Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಗೋಳದಲ್ಲಿ ಎರಡು ಸೂರ್ಯ: ಕೆನಡಾದ ಅಪಾಯವನ್ನು ಸೂಚಿಸುತ್ತಿದೆಯಾ ಕಾಲ?

ಕೆನಡಾದಲ್ಲಿ ಕಂಡುಬಂದ ಎರಡು ಸೂರ್ಯಗಳ ಘಟನೆಯು ಜ್ಯೋತಿಷ್ಯ ಮತ್ತು ವಿಜ್ಞಾನದ ದೃಷ್ಟಿಕೋನಗಳನ್ನು ಚರ್ಚಿಸುತ್ತದೆ. ಜ್ಯೋತಿಷ್ಯದ ಪ್ರಕಾರ, ಉಪಸೂರ್ಯನ ಅರ್ಥ ನಾಶ ಮತ್ತು ರಾಷ್ಟ್ರೀಯ ಅಸ್ಥಿರತೆ. ವಿಜ್ಞಾನವು ಇದನ್ನು ವಾತಾವರಣದ ವಿದ್ಯಮಾನವೆಂದು ವಿವರಿಸುತ್ತದೆ. ಲೇಖನವು ಈ ಎರಡು ದೃಷ್ಟಿಕೋನಗಳನ್ನು ಹೋಲಿಸಿ, ಈ ಘಟನೆಯ ಸಂಭವನೀಯ ಪರಿಣಾಮಗಳನ್ನು ವಿಶ್ಲೇಷಿಸಲಾಗಿದೆ. ಮುನ್ಸೂಚನೆಗಳನ್ನು ಗಮನಿಸುವುದು ಮುಖ್ಯ ಎಂದು ಒತ್ತಿಹೇಳುತ್ತದೆ.

ಖಗೋಳದಲ್ಲಿ ಎರಡು ಸೂರ್ಯ: ಕೆನಡಾದ ಅಪಾಯವನ್ನು ಸೂಚಿಸುತ್ತಿದೆಯಾ ಕಾಲ?
ಎರಡು ಸೂರ್ಯ ಉದಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ

Updated on: Apr 08, 2025 | 1:04 AM

ಖಗೋಳದ ವಿಸ್ಮಯಗಳು ಹುಬ್ಬೇರಿಸುವಂತೆ ಮಾಡುತ್ತವೆ. ಅಲ್ಲಿ ನಡೆಯುವ ವಿದ್ಯಮಾನಗಳು ಸಾಮಾನ್ಯರಿಗೆ ಅಚ್ಚರಿ ಎನಿಸಿದರೆ, ಸಂಶೋಧಕರಿಗೆ ಕುತೂಹಲಕರವಾಗಿರುತ್ತವೆ. ಬಲ್ಲವರಿಗೆ ಅನುಭವ. ಖಗೋಳದಲ್ಲಿ ಆಗುವ ಬದಲಾವಣೆ, ವಿಚಿತ್ರ ಸಂಗತಿಗಳು ಮನುಷ್ಯನ‌ ಮೇಲೇ ಅಷ್ಟೇ ಅಲ್ಲ ರಾಷ್ಟ್ರದ ಮೇಲೂ ಪರಿಣಾಮವನ್ನು ಬೀರುತ್ತವೆ. ಅಂತಹ ವಿಸ್ಮಯಗಳನ್ನು ಯಾವ ಭೂ ಭಾಗದಲ್ಲಿ ನಡೆಯುತ್ತದೆ ಆ ಪ್ರದೇಶಕ್ಕೆ ಶುಭ ಅಥವಾ ಅಶುಭವಾಗುತ್ತದೆ.

ಸದ್ಯ ಮಾಧ್ಯಮಗಳಲ್ಲಿ ಎರಡು‌ ಸೂರ್ಯ ವರದಿ ಕೇಳಿಬರುತ್ತಿದೆ. ಕೆನಡಾದಲ್ಲಿ ಬೆಳಗಿನ ಹೊತ್ತಿನಲ್ಲಿ ಉದಯವಾಗುವಾಗ ಎರಡು ಸೂರ್ಯನನ್ನು ಕಂಡು ಜನ ದಿಗ್ಭ್ರಾಂತರಾಗಿದ್ದಾರೆ. ಕೆಲವರಿಗೆ ಅಚ್ಚರಿ, ಕುತೂಹಲ ಎಲ್ಲವೂ ಆಗಿದೆ. ವಿಜ್ಞಾನವು ಅದರದ್ದೇ ಆದ ಉತ್ತರವನ್ನು ಕೊಡುತ್ತದೆ. ಅದು ಸರಿಯಾದದು ಅಥವಾ ಅಲ್ಲ ಎನ್ನಲಾಗದು. ಆದರೆ ಅದಕ್ಕಿಂತ ಮುಂದುವರೆದು ನೋಡುವುದಾದರೆ ಇದಕ್ಕೆ ಫಲವೂ ಇದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

ಜ್ಯೋತಿಷ್ಯದಲ್ಲಿ ಇಂತಹ ಸಂದರ್ಭಗಳಲ್ಲಿ ಸೂರ್ಯನ್ನು ಉಪಸೂರ್ಯ ಎಂಬುದಾಗಿ ಕರೆದಿದ್ದಾರೆ. ಇದು ಕಂಡರೆ ಏನಾಗುತ್ತದೆ ಎನ್ನುವುದೂ ಮುಖ್ಯ.

ಉಪಸೂರ್ಯ ಉಂಟಾಗುವುದು ಸೂರ್ಯನ‌ ಕಿರಣಗಳು ಮೋಡಗಳ ಮೇಲೆ ಯಾವುದೋ ಒಂದು ಕೋನದಲ್ಲಿ ಬಿದ್ದಾಗ ಇದು ಆಗುತ್ತದೆ. ಇಂತಹ ಸನ್ನಿವೇಶಗಳು ಸೂರ್ಯಾಸ್ತ ಅಥವಾ ಸೂರ್ಯೋದಯದ ಸಮಯದಲ್ಲಿ ಕಂಡರೆ ಉತ್ಪಾತಗಳು ಸಂಭವಿಸುತ್ತದೆ ಎನ್ನುತ್ತದೆ ಭಾರತೀಯ ಜ್ಯೋತಿಷ್ಯ ಶಾಸ್ತ್ರ.

ಉಪಸೂರ್ಯ ಕಂಡರೆ ಅರ್ಥ ನಾಶ ಎಂದು.‌ ಇದು ವೈಯಕ್ತಿಕ ಬದುಕಿಗೆ ಜೋಡಿಸುವುದಕ್ಕಿಂತ ರಾಜ್ಯಕ್ಕೆ, ರಾಷ್ಟ್ರಕ್ಕೆ ತೊಂದರೆ. ಅಲ್ಲಿನ ಅರ್ಥವ್ಯವಸ್ಥೆ ಹಾಳಾಗುವುದು. ಸಂಪತ್ತಿನ ಮೂಲಗಳು ಇಲ್ಲವಾಗುವುದು.

ರಾಜರುಗಳ ನಡುವೆ ಕಲಹವೇರ್ಪಡುವುದು.‌ ವಿರೋಧಿಗಾಳಾಗುವ ಸಾಧ್ಯತೆಯೂ ಇದೆ. ಇನ್ನು ಜಲಪ್ರವಾಹ ಕಾಣಿಸುವುದು. ಸುನಾಮಿಯಂತಹ ಚಂಡಮಾರುತ ಬಂದು ಅಪ್ಪಳಿಸಬಹುದು ಅಥವಾ ಮಳೆಯಿಂದಾಗಿ ಕಟ್ಟಡಗಳು ಮುಳುಗಿ, ಧ್ವಂಸವಾಗಿ ಹೋಗುವುದು. ಸಮುದ್ರ ತೀರದ ಪ್ರದೇಶಗಳಲ್ಲಿ ಬಹಳ ಎಚ್ಚರಿಕೆ ಅವಶ್ಯಕ.‌ ಮುನ್ಸೂಚನೆಯನ್ನು ಅಲ್ಲಗಳೆದರೆ ಆಪತ್ತನ್ನು ಎದುರಿಸಲಾಗದೇ ನಾಶವಾಗಬೇಕಾಗುವುದು.

ಯದ್ಯುಪಸೂರ್ಯಕಮಸ್ಯಾಂ

ಸಂಧ್ಯಾಯಾಮರ್ಥನಾಶನಂ ಪ್ರಚುರಮ್ |

ಕ್ಷಿತಿಪತಿಕಲಹಃ ಶೀಘ್ರಂ

ಸಲಿಲಭಯಂ ಭಯಂ ವಾ ಭವೇನ್ನೂನಮ್ ||

ವಸಿಷ್ಠರು ತಮ್ಮ ಸಂಹಿತೆಯಲ್ಲಿ ಉಪಸೂರ್ಯರ ಬಗ್ಗೆ ಹೀಗೆ ವರ್ಣಿಸಿದ್ದಾರೆ.

ಸೂರ್ಯನಿಂದ ಗುರುವು ಕೇಂದ್ರದಲ್ಲಿ ಇದ್ದಾಗ ಇಂತಹ ವಿಸ್ಮಯಗಳು ನಡೆದಾಗ ಯಾವುದೇ ಅಪಾಯ ಆಗದು ಎಂದು ಶಾಸ್ತ್ರ ತಿಳಿಸುತ್ತದೆ. ಕೇಂದ್ರವೆಂದರೆ ಲಗ್ನದಿಂದ ಒಂದು ನಾಲ್ಕು ಏಳು ಮತ್ತು ಹತ್ತನೇ ರಾಶಿಯಾಗಿದೆ. ಆದರೆ ಮೀನಲಗ್ನವಾಗಿದೆ.‌ ಅಲ್ಲಿಂದ ಗುರುವು ಮೂರನೇ ರಾಶಿಯಲ್ಲಿ ಇದ್ದಾನೆ. ಕೇಂದ್ರಸ್ಥಾನವಾಗಿಲ್ಲ.

ಸೂರ್ಯ ಹಾಗೂ ಚಂದ್ರ ಈ ಎರಡು ಗ್ರಹಣಗಳೂ ಪಾಲ್ಗುಣ ಮಾಸದ ಹುಣ್ಣಿಮೆ ಹಾಗೂ ಅದೇ ಮಾಸದ ಅಮಾವಾಸ್ಯೆಯಲ್ಲಿ ಆಗಿದೆ. ಅದೂ ವಿದೇಶದಲ್ಲಿ ಆಗಿರುವುದು.‌ ಇದರ ಫಲವೂ ರಾಜ್ಯ ಹಾಗೂ ರಾಷ್ಟ್ರಗಳ ಮಧ್ಯದಲ್ಲಿ ಕಲಹ, ಯುದ್ಧವೆಂದು. ಕೆನಡಾದಲ್ಲಿ ಮಾರ್ಚ್ 29ರಂದು ಸೂರ್ಯೋದಯ 7:04 ಕ್ಕೆ ಆಗಿದೆ. ಆದಕಾರಣ ಕೆನಡಾ ವಾಸಿಗಳು ಎಚ್ಚರಿಕೆಯಿಂದ ಇರಬೇಕಾದ ಸ್ಥಿತಿಯನ್ನು ಕಾಲವೇ ಹೇಳಿದೆ.

ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು
ಉಗ್ರರು ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿದ್ದು ಆಘಾತಕಾರಿ ಎಂದ ಪರಮೇಶ್ವರ್
ಉಗ್ರರು ಹಿಂದೂಗಳನ್ನೇ ಹುಡುಕಿ ದಾಳಿ ಮಾಡಿದ್ದು ಆಘಾತಕಾರಿ ಎಂದ ಪರಮೇಶ್ವರ್
ಫಾರ್ಮ್​ಹೌಸ್​ನಲ್ಲಿ ಎತ್ತಿನಗಾಡಿ ಓಡಿಸಿದ ನಟ ದರ್ಶನ್; ದಾಸನ ಜಾಲಿ ಮೂಡ್
ಫಾರ್ಮ್​ಹೌಸ್​ನಲ್ಲಿ ಎತ್ತಿನಗಾಡಿ ಓಡಿಸಿದ ನಟ ದರ್ಶನ್; ದಾಸನ ಜಾಲಿ ಮೂಡ್
VIDEO: ಝಹೀರ್ ಖಾನ್ - ರಿಷಭ್ ಪಂತ್ ನಡುವೆ ಮಾತಿನ ಚಕಮಕಿ
VIDEO: ಝಹೀರ್ ಖಾನ್ - ರಿಷಭ್ ಪಂತ್ ನಡುವೆ ಮಾತಿನ ಚಕಮಕಿ
ನಿನ್ನೆ ಮಧ್ಯಾಹ್ನದಿಂದ ಪಲ್ಲವಿ ಅನುಭವಿಸಿರುವ ಯಾತನೆ ಪದಗಳಲ್ಲಿ ಹೇಳಲಾಗದು
ನಿನ್ನೆ ಮಧ್ಯಾಹ್ನದಿಂದ ಪಲ್ಲವಿ ಅನುಭವಿಸಿರುವ ಯಾತನೆ ಪದಗಳಲ್ಲಿ ಹೇಳಲಾಗದು
Video: ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯ ವಿಡಿಯೋ ಇಲ್ಲಿದೆ
Video: ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯ ವಿಡಿಯೋ ಇಲ್ಲಿದೆ