Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನಿ ವಿರುದ್ಧ ನಿರ್ಮಾಪಕ ಪುಷ್ಕರ್ ಕಿಡಿ; ಹಕ್ಕು ಪಡೆಯದೇ ಸಿನಿಮಾ ರಿಮೇಕ್ ಮಾಡಿದ ಆರೋಪ

ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ನಾನಿ ಅಭಿನಯದ ‘ಹಾಯ್ ನನ್ನ’ ಚಿತ್ರದ ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ‘ಭೀಮಸೇನ ನಳಮಹರಾಜ’ ಚಿತ್ರದ ಅನಧಿಕೃತ ರಿಮೇಕ್ ಇದು ಎಂದು ಆರೋಪಿಸಿದ್ದಾರೆ. ಎರಡೂ ಚಿತ್ರಗಳ ಕಥಾವಸ್ತು ಹೋಲಿಕೆಯಿಂದಾಗಿ ಈ ವಿವಾದ ಉದ್ಭವಿಸಿದೆ. ನಾನಿ ಅಥವಾ ನಿರ್ದೇಶಕರು ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.

ನಾನಿ ವಿರುದ್ಧ ನಿರ್ಮಾಪಕ ಪುಷ್ಕರ್ ಕಿಡಿ; ಹಕ್ಕು ಪಡೆಯದೇ ಸಿನಿಮಾ ರಿಮೇಕ್ ಮಾಡಿದ ಆರೋಪ
ಪುಷ್ಕರ್-ನಾನಿ ಸಿನಿಮಾ ಪೋಸ್ಟರ್
Follow us
ರಾಜೇಶ್ ದುಗ್ಗುಮನೆ
|

Updated on:Jan 31, 2025 | 7:30 AM

ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಕನ್ನಡದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಆದರೆ, ಇತ್ತೀಚೆಗೆ ಸಿನಿಮಾ ನಿರ್ಮಾಣದಲ್ಲಿ ಅವರು ನಿಧಾನತೆ ತೋರಿದ್ದಾರೆ. ‘ಅವತಾರ ಪುರುಷ 2’ ಬಳಿಕ ಅವರ ನಿರ್ಮಾಣದ ಯಾವುದೇ ಹೊಸ ಸಿನಿಮಾ ರಿಲೀಸ್ ಆಗಿಲ್ಲ. ಹೀಗಿರುವಾಗಲೇ ಅವರು ನಾನಿ ಸಿನಿಮಾ ವಿರುದ್ಧ ಕಿಡಿಕಾರಿದ್ದಾರೆ. ‘ಹಕ್ಕು ಪಡೆಯದೆ ನಮ್ಮ ಸಿನಿಮಾನ ರಿಮೇಕ್ ಮಾಡಿದ್ದಾರೆ’ ಎಂದು ನಾನಿ ವಿರುದ್ಧ ಪುಷ್ಕರ್ ಅವರು ಕಿಡಿಕಾರಿದ್ದಾರೆ.

ಪುಷ್ಕರ್ ಆರೋಪ ಏನು?

‘ರಿಮೇಕ್ ಹಕ್ಕು ಪಡೆಯದೆ ‘ಹಾಯ್ ನಾನ್ನ’ ಸಿನಿಮಾ ಮಾಡಲಾಗಿದೆ. ‘ಭೀಮ ಸೇನ ನಳಮಹರಾಜ’ ಚಿತ್ರದ ರಿಮೇಕ್ ಇದು. ನಾನಿ ಅವರೇ ಎಷ್ಟು ಕೀಳುಮಟ್ಟದ ಕೆಲಸ ಮಾಡಿದ್ದೀರಿ’ ಎಂದು ಪುಷ್ಕರ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿರೋ ಸ್ಕ್ರೀನ್​ಶಾಟ್ ವೈರಲ್ ಆಗಿದೆ. ತೆಲುಗು ಚಿತ್ರರಂಗದಲ್ಲಿ ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಕಥೆಯ ಎಳೆ ಒಂದೇ

‘ಭೀಮ ಸೇನ ನಳಮಹರಾಜ’ ಹಾಗೂ ‘ಹಾಯ್ ನಾನ್ನ’ ಸಿನಿಮಾದ ಕಥೆಯ ಎಳೆಯನ್ನು ನೋಡಿದರೆ ಎರಡೂ ಒಂದೇ ರೀತಿ ಎನಿಸುತ್ತದೆ. ‘ಭೀಮ ಸೇನ ನಳಮಹರಾಜ’ ಚಿತ್ರದಲ್ಲೂ ಕಥಾ ನಾಯಕನಿಗೆ ಎಲ್ಲವೂ ಮರೆತು ಹೋಗಿರುತ್ತದೆ. ಆದರೆ, ಆರಂಭದಲ್ಲಿ ಕಥಾ ನಾಯಕಿಗೇ ಎಲ್ಲವೂ ಮರೆತಿದೆ ಎಂಬ ರೀತಿಯಲ್ಲಿ ತೋರಿಸಲಾಗುತ್ತದೆ. ‘ಹಾಯ್ ನಾನ್ನ’ ಚಿತ್ರದಲ್ಲೂ ಇದೇ ರೀತಿಯ ಕಥೆ ಇದೆ. ಎರಡೂ ಚಿತ್ರದ ಮೇಕಿಂದ ಬೇರೆ ಬೇರೆ ಇದ್ದರೂ ಕಥೆಯ ಎಳೆ ಒಂದೇ ರೀತಿ ಇತ್ತು. ‘ಹಾಯ್ ನಾನ್ನ’ ಸಿನಿಮಾ ರಿಲೀಸ್ ಆದಾಗಾಲೂ ಇದೇ ರೀತಿಯ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿತ್ತು. ಸದ್ಯದ ಮಟ್ಟಿಗೆ ‘ಹಾಯ್ ನಾನ್ನ’ ಚಿತ್ರದ ನಿರ್ದೇಶಕ ಶೌರ್ಯೇವ್ ಅವರಾಗಲೀ ಚಿತ್ರದ ಹೀರೋ ನಾನಿ ಆಗಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ‘ರಕ್ಷಿತ್ ಸಿನಿಮಾ ಮಾಡಲು ನಿರ್ಮಾಪಕರಿದ್ದಾರೆ, ಅವರಿಗೆ ಸದ್ಯಕ್ಕಂತೂ ನನ್ನ ಅನಿವಾರ್ಯತೆ ಇಲ್ಲ’; ಪುಷ್ಕರ್

ಪುಷ್ಕರ್ ಸಿನಿ ಜರ್ನಿ

2016ರಲ್ಲಿ ಬಂದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಮೂಲಕ ಸಿನಿಮಾ ನಿರ್ಮಾಣ ಆರಂಭಿಸಿದವರು ಪುಷ್ಕರ್. ಆ ಬಳಿಕ ‘ಕಿರಿಕ್ ಪಾರ್ಟಿ’, ‘ಹಂಬಲ್ ಪೊಲಿಟೀಷಿಯನ್ ನೋಗ್​ರಾಜ್’, ‘ಕಥೆಯೊಂದು ಶುರುವಾಗಿದೆ’, ‘ಅವನೇ ಶ್ರೀಮನ್ನಾರಾಯಣ’ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಿದರು. 2020ರಲ್ಲಿ ‘ಭೀಮಸೇನ ನಳಮಹರಾಜ’ ಚಿತ್ರವನ್ನು ನಿರ್ಮಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:29 am, Fri, 31 January 25

ನಾನು ಬಿಜೆಪಿ ಬಣ, ಪಕ್ಷದಲ್ಲಿ ಪ್ರತ್ಯೇಕ ಬಣಗಳಿಲ್ಲ: ಶ್ರೀರಾಮುಲು
ನಾನು ಬಿಜೆಪಿ ಬಣ, ಪಕ್ಷದಲ್ಲಿ ಪ್ರತ್ಯೇಕ ಬಣಗಳಿಲ್ಲ: ಶ್ರೀರಾಮುಲು
ರಾಹುಲ್ ಗಾಂಧಿ ಕಟಾಕಟ್ ಅಂದ್ರೆ ಇವರು ಗೃಹಲಕ್ಷ್ಮಿ ಕಟ್ ಕಟ್ ಅಂತಾರೆ: ನಿಖಿಲ್
ರಾಹುಲ್ ಗಾಂಧಿ ಕಟಾಕಟ್ ಅಂದ್ರೆ ಇವರು ಗೃಹಲಕ್ಷ್ಮಿ ಕಟ್ ಕಟ್ ಅಂತಾರೆ: ನಿಖಿಲ್
ಹುಟ್ಟುಹಬ್ಬದ ಪ್ರಯುಕ್ತ ಶುಭಕೋರಿದ ಎಲ್ಲರಿಗೂ ಧನ್ಯವಾದಗಳು: ಯಡಿಯೂರಪ್ಪ
ಹುಟ್ಟುಹಬ್ಬದ ಪ್ರಯುಕ್ತ ಶುಭಕೋರಿದ ಎಲ್ಲರಿಗೂ ಧನ್ಯವಾದಗಳು: ಯಡಿಯೂರಪ್ಪ
ಸಂವಿಧಾನವೇ ಸರ್ವಸ್ವ ಎನ್ನುವ ಕಾಂಗ್ರೆಸ್ಸಿಗರಲ್ಲಿ ಇದೆಂಥ ಕೀಳು ಮನಸ್ಥಿತಿ?
ಸಂವಿಧಾನವೇ ಸರ್ವಸ್ವ ಎನ್ನುವ ಕಾಂಗ್ರೆಸ್ಸಿಗರಲ್ಲಿ ಇದೆಂಥ ಕೀಳು ಮನಸ್ಥಿತಿ?
ಬೆಂಗಳೂರು ಮನೆಗೆ ತೆರಳು ಅಪ್ಪನಿಗೆ ವಿಶ್ ಮಾಡಿದ ಬಿಎಸ್​ವೈ ಮಕ್ಕಳು
ಬೆಂಗಳೂರು ಮನೆಗೆ ತೆರಳು ಅಪ್ಪನಿಗೆ ವಿಶ್ ಮಾಡಿದ ಬಿಎಸ್​ವೈ ಮಕ್ಕಳು
ಅರೈಲ್ ಘಾಟ್ ಶುಚಿಗೊಳಿಸಿದ ಯೋಗಿ ಆದಿತ್ಯನಾಥ್
ಅರೈಲ್ ಘಾಟ್ ಶುಚಿಗೊಳಿಸಿದ ಯೋಗಿ ಆದಿತ್ಯನಾಥ್
ಅಫ್ಘಾನಿಸ್ತಾನ್ ತಂಡಕ್ಕೆ ರೋಚಕ ಜಯ... ಇರ್ಫಾನ್ ಪಠಾಣ್ ಜಿಲೇಬಿ ಡ್ಯಾನ್ಸ್
ಅಫ್ಘಾನಿಸ್ತಾನ್ ತಂಡಕ್ಕೆ ರೋಚಕ ಜಯ... ಇರ್ಫಾನ್ ಪಠಾಣ್ ಜಿಲೇಬಿ ಡ್ಯಾನ್ಸ್
ಚಾರ್ಮಾಡಿ ಘಾಟ್ ತಿರುವಿನಲ್ಲೇ ಕೆಎಸ್​ಆರ್​ಟಿಸಿ ಬಸ್ ಸ್ಟೇರಿಂಗ್ ಕಟ್!
ಚಾರ್ಮಾಡಿ ಘಾಟ್ ತಿರುವಿನಲ್ಲೇ ಕೆಎಸ್​ಆರ್​ಟಿಸಿ ಬಸ್ ಸ್ಟೇರಿಂಗ್ ಕಟ್!
ಕುರಿ ಪ್ರತಾಪ್ ಕಾಮಿಡಿಗೆ ಬಿದ್ದು ಬಿದ್ದು ನಕ್ಕ ದೇವರಾಜ್
ಕುರಿ ಪ್ರತಾಪ್ ಕಾಮಿಡಿಗೆ ಬಿದ್ದು ಬಿದ್ದು ನಕ್ಕ ದೇವರಾಜ್
ಹೃದಯಾಘಾತದಿಂದ ಬಟ್ಟೆ ಅಂಗಡಿ ಸಿಬ್ಬಂದಿ ಸಾವು, ಕೊನೇ ಕ್ಷಣದ ಸಿಸಿಟಿವಿ ದೃಶ್ಯ
ಹೃದಯಾಘಾತದಿಂದ ಬಟ್ಟೆ ಅಂಗಡಿ ಸಿಬ್ಬಂದಿ ಸಾವು, ಕೊನೇ ಕ್ಷಣದ ಸಿಸಿಟಿವಿ ದೃಶ್ಯ