
ನಿಮ್ಮಲ್ಲಿ ಭವಿಷ್ಯಕ್ಕೆ ದೊಡ್ಡ ಮಟ್ಟದಲ್ಲಿ ಅನುಕೂಲ ಆಗುವ ಆಲೋಚನೆಗಳು ಮೂಡಲಿವೆ. ಲೌಕಿಕ ಜಗತ್ತಿನ ಜಂಜಾಟಗಳಿಂದ ಸ್ವಲ್ಪ ವಿರಾಮ ಪಡೆಯಲು ಬಯಸುತ್ತೀರಿ. ಪುಸ್ತಕಗಳ ಓದು ಅಥವಾ ಸಂಗೀತದ ಕಡೆಗೆ ಆಸಕ್ತಿ ಹೆಚ್ಚಲಿದೆ. ಆರ್ಥಿಕವಾಗಿ ಹಣದ ಹರಿವು ಸಾಧಾರಣವಾಗಿರುತ್ತದೆ, ಆದರೆ ನೀವು ಮಾಡಿದ ಹಳೆಯ ಸಹಾಯ ಬೇರೊಂದು ರೂಪದಲ್ಲಿ ನಿಮಗೆ ಮರಳಿ ಸಿಗಲಿದೆ. ರಹಸ್ಯ ಶತ್ರುಗಳ ಬಗ್ಗೆ ಎಚ್ಚರವಿರಲಿ, ನಿಮ್ಮ ಯೋಜನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಡಿ. ಆದಾಯ ಹೆಚ್ಚು ಮಾಡಿಕೊಳ್ಳುವ ಮಾರ್ಗೋಪಾಯ ಗೋಚರಿಸಲಿದೆ.
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ ಇದಾಗಿರುತ್ತದೆ. ನಿಧಾನವಾಗಿ ನಡೆಯುತ್ತಿದ್ದ ಕೆಲಸಗಳು ಈಗ ವೇಗ ಪಡೆದುಕೊಳ್ಳಲಿವೆ. ನ್ಯಾಯಾಲಯದ ಕೆಲಸಗಳಲ್ಲಿ ನಿಮಗೆ ಜಯ ಸಿಗುವ ಲಕ್ಷಣಗಳಿವೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದ್ದು, ಸ್ಥಿರಾಸ್ತಿಯಿಂದ ಆದಾಯ ಬರಲಿದೆ. ಹಿರಿಯರೊಂದಿಗೆ ನಡೆಸುವ ಮಾತುಕತೆ ಸಮಾಧಾನ ತರಲಿದೆ. ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ನಿರ್ದಿಷ್ವಾಗಿ ಮೂಳೆ ಅಥವಾ ಸ್ನಾಯುಗಳ ನೋವು ಕಾಣಿಸಿಕೊಳ್ಳಬಹುದು. ಕೃಷಿ ಜಮೀನು ಖರೀದಿ ಯತ್ನಗಳು ಇದ್ದಲ್ಲಿ ಫಲ ನೀಡಲಿವೆ.
ನೀವು ಯಾವುದೇ ಸಾಹಸಕ್ಕೂ ಸೈ ಎನ್ನುತ್ತೀರಿ, ಆದರೆ ಆತುರದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಅಪಾಯಕಾರಿ ಆಗಲಿದೆ. ಭೂಮಿ ಅಥವಾ ಕಟ್ಟಡಕ್ಕೆ ಸಂಬಂಧಿಸಿದ ವಿವಾದಗಳು ಈ ದಿನ ಸುಖಾಂತ್ಯ ಕಾಣಲಿವೆ. ಕ್ರೀಡೆ ಅಥವಾ ರಕ್ಷಣಾ ಇಲಾಖೆಯಲ್ಲಿ ಇರುವವರಿಗೆ ಸ್ಮರಣೀಯ ದಿನವಾಗಿರಲಿದೆ. ರಕ್ತಸಂಬಂಧಿಗಳಿಂದ ಅನಿರೀಕ್ಷಿತ ಸಹಾಯ ಸಿಗಲಿದೆ. ಕೋಪವನ್ನು ಹತೋಟಿಯಲ್ಲಿಟ್ಟರೆ ಮಾತ್ರ ಸಂಜೆಯ ವೇಳೆಗೆ ಶುಭ ಸಮಾಚಾರವನ್ನು ಸಂಭ್ರಮಿಸುವುದಕ್ಕೆ ಸಾಧ್ಯ ಆಗಲಿದೆ.
ಲೇಖನ- ಎನ್.ಕೆ.ಸ್ವಾತಿ
Published On - 1:08 am, Sat, 10 January 26