AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 19ರ ದಿನಭವಿಷ್ಯ

ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 19ರ ಸೋಮವಾರ ದಿನದ ಭವಿಷ್ಯ (horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 19ರ ದಿನಭವಿಷ್ಯ
ರಾಶಿ ಭವಿಷ್ಯ
TV9 Web
| Updated By: ವಿವೇಕ ಬಿರಾದಾರ|

Updated on: Dec 19, 2022 | 6:00 AM

Share

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 19ರ ಸೋಮವಾರದ ದಿನ ಭವಿಷ್ಯ (horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1

ನಿಮಗೆ ಈ ದಿನ ದುಡ್ಡಿನ ಅಗತ್ಯ ಹೆಚ್ಚಾಗಲಿದೆ. ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡವರಿಗೆ ಅನಿಶ್ಚಿತತೆ ಕಾಡಲಿದೆ. ಹಣಕಾಸು ಹರಿವು ಹೆಚ್ಚಿಸಿಕೊಳ್ಳುವ ಬಗ್ಗೆ ಆಪ್ತರ ಜತೆ ಚರ್ಚೆ ನಡೆಸಲಿದ್ದೀರಿ. ವಿದೇಶಗಳಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಬೆಳಕು ಕಾಣಿಸಲಿದೆ. ನಿಮ್ಮ ಜತೆ ನಗುತ್ತಾ ಮಾತನಾಡುವವರೆಲ್ಲರೂ ಹಿತೈಶಿಗಳೇ ಎಂಬ ಆಲೋಚನೆಯನ್ನು ತಲೆಯಿಂದ ತೆಗೆಯಿರಿ.

ಜನ್ಮಸಂಖ್ಯೆ 2

ಸಣ್ಣ ಸಣ್ಣ ತಮಾಷೆ ಮಾತುಗಳು ಸಹ ಈ ದಿನ ನಿಮ್ಮಲ್ಲಿ ಸಿಟ್ಟು ಮೂಡಿಸಬಹುದು. ವಿನಾಕಾರಣ ಕೋಪ ಮಾಡಿಕೊಳ್ಳುವುದರಿಂದ ಸಂಬಂಧ ಹಾಳಾಗುತ್ತದೆ, ಆ ಬಗ್ಗೆ ಗಮನ ಇರಲಿ. ವಾಹನ ಖರೀದಿಗೆ ಹಣಕಾಸು ಸಾಲಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಅನುಕೂಲ ಆಗಲಿದೆ. ಹೊಟ್ಟೆ ಉಬ್ಬರದಂಥ ಸಮಸ್ಯೆ ಕಾಣಿಸಿಕೊಳ್ಳಬಹುದು.

ಜನ್ಮಸಂಖ್ಯೆ 3

ಉದ್ಯೋಗ ಸ್ಥಳದಲ್ಲಿ ನೀವು ಅಂದುಕೊಂಡಂತೆಯೇ ಕೆಲವು ಬೆಳವಣಿಗೆಗಳು ಆಗಲಿವೆ. ರೇಟಿಂಗ್ ವಿಚಾರದಲ್ಲಿ ನಿಮ್ಮ ಮೇಲಧಿಕಾರಿ ಜತೆಗೆ ಮಾತಿಗೆ ಮಾತು ಆಗಬಹುದು. ಸೈಟು- ಮನೆ ಖರೀದಿಗಾಗಿ ಪ್ರಯತ್ನಿಸುತ್ತಿರುವವರು ಸ್ವಲ್ಪ ಸಮಯ ಮುಂದೂಡಲಿದ್ದೀರಿ.

ಜನ್ಮಸಂಖ್ಯೆ 4

ಸಮಾನ ಆಸಕ್ತರಿಗಾಗಿ ಹುಡುಕುತ್ತಿರುವವರಿಗೆ ದೊರೆಯಲಿದ್ದಾರೆ. ಕೃತಕ ಗರ್ಭಧಾರಣೆ ಮೂಲಕ ಸಂತಾನಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಮನಸ್ಸಿಗೆ ಸಮಾಧಾನ, ಧೈರ್ಯ ದೊರೆಯುವಂಥ ಸುದ್ದಿ ದೊರೆಯಲಿದೆ. ಇತರರ ವೈಯಕ್ತಿಕ ವಿಚಾರಗಳಿಗೆ ಮೂಗು ತೂರಿಸಬೇಡಿ.

ಜನ್ಮಸಂಖ್ಯೆ 5

ಉದ್ಯೋಗ ಬದಲಾವಣೆಗಾಗಿ ಪ್ರಯತ್ನಿಸುತ್ತಿರುವವರಿಗೆ ಅವಕಾಶಗಳ ಬಗ್ಗೆ ಮಾಹಿತಿ ದೊರೆಯಲಿದೆ. ಹೊಸ ರುಚಿ ಪ್ರಯೋಗ ಮಾಡಲಿದ್ದೀರಿ. ಇದರಿಂದ ಮನೆಯಲ್ಲಿ ಮೆಚ್ಚುಗೆಯ ಮಾತುಗಳು ಕೇಳಿಬರಲಿವೆ. ವಾಹನ ಓಡಿಸುವುದು ಇತರರದ್ದಾದರೆ ಬಹಳ ಎಚ್ಚರಿಕೆಯಿಂದ ಇರಬೇಕು.

ಜನ್ಮಸಂಖ್ಯೆ 6

ನೀವು ಅನುಸರಿಸುವ ಸ್ಟ್ರಾಟೆಜಿ ಇತರರಿಗೆ ಬಹಳ ಇಷ್ಟವಾಗುತ್ತದೆ. ಮಾತಿನ ಮೂಲಕ ಆದಾಯ ತರುವಂಥ ವೃತ್ತಿಯಲ್ಲಿ ಇರುವವರಿಗೆ ಹಣಕಾಸು ಹರಿವು ಜಾಸ್ತಿ ಆಗುತ್ತದೆ. ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡಬೇಕು ಎಂದಿರುವವರಿಗೆ ಈ ದಿನ ಅವಕಾಶ ಇದೆ. ‌ ಜನ್ಮಸಂಖ್ಯೆ 7

ಕ್ರೆಡಿಟ್ ಕಾರ್ಡ್ ಬಳಸುವವರು ಅದರ ಪಾಸ್್ವರ್ಡ್ ಜೋಪಾನವಾಗಿ ಇಟ್ಟುಕೊಳ್ಳಿ. ಈ ದಿನ ಸ್ವಲ್ಪವಾದರೂ ಹಣವನ್ನು ನಿಮ್ಮ ನಿರ್ಲಕ್ಷ್ಯದ ಕಾರಣದಿಂದ ಕಳೆದುಕೊಳ್ಳುವ ಸಾಧ‌್ಯತೆ ಇದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಶುಭ ಸುದ್ದಿ ಇದೆ.

ಜನ್ಮಸಂಖ್ಯೆ 8

ಡಿಜಿಟಲ್ ಸ್ವತ್ತುಗಳಲ್ಲಿ ಹೂಡಿಕೆ ಮಾಡಿರುವವರಿಗೆ ಇವತ್ತು ಬಹಳ ಮುಖ್ಯವಾದ ದಿನವಾಗಿರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಮನ್ನಣೆ, ಸಮ್ಮಾನ ದೊರೆಯಲಿದೆ. ಆಯುರ್ವೇದ ವೈದ್ಯರಿಗೆ ಹೊಸ ಹೊಸ ಅವಕಾಶಗಳಿವೆ.

ಜನ್ಮಸಂಖ್ಯೆ 9

ದೀರ್ಘಾವಧಿ ಯೋಜನೆಗಳನ್ನು ರೂಪಿಸುವುದಕ್ಕೆ ಇಂದು ಸೂಕ್ತವಾದ ದಿನವಾಗಿರುತ್ತದೆ. ಬಸ್ಸಿನಲ್ಲಿ ಪ್ರಯಾಣಿಸುವವರು ಹತ್ತುವಾಗ- ಇಳಿಯುವಾಗ ಎಚ್ಚರಿಕೆಯಿಂದ ಇರಬೇಕು. ಅನಿರೀಕ್ಷಿತವಾಗಿ ಹಣದ ಹರಿವು ಬರಲಿದೆ.

ಲೇಖನ- ಎನ್‌.ಕೆ.ಸ್ವಾತಿ

ಕೆಎಸ್​ಸಿಎಗೆ ಪರವಾನಗಿ ಇರದಿದ್ದರೆ ಡಿಸಿಎಂ ಹೋಗಿದ್ದು ಯಾಕೆ? ಅಶೋಕ
ಕೆಎಸ್​ಸಿಎಗೆ ಪರವಾನಗಿ ಇರದಿದ್ದರೆ ಡಿಸಿಎಂ ಹೋಗಿದ್ದು ಯಾಕೆ? ಅಶೋಕ
ನಿಯಮಗಳನ್ನು ಉಲ್ಲಂಘಿಸಿ ತಿಮರೋಡಿಯವರನ್ನು ಬಂಧಿಸಲಾಗಿದೆ: ಮಟ್ಟಣ್ಣನವರ್
ನಿಯಮಗಳನ್ನು ಉಲ್ಲಂಘಿಸಿ ತಿಮರೋಡಿಯವರನ್ನು ಬಂಧಿಸಲಾಗಿದೆ: ಮಟ್ಟಣ್ಣನವರ್
ವಿವಾದದಲ್ಲಿ ರಮೋಲಾ; ಸಿನಿಮಾದಲ್ಲಿ ನಟಿಸಿ ಪ್ರಮೋಷನ್​ಗೆ ಬರಲ್ಲ ಎಂದ ನಟಿ?
ವಿವಾದದಲ್ಲಿ ರಮೋಲಾ; ಸಿನಿಮಾದಲ್ಲಿ ನಟಿಸಿ ಪ್ರಮೋಷನ್​ಗೆ ಬರಲ್ಲ ಎಂದ ನಟಿ?
ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರವನ್ನು ಅಬೆಟರ್ ಅನ್ನೋದು ಸರಿಯಲ್ಲ: ಸಿಎಂ
ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರವನ್ನು ಅಬೆಟರ್ ಅನ್ನೋದು ಸರಿಯಲ್ಲ: ಸಿಎಂ
ರಸ್ತೆ ತಡೆಗೋಡೆ ಮೇಲೆ ಕುಳಿತು ಕ್ಯಾಮೆರಾಗೆ ಪೋಸ್​​ ಕೊಟ್ಟ ಚಿರತೆ
ರಸ್ತೆ ತಡೆಗೋಡೆ ಮೇಲೆ ಕುಳಿತು ಕ್ಯಾಮೆರಾಗೆ ಪೋಸ್​​ ಕೊಟ್ಟ ಚಿರತೆ
ವಿರೇಂದ್ರ ಪಪ್ಪಿ ಜೊತೆ ಕುಸುಮ ಸಹೋದರನ ವ್ಯಾವಹಾರಿಕ ಸಂಬಂಧ ಹಿನ್ನೆಲೆ ದಾಳಿ
ವಿರೇಂದ್ರ ಪಪ್ಪಿ ಜೊತೆ ಕುಸುಮ ಸಹೋದರನ ವ್ಯಾವಹಾರಿಕ ಸಂಬಂಧ ಹಿನ್ನೆಲೆ ದಾಳಿ
ಬಿಹಾರದಲ್ಲಿ ತೆಗೆದುಕೊಂಡ ಯಾವುದೇ ನಿರ್ಧಾರ ವ್ಯರ್ಥವಾಗುವುದಿಲ್ಲ: ಮೋದಿ
ಬಿಹಾರದಲ್ಲಿ ತೆಗೆದುಕೊಂಡ ಯಾವುದೇ ನಿರ್ಧಾರ ವ್ಯರ್ಥವಾಗುವುದಿಲ್ಲ: ಮೋದಿ
ಬಿಹಾರದಲ್ಲಿ 13 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
ಬಿಹಾರದಲ್ಲಿ 13 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ
ವಿಧಾನಸಭೆಯಲ್ಲಿ ಆರ್​ಎಸ್​ಎಸ್ ಗೀತೆ ಹಾಡಿದ್ದೇಕೆ? ಡಿಕೆಶಿ ಅಚ್ಚರಿಯ ಹೇಳಿಕೆ
ವಿಧಾನಸಭೆಯಲ್ಲಿ ಆರ್​ಎಸ್​ಎಸ್ ಗೀತೆ ಹಾಡಿದ್ದೇಕೆ? ಡಿಕೆಶಿ ಅಚ್ಚರಿಯ ಹೇಳಿಕೆ
ಸರ್ಕಾರೀ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕ್ಷೀಣಿಸುತ್ತಿದೆ: ಸುರೇಶ್ ಕುಮಾರ್
ಸರ್ಕಾರೀ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕ್ಷೀಣಿಸುತ್ತಿದೆ: ಸುರೇಶ್ ಕುಮಾರ್