ತಿಂಗಳಿಗಾಗುವಷ್ಟು ಸಿನಿಮಾ ಒಂದೇ ದಿನ ರಿಲೀಸ್; ಜನವರಿ ಅಂತ್ಯಕ್ಕೆ ಧಮಾಕಾ
ಈ ವಾರ ಕನ್ನಡ ಚಿತ್ರರಂಗದಲ್ಲಿ ಅಪಾರ ಸಂಖ್ಯೆಯ ಚಿತ್ರಗಳ ಬಿಡುಗಡೆ ಕಾಣುತ್ತಿದೆ. ಪ್ರಜ್ವಲ್ ದೇವರಾಜ್ ಅಭಿನಯದ ‘ಗಣ’ ನವೀನ್ ಶಂಕರ್ ನಟನೆಯ ‘ನೋಡಿದವರು ಏನಂತಾರೆ’ ದೀಪಿಕಾ ದಾಸ್ ಅಭಿನಯದ ‘#ಪಾರುಪಾರ್ವತಿ’ ಸೇರಿದಂತೆ ಒಟ್ಟು ಎಂಟು ಸಿನಿಮಾಗಳು ತೆರೆಗೆ ಬರುತ್ತಿವೆ ಅನ್ನೋದು ವಿಶೇಷ.

ಪ್ರತಿ ವಾರ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಕೆಲವು ಸಿನಿಮಾ ರಿಲೀಸ್ ಆಗುತ್ತದೆ. ಆದರೆ, ಕೆಲವೊಮ್ಮೆ ವಿಶೇಷ ದಿನದಂದು ಹಲವು ಚಿತ್ರಗಳು ಒಟ್ಟೊಟ್ಟಿಗೆ ರಿಲೀಸ್ ಆಗುತ್ತವೆ. ಈಗ ಜನವರಿ 31ರಂದು ಕನ್ನಡ ನಿರ್ಮಾಪಕರ ಕಣ್ಣು ನೆಟ್ಟಿದೆ. ಈ ಕಾರಣಕ್ಕೆ ಒಂದೇ ವಾರ ಬರೋಬ್ಬರಿ ಏಳೆಂಟು ಚಿತ್ರಗಳು ತೆರೆಗೆ ಬರುತ್ತಿವೆ ಅನ್ನೋದು ವಿಶೇಷ. ಹೌದು, ಈ ವಾರ ಸಣ್ಣ ಬಜೆಟ್ನ ಹಲವು ಚಿತ್ರಗಳು ಬಿಡುಗಡೆ ಕಾಣುತ್ತಿವೆ.
ಪ್ರಜ್ವಲ್ ದೇವರಾಜ್ ನಟನೆಯ ‘ಗಣ’ ಸಿನಿಮಾ ಜನವರಿ 30ರಂದು ರಿಲೀಸ್ ಆಗುತ್ತಿದೆ. ವೇದಿಕಾ, ಯಶಾ ಶಿವಕುಮಾರ್, ಸಂಪತ್ ರಾಜ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಹರಿ ಪ್ರಸಾದ್ ಜಕ್ಕ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪಾರ್ತಸಾರಥಿ ಸೊಪ್ಪ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜನವರಿ 31ರಂದು ಸಿನಿಮಾ ರಿಲೀಸ್ ಆಗಲಿದೆ.
‘ನೋಡಿದವರು ಏನಂತಾರೆ’ ಕೂಡ ಜನವರಿ 31ರಂದು ತೆರೆಗೆ ಬರುತ್ತಿದೆ. ನವೀನ್ ಶಂಕರ್ ನಟನೆಯ ಈ ಚಿತ್ರದಲ್ಲಿ ಪದ್ಮಾವತಿ ರಾವ್, ಸ್ಪಂದನಾ ಪ್ರಸಾದ ಮೊದಲಾದವರು ನಟಿಸಿದ್ದಾರೆ. ಕುಲ್ದೀಪ್ ಕರಿಯಪ್ಪ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ನಾಗೇಶ್ ಗೋಪಾಲ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
#ಪಾರುಪಾರ್ವತಿ ಚಿತ್ರ ಕೂಡ ಈ ವಾರ ತೆರೆಗೆ ಬರುತ್ತಿದೆ. ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ರೋಹಿತ್ ಕೀರ್ತಿ ನಿರ್ದೇಶನ ಮಾಡಿರುವ ಈ ಚಿತ್ರವನ್ನು ಪಿಬಿ ಪ್ರೇಮನಾಥ್ ಅವರು ನಿರ್ಮಾಣ ಮಾಡಿದ್ದಾರೆ. ಉಳಿದಂತೆ ಸಂಗೀತಾ ರಾಜಾರಾಮ್, ಅರ್ಥ ಹರ್ಷನ್ ಮೊದಲಾದವರು ನಟಿಸಿರೋ ‘ಕಾಡು ಮಳೆ’, ಬಿಗ್ ಬಾಸ್ ಖ್ಯಾತಿಯ ರಾಜೀವ್ ಹನು ನಟನೆಯ ‘ಬೇಗೂರು ಕಾಲೋನಿ’, ವೆಂಕಟ್ ಭಾರದ್ವಾಜ್ ನಟನೆಯ ‘ಹೈನಾ’, ‘ರಾಜ ರಾಣಿ’, ಹಾಗೂ ‘ರಾವುತ’ ಚಿತ್ರಗಳೂ ಈ ವಾರ ತೆರೆಗೆ ಬರುತ್ತಿವೆ.
ಇದನ್ನೂ ಓದಿ: ಬಿಗ್ ಬಾಸ್ ವಿನ್ನರ್ ಹನುಮಂತಗೆ ಹುಟ್ಟೂರಲ್ಲಿ ಭರ್ಜರಿ ಸ್ವಾಗತ
ಈ ವಾರ ಕನ್ನಡದಲ್ಲೇ 8 ಸಿನಿಮಾಗಳು ರಿಲೀಸ್ ಆಗುತ್ತಿರುವುದರಿಂದ ಯಾವ ಚಿತ್ರವನ್ನು ನೋಡಬೇಕು ಎನ್ನುವ ಗೊಂದಲ ಪ್ರೇಕ್ಷಕರಲ್ಲಿ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:00 pm, Thu, 30 January 25