ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 30ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮದೇ ಹಣ ಕೈ ತಲುಪುವುದಕ್ಕೆ ಬಹಳ ಶ್ರಮ ಹಾಕಬೇಕಾಗುತ್ತದೆ. ಕೆಲಸಗಳು ಬರುತ್ತವೆ, ಆದರೆ ಅದು ಆರ್ಥಿಕವಾಗಿ ದೊಡ್ಡ ಮಟ್ಟದಲ್ಲಿ ನೆರವಾಗುತ್ತಿಲ್ಲ ಎಂದು ಅನಿಸಿದಲ್ಲಿ ಈ ದಿನ ಲಕ್ಷ್ಮೀ ದೇವಿ ವಿಗ್ರಹ ಅಥವಾ ಫೋಟೋ ಮುಂದೆ ಹಾಲು- ಸಕ್ಕರೆ ಅಥವಾ ಬೆಲ್ಲವನ್ನು ಇಟ್ಟು, ನೈವೇದ್ಯವನ್ನು ಮಾಡಿ, ಆ ಪ್ರಸಾದವನ್ನು ತೆಗೆದುಕೊಳ್ಳಿ. ಇದರ ಜತೆಗೆ ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿದಲ್ಲಿ ಉತ್ತಮ ಫಲಿತಾಂಶವನ್ನು ನಿರೀಕ್ಷೆ ಮಾಡಬಹುದು. ಸರ್ಕಾರಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುವಂಥವರಿಗೆ ಹೊಸ ಪರಿಚಯದಿಂದ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಲಿದೆ. ನಿಮ್ಮ ಪ್ರಭಾ ವಲಯವನ್ನು ವಿಸ್ತರಿಸಿಕೊಳ್ಳುವುದಕ್ಕೆ ಅವಕಾಶ ದೊರೆಯಲಿದೆ.
ಪೊಲೀಸ್, ಕೋರ್ಟ್- ಕಚೇರಿ ವಿಚಾರಗಳಿಗೆ ಸ್ವಲ್ಪ ಒತ್ತಡದ ಸನ್ನಿವೇಶ ಇರುತ್ತದೆ. ಸ್ವಲ್ಪ ಮಟ್ಟಿಗೂ ಹಣ ಸಹ ಕೈ ಬಿಟ್ಟು ಹೋಗಬಹುದು. ತಾಯಿಯ ಆರೋಗ್ಯದ ಕಡೆಗೆ ಹೆಚ್ಚಿನ ಲಕ್ಷ್ಯ ನೀಡಿ. ಇನ್ನು ತಲೆ ಕೂದಲು ಉದುರುವ ಸಮಸ್ಯೆ ಇದ್ದಲ್ಲಿ ಅದು ಮತ್ತೂ ಹೆಚ್ಚಾಗಬಹುದು. ಅದೇ ರೀತಿ ಕಾಲು ಅಥವಾ ಕೈ ಚರ್ಮದ ಬಣ್ಣ ಬದಲಾಗಬಹುದು ಅಥವಾ ಅಲರ್ಜಿ ಕಾಣಿಸಿಕೊಳ್ಳಬಹುದು. ಮುಖ್ಯವಾಗಿ ನಾನಾ ವಿಧದ ಸವಾಲಿನ ಸನ್ನಿವೇಶಗಳನ್ನು ಎದುರಿಸಲಿದ್ದೀರಿ. ನಿಮಗೆ ಕೆಲಸ ವಹಿಸಿದವರ ಧೋರಣೆಯಿಂದ ಮನಸ್ಸಿಗೆ ಬೇಸರವಾದರೂ ಗಡುವಿನೊಳಗೆ ಅದನ್ನು ಮುಗಿಸುವುದಕ್ಕೆ ಪ್ರಾಮುಖ್ಯ ನೀಡುವುದು ಉತ್ತಮ. ಏನೇನೋ ಕಾರಣ ನೀಡಿ, ಕೆಲಸಗಳನ್ನು ಮುಂದಕ್ಕೆ ಹಾಕಬೇಡಿ.
ಅನಿರೀಕ್ಷಿತವಾಗಿ ಹಣದ ಹರಿವು ಜಾಸ್ತಿ ಆಗುವ ಸಾಧ್ಯತೆ ಇದೆ. ಇರುವ ಕೆಲಸದಲ್ಲೇ ಹೊಸ ಜವಾಬ್ದಾರಿಗಳನ್ನು ನಿಮಗೆ ನೀಡಬಹುದು. ಅಥವಾ ಈಗಾಗಲೇ ಕೆಲಸದಿಂದ ತೆಗೆದ ಅಥವಾ ಬಿಟ್ಟಂಥ ವ್ಯಕ್ತಿಯ ಜವಾಬ್ದಾರಿಯೂ ನಿಮಗೆ ಬರಲಿದೆ. ಒಂದು ನೆನಪಿಟ್ಟುಕೊಳ್ಳಿ, ಮೇಲ್ನೋಟಕ್ಕೇ ಇದು ಒತ್ತಡ ಅನಿಸಬಹುದು. ಆದರೆ ಭವಿಷ್ಯದಲ್ಲಿ ಇದರಿಂದ ನಿಮಗೆ ಅನುಕೂಲ ಆಗಲಿದೆ. ಸ್ನೇಹಿತರು- ಸಹೋದ್ಯೋಗಿಗಳು ಹೇಳುವ ಎಲ್ಲ ಮಾತುಗಳಿಗೂ ಕಿವಿ ಕೊಡಬೇಕು ಎಂದೇನಿಲ್ಲ. ನಕಾರಾತ್ಮಕ ಅಭಿಪ್ರಾಯಗಳಿಗೂ ಮನ್ನಣೆ ಕೊಟ್ಟು, ಮನಸ್ಸು ಹಾಳು ಮಾಡಿಕೊಳ್ಳಬೇಡಿ. ಈ ದಿನ ಮನೆಯಿಂದ ಹೊರಗೆ ಹೊರಡುವ ಮೊದಲು ತಾಯಿ ಅಥವಾ ತಾಯಿ ಸಮಾನರಾದವರ ಆಶೀರ್ವಾದ ಪಡೆದುಕೊಳ್ಳಿ, ಕನಿಷ್ಠ ಮನಸ್ಸಿನಲ್ಲಾದರೂ ಸ್ಮರಿಸಿ.
ನಿಮ್ಮಲ್ಲಿ ಕೆಲವರಿಗೆ ಆಸ್ತಮಾ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನು ಈಗಾಗಲೇ ಆಸ್ತಮಾದಿಂದ ಬಳಲುತ್ತಿದ್ದೀರಿ ಅಂತಾದಲ್ಲಿ ಅದು ಉಲ್ಬಣಿಸಬಹುದು. ಆದ್ದರಿಂದ ಸೂಕ್ತ ವೈದ್ಯೋಪಚಾರ ಮಾಡಿಕೊಳ್ಳುವ ಕಡೆಗೆ ಗಮನ ನೀಡುವುದು ಮುಖ್ಯವಾಗುತ್ತದೆ. ನಿಮ್ಮ ಸಂಬಂಧಿಕರೋ ಅಥವಾ ಸ್ನೇಹಿತರೋ ಅಥವಾ ಇತ್ತೀಚೆಗಷ್ಟೇ ಪರಿಚಿತರಾದವರಿಂದ ಆಕರ್ಷಕವೆನಿಸುವಂಥ ಹೂಡಿಕೆ ಆಯ್ಕೆಗಳ ಬಗ್ಗೆ ಪ್ರಸ್ತಾವ ಏನಾದರೂ ಬಂದಲ್ಲಿ ಅದಕ್ಕೆ ಹೆಚ್ಚಿನ ಲಕ್ಷ್ಯ ನೀಡದಿರಿ. ಏಕಾಗ್ರತೆಯ ಕೊರತೆಯಿಂದಾಗಿ ವಿದ್ಯಾರ್ಥಿಗಳಿಗೆ ನಿಂದನೆಯನ್ನು ಕೇಳಬೇಕಾದ ಸನ್ನಿವೇಶ ಎದುರಾಗಲಿದೆ. ಇತರರು ಹಣ ನೀಡುತ್ತಾರೆ ಎಂದು ನೆಚ್ಚಿಕೊಂಡು ಯಾರಿಗೂ ಮಾತು ನೀಡಬೇಡಿ.
ಸೇಲ್ಸ್, ಮಾರ್ಕೆಟಿಂಗ್, ಅಡ್ವರ್ಟೈಸ್ ಮೆಂಟ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಆದಾಯ ಹೆಚ್ಚಲಿದೆ. ಪ್ರೀತಿ- ಪ್ರೇಮದಲ್ಲಿ ಇರುವವರು ಸಂತೋಷವಾದ ಸಮಯ ಕಳೆಯಲಿದ್ದೀರಿ. ಉದ್ಯೋಗಸ್ಥರಾಗಿದ್ದಲ್ಲಿ ಫ್ಲ್ಯಾಟ್ ಖರೀದಿ ಮಾಡುವುದಕ್ಕೆ ಅಡ್ವಾನ್ಸ್ ನೀಡುವ ಅಥವಾ ಖರೀದಿ ಪ್ರಕ್ರಿಯೆಯನ್ನೇ ಪೂರ್ತಿ ಮಾಡುವ ಯೋಗ ಇದೆ. ಗೃಹಿಣಿಯರಿಗೆ ತಮ್ಮ ಸ್ವಂತ ಆಸೆಗೆ ಹಣ ಉಳಿಸುವ ಹಾಗೂ ಅದನ್ನು ಪೂರೈಸಿಕೊಳ್ಳುವ ಅವಕಾಶ ದೊರೆಯಲಿದೆ. ಯಾವುದಾದರೂ ಮುಖ್ಯ ಕೆಲಸಕ್ಕೆ ನೀವು ಅಂದುಕೊಂಡಿದ್ದ ಖರ್ಚಿನ ಪ್ರಮಾಣ ಕಡಿಮೆಯಾಗಿ, ಆ ಹಣ ಉಳಿಯುವ ಸಾಧ್ಯತೆಗಳಿವೆ.
ಪ್ರಭಾವಿಗಳ ಸಂಪರ್ಕಕ್ಕೆ ಬರಲಿದ್ದೀರಿ. ಇದರಿಂದ ಉದ್ಯೋಗ, ವೃತ್ತಿ ಜೀವನಕ್ಕೆ ದೊಡ್ಡ ಸಹಾಯ ಆಗಲಿದೆ. ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಪ್ರಬಾವಿಗಳ ನೆರವು ದೊರೆಯಲಿದೆ. ದಂಡ- ಜುಲ್ಮಾನೆ ಅಥವಾ ದೊಡ್ಡ ಮೊತ್ತದ ಶುಲ್ಕವನ್ನು ನಿಮ್ಮ ಮೇಲೆ ವಿಧಿಸಿದ್ದಲ್ಲಿ ಅದನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ದೊರೆಯಲಿದೆ. ಆಕರ್ಷಣಾ ಶಕ್ತಿ ಜಾಸ್ತಿ ಆಗುತ್ತದೆ. ಇಷ್ಟು ಸಮಯ ನಿರೀಕ್ಷೆ ಮಾಡುತ್ತಿದ್ದ ಹಣಕಾಸಿನ ವಿಚಾರಗಳು ನೆರವೇರುತ್ತವೆ. ಮದುವೆ ಸಂಬಂಧಗಳು ಹುಡುಕಿಕೊಂಡು ಬರುವ ಯೋಗ ಸಹ ಇದೆ. ಹೊಸ ವ್ಯಾಪಾರ- ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ನೀವು ಮಾಡಿದ್ದ ಪ್ರಯತ್ನದಲ್ಲಿ ಬೆಳವಣಿಗೆ ಕಾಣಲಿದೆ.
ನಾನಾ ಸಮಸ್ಯೆಗಳು ಏಕಕಾಲಕ್ಕೆ ಕಾಣಿಸಿಕೊಳ್ಳಲಿವೆ. ಒಂದು ಕಡೆ ಆದಾಯದಲ್ಲಿ ಭಾರೀ ಇಳಿಕೆ ಆಗುತ್ತದೆ. ಮತ್ತೊಂದು ಕಡೆ ಕುಟುಂಬ ಸದಸ್ಯರ ಅನಾರೋಗ್ಯ ಸಮಸ್ಯೆಗೆ ದೊಡ್ಡ ಮೊತ್ತದ ಖರ್ಚಾಗಲಿದೆ. ಮನೆ ಕಟ್ಟುತ್ತಿರುವವರು, ಸರ್ಕಾರಿ ಟೆಂಡರ್ ಅಥವಾ ಅನುಮತಿ ಬೇಕೇಬೇಕು ಎಂಬಂಥ ಕೆಲಸಗಳಿಗೆ ಆಕ್ಷೇಪಗಳು ಬರಲಿವೆ. ನೀವು ಮಾಡುತ್ತಿರುವ ವೃತ್ತಿಗೆ ಸಂಬಂಧಿಸಿದಂತೆ ಅಪಪ್ರಚಾರ ಆಗಲಿದೆ. ಹೆಣ್ಣುಮಕ್ಕಳಿಗೆ ಉಷ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳಾಗಲಿವೆ. ಮನಸ್ಸಿಗೆ ಬೇಸರ, ಖಿನ್ನತೆ ಕಾಡಲಿದೆ. ಮನೆಯಲ್ಲಿ ಮಿಕ್ಸಿ, ಮೈಕ್ರೋವೇವ್ ಓವನ್, ಎಲೆಕ್ಟ್ರಿಕಲ್ ಸ್ಟೌ- ಕುಕ್ಕರ್ ಬಳಸುವಾಗ ಎಚ್ಚರಿಕೆಯಿಂದ ಇರಬೇಕು. ವಿದ್ಯುತ್ ಅವಘಡಗಳು ಸಂಭವಿಸಬಹುದು.
ಯಾವುದೇ ನೆಗೆಟಿವ್ ಉದ್ದೇಶ ಇಲ್ಲದೇ ಲೋಕಾರೂಢಿಗೆ ನೀವಾಡಿದ ಮಾತು ನಿಮಗೆ ಸಮಸ್ಯೆಯಾಗಿ ಸುತ್ತಿಕೊಳ್ಳಬಹುದು. ಇನ್ನು ಯಾರು ಸಾರ್ವಜನಿಕ ಬದುಕಿನಲ್ಲಿ ಇದ್ದಾರೋ ಅಂಥವರು ವಿವಾದಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ. ನಿಮ್ಮ ಇನ್ ಟ್ಯೂಷನ್ ಈ ವಾರ ಬಹಳ ಜಾಗೃತವಾಗಿರುತ್ತದೆ. ಆದ್ದರಿಂದ ಯಾವ ವ್ಯಕ್ತಿ ಜತೆಗೆ ವ್ಯವಹರಿಸುತ್ತಿದ್ದೀರಿ ಎಂಬ ಬಗ್ಗೆ ನಿಮ್ಮ ಮನಸ್ಸಿನ ಮಾತನ್ನು ಕೇಳಿ, ತೀರ್ಮಾನವನ್ನು ಕೈಗೊಳ್ಳಿ. ಹತ್ತಾರು ಜನರು ಇರುವ ಜಾಗದಲ್ಲಿ ಮಾತಿನ ಭರಾಟೆಯಲ್ಲಿ ಹೇಳಿಕೊಂಡ ವಿಷಯಗಳಿಗೆ ದೊಡ್ಡದಾಗಿ ಬೆಲೆ ಕಟ್ಟುವಂಥ ಸನ್ನಿವೇಶ ಎದುರಾಗಬಹುದು. ಆದ್ದರಿಂದ ಇತರರ ಮಾತನ್ನು ಹೆಚ್ಚೆಚ್ಚು ಕೇಳಿಸಿಕೊಳ್ಳಿ. ವಿವಾದ ಆಗಬಹುದು ಎಂದೆನಿಸುವ ಮಾತುಗಳನ್ನು ಯಾವುದೂ ಆಡುವುದಕ್ಕೇ ಹೋಗಬೇಡಿ.
ನೀವು ಇತರರಿಗೆ ಅನುಕೂಲ ಮಾಡಿದರೂ ನಿಮ್ಮ ಮೇಲೆ ಏಕೆ ದ್ವೇಷ ಸಾಧಿಸುವುದಕ್ಕೆ ಯತ್ನಿಸುತ್ತಾರೆ ಎಂದು ಮನಸ್ಸಿನಲ್ಲಿ ಬಹಳ ಕಾಡುತ್ತದೆ. ಅದೇ ರೀತಿ ನೀವು ಸಹಾಯ ಮಾಡಿದ ಹಳೇ ನೆನಪುಗಳು ವಿಪರೀತವಾಗಿ ಕಾಡಲಿದೆ. ಹಣಕಾಸು ತೀರ್ಮಾನ ಅಥವಾ ಸಂಬಂಧಗಳ ಬಗೆಗಿನ ವಿಚಾರ ಎಂದಾದಲ್ಲಿ ಧೈರ್ಯದಿಂದ ಕೆಲವು ನಿರ್ಧಾರಗಳನ್ನು ಮಾಡಬೇಕಾಗುತ್ತದೆ. ನೀವು ಬಹಳ ಭರವಸೆ ಇಟ್ಟುಕೊಂಡು, ಇತರರ ಸಲಹೆಯನ್ನು ಕೇಳಿಕೊಂಡು ಮಾಡಿದ ಕೆಲಸದಲ್ಲಿ ಸ್ವಲ್ಪ ಮಟ್ಟಿಗೆ ನಷ್ಟವಾಗುವಂಥ ಸಾಧ್ಯತೆ ಇದೆ. ಇತರರ ವೈಯಕ್ತಿಕ ವಿಚಾರಗಳಿಗೆ, ಅದರಲ್ಲೂ ಮದುವೆಯ ವಿಚಾರಗಳಿಗೆ ಮೂಗು ತೂರಿಸಬೇಡಿ. ಪರಿಚಿತರು ಮತ್ತು ಕರೆದರು ಎಂದು ಅವರ ಜತೆಗೆ ಹೋದಲ್ಲಿ ಅವಮಾನಗಳನ್ನು ಎದುರಿಸಬೇಕಾದೀತು.
ಲೇಖನ- ಎನ್.ಕೆ.ಸ್ವಾತಿ