Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ರಾಶಿಯವರ ನಾಯಕತ್ವಕ್ಕೆ ಇತರರ ಬೆಂಬಲ ಸಿಗಲಿದೆ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಶುಕ್ಲ ಪಕ್ಷದ ಏಕಾದಶೀ ತಿಥಿ, ಮಂಗಳವಾರ ಕುಟುಂಬದ ಮೇಲೆ‌ ಅಕ್ಕರೆ, ಮುಂದಡಿಗೆ ಧೈರ್ಯ, ಮಿತಿಮೀರಿದ ಮಾತು ಇದೆಲ್ಲ ಈ ದಿನದ ಭವಿಷ್ಯ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಈ ರಾಶಿಯವರ ನಾಯಕತ್ವಕ್ಕೆ ಇತರರ ಬೆಂಬಲ ಸಿಗಲಿದೆ
ಜ್ಯೋತಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ

Updated on:Apr 08, 2025 | 10:34 PM

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ : ರೇವತೀ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಆಶ್ಲೇಷಾ, ಯೋಗ : ಧೃರಿ, ಕರಣ : ಬಾಲವ, ಸೂರ್ಯೋದಯ – 06: 24 am, ಸೂರ್ಯಾಸ್ತ – 06:44 pm, ಇಂದಿನ ಶುಭಾಶುಭಕಾಲ : ರಾಹು ಕಾಲ 15:39 – 17:12, ಯಮಘಂಡ ಕಾಲ 09:30 – 11:02, ಗುಳಿಕ ಕಾಲ 12:35 – 14:07

ತುಲಾ ರಾಶಿ: ನಿಮ್ಮ ಮಾತು ಪ್ರಾಮುಖ್ಯವನ್ನು ಪಡೆಯಬೇಕು ಎಂಬುದು ಆಗದು. ಒತ್ತಡದಿಂದಲೂ ಇದು ಸಾಧ್ಯವಾಗದು. ಇಂದು ಏನನ್ನೋ ಮಾಡಲು ಹೋಗಿ ಮತ್ತೇನೋ ಆಗಬಹುದು. ಮಕ್ಕಳಿಂದಾಗಿ ಆರ್ಥಿಕನಷ್ಟವನ್ನು ಕಾಣಬೇಕಾಗಬಹುದು. ಪ್ರೀತಿಸುವುದನ್ನು ಕಲಿತರೆ ನಿಮ್ಮ ಸುತ್ತಲು ಎಂತಹದೇ ನಕಾರಾತ್ಮಕ ಅಂಶಗಳಿರಲಿ ಅವುಗಳು ಸಕಾರಾತ್ಮಕವಾಗಿ ನಿಮಗೆ ತೋರುತ್ತವೆ. ವಾಹನ ಸೌಕರ್ಯವನ್ನು ಬಳಸಿಕೊಂಡು ಕಾರ್ಯವನ್ನು ಸಾಧಿಸುವಿರಿ. ನಿಮ್ಮ ನೆಚ್ಚಿನ ಕೆಲಸಗಳು ತೃಪ್ತಿಕರ ರೀತಿಯಲ್ಲಿ ಪೂರ್ಣಗೊಳ್ಳುವುದು. ಸಂಬಂಧಿಕರ ಜೊತೆ ಸಂತೋಷದ ಸಮಯವನ್ನು ಕಳೆಯುವಿರಿ. ನಿಮ್ಮದಲ್ಲದ ತಪ್ಪಿನಿಂದ ನಿಮಗೆ ಕಷ್ಟ. ಕೆಲವು ಆರ್ಥಿಕ ಸಮಸ್ಯೆಗಳನ್ನು ಅನಿವಾರ್ಯವಾಗಿ ಎದುರಿಸಬೇಕಾಗಬಹುದು. ನಿಮಗೆ ಎದುರಾಗುವ ಸಂಕಟಗಳ ಬಗ್ಗೆ ಗಮನವಿರಲಿ. ವೈಯಕ್ತಿಕ ಸಮಸ್ಯೆಗಳನ್ನು ವ್ಯವಹಾರಕ್ಕೆ ತಂದುಕೊಳ್ಳುವುದು ಬೇಡ.‌

ವೃಶ್ಚಿಕ ರಾಶಿ: ಎಂದೋ ಆದ ತಪ್ಪಿ ಇಂದು ಬೆಳಕಿಗೆ ಬಂದು ನಿಮಗೆ ಅಪಮಾನ. ಇಂದು ಯಾವುದನ್ನೂ ಅತಿರೇಕ ಮಾಡಿಕೊಳ್ಳುವುದು ಬೇಡ. ಭವಿಷ್ಯದಲ್ಲಿ ಭರವಸೆಯನ್ನು ಇಟ್ಟು ಮುಂದಡಿ ಇಡುವುದು ಅನಿವಾರ್ಯ.‌ ಇಂದಿನ ಜೀವನ ಸಂತೋಷದಿಂದ ಕೂಡಿರುವುದು. ಅತ್ಯಾಪ್ತರಿಂದ ಅಪರೂಪದ ಬಹುಮಾನ ಸಿಗಲಿದೆ. ಆರ್ಥಿಕತೆಯ ಬಗ್ಗೆ ಯಾರಲ್ಲಿಯೂ ಹೇಳಲಾರಿರಿ. ಪ್ರಭಾವೀ ವ್ಯಕ್ತಿಗಳ ಭೇಟಿಯಾಗುವುದು. ನಿಮ್ಮ ಜೀವನದ ದಿಕ್ಕಿಗೆ ಹೊಸ ಮಾರ್ಗವೂ ಸೇರ್ಪಡೆಯಾಗುವುದು. ವಿದ್ಯಾರ್ಥಿಗಳು ಓದಿನ ಕಡೆಗೆ ಗಮನಹರಿಸಲಿ. ಮನೆಯಲ್ಲಿ ಕೆಲವು ನವೀಕರಣ ಕಾರ್ಯಗಳನ್ನು ಮಾಡಿಸುವಿರಿ. ಸರ್ಕಾರದ ವಿರುದ್ಧ ಸಮಾಧಾನ ನಿಮಗೆ ಇದ್ದು, ಅದನ್ನು ಎಲ್ಲಿಯಾದರೂ ಹೇಳಿಕೊಳ್ಳುವಿರಿ. ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ. ಇಂದು ನಿಮ್ಮ ಭಾವನೆಗಳನ್ನು ನಿಯಂತ್ರಿಸುವುದು ಅವಶ್ಯಕ. ವಿದ್ಯಾರ್ಥಿಗಳು ಅಧ್ಯಯನದ ಮೇಲೆ ಕೇಂದ್ರೀಕರಿಸಲಾರು. ಖರೀದಿಸುವಾಗ ಅನುಭವಿಗಳ ಸಲಹೆಯನ್ನು ತೆಗೆದುಕೊಳ್ಳಲು ಮರೆಯದಿರಿ.

ಧನು ರಾಶಿ: ನಿಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಜಾಗರೂಕತೆಯಿಂದ ಇರಿ. ನಿಮ್ಮನ್ನು ಗಮನಿಸುತ್ತಲೇ ಕೆಲವರು ಇರುವರು.‌ ಒಂಟಿಯಾಗಿ ಎಲ್ಲಿಯೂ ಇರುವುದು ಬೇಡ. ನಿಮ್ಮ ಮನೆಯ ಒತ್ತಡದದ ಕಾರಣ ಯಾವ ಕಾರ್ಯವನ್ನೂ ಪೂರ್ಣಗೊಳಿಸಲಾಗದು. ಹಣವನ್ನು ಸಂಪೂರ್ಣವಾಗಿ ಇತರೇತರ ಕಾರ್ಯಗಳಿಗೆ ಖರ್ಚು ಮಾಡಿ ತುರ್ತಿಗೆ ಹಣವಿಲ್ಲದಂತೆ ಮಾಡಿಕೊಳ್ಳುವಿರಿ. ಸುತ್ತ ನಡೆಯುವ ವಿದ್ಯಮಾನಗಳನ್ನು ಗಮನಿಸಿಕೊಂಡು ಜೀವನವನ್ನು ಸಾಗಿಸಿ. ಅನೇಕ ಬದಲಾವಣೆಗಳು ನಿಮ್ಮ ಜೀವನಕ್ಕೆ ಅಗತ್ಯವಿದೆ. ಎಲ್ಲವನ್ನೂ ಸರಿ ಮಾಡಬಲ್ಲೆನೆಂಬ ಮನಃಸ್ಥಿತಿಯಿಂದ ಹೊರಗುಳಿದು ಯೋಚಿಸಿ. ಯಾರ ಜೊತೆಗೆ ಅಸಭ್ಯ ವರ್ತನೆ ಬೇಡ. ಏಟು ತಿನ್ನಬೇಕಾದೀತು. ನಿಮ್ಮ ಸಾಮರ್ಥ್ಯವನ್ನು ಸಮಾಜದ ಎದುರು ತೆರೆದಿಡುವಿರಿ. ಉಳಿತಾಯಕ್ಕೆ ಬೇಕಾದ ಅನುಕೂಲವು ಸೃಷ್ಟಿಯಾಗುವುದು. ಸಂಬಂಧಿಕರಿಂದ ನಿಮ್ಮ ಬಗ್ಗೆ ದೂರುಗಳು ಬರಬಹುದು. ಆದರೆ ಉತ್ತಮ ಸಂಬಂಧಗಳನ್ನು ಕಾಪಾಡಿಕೊಳ್ಳಲು ಪ್ರಯತ್ನವೂ ಅಗತ್ಯ. ವಿದ್ಯಾರ್ಥಿಗಳು ಅಧ್ಯಯನದಿಂದ ದೂರವಾಗುತ್ತಾರೆ.

ಮಕರ ರಾಶಿ: ನಿಮಗೆ ಯೋಗ್ಯವಾದ ಸ್ಥಾನ ಪ್ರಾಪ್ತಿಯಾಗುವುದು. ಯಾರ ಮಾತನ್ನೂ ಗಂಭೀರವಾಗಿ ತೆಗೆದುಕೊಳ್ಳಲಾರಿರಿ. ಬೇಡದ್ದನ್ನೂ ಮನಸ್ಸಿನಲ್ಲಿ ಹಾಕಿಕೊಂಡು ಸಂಕಟಪಡುವಿರಿ. ದೂರದ‌ ಪ್ರಯಾಣವನ್ನು ಮಾಡಬೇಡಿ. ಹಣದ ಅಗತ್ಯತೆ ಇಂದು ತುಂಬಾ ಕಾಡಲಿದೆ. ಸಂಗಾತಿಯ ಜೊತೆ ಸಂತೋಷದಿಂದ ಕಳೆಯಲು ಇಚ್ಛಿಸುವಿರಿ. ಮಹಿಳಾ ಉದ್ಯಮಕ್ಕೆ ಆರ್ಥಿಕಬೆಂಬಲ ಸಿಗುವುದು. ಕಛೇರಿಯಲ್ಲಿ ನಿಮ್ಮ‌ ಮೇಲಿನ ಅಭಿಪ್ರಾಯ ಬದಲಾಗಬಹುದು. ನೀವು ಸಂಬಂಧಗಳನ್ನು ಬಳಸದೇ ಸಡಿಲಾಗಬಹುದು. ವಿದ್ಯಾರ್ಥಿಗಳು ಅಧ್ಯಯನ ಮಾಡುವುದರ ಕಡೆ ಇರುವುದು. ಕಛೇರಿಯಲ್ಲಿ ನೀವು ಬಹಳ ಚಿಂತನಶೀಲವಾಗಿ ಕೆಲಸ ಮಾಡುವಿರಿ. ನಿಮ್ಮ ಮೇಲೆ ಯಾರಾದರೂ ಪಿತೂರಿ ಮಾಡಬಹುದು. ವಿದ್ಯಾಕ್ಷೇತ್ರದ ಉದ್ಯಮಕ್ಕೆ ಹಿನ್ನಡೆ. ಕಠಿಣ ಪರಿಶ್ರಮದ ಹೊರತಾಗಿ ಸರಿಯಾದ ಫಲಿತಾಂಶವನ್ನು ಸಾಧಿಸಲಾಗುವುದಿಲ್ಲ. ಯುವಕರು ಸಂಶೋಧನೆಯ ಚಟುವಟಿಕೆಗಳಲ್ಲಿ ಯಶಸ್ಸನ್ನು ಸಾಧಿಸುವರು.

ಕುಂಭ ರಾಶಿ: ಹಣಕಾಸಿನ ವಿಚಾರದಲ್ಲಿ ಅಸಮಾಧಾನ. ಕಲಹ ಮಾಡಿ ವ್ಯವಸ್ಥೆಯನ್ನು ಮಾಡಿಕೊಳ್ಳುವಿರಿ. ನೀವು ಭವಿಷ್ಯಕ್ಕಾಗಿ ಆರ್ಥಿಕತೆಯ ಬಗ್ಗೆ ಅಧಿಕ ಆಲೋಚನೆ ಮಾಡುವಿರಿ. ನಿಮ್ಮ ಅಂತಸ್ಸತ್ತ್ವವೇ ಎಲ್ಲ ಕಾರ್ಯಗಳನ್ನು ಖುಷಿಯಿಂದ ಮಾಡಲು ಸಹಕಾರಿಯಾಗುವುದು. ಭೂಮಿಯನ್ನು ಕಳೆದುಕೊಳ್ಳುವ ಸ್ಥಿತಿ ಬಂದೀತು. ಉತ್ಸವದಲ್ಲಿ ಪಾಲ್ಗೊಳ್ಳುವಿರಿ ಹಾಗೂ ಮಿತ್ರರ ಜೊತೆ ಇಂದು ಸಂತೋಷದಿಂದ ಸಮಯವನ್ನು ಕಳೆಯುವಿರಿ. ಸಂಗಾತಿಯ ಜೊತೆ ಕಾಲದ ಮಿತಿಯಿಲ್ಲದೇ ಹರಟೆಯನ್ನು ಹೊಡೆಯುವಿರಿ. ವಾಹನ ಅಪಘಾತದಿಂದ ನಿಮ್ಮವರನ್ನು ಕಳೆದುಕೊಳ್ಳುವ ಸಾಧ್ಯತೆ. ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಹಣಕಾಸಿನ ವೆಚ್ಚಕ್ಕೆ ಕಡಿವಾಣ ಅಗತ್ಯ. ನಿಮ್ಮ ಕೆಲಸವನ್ನು ಇತರರ ಜೊತೆ ಹಂಚಿಕೊಳ್ಳಲು ಕಲಿಯಿರಿ. ಅದು ನಿಮ್ಮ ಕೆಲಸದ ಹೊರೆಯನ್ನು ತಗ್ಗಿಸುತ್ತದೆ. ನಿಮ್ಮ ಕಾರ್ಯಕ್ಕೆ ಸಮಾಜದಿಂದ ಪುರಸ್ಕಾರ. ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವುದಾದರೂ ನಿರ್ಧಾರವನ್ನು ತೆಗೆದುಕೊಳ್ಳುವಾಗ, ಉತ್ತಮ ಅನುಭವಿ ವ್ಯಕ್ತಿಯನ್ನು ಸಂಪರ್ಕಿಸಿ.

ಮೀನ ರಾಶಿ: ನಿಮ್ಮ ನಾಯಕತ್ವಕ್ಕೆ ಇತರರ ಬೆಂಬಲದಿಂದ ಸ್ಫೂರ್ತಿಸಿಗಲಿದ್ದು, ಇನ್ನಷ್ಟು ಉತ್ಸಾಹ ಬರಲಿದೆ. ನಿಮ್ಮ ಸಂಗಾತಿಯ ಆರೋಗ್ಯವು ಕೆಟ್ಟ ಕಾರಣ ನಿಮ್ಮ ಮಾನಸಿಕ ಸ್ಥಿತಿಯು ಸ್ತಿಮಿತದಲ್ಲಿ ಇರದು. ನಿಮ್ಮ ಆಸಕ್ತಿಗೆ ಯೋಗ್ಯವಾದ ಕಾರ್ಯವು ಸಿಗುವತನಕ ಕಾಯಬೇಕಾಗುವುದು. ಸ್ಪರ್ಧೆಗಳಲ್ಲಿ ಗಮನಾರ್ಹ ಫಲಿತಾಂಶ ನಿಮ್ಮದಾಗಲಿದೆ. ನಿಮ್ಮವರ ಜೊತೆ ಆನಂದದಿಂದ ಕಾಲವನ್ನು ಕಳೆಯುವಿರಿ. ಪರಸ್ಪರ ಚರ್ಚೆಯ ಮೂಲಕ ಹಳೆಯ ಹಲವು ಸಮಸ್ಯೆಗಳು ಬಗೆಹರಿಯಲಿವೆ. ನಿಮ್ಮ ವಿಶೇಷ ಪ್ರತಿಭೆಯು ಜನರಗೆ ಗೊತ್ತಾದೀತು. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಎಚ್ಚರಿಕೆಯಿಂದ ಯೋಚಿಸಿ ಮುಂದುವರಿಯಿರಿ. ನಿಮ್ಮ ವಿರುದ್ಧದ ಮಾತುಗಳಿಗೆ ಕಿವಿಗೊಡಲು ಸಮಯ ಮತ್ತು ಆಸಕ್ತಿ ಎರಡೂ ಇರದು. ಪ್ರೀತಿಯಲ್ಲಿ ಪಾರದರ್ಶಕತೆ ಇರುವುದು ಬಹಳ ಮುಖ್ಯ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೇಡ. ಹಣಕಾಸಿನ ವಹಿವಾಟಿನ ಜೊತೆ ವ್ಯವಹರಿಸುವಾಗ ಜಾಗರೂಕತೆ ಇರಲಿ. ಆರೋಗ್ಯದಲ್ಲಿ ಜಾಗರೂಕತೆ ಅವಶ್ಯವಾಗಿ ಇರಲಿ.

Published On - 1:19 am, Tue, 8 April 25

ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಸವದತ್ತಿ: ಫುಲ್​ ಟೈಟ್ ಆಗಿ ರೋಗಿಗೆ ಚಿಕಿತ್ಸೆ ನೀಡಿದ ಸರ್ಕಾರಿ ವೈದ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಹಿಂದಿ ಹೇರಿಕೆಯನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ: ಸಿದ್ದರಾಮಯ್ಯ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ಕಾಂಗ್ರೆಸ್ ಗೆದ್ದ ರಾಜ್ಯಗಳ ಬಗ್ಗೆ ಯಾಕೆ ರಾಹುಲ್ ಮಾತಾಡಲ್ಲ? ವಿಜಯೇಂದ್ರ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ವಿಕಾಸ್ ಮೇಲೆ ನಡೆದ ಹಲ್ಲೆ ನೋಡಿದರೆ ರಕ್ತ ಕುದಿಯುತ್ತದೆ: ಅಶ್ವಿನಿ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಮಜಾ ಟಾಕೀಸ್ ವೇದಿಕೆ ಮೇಲೆ ಚರ್ಚೆ ಆಯ್ತು ಕುರಿ ಪ್ರತಾಪ್ ಅವರ ಆ ಒಂದು ವಿಡಿಯೋ
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಬಿಜೆಪಿ ಸೇರಿದಂತೆ ಯಾರೂ ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿಲ್ಲ: ಸುರೇಶ್
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
ಭರ್ಜರಿ ಪ್ರದರ್ಶನ... ಶಾಹೀನ್ ಅಫ್ರಿದಿಗೆ ಚಿನ್ನದ ಐಫೋನ್ ಉಡುಗೊರೆ
ವಿಂಗ್ ಕಮಾಂಡರ್ ವಿರುದ್ಧ ಎಫ್​ಐಅರ್ ದಾಖಲಾಗಿದೆ: ಪರಮೇಶ್ವರ್
ವಿಂಗ್ ಕಮಾಂಡರ್ ವಿರುದ್ಧ ಎಫ್​ಐಅರ್ ದಾಖಲಾಗಿದೆ: ಪರಮೇಶ್ವರ್
ಆರಡಿ ಎತ್ತರದ ದೈತ್ಯನ ಮೇಲೆ ಹುಡುಗ ಹೇಗೆ ಹಲ್ಲೆ ಮಾಡಿಯಾನು? ರಾಜಣ್ಣ
ಆರಡಿ ಎತ್ತರದ ದೈತ್ಯನ ಮೇಲೆ ಹುಡುಗ ಹೇಗೆ ಹಲ್ಲೆ ಮಾಡಿಯಾನು? ರಾಜಣ್ಣ
IPL 2025: ಮುಂಬೈ ಇಂಡಿಯನ್ಸ್ ಆಟಗಾರರಿಗೆ ಹೀಗೊಂದು ಶಿಕ್ಷೆ
IPL 2025: ಮುಂಬೈ ಇಂಡಿಯನ್ಸ್ ಆಟಗಾರರಿಗೆ ಹೀಗೊಂದು ಶಿಕ್ಷೆ