Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ನೇಹಿತರ ಬೆಂಬಲವು ನಿಮ್ಮ ಧೈರ್ಯ, ಆತ್ಮವಿಶ್ವಾಸ ಹೆಚ್ಚಿಸುವುದು

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಶುಕ್ಲ ಪಕ್ಷದ ಏಕಾದಶೀ ತಿಥಿ, ಮಂಗಳವಾರ ಕುಟುಂಬದ ಮೇಲೆ‌ ಅಕ್ಕರೆ, ಮುಂದಡಿಗೆ ಧೈರ್ಯ, ಮಿತಿಮೀರಿದ ಮಾತು ಇದೆಲ್ಲ ಈ ದಿನದ ಭವಿಷ್ಯ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಸ್ನೇಹಿತರ ಬೆಂಬಲವು ನಿಮ್ಮ ಧೈರ್ಯ, ಆತ್ಮವಿಶ್ವಾಸ ಹೆಚ್ಚಿಸುವುದು
ಜ್ಯೋತಿಷ್ಯ
Follow us
TV9 Web
| Updated By: ವಿವೇಕ ಬಿರಾದಾರ

Updated on: Apr 08, 2025 | 1:23 AM

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ : ಮೀನ ಮಾಸ, ಮಹಾನಕ್ಷತ್ರ : ರೇವತೀ, ಮಾಸ : ಚೈತ್ರ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಆಶ್ಲೇಷಾ, ಯೋಗ : ಧೃರಿ, ಕರಣ : ಬಾಲವ, ಸೂರ್ಯೋದಯ – 06: 24 am, ಸೂರ್ಯಾಸ್ತ – 06:44 pm, ಇಂದಿನ ಶುಭಾಶುಭಕಾಲ : ರಾಹು ಕಾಲ 15:39 – 17:12, ಯಮಘಂಡ ಕಾಲ 09:30 – 11:02, ಗುಳಿಕ ಕಾಲ 12:35 – 14:07

ಮೇಷ ರಾಶಿ: ನೀವು ಮಾಡುವ ಕೆಲಸದ ಮೇಲೆ ಗಮನವಿರದೇ ಮತ್ತೆಲ್ಲೋ ಇರುವಿರಿ. ನಿಮ್ಮ ಆತ್ಮವಿಶ್ವಾಸವೇ ಎಲ್ಲ ಕಾರ್ಯಗಳನ್ನು ಅನಾಯಾಸವಾಗಿ ಮಾಡುವಂತೆ ಮಾಡುತ್ತದೆ. ಹೊಸ ಸ್ನೇಹಿತರನ್ನು ಪಡೆಯುವಿರಿ. ಹೊಸ ಗೆಳೆತನದಲ್ಲಿ ಆಸಕ್ತಿ. ಪ್ರೀತಿಪಾತ್ರರ ಜೊತೆ ಇಂದು ವಿಹಾರ ಮಾಡುವಿರಿ. ವಿದ್ಯಾರ್ಥಿಗಳು ಯಂತ್ರೋಪಕರಣಗಳನ್ನು ಪಡೆದು ಆನಂದಿಸುವರು. ಕೆಲಸವನ್ನು ನಿರ್ಧರಿಸುವಾಗ ಯಾವುದೇ ಒತ್ತಡಗಳಿಗೆ ಅವಕಾಶ ಕೊಡಬೇಡಿ. ಒಪ್ಪಂದವನ್ನು ಕೇವಲ ಪತ್ರದ‌ ಮೇಲೆ ಮಾತ್ರವಲ್ಲ, ಮನಸ್ಸಿನಲ್ಲಿ ಕೂಡ ದೃಢಪಡಿಸಿ. ಸಮಯವನ್ನು ಹಾಗೇ ವ್ಯರ್ಥವಾಗಿ ಕಳಡಯಬೇಡಿ. ಸ್ನೇಹಿತರ ಬೆಂಬಲವು ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮ ಮಹತ್ವದ ಕೊಡುಗೆಯಿಂದಾಗಿ ನಿಮ್ಮ ಗೌರವವೂ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಹೊಸ ಕೊಡುಗೆಗಳನ್ನು ಕಾಣಬಹುದು. ರಾಜಕೀಯದಿಂದ ನಿಮ್ಮ ವ್ಯವಹಾರಕ್ಕೆ ಹೊಸ ದಿಕ್ಕನ್ನು ಸಿಗಬಹುದು. ಹಳೆಯ ಯಂತ್ರಗಳ ದುರಸ್ತಿಗೆ ಹಣವು ಖರ್ಚಾಗುವುದು.

ವೃಷಭ ರಾಶಿ: ವಿವಾಹ ಯೋಗವನ್ನು ಯಾವ ಕಾರಣಗಳಿಂದಲೂ ತಳ್ಳಿಹಾಕಬೇಡಿ. ಇದು ಮುಂದೆ ಸಂಕಷ್ಟ ತರುವುದು. ಇಂದು ನಿಮಗೆ ನಿನ್ನೊಬ್ಬರ ಕೆಲಸದ ಕಡೆ ಗಮನ ಹರಿಸಲಾಗದಷ್ಟು ಒತ್ತಡ ಇರಲಿದೆ. ಅನ್ಯರ ಕಾರ್ಯದ ಸಹವಾಸ ಬೇಡ. ನೀವು ನಿಮ್ಮ ಅಂತರಂಗವನ್ನು ಮುಚ್ಚಿಡಲು ಪ್ರಯತ್ನಿಸಿದರೂ ಅದು ನಿಲ್ಲದು. ಸ್ನೇಹಿತರು ನಿಮ್ಮ ಜೊತೆಗೇ ಇದ್ದು ನಿಮ್ಮ ಎಲ್ಲ ಆಗುಹೋಗುಗಳಿಗೂ ಜೊತೆಯಾಗುವರು. ಸಾಧನೆಯ ಫಲಿತಾಂಶದ ಬಗ್ಗೆ ಅಂಜಿಕೆ ಇರುವುದು. ಪ್ರೀತಿಯಿಂದ ಎಲ್ಲರೊಂದಿಗೆ ಮಾತನಾಡಿ. ಕುಟುಂಬದ ಮೋಜಿನ ಚಟುವಟಿಕೆಗಳನ್ನು ಮಾಡುತ್ತ ಕಾಲ ಕಳೆಯುವಿರಿ. ಮನೆಯ ನಿರ್ವಹಣೆಯ ಕೆಲಸದಲ್ಲಿಯೂ ನೀವು ಆಸಕ್ತಿ ಇರುವುದು. ಸ್ವಂತ ಕೆಲಸವನ್ನು ಬಹಳ ಅಚ್ಚು ಕಟ್ಟಾಗಿ ಮಾಡಿ ಮುಗಿಸುವಿರಿ. ವ್ಯಾಪಾರ ವಲಯದಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ. ನೌಕರರ ನಿರ್ಲಕ್ಷ್ಯದಿಂದ ಆಗುವ ಹೊಣೆಯನ್ನೂ ಹೊರಬೇಕಾಗುವುದು. ಕೆಲವು ರೀತಿಯ ಹಾನಿಯ ಬಗ್ಗೆಯೂ ಚಿಂತಿಸುವುದು ಅಗತ್ಯ. ಸರ್ಕಾರಿ ಕೆಲಸದಲ್ಲಿ ಯಾವುದೇ ತೊಂದರೆ ಇಲ್ಲ.

ಮಿಥುನ ರಾಶಿ: ಸ್ನೇಹವು ದೂರಾಗಿದ್ದು ನಿಮಗೆ ಸಂಕಟ. ಇಂದು ನಿಮ್ಮ ಸಂಗಾತಿಯ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಸೋಲಬಹುದು. ಮನೆಯ ಕಾರ್ಯಗಳಲ್ಲಿ ಮಗ್ನರಾಗಿ ಆಯಾಸವನ್ನು ತರಿಸಿಕೊಳ್ಳುವಿರಿ. ನಿಮ್ಮ ತಿಳಿವಳಿಕೆಯ ಮಟ್ಟ ಎಷ್ಟೆಂದು ನಿಮ್ಮ ವರ್ತನೆಯಿಂದ ತಿಳಿಯುತ್ತದೆ. ಮಾನಸಿಕ ಒತ್ತಡಕ್ಕೆ ಸಿಲುಕದೇ ನಿಶ್ಚಿಂತೆಯಿಂದ ಇರಲು ಪ್ರಯತ್ನಿಸಿ. ಇಂದು ನಿಮ್ಮ ದಕ್ಷತೆಯಿಂದ ಉತ್ತಮ ರೀತಿಯಲ್ಲಿ ಅನೇಕ ವಿಷಯಗಳನ್ನು ಸಾಧಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಖಾಸಗಿ ಉದ್ಯೋಗದಲ್ಲಿ ಬಯಸದೇ ಉನ್ನತ ಸ್ಥಾನಕ್ಕೆ ಏರಿದ್ದು ನಂಬಲು ಕಷ್ಟವಾಗಕಿದೆ. ಹೂಡಿಕೆ ಮಾಡಲು ಯಾವುದೇ ಯೋಜನೆ ಇದ್ದರೆ, ಅದು ಲಾಭದಾಯಕವಾಗಿರುತ್ತದೆ. ಆಪ್ತ ಸ್ನೇಹಿತರ ಬೆಂಬಲವೂ ನಿಮ್ಮ ಮನಸ್ಥಿತಿಯನ್ನು ಹೆಚ್ಚಿಸುತ್ತದೆ. ನಿಮ್ಮ ಕೋಪವನ್ನು ನಿಯಂತ್ರಿಸಿ. ಕೆಲವೊಮ್ಮೆ ಸ್ವಭಾವದಲ್ಲಿ ಭ್ರಮೆಯಿಂದ ಕೋಪದ ಸ್ಥಿತಿ ಇರಬಹುದು. ನಿಮ್ಮಲ್ಲಿರುವ ನ್ಯೂನತೆಗಳನ್ನು ನೀವೇ ತಿಳಿದು ಸರಿಪಡಿಸಿ.

ಕರ್ಕಾಟಕ ರಾಶಿ: ಅನೀರಕ್ಷಿತ ಲಾಭದಿಂದ ನಿಮ್ಮ ಸಾಲದ ಭಾರವನ್ನು ಕಡಿಮೆ ಮಾಡಿಕೊಳ್ಳಬಹುದು.‌ ಇಂದು ನಿಮ್ಮ ಇಷ್ಟದವರ ಜೊತೆ ಖುಷಿಯಿಂದ ವ್ಯವಹರಿಸಿ. ಕೆಲವು ಮಾತುಗಳಿಂದ ಅವರಿಗೆ ನೋವಾಗಬಹುದು.‌ ನ್ಯಾಯಾಲಯಕ್ಕೆ ಸಂಬಂಧಿಸಿದ್ದನ್ನು ತುರ್ತಾಗಿ ಮಾಡುವಿರಿ. ಎಷ್ಟೋ ದಿನದ ನಿಮ್ಮ ಜಟಿಲತೆಗಳು ಮಂದಗತಿಯಲ್ಲಿ ಸಾಗುತ್ತಿದ್ದು ಇಂದು ವೇಗವನ್ನು ಪಡೆಯುತ್ತದೆ. ನಿಮ್ಮ ಸುತ್ತಲಿನ ಜಗತ್ತಿಗೆ ನೀವು ಅಚ್ಚರಿಯ ಆಸಾಮಿಯಾಗುತ್ತೀರಿ. ದೂರದ ಪ್ರಯಾಣಕ್ಕೆ ಸಕಾರಣ ಸಿಕ್ಕಿದ್ದು, ಕುಟುಂಬದ ಜೊತೆ ಪ್ರಯಾಣ ಮಾಡುವಿರಿ. ಮನೆ ಮತ್ತು ವ್ಯವಹಾರದಲ್ಲಿ ಸರಿಯಾದ ಸಾಮರಸ್ಯ ಇರುತ್ತದೆ. ಇಂದು ಮನೆಯ ಎಲ್ಲ ಸದಸ್ಯರು ಪರಸ್ಪರ ಆನಂದಿಸುವರು. ಮಗುವಿನ ಚಟುವಟಿಕೆಗಳು ಮತ್ತು ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವುದು ಬಹಳ ಮುಖ್ಯ. ಭೂಮಿ ಅಥವಾ ವಾಹನಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳಿವೆ. ಯಾವುದೇ ರೀತಿಯ ವ್ಯವಹಾರಕ್ಕೆ ನಿಮ್ಮ ಕೆಲಸದ ಗುಣಮಟ್ಟಕ್ಕೆ ಹೆಚ್ಚಿನ ಗಮನ ಬೇಕಾಗುತ್ತದೆ.

ಸಿಂಹ ರಾಶಿ: ಇಂದಿನ ಕೆಲವು ಸಂದರ್ಭದಲ್ಲಿ ಮಾತಿಗಿಂತ ಮೌನವೇ ಉತ್ತಮವಾಗಲಿದೆ. ಇಂದು ಸಂಗಾತಿಯಿಲ್ಲದೇ ಚಟಪಡಿಸುವ ಸ್ಥಿತಿ ಬಂದೀತು. ಬಹಳ ದಿನಗಳ ಅನಂತರ ಮನೆಯ ಕಡೆ ಹೋಗುವಿರಿ. ಎಷ್ಟೋ ದಿನದ ಅನಂತರ ಇಂತಹ ಅಪರೂಪದ ಉಲ್ಲಾಸದ ಕ್ಷಣ ನಿಮ್ಮ ಪಾಲಿಗಿ ಇರಲಿದೆ. ವ್ಯಾಪಾರಸ್ಥರು ಗ್ರಾಹಕರ ಜೊತೆಗೆ ಸಮಾಧಾನದಿಂದ‌ ಮಾತನಾಡಿ ಆದಾಯವನ್ನು ಹೆಚ್ಚು ಮಾಡಿಕೊಳ್ಳಬೇಕಿದೆ. ಎಂದೋ ಉಳಿಸಿಟ್ಟ ಕಾಸು ಇಂದು ತುರ್ತಿಮನ ಕಾಲಕ್ಕೆ ಬಳಕೆಗೆ ಬರುತ್ತದೆ. ಇಂದು ನಿಮ್ಮ ಮನಸ್ಸಿಗೆ ಹಿತವಾದ ಯಾವುದಾರೂ ಒಂದು ಕೆಲಸವನ್ನು ಮಾಡಿ. ಸಮಯವು ನಿಮಗಾಗಿ ಅವಕಾಶವನ್ನು ಕೊಡಬಹುದು. ಹಲವು ದಿನಗಳ ಅನಂತರ ಭಾರದ ಮನಸ್ಸು ಹಗುರಾಗುವುದು. ಋಣಾತ್ಮಕ ಚಿಂತನೆಯನ್ನು ಬಿಡುವುದು ಉತ್ತಮ. ವ್ಯವಹಾರದಲ್ಲಿ ನೀವು ತೆಗೆದುಕೊಳ್ಳುವ ತ್ವರಿತ ನಿರ್ಧಾರಗಳು ಸಕಾರಾತ್ಮಕವಾಗಿರುತ್ತವೆ. ಈ ಸಮಯದಲ್ಲಿ ಯಾವುದೇ ಹೊಸ ಕೆಲಸ ಅಥವಾ ಯೋಜನೆಯನ್ನು ಪ್ರಾರಂಭಿಸಬೇಡಿ.

ಕನ್ಯಾ ರಾಶಿ: ಅನವಶ್ಯ ಆಲೋಚನೆ ಹಾಗೂ ಚಿಂತೆಯಿಂದ ನಿಮಗೂ ನಿಮ್ಮ ಸಂಗಾತಿಗೂ ಕಿರಿಕಿರಿ. ಇಂದು ಕಾರ್ಯದಲ್ಲಿನ ಬದ್ಧತೆಯಿಂದ ಎಲ್ಲರೂ ಅಚ್ಚರಿಪಡುತ್ತಾರೆ. ಹಣದ ಹೂಡಿಕೆಯ ಮಾರ್ಗಗಳನ್ನು ಅನ್ಯರ ಮೂಲಕ ಪಡೆದುಕೊಳ್ಳುವಿರಿ. ಯಾರಿಗೂ ಮಾತನ್ನು ಕೊಡಲು ಹೋಗಬೇಡಿ. ನಿಮ್ಮ ನೋವನ್ನು ಆಲಿಸುವ ಕಿವಿಗಳ ಕೊರತೆ ಇದೆ. ನೀವು ನೀಡುವ ಅಭಿಪ್ರಾಯಗಳು ಬಾಲಿಶ ಎಂದು ಮನೆಯವರಿಗೆ ಅನ್ನಿಸಬಹುದು. ಹೂಡಕೆ ಮಾಡಿದರೂ ಅದರ ಪ್ರಮಾಣ ಕಡಿಮೆ ಇರಲಿ. ನಿಮ್ಮ ಭವಿಷ್ಯದ ಯೋಜನೆಯ ಸರಿಯಾದ ಚಿತ್ರಣವು ನಿಮ್ಮಲ್ಲಿ ಇರಲಿ. ತಪ್ಪುಗಳೇ ಇಂದು ಹೆಚ್ಚು ಕಾಣಿಸುವುದು. ನಿಮ್ಮ ಕೆಲಸದ ಸಾಮರ್ಥ್ಯದ ಮೂಲಕ ಸಕಾರಾತ್ಮಕ ಫಲಿತಾಂಶಗಳನ್ನು ಸಾಧಿಸುವಿರಿ. ನಿಮ್ಮ ಆಲೋಚನೆಗಳ ಬಗ್ಗೆ ಯೋಚಿಸುವುದು ಕೆಲವು ಪರಿಣಾಮಗಳನ್ನು ಉಂಟುಮಾಡಬಹುದು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳು ಹೆಚ್ಚು ಸಮಯ ಕಳೆದು, ಅಧ್ಯಯನವನ್ನು ನಿರ್ಲಕ್ಷಿಸಬಹುದು. ನೌಕರರಿಂದ ಕೆಲವು ಅಡಚಣೆಗಳೂ ಇರಬಹುದು.

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!
ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ