಿ ಅಥವಾ ಕೈ ಕೆಳಗೆ ಕೆಲಸ ಮಾಡಬೇಕಾದ ಪರಿಸ್ಥಿತಿ ಬರಲಿದೆ. ಇದರಿಂದ ನಿಮಗೆ ಮಾನಸಿಕ ನೆಮ್ಮದಿ ಇಲ್ಲದಂತಾಗಲಿದೆ. ಇನ್ನು ನಿಮ್ಮಲ್ಲಿ ಯಾರು ಬಟ್ಟೆ ವ್ಯಾಪಾರ ಮಾಡುತ್ತಾ ಇದ್ದೀರಿ ಅಂಥವರಿಗೆ ಈಗಾಗಲೇ ಕೊಟ್ಟಿರುವಂಥ ಸಾಲದ ವಸೂಲಾತಿ ಕಷ್ಟ ಎನಿಸಲಿದ್ದು, ನಿಮ್ಮಲ್ಲಿ ಕೆಲವರು ಪೊಲೀಸ್ ಸ್ಟೇಷನ್ ಗೆ ಈ ಬಗ್ಗೆ ದೂರು ನೀಡಲಿದ್ದೀರಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ಗ್ಯಾಜೆಟ್, ಸೈಕಲ್, ಕನಿಷ್ಠ ವಾಟರ್ ಕ್ಯಾನ್ ಹೀಗೆ ಯಾವುದಕ್ಕಾದರೂ ಬಜೆಟ್ ಗಿಂತ ಹೆಚ್ಚು ಖರ್ಚು ಮಾಡಲಿದ್ದೀರಿ. ಉದ್ಯೋಗಸ್ಥರು ತಮ್ಮ ಬೆಳವಣಿಗೆ ಬಗ್ಗೆ ಬೇಸರಪಟ್ಟು, ಈಗಿರುವ ವಿಭಾಗ ಅಥವಾ ಪ್ರಾಜೆಕ್ಟ್ ನಿಂದ ಬೇರೆಡೆ ವರ್ಗಾವಣೆ ಮಾಡುವಂತೆ ತಮ್ಮ ಮೇಲಧಿಕಾರಿಗಳ ಜೊತೆ ಮಾತುಕಡೆ ನಡೆಸುವ ಸಾಧ್ಯತೆ ಇದೆ. ಸಣ್ಣ ಅಜಾಗರೂಕತೆಯೊಂದು ದೊಡ್ಡ ಬೆಲೆ ತೆರುವಂತೆ ಮಾಡಬಹುದು. ಆದ್ದರಿಂದ ನಿಮ್ಮ ಪಾಲಿನ ಜವಾಬ್ದಾರಿಯನ್ನು ಬೇರೆಯವರಿಗೆ ವರ್ಗಾಯಿಸಬೇಡಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ನಿಮಗೆ ಹೆಜ್ಜೆಹೆಜ್ಜೆಗೆ ಕಿರಿಕಿರಿ ಮಾಡುತ್ತಾ ಇದ್ದವರ ಕೆಲವು ತಪ್ಪುಗಳು ನಿಮ್ಮ ಕಣ್ಣಿಗೆ ಬಿದ್ದು, ಅದರಿಂದ ಎಷ್ಟು ಗೋಳು ಬರಿಸಬಹುದೋ ಅಷ್ಟು ಕಿರುಕುಳ ನೀಡುವುದಕ್ಕೆ ಮುಂದಾಗಲಿದ್ದೀರಿ. ನಿಮಗೆ ನೆನಪಿರಬೇಕಾದ ಸಂಗತಿ ಏನೆಂದರೆ, ಇದು ಇಲ್ಲಿಗೇ ಮುಗಿಯುವುದಿಲ್ಲ. ವೃತ್ತಿ- ವ್ಯವಹಾರ ಮಾಡುತ್ತಿರುವವರಿಗೆ ಅನುಭವದ ಆಧಾರದಲ್ಲಿ ನೀವು ತೆಗೆದುಕೊಂಡಿದ್ದ ತೀರ್ಮಾನಗಳು ಒಳ್ಳೆ ಫಲ ನೀಡಲಿದೆ. ಅದರ ಫಲಿತಾಂಶ ಎಂಬಂತೆ ನಿಮಗೆ ದೊಡ್ಡ ದೊಡ್ಡ ಜವಾಬ್ದಾರಿ ವಹಿಸಬಹುದು.
ಲೇಖನ- ಸ್ವಾತಿ ಎನ್.ಕೆ.
