Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 5ರ ದಿನಭವಿಷ್ಯ

| Updated By: ಆಯೇಷಾ ಬಾನು

Updated on: Jan 05, 2023 | 6:56 AM

ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 5ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 5ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ (Birth number) ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು (Daily Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 5ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1

ಸ್ವಂತ ವಿಚಾರಗಳಲ್ಲಿ ಇತರರು ಮೂಗು ತೂರಿಸದಂತೆ ನೋಡಿಕೊಳ್ಳಿ. ಸಲಹೆ ನೀಡುವುದು ಬೇರೆ, ಹಿಡಿತ ಸಾಧಿಸುವುದಕ್ಕೆ ಅವಕಾಶ ನೀಡಬೇಡಿ. ಇನ್ನು ನಿಮಗಿಂತ ಕಿರಿಯ ವಯಸ್ಸಿನವರ ಜತೆಗೆ ಮಾತುಕತೆ ನಡೆಸುವಾಗ ಒಂಚೂರು ಎಚ್ಚರವಿರಲಿ. ನಿಮ್ಮ ಮಾತಿಗೆ ಬೇರೆ ಅರ್ಥ ಕಲ್ಪಿಸುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 2

ಹೊಸದಾಗಿ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಬೇಕು ಎಂದು ಇದ್ದಲ್ಲಿ ಈ ದಿನದ ಮಟ್ಟಿಗೆ ಮುಂದೂಡಿ. ನಿಮ್ಮ ಮೊಬೈಲ್‌ನಲ್ಲಿ ಇರುವ ಡೇಟಾ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯ. ನಿಮ್ಮ ವೈಯಕ್ತಿಕ ಡೇಟಾ, ಫೋಟೋ, ಮಾಹಿತಿಗಳನ್ನು ಯಾರೂ ಕಳುವು ಮಾಡದಂತೆ ನೋಡಿಕೊಳ್ಳಿ. ಅಪರಿಚಿತ ಮೆಸೇಜ್, ಮೇಲ್‌ಗಳನ್ನು ತೆರೆಯುವ ಮುನ್ನ, ನಿಮ್ಮ ಗ್ಯಾಜೆಟ್‌ಗಳನ್ನು ಬೇರೆಯವರಿಗೆ ಕೊಡುವವರಿದ್ದಲ್ಲಿ ಜಾಗ್ರತೆ.

ಜನ್ಮಸಂಖ್ಯೆ 3

ಈ ಹಿಂದೆ ನೀವು ಮಾಡಿದ ತಪ್ಪು ಇವತ್ತು ವಿಪರೀತ ಕಾಡಲಿದೆ. ಯಾರದೋ ಸ್ನೇಹ ಯಾಕಾದರೂ ಮಾಡಿದೆ ಎಂದು ಪರಿತಪಿಸುವಂತಾಗುತ್ತದೆ. ಒಂದು ವೇಳೆ ನಿಮ್ಮ ತಪ್ಪನ್ನು ಯಾರಾದರೂ ಎತ್ತಾಡಿದಲ್ಲಿ ನೀವು ಮಾಡಿದ್ದು ಸರಿ ಅಂತ ವಾದ ಮಾಡುತ್ತಾ ಕೂರದಿರಿ. ಇನ್ನು ಕ್ರಿಯೇಟಿವ್ ಕ್ಷೇತ್ರದಲ್ಲಿ ಕೆಲಸ ಮಾಡುವವರು ಹೆಚ್ಚು ಲಕ್ಷ್ಯ ಕೊಟ್ಟು ಜವಾಬ್ದಾರಿ ಪೂರ್ತಿ ಮಾಡಿ.

ಜನ್ಮಸಂಖ್ಯೆ 4

ದಿಢೀರನೆ ಮಂಕು ಬಡಿದವರಂತೆ ಆಗುತ್ತೀರಿ. ಒಂದು ವೇಳೆ ಮನಸ್ಥಿತಿ ಕೆಲಸಕ್ಕೆ ಸಹಕರಿಸುತ್ತಿಲ್ಲ ಎಂದಾದಲ್ಲಿ ಮುಖ್ಯವಾದ ಜವಾಬ್ದಾರಿಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಅಥವಾ ಮುಖ್ಯವಾದ ಕೆಲಸಗಳು ಇದ್ದಲ್ಲಿ ಮುಂದೂಡಿ. ಶನೈಶ್ಚರನ ಗುಡಿಗೆ ಈ ದಿನ ಭೇಟಿ ನೀಡಿ. ಇದರ ಜತೆಗೆ ಗೋವಿಗೆ ಬಾಳೆಹಣ್ಣು ನೀಡಿ.

ಜನ್ಮಸಂಖ್ಯೆ 5

ಚಿನ್ನ, ವಜ್ರ, ಪ್ಲಾಟಿನಂ ಈ ರೀತಿಯ ಬೆಲೆಬಾಳುವ ಲೋಹಗಳನ್ನು ಖರೀದಿಸುವ ಯೋಗ ಇದೆ. ಆದರೆ ಖರ್ಚು ಅಂತಾದಾಗ ಸ್ವಲ್ಪ ಹಿಡಿತದಲ್ಲಿ ಇರುವುದು ಉತ್ತಮ. ನಿಮ್ಮ ನಾಲಗೆಯೇ ಈ ದಿನ ನಿಮಗೆ ಹೇಗಿರುತ್ತದೆ ಎಂಬುದನ್ನು ತಿಳಿಸುತ್ತದೆ. ಆದ್ದರಿಂದ ಮಾತಿನಲ್ಲಿ ಎಚ್ಚರಿಕೆಯಿಂದ ಇರುವುದು ಮುಖ್ಯ.

ಜನ್ಮಸಂಖ್ಯೆ 6

ನಿಮ್ಮ ಶತ್ರುಗಳು ತಮ್ಮತಮ್ಮಲ್ಲೇ ಭಾರೀ ಗೊಂದಲಕ್ಕೆ ಈಡಾಗುತ್ತಾರೆ. ಇನ್ನು ನೀವೇನಾದರೂ ಆಸ್ತಿಯನ್ನು ಮಾರಿ, ಅದನ್ನು ಬೇರೆ ಕಡೆ ಹೂಡಿಕೆ ಮಾಡಬೇಕು ಎಂದಿದ್ದಲ್ಲಿ ಅದು ಸಾಧ್ಯ ಆಗುತ್ತದೆ. ನಿರ್ಧಾರ ಮಾಡುವಾಗ ಅನುಭವಿಗಳ ಸಲಹೆ ಪಡೆಯಿರಿ. ನಿಮ್ಮ ಕೆಲಸ ಪೂರ್ಣಗೊಳಿಸುವ ಬಗ್ಗೆ ಇತರರು ಆಸಕ್ತಿ ವಹಿಸಲಿದ್ದಾರೆ.

ಜನ್ಮಸಂಖ್ಯೆ 7

ಯೂಟ್ಯೂಬರ್‌ಗಳು, ಸೋಷಿಯಲ್ ಮೀಡಿಯಾ ಪ್ರಭಾವಿಸುವಂಥವರು, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ ಕ್ಷೇತ್ರದಲ್ಲಿ ಕೆಲಸ ಮಾಡುವಂಥವರಿಗೆ ಅಚಾನಕ್ಕಾಗಿ ಹಣದ ಹರಿವು ಜಾಸ್ತಿ ಆಗುವ ಸಾಧ್ಯತೆಗಳು ಗೋಚರಿಸುತ್ತವೆ. ಅದನ್ನು ನೀವು ಗಂಭೀರವಾಗಿ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ.

ಜನ್ಮಸಂಖ್ಯೆ 8

ಬಜೆಟ್ ಮಾಡಿಕೊಳ್ಳುವುದು ಬಹಳ ಮುಖ್ಯ. ಯಾವುದೇ ಉದ್ಯೋಗ, ವೃತ್ತಿಯಿರಲಿ ಬಂದಿದ್ದೇನು- ಖರ್ಚಾಗಿದ್ದೆಷ್ಟು ಎಂಬ ಬಗ್ಗೆ ಸ್ಪಷ್ಟತೆ ಇರಲಿ. ಎಲ್ಲಿಂದಲೋ ಬಂದು ನಿಮ್ಮ ಕೈ ಹಿಡಿದು ಮೇಲೆ ಎತ್ತುತ್ತಾರೆ ಎಂಬ ಭ್ರಮೆ ಬೇಡ. ನಿಮ್ಮ ಅಧ್ಯಾತ್ಮ ಮನೋಭಾವ ಸ್ಫೂರ್ತಿ ಆಗಬೇಕೇ ವಿನಾ ಯಾವುದೇ ಕೆಲಸಕ್ಕೆ ವಿರಕ್ತಿ ಆಗದಿರಲಿ.

ಜನ್ಮಸಂಖ್ಯೆ 9

ಯಾರಿಗೂ ನಿಮ್ಮ ಕ್ಯಾರೆಕ್ಟರ್ ಸರ್ಟಿಫಿಕೇಟ್ ನೀಡಲು ಹೋಗದಿರಿ. ಅದು ಒಳ್ಳೆಯದು ಅಂತಿರಲಿ ಅಥವಾ ಕೆಟ್ಟದ್ದು; ಒಟ್ಟಿನಲ್ಲಿ, ನಾನು ಇನ್ನೊಬ್ಬರ ವಿಚಾರವನ್ನು ಮಾತನಾಡಲ್ಲ ಎಂಬುದರಲ್ಲಿ ಸ್ಪಷ್ಟತೆ ಇರಲಿ. ಪ್ರಾಣಿ ದಯಾ ಸಂಘಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಈ ದಿನ ತಮ್ಮ ಉದ್ದೇಶಗಳನ್ನು ಪೂರೈಸುವ ಕಡೆಗೆ ಕೆಲಸ ಮಾಡುತ್ತಿರುವ ಬಗ್ಗೆ ತೃಪ್ತಿ ದೊರೆಯಲಿದೆ.

ಲೇಖನ- ಎನ್‌.ಕೆ.ಸ್ವಾತಿ

Published On - 6:54 am, Thu, 5 January 23