AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿನಿಮಾ ವಿಮರ್ಶೆಯೇ ಬ್ಯಾನ್ ಆಗಬೇಕು ಎಂದವರಿಗೆ ಮುಟ್ಟಿನೋಡಿಕೊಳ್ಳೋ ಉತ್ತರ ಕೊಟ್ಟ ನಾನಿ

ಆನ್‌ಲೈನ್ ಸಿನಿಮಾ ವಿಮರ್ಶೆಗಳ ಹೆಚ್ಚಳದಿಂದಾಗಿ, ಚಿತ್ರಮಂದಿರದ ಹೊರಗೆ ವಿಮರ್ಶೆ ಮಾಡುವುದನ್ನು ನಿಷೇಧಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿ ನಟ ನಾನಿ, ವಿಮರ್ಶೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಆದರೆ, ಮುಂಜಾನೆ ಪ್ರದರ್ಶನದ ನಂತರವೇ ಚಿತ್ರದ ಯಶಸ್ಸು ಅಥವಾ ವೈಫಲ್ಯವನ್ನು ಘೋಷಿಸುವುದು ಸರಿಯಲ್ಲ ಎಂದು ಸಲಹೆ ನೀಡಿದ್ದಾರೆ.

ಸಿನಿಮಾ ವಿಮರ್ಶೆಯೇ ಬ್ಯಾನ್ ಆಗಬೇಕು ಎಂದವರಿಗೆ ಮುಟ್ಟಿನೋಡಿಕೊಳ್ಳೋ ಉತ್ತರ ಕೊಟ್ಟ ನಾನಿ
ನಾನಿ
Follow us
ರಾಜೇಶ್ ದುಗ್ಗುಮನೆ
|

Updated on: Apr 23, 2025 | 3:00 PM

ಇತ್ತೀಚೆಗೆ ಆನ್​ಲೈನ್​​ನಲ್ಲಿ ವಿಮರ್ಶೆ ಮಾಡುವವರ ಸಂಖ್ಯೆ ಹೆಚ್ಚಿದೆ. ಯೂಟ್ಯೂಬರ್​ಗಳು ಪ್ರೇಕ್ಷಕರ ಎದುರು ಮೈಕ್ ಹಿಡಿದು ಸಿನಿಮಾ ಉತ್ತಮವಾಗಿ ಇದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಕೇಳುತ್ತಾರೆ. ಅಲ್ಲಿಯೇ ಸಿನಿಮಾ ಹಿಟ್ ಅಥವಾ ಫ್ಲಾಪ್ ಎಂಬುದು ಕೂಡ ಘೋಷಣೆ ಆಗುತ್ತದೆ. ಈ ರೀತಿ ಮಾಡೋದು ಸರಿ ಅಲ್ಲ ಎಂಬುದು ಸಿನಿಮಾ ತಂಡದವರ ಅಭಿಪ್ರಾಯ. ಈ ಕಾರಣಕ್ಕೆ ಥಿಯೇಟರ್ ಹೊರಗೆ ಸಿನಿಮಾ ವಿಮರ್ಶೆ ಮಾಡೋದನ್ನು ಬ್ಯಾನ್ ಮಾಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಇದಕ್ಕೆ ನಾನಿ (Nani) ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಾನಿ ನಟನೆಯ ‘ಹಿಟ್ 3’ ಸಿನಿಮಾ ಮೇ 1ರಂದು ರಿಲೀಸ್ ಆಗುತ್ತಿದೆ. ‘ಹಿಟ್’ ಸಿನಿಮಾ ಯಶಸ್ವಿ ಚಿತ್ರಗಳಲ್ಲಿ ಒಂದಾಗಿದ್ದು, ಇದರಲ್ಲಿ ಮೂರನೇ ಸಿನಿಮಾ ಆಗಿ ಇದು ಮೂಡಿ ಬರುತ್ತಿದೆ. ಈ ಚಿತ್ರದ ಪ್ರಚಾರದ ವೇಳೆ ವಿಮರ್ಶೆಗಳ ಬಗ್ಗೆ ಹಾಗೂ ಅದನ್ನು ಬ್ಯಾನ್ ಮಾಡುವ ಚರ್ಚೆಗಳ ಬಗ್ಗೆ ಕೇಳಲಾಗಿದೆ. ಇದಕ್ಕೆ ನಾನಿ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

‘ಈ ಮೊದಲು ಸಿನಿಮಾಗಳ ಬಗ್ಗೆ ತಕ್ಷಣಕ್ಕೆ ವಿಚಾರಗಳನ್ನು ಹಂಚಿಕೊಳ್ಳಲು ಯಾರೂ ಇರಲಿಲ್ಲ. ಆದರೆ, ಈಗ ಸೋಶಿಯಲ್ ಮೀಡಿಯಾ ಬಳಕೆ ಹೆಚ್ಚಿದೆ. ವಿಮರ್ಶೆ ಎಲ್ಲ ಕಡೆ ಇದೆ ಮತ್ತು ಅದನ್ನು ನಿಲ್ಲಿಸಲು ಸಾಧ್ಯವೇ ಇಲ್ಲ. ನೀವು ಯಾರನ್ನು ತಡೆಯುತ್ತೀರಿ? ನೀವು ಏಕೆ ಅವರನ್ನು ತಡೆಯುತ್ತೀರಿ’ ಎಂದು ನಾನಿ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ
Image
ಫಾರ್ಮ್​ಹೌಸ್​ನಲ್ಲಿ ಎತ್ತಿನಗಾಡಿ ಓಡಿಸಿದ ನಟ ದರ್ಶನ್; ದಾಸನ ಜಾಲಿ ಮೂಡ್
Image
‘ಸೀತಾ ರಾಮ’ ಧಾರಾವಾಹಿ: ಅಶೋಕ್​ಗೆ ಗೊತ್ತಾಗಿ ಹೋಯ್ತು ಸಿಹಿಯ ಆತ್ಮದ ಕಥೆ
Image
ರೋಹಿತ್ ಶೆಟ್ಟಿ-ಶಾರುಖ್ ಮಧ್ಯೆ ಯಾವುದೂ ಸರಿ ಇಲ್ಲ? ನಿರ್ದೇಶಕನ ಸ್ಪಷ್ಟನೆ
Image
ಪಾಕ್ ಟಿಕ್​ ಟಾಕರ್ ಖಾಸಗಿ ವಿಡಿಯೋ ಲೀಕ್; ಹರಿದು ಹಂಚೋಯ್ತು 

ನಾನಿ ಅವರು ಈ ರೀತಿ ಸಿನಿಮಾ ವಿಮರ್ಶೆ ಮಾಡುವವರಿಗೆ ಒಂದು ಸಲಹೆ ನೀಡಿದ್ದಾರೆ. ‘ಸಿನಿಮಾ ಅಥವಾ ದೃಶ್ಯ ಸರಿ ಇಲ್ಲ ಎಂದು ಹೇಳೋದರಲ್ಲಿ ಯಾವುದೇ ತೊಂದರೆ ಇಲ್ಲ. ಆದರೆ, ಮಾರ್ನಿಂಗ್ ಶೋ ಬಳಿಕ ಸಿನಿಮಾ ಹಿಟ್ ಅಥವಾ ಫ್ಲಾಪ್ ಎಂದು ಘೋಷಿಸೋದು ಸರಿ ಅಲ್ಲ. ಸಿನಿಮಾ 10 ದಿನದವರೆಗೂ ಒಳ್ಳೆಯ ಪ್ರತಿಕ್ರಿಯೆ ಪಡೆಯಲು ವಿಫಲ ಆಯಿತು ಎಂದರೆ ಆಗ ಅದು ಡಿಸಾಸ್ಟರ್ ಆಗುತ್ತದೆ. ಅದನ್ನು ಮತ್ತೆ ಘೋಷಣೆ ಮಾಡಬೇಕು ಎಂದಿಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ನಾನಿ ವಿರುದ್ಧ ನಿರ್ಮಾಪಕ ಪುಷ್ಕರ್ ಕಿಡಿ; ಹಕ್ಕು ಪಡೆಯದೇ ಸಿನಿಮಾ ರಿಮೇಕ್ ಮಾಡಿದ ಆರೋಪ

ನಾನಿ ಅವರು ಹೇಳಿದ ಮಾತನ್ನು ಅನೇಕರು ಒಪ್ಪಿಕೊಂಡಿದ್ದಾರೆ. ಸಿನಿಮಾ ಸೋತಿದೆ ಅಥವಾ ಗೆದ್ದಿದೆ ಎಂಬ ಜಡ್ಜ್​ಮೆಂಟ್​ನ ಜನರೇ ನಿರ್ಧರಿಸಬೇಕು ಎಂಬ ಅಭಿಪ್ರಾಯ ಅವರದ್ದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ