ಮುಕ್ತ ಮನಸ್ಸಿನಿಂದ ವರ್ತಿಸಲಿದ್ದೀರಿ. ನಿಮ್ಮ ವೈಯಕ್ತಿಕ ವಿಚಾರಗಳಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಆಗಲಿವೆ. ತುಂಬ ಆಪ್ತರು ಹಾಗೂ ಬಂಧುಗಳು ನೀಡುವ ಕೆಲವು ಸಲಹೆ- ಸೂಚನೆಗಳಿಂದಾಗಿ ಬಹಳ ಬದಲಾವಣೆಗಳನ್ನು ನೀವು ಮಾಡಿಕೊಳ್ಳಲಿದ್ದೀರಿ. ನೀವು ಈಗಾಗಲೇ ತೆಗೆದುಕೊಂಡಿದ್ದ ತೀರ್ಮಾನಗಳನ್ನು ತಕ್ಷಣಕ್ಕೆ ತಿಳಿಸದೆ ಮುಂದಕ್ಕೆ ಹಾಕುವ ಸಾಧ್ಯತೆಗಳಿವೆ. ಇನ್ನೇನು ಇಂಥ ದಿನ ಹಣವನ್ನು ನೀಡುತ್ತೇನೆ ಎಂಬ ಮಾತು ನೀಡಿದ್ದವರು ಸಹ ಈ ತೀರ್ಮಾನದ ಬಗ್ಗೆ ಇನ್ನಷ್ಟು ಆಲೋಚನೆ ಮಾಡಬೇಕಿದೆ ಎಂದು ಹಣ ನೀಡುವುದನ್ನೇ ಮುಂದಕ್ಕೆ ಹಾಕಲಿದ್ದೀರಿ. ಸಂಗಾತಿಯ ಜತೆಗೆ ಉತ್ತಮವಾದ ಸಮಯವನ್ನು ಕಳೆಯುವಂಥ ಯೋಗ ಇದೆ. ಅವರು ನಿಮಗೆ ಅಚ್ಚರಿ ಮೂಡಿಸುವಂತೆ ಕೆಲವು ಉಡುಗೊರೆಗಳನ್ನು ನೀಡಬಹುದು ಅಥವಾ ಪ್ರವಾಸಕ್ಕೆ ಕರೆದೊಯ್ಯುವುದಕ್ಕೆ ಪ್ಲಾನ್ ಮಾಡಬಹುದು.
ಯಾವುದರಲ್ಲೂ ಉಡಾಫೆ ಬೇಡ. ಹೇಗಿದ್ದರೂ ಒಂದು ಸಲ ಹೇಳಿಯಾಗಿದೆ, ಒಪ್ಪಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ ಎಂದು ನಂಬಿಕೊಂಡು ಯಾವ ವಿಚಾರದಲ್ಲೂ ಸುಮ್ಮನೆ ಇರಬೇಡಿ. ಅದರಲ್ಲೂ ಈ ದಿನ ಫಾಲೋ ಅಪ್ ಮಾಡುವುದು ಬಹಳ ಮುಖ್ಯ ಆಗುತ್ತದೆ. ಭಾವನಾತ್ಮಕ ಕ್ಷಣಗಳಲ್ಲಿ ಯಾರಿಗೂ ಮಾತು ನೀಡುವುದಕ್ಕೆ ಹೋಗಬೇಡಿ. ಒಂದು ವೇಳೆ ಹಾಗನಿಸಿದರೂ ಮಾತನಾಡದೆ ಸುಮ್ಮನಿರುವುದಕ್ಕೆ ಪ್ರಯತ್ನಿಸಿ. ಆ ನಂತರ ನಿಜಕ್ಕೂ ನಿಮ್ಮಿಂದ ನೆರವು ನೀಡಲು ಸಾಧ್ಯವಾದರೆ ಹೇಳದೆ ಸಹಾಯವನ್ನು ಮಾಡಿ. ಮನೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸಬಹುದು. ಅದಕ್ಕಾಗಿ ಹೆಚ್ಚಿನ ಖರ್ಚು ಸಹ ಆಗಬಹುದು. ನೀವು ಹಾಕಿಕೊಂಡ ಬಜೆಟ್ ಗಿಂತ ಹೆಚ್ಚಿನ ಮೊತ್ತವನ್ನು ಇದಕ್ಕಾಗಿ ವ್ಯಯಿಸಬೇಕಾಗುತ್ತದೆ. ಸೇಲ್ ಬಿಲ್ಡಿಂಗ್ ನಿರ್ಮಾಣ ಮಾಡುವಂಥವರಿಗೆ ಒಂದೇ ಸಲಕ್ಕೆ ಎರಡು- ಮೂರು ಕಡೆ ಕೆಲಸ ಆರಂಭಿಸುವ ಅವಕಾಶಗಳು ತೆರೆದುಕೊಳ್ಳಲಿವೆ.
ಬೇಗ ಆಸಕ್ತಿ ಕಳೆದುಕೊಳ್ಳುವಂತೆ ಆಗಲಿದೆ. ಮನಸ್ಸಿಟ್ಟು, ಶ್ರಮಪಟ್ಟು ಮಾಡಿದ ಕೆಲಸ ಎಲ್ಲದರಲ್ಲೂ ಯಶಸ್ಸು ಸಿಗುತ್ತದೆ ಎಂಬ ಖಾತ್ರಿ ಇರುವುದಿಲ್ಲ. ಮುಖ್ಯವಾಗಿ ನಿಮಗಿರುವ ಆಸಕ್ತಿ ಹಾಗೂ ಅಗತ್ಯವೇ ಎಲ್ಲರಿಗೂ ಇರುತ್ತದೆ ಎಂದು ಭಾವಿಸುವುದಕ್ಕೆ ಹೋಗಬೇಡಿ. ಮೇಲುನೋಟಕ್ಕೆ ಕಾಣುವಂತೆಯೇ ನೀವು ಈ ಕೆಲಸ ಮಾಡಿದ್ದು ಸಾಕು ಎಂಬಂತೆ ಕೆಲವರು ನಡೆದುಕೊಳ್ಳುವುದಕ್ಕೆ ಆರಂಭಿಸಲಿದ್ದಾರೆ. ಇದನ್ನು ಗುರುತಿಸುವುದರಲ್ಲಿ ಈ ದಿನ ನೀವೇನಾದರೂ ವಿಫಲವಾದಲ್ಲಿ ಇನ್ನಷ್ಟು ಸಮಯ ವ್ಯರ್ಥವಾಗಬಹುದು. ಈ ಹಿಂದೆ ಯಾವಾಗಲೋ ನಿಮ್ಮಿಂದ ಆಗಿದ್ದ ನಷ್ಟವೊಂದಕ್ಕೆ ಪರಿಹಾರ ಕಟ್ಟಿಕೊಡುವಂತೆ ಕೆಲವರು ಬೆನ್ನು ಬೀಳಲಿದ್ದಾರೆ. ಈ ರೀತಿ ನೀವು ಮಾತು ನೀಡಿದ್ದಿರಿ, ಅದಕ್ಕೆ ನಾವೇ ಸಾಕ್ಷಿ ಎಂದು ಹೇಳಿಕೊಂಡು ಕೆಲವು ಜನ ಅವರ ಬೆಂಬಲಕ್ಕೂ ನಿಲ್ಲಲಿದ್ದಾರೆ.
ನೀವು ಈ ಹಿಂದೆ ಯಾವುದು ಊಹಿಸಿದ್ದಿರೋ ಅದರಂತೆ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳು, ಸಭೆ- ಸಮಾರಂಭಗಳನ್ನು ಆಯೋಜಿಸುವಂಥ ಜವಾಬ್ದಾರಿಗಳು ನಿಮಗೆ ವಹಿಸುವಂಥ ಸಾಧ್ಯತೆಗಳಿವೆ. ಅಷ್ಟೇ ಅಲ್ಲ, ಹಣಕಾಸು ಹೊಂದಿಸಬೇಕಾದ ಹೆಚ್ಚುವರಿ ಹೊಣೆ ಕೂಡ ನಿಮ್ಮ ಮೇಲೆ ಬೀಳಬಹುದು. ಇದೇ ವಿಚಾರಕ್ಕೆ ನಿಮ್ಮ ಸ್ನೇಹಿತರು- ಆಪ್ತರ ಅಭಿಪ್ರಾಯಗಳು ವಿಭಜನೆ ಆಗಲಿವೆ. ಕೆಲವರು ಇದನ್ನು ವಹಿಸಿಕೊಳ್ಳುವಂತೆಯೂ ಹಾಗೂ ಮತ್ತೆ ಕೆಲವರು ಈ ಉಸಾಬರಿ ನಿಮಗೆ ಬೇಡ ಅಂತಲೂ ಹೇಳಬಹುದು. ಪ್ರೀತಿ- ಪ್ರೇಮದ ವಿಚಾರದಲ್ಲಿ ಗಟ್ಟಿ ತೀರ್ಮಾನವನ್ನು ಕೈಗೊಳ್ಳಲೇ ಬೇಕಾದ ಸ್ಥಿತಿ ಉದ್ಭವ ಆಗಲಿದೆ. ಇನ್ನು ಪ್ರಮುಖವಾದ ವ್ಯಕ್ತಿಯೊಬ್ಬರನ್ನು ಈ ದಿನ ಭೇಟಿ ಆಗುವ ಯೋಗ ನಿಮಗೆ ಇದೆ. ಅವರ ಜತೆಗಿನ ಒಡನಾಟದಿಂದ ನಿಮ್ಮ ಆಲೋಚನಾ ಕ್ರಮದಲ್ಲಿ ಬದಲಾವಣೆ ಆಗಲಿದೆ.
ಬಹಳ ಸಮಯದಿಂದ ಮಾಡಬೇಕು ಎಂದಿದ್ದ ಕೆಲವು ಕೆಲಸ ಈ ದಿನ ಮಾಡಲಿದ್ದೀರಿ. ಬ್ರಾಂಡೆಡ್ ವಸ್ತುಗಳಿಗಾಗಿ ವಿಪರೀತ ಖರ್ಚು ಮಾಡುವಂಥ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ಇದಕ್ಕಾಗಿ ನೀವೇನಾದರೂ ಕ್ರೆಡಿಟ್ ಕಾರ್ಡ್ ಬಳಸುತ್ತೀರಿ ಎಂದಾದರೆ ಅಳತೆಗೆ ಮೀರಿ ಖರ್ಚು ಬರಲಿದೆ. ನೀವೇನಾದರೂ ಕಮಿಷನ್ ಆಧಾರದಲ್ಲಿ ಕೆಲಸ ಮಾಡುವಂಥವರಾದರೆ ಅತಿ ಮುಖ್ಯವಾದ ಕೆಲಸವೊಂದು ನಿಮಗೆ ಬರಲಿದ್ದು, ಅದಕ್ಕೆ ದೊಡ್ಡ ಮೊತ್ತದ ಕಮಿಷನ್ ಆಫರ್ ಸಹ ಮಾಡಬಹುದು. ಸಿನಿಮಾ ಕ್ಷೇತ್ರದಲ್ಲಿ ಇರುವಂಥವರಿಗೆ ಪ್ರಶಸ್ತಿಗಳು ಬರುವ ಅಥವಾ ದೊಡ್ಡ ವ್ಯಕ್ತಿಗಳಿಂದ ಉಡುಗೊರೆ ಪಡೆಯುವಂತಹ ಸಾಧ್ಯತೆ ಇದೆ. ಮನೆ ಮಾರಾಟ ಮಾಡಿಬಿಡಬೇಕು ಎಂದುಕೊಳ್ಳುತ್ತಿರುವವರಿಗೆ ಒಳ್ಳೆ ಗ್ರಾಹಕರು ದೊರೆಯಬಹುದು. ಅಥವಾ ಈಗಾಗಲೇ ನೋಡಿಕೊಂಡು ಹೋಗಿ, ಬಹಳ ಸಮಯ ಆದಂಥವರೇ ಮತ್ತೆ ನಿಮ್ಮ ಆಸ್ತಿ ಖರೀದಿ ಮಾಡುವುದಕ್ಕೆ ಬರುವ ಸಾಧ್ಯತೆಗಳು ಇವೆ.
ಹೊಸ ಉತ್ಸಾಹವೊಂದು ನಿಮ್ಮಲ್ಲಿ ಇರಲಿದೆ. ಕುಟುಂಬದಲ್ಲೋ ಅಥವಾ ಸ್ನೇಹಿತರು ಸೇರಿ ಆಯೋಜಿಸಬೇಕು ಎಂದುಕೊಂಡಿದ್ದ ಕಾರ್ಯಕ್ರಮಗಳ ಕೆಲಸ- ಕಾರ್ಯಗಳು ವೇಗ ಪಡೆದುಕೊಳ್ಳುತ್ತವೆ. ಸ್ನೇಹಿತರು ನಿಮ್ಮ ಬಳಿ ಮುಖ್ಯವಾದ ಸಲಹೆ- ಸೂಚನೆಗಳನ್ನು ಕೇಳಿಕೊಂಡು ಬರುವ ಸಾಧ್ಯತೆ ಇದೆ. ಇನ್ನು ನಿಖರವಾಗಿ ಹೇಳಬೇಕು ಅಂದರೆ, ನೀವು ನೀಡುವ ಸಲಹೆ- ಸೂಚನೆಗಳು ಅವರಿಗೆ ಮುಖ್ಯವಾಗುತ್ತದೆ. ಮನೆಗೆ ಬೆಳ್ಳಿ ವಸ್ತುಗಳನ್ನು ಖರೀದಿಸುವಂಥ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ಅದರಲ್ಲೂ ದೇವರ ಪಾತ್ರೆಗಳು, ವಸ್ತುಗಳನ್ನು ತರುವಂಥ ಸಾಧ್ಯತೆ ಇದೆ. ನಿಮ್ಮಲ್ಲಿ ಕೆಲವರಿಗೆ ತಂದೆ- ತಾಯಿಯಿಂದ ದಾನಪತ್ರದ ಮೂಲಕವಾಗಿ ಆಸ್ತಿಗಳು ಬರುವಂಥ ಸುಳಿವು ದೊರೆಯಲಿದೆ. ಇನ್ನು ಬರಲಾರದು ಎಂದು ಭಾವಿಸಿದ್ದ ಕೆಲವು ಸಣ್ಣ ಮೊತ್ತದ ಹಣ ಕೂಡ ಈ ದಿನ ಪ್ರಯತ್ನ ಪಟ್ಟಲ್ಲಿ ಬರುವ ಅವಕಾಶಗಳು ಹೆಚ್ಚಿಗೆ ಇವೆ.
ಏಕಾಗ್ರತೆಯನ್ನು ಕಾಪಾಡಿಕೊಳ್ಳುವುದು ತುಂಬ ಮುಖ್ಯ. ಈ ದಿನ ಸಣ್ಣ- ಪುಟ್ಟ ಅಪಘಾತಗಳಾಗುವ ಸಾಧ್ಯತೆಗಳಿವೆ. ಮಣ್ಣಿನ ರಸ್ತೆಯಲ್ಲಿ ಅಥವಾ ಹಳ್ಳ- ಗುಂಡಿಗಳು ಇರುವ ಕಡೆ ದ್ವಿಚಕ್ರ ವಾಹನದಲ್ಲಿ ತೆರಳುವಂಥವರು ಬಿದ್ದು ಗಾಯಗೊಳ್ಳುವ ಸಾಧ್ಯತೆ ಹೆಚ್ಚಿದೆ. ಕೆಲವರು ನಿಮ್ಮನ್ನು ಮುಂದೆ ಬಿಟ್ಟು, ತಮ್ಮ ಕೆಲಸವನ್ನು ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸಲಿದ್ದಾರೆ. ಅದನ್ನು ಕೇಳಿದ್ದಕ್ಕಾಗಿ ನೀವು ಪ್ರಭಾವಿಗಳ ದೃಷ್ಟಿಗೆ ಬಿದ್ದು, ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಇತರರು ಪುಸಲಾಯಿಸಿದರು ಎಂಬ ಕಾರಣಕ್ಕಾಗಿ ಪ್ರಭಾವಿಗಳನ್ನು ಎದುರು ಹಾಕಿಕೊಳ್ಳಬೇಡಿ. ಇನ್ನು ಈ ಹಿಂದೆ ಯಾವಾಗಲೋ ನೀವು ಹಾಕಿದ್ದ ಸೋಷಿಯಲ್ ಮೀಡಿಯಾ ಪೋಸ್ಟ್ ನಿಂದ ಈ ದಿನ ವಿವಾದ ಬುಗಿಲೇಳುವ ಸಾಧ್ಯತೆಗಳಿವೆ. “ಇಲ್ಲ, ಅದನ್ನು ಹಾಕಿದ್ದು ಆ ಉದ್ದೇಶದಿಂದಲ್ಲ, ಈ ಕಾರಣದಿಂದ” ಎಂಬ ಸಮಜಾಯಿಷಿ ನೀಡುತ್ತಾ, ಒತ್ತಡಕ್ಕೆ ಗುರಿ ಆಗುವಂಥ ಸನ್ನಿವೇಶ ಸೃಷ್ಟಿ ಆಗಲಿದೆ.
ಹೊಸ ವ್ಯಕ್ತಿಯಂತೆ ಆಲೋಚನೆಯಲ್ಲಿ ಬದಲಾವಣೆ ಆಗಲಿದೆ. ನಿಮ್ಮಲ್ಲಿ ಕೆಲವರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಈ ಹಿಂದೆ ಯಾವಾಗಲೋ ಹೂಡಿಕೆ ಮಾಡಿದ್ದಂಥವುಗಳಿಗೆ ಉತ್ತಮ ರಿಟರ್ನ್ಸ್ ದೊರೆಯಲಿದೆ. ನೀವು ಅಂದುಕೊಂಡ ಕೆಲವು ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಬೇಕಾದ ಸಂಪನ್ಮೂಲ ಒಟ್ಟುಗೂಡಿಸುವ ಪ್ರಯತ್ನದಲ್ಲಿ ದೊಡ್ಡ ಮಟ್ಟದ ಸಾಫಲ್ಯ ಕಾಣಲಿದ್ದೀರಿ. ನಿಮ್ಮಲ್ಲಿ ಕೆಲವರು ನಿಮ್ಮ ಜಮೀನಿಗೋ ಅಥವಾ ಮನೆಗೋ ಸೋಲಾರ್ ಸಾಧನಗಳನ್ನು ಅಳವಡಿಸುವುದಕ್ಕೆ ತೀರ್ಮಾನವನ್ನು ಕೈಗೊಳ್ಳಲಿದ್ದೀರಿ. ಸಂತಾನ ಅಪೇಕ್ಷಿತರು ಶುಭ ಸುದ್ದಿ ಕೇಳುವ ಯೋಗ ಇದೆ. ಇನ್ನು ಐವಿಎಫ್ ನಂಥ ಪದ್ಧತಿ ಮೂಲಕವಾಗಿ ಸಂತಾನಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸಹ ಈ ದಿನ ಉತ್ತಮ ಬೆಳವಣಿಗೆಗಳು ಆಗಲಿವೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಸ್ವಚ್ಛತೆಗೆ ಆದ್ಯತೆ ನೀಡುತ್ತೀರಿ. ಏಕಾಏಕಿ ಬದಲಾವಣೆಗಳನ್ನು ನೋಡುವುದಕ್ಕೆ ಆರಂಭಿಸುತ್ತೀರಿ. ಸಕಾರಾತ್ಮಕವಾದ ಬದಲಾವಣೆಯನ್ನು ನಿರೀಕ್ಷೆ ಸಹ ಮಾಡಬಹುದಾಗಿದೆ. ರಾಜಕಾರಣದಲ್ಲಿ ಇರುವಂಥವರಿಗೆ ನಿಮ್ಮ ಕೈಯಲ್ಲಿನ ಅವಕಾಶ ನಿಮ್ಮ ಬಳಿಯೇ ಇರುವುದು ಎಷ್ಟರ ಮಟ್ಟಿಗೆ ಸಾಧ್ಯ ಎಂಬುದನ್ನು ಹಲವು ಸಲ ಅಳೆದು ತೂಗಿ ನೋಡುವ ಪರಿಸ್ಥಿತಿ ಉದ್ಭವಿಸಲಿದೆ. ಅಡುಗೆ ಕಾಂಟ್ರಾಕ್ಟ್ ತೆಗೆದುಕೊಳ್ಳುವಂಥವರಿಗೆ ಒಂದಿಷ್ಟು ಆತಂಕ ತರುವಂಥ ಆರ್ಡರ್ ಗಳು ಬರಬಹುದು. ಅಂದರೆ ತುಂಬ ದೊಡ್ಡ ಮಟ್ಟದ ಆರ್ಡರ್ ಬಂದು, ಅದಕ್ಕೆ ಕೇಳಿದ ಮಟ್ಟಿಗಿನ ಅಡ್ವಾನ್ಸ್ ನೀಡುವುದಕ್ಕೆ ಗ್ರಾಹಕರು ಸಿದ್ಧರಿರುವುದಿಲ್ಲ. ಇದರಿಂದ ಚಿಂತೆಗೆ ಕಾರಣ ಆಗುತ್ತದೆ. ನಿಮಗೆ ಹಣ ತಂದುಕೊಡದಿದ್ದರೂ ಹೆಸರು ತರುವಂಥ ಕೆಲವು ಕೆಲಸಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ.
ಲೇಖನ- ಎನ್.ಕೆ.ಸ್ವಾತಿ