ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 15ರ ಬುಧವಾರದ ದಿನ ಭವಿಷ್ಯ (Daily Prediction as Per Numerology) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಎರಡೆರಡು ದೋಣಿಯಲ್ಲಿನ ಪಯಣ ಅಪಾಯಕಾರಿಯೂ ಹೌದು ಹಾಗೂ ಅಪಾರ ಶ್ರಮದಿಂದ ಕೂಡಿರುವಂಥದ್ದು ಎಂಬುದು ಸಹ ಅಷ್ಟೇ ನಿಜ. ಆದ್ದರಿಂದ ಅದು ಉದ್ಯೋಗವೇ ಆಗಿರಲಿ, ಸಂಬಂಧವೇ ಇರಲಿ ಏಕಕಾಲಕ್ಕೆ ಎರಡನ್ನೂ ಸಂಭಾಳಿಸುತ್ತೇನೆ ಎಂದು ಹೊರಟು ನಿಲ್ಲದಿರಿ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಅಭಿಪ್ರಾಯಗಳಿಗೆ ಗೌರವವನ್ನು ನೀಡಿ. ಸರ್ಕಾರಕ್ಕೆ ಸಂಬಂಧಿಸಿದ ನೋಂದಣಿ, ಶುಲ್ಕಗಳು, ಪರವಾನಗಿ ಇತ್ಯಾದಿ ಸಂಗತಿಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಮುಖ್ಯ
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಹಣಕಾಸಿನ ಮುಗ್ಗಟ್ಟು ತಲೆದೋರಬಹುದು. ಇಷ್ಟು ಸಮಯ ನಿಮ್ಮ ನಿರ್ಧಾರಕ್ಕೆ, ಮಾತಿಗೆ ಗೌರವ ನೀಡುತ್ತಿದ್ದವರು ಈಗ ಮೊದಲಿನಷ್ಟು ಕಿಮ್ಮತ್ತು ನೀಡುತ್ತಿಲ್ಲ ಎಂದು ಬಲವಾಗಿ ಅನಿಸುವುದಕ್ಕೆ ಶುರುವಾಗುತ್ತದೆ. ಇತರರ ಮೇಲೆ ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡಿ. ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈಗಾಗಲೇ ಕಾಯಿಲೆ- ಕಸಾಲೆಗಳಿಂದ ಬಳಲುತ್ತಿರುವವರಿಗೆ ಅದು ಉಲ್ಬಣ ಆಗುವ ಎಲ್ಲ ಸಾಧ್ಯತೆಗಳಿವೆ. ಉನ್ನತ ವ್ಯಾಸಂಗಕ್ಕಾಗಿ ತೆರಳಬೇಕು ಎಂದಿರುವವರಿಗೆ ಹಣಕಾಸು ಸಮಸ್ಯೆಗಳು ಇದ್ದಲ್ಲಿ ನಿವಾರಣೆ ಆಗುತ್ತದೆ.
ಕೆಲಸ ಪೂರ್ತಿ ಆಗುವ ಮುಂಚೆಯೇ ಹೇಳಿಕೊಂಡು, ಅದು ಅರೆಬರೆ ಆಗಿ, ಅವಮಾನಕ್ಕೆ ಗುರಿ ಆಗಬಹುದು. ಆದ್ದರಿಂದ ಯಾವುದೇ ಕೆಲಸ ಪೂರ್ಣಗೊಳ್ಳುವವರೆಗೆ ಹೇಳಿಕೊಳ್ಳದಿರಿ. ಸಂಗೀತಗಾರರು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವವರು, ವೇದ ಪಾಠ ಮಾಡುವಂಥವರಿಗೆ ಗೌರವ- ಸನ್ಮಾನಗಳು ಆಗಲಿವೆ. ಹೊಸದಾಗಿ ಭೂಮಿ ಖರೀದಿ ಮಾಡಬೇಕು ಎಂದಿರುವವರು ಈ ದಿನದ ಮಟ್ಟಿಗೆ ಅದಕ್ಕೆ ಸಂಬಂಧಿಸಿದ ಕೆಲಸಗಳನ್ನು ಮುಂದಕ್ಕೆ ಹಾಕುವುದು ಒಳ್ಳೆಯದು.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನಿಮ್ಮ ಬಗ್ಗೆ ಯಾರೋ ಹೀಗೆ ಮಾತನಾಡಿದರಂತೆ, ಹಾಗೆ ಅಂದರಂತೆ ಎಂದು ನಿಮ್ಮ ಬಳಿ ಬಂದು ಹೇಳುವವರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ನೀವು ತಕ್ಷಣ ಪ್ರತಿಕ್ರಿಯಿಸುವುದಕ್ಕೆ ಅಥವಾ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದರು ಎಂದವರ ವೈಯಕ್ತಿಕ ವಿಚಾರಗಳನ್ನು ಎತ್ತಾಡಬೇಡಿ. ಏಕೆಂದರೆ ನಿಮಗೆ ಶಾಶ್ವತವಾಗಿ ಕೆಟ್ಟವರೆಂಬ ಕಿರೀಟ ತಲೆಗೆ ಏರುತ್ತದೆ. ಯಾರು ನಿಮ್ಮ ಬಳಿ ದೂರು ತಂದು ಹೇಳಿದರೋ ಅವರೇ ಅಪಪ್ರಚಾರ ಮಾಡುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಜ್ಯೋತಿಷ್ಯ, ಪೌರೋಹಿತ್ಯ, ರೇಕಿ, ಪ್ರಾಣಿಕ್ ಹೀಲಿಂಗ್ ಇಂಥದ್ದರದಲ್ಲಿ ತೊಡಗಿರುವವರಿಗೆ ಈ ವಾರ ಬಿಡುವಿಲ್ಲದಂಥ ಕೆಲಸ ಇರಲಿದೆ. ಈ ಮೊದಲು ನಿಮ್ಮಿಂದ ಕೆಲಸ ಮಾಡಿಸಿರುವವರು ಮತ್ತೆ ಹುಡುಕಿಕೊಂಡು ಬಂದು, ಕೆಲವು ಕೆಲಸಗಳನ್ನು ಒಪ್ಪಿಸುವ ಸಾಧ್ಯತೆ ಇದೆ. ನಿಮ್ಮ ಹಣಕಾಸಿನ ಅಗತ್ಯಗಳು ಸ್ವಲ್ಪ ಮಟ್ಟಿಗಾದರೂ ಪೂರೈಕೆ ಆಗುತ್ತದೆ. ನಿಮ್ಮದಲ್ಲದ ತಪ್ಪಿಗೆ ಇತರರ ನಿಂದೆಯನ್ನು ಅನುಭವಿಸಬೇಕಾಗುತ್ತದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಹಣಕಾಸಿನ ಹೂಡಿಕೆ, ಈ ಹಿಂದೆ ನೀವು ಮಾಡಿಕೊಂಡಿರುವ ಸಾಲ ಹಾಗೂ ತಿಂಗಳಾ ತಿಂಗಳು ಕಟ್ಟುತ್ತಿರುವ ಬಡ್ಡಿ ಇಂಥದ್ದನ್ನೆಲ್ಲ ಲೆಕ್ಕ ಹಾಕಿಕೊಳ್ಳಲಿದ್ದೀರಿ. ಆಪ್ತರು, ಸ್ನೇಹಿತರು, ಸಂಬಂಧಿಗಳ ಮದುವೆಗಾಗಿ ಪ್ರಯಾಣ ಮಾಡಬೇಕಾಗುತ್ತದೆ. ಕೊನೆ ಕ್ಷಣದ ತನಕ ಕೆಲಸ ಮಾಡದೆ ಹಾಗೇ ಉಳಿಸಿಕೊಂಡು ಬಂದಿದ್ದು ಡೆಡ್ ಲೈನ್ ಹತ್ತಿರ ಬರುತ್ತಿದ್ದಂತೆ ಒತ್ತಡ ಹೆಚ್ಚಾಗುವಂತೆ ಆಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಶೀಘ್ರವಾಗಿ ಕೆಲಸಗಳನ್ನು ಮುಗಿಸಿಕೊಳ್ಳಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಕುಟುಂಬದವರ ಸಲುವಾಗಿ ಹೆಚ್ಚಿನ ಸಮಯ ಮೀಸಲಿಡುವುದು ಕಷ್ಟ ಆಗಲಿದೆ. ಚಾರ್ಟರ್ಡ್ ಅಕೌಂಟೆಂಟ್, ವಕೀಲರು, ದಂತ ವೈದ್ಯರು ಹೀಗೆ ವೃತ್ತಿನಿರತರಿಗೆ ಆದಾಯದಲ್ಲಿ ಹೆಚ್ಚಳ ಆಗುವುದಕ್ಕೆ ದಾರಿ ಗೋಚರ ಆಗಲಿದೆ. ಸ್ನೇಹಿತರು- ಸಂಬಂಧಿಗಳ ಮೂಲಕವಾಗಿ ಹೊಸ ಕ್ಲೈಂಟ್ ಹುಡುಕಿಕೊಂಡು ಬರುವ ಸಾಧ್ಯತೆ ಇದೆ. ಹೊಸ ಬಟ್ಟೆ, ವಾಹನ, ಕನಿಷ್ಠ ಬೆಳ್ಳಿಯ ವಸ್ತುಗಳನ್ನಾದರೂ ಖರೀದಿ ಮಾಡುವಂಥ ಯೋಗ ಇದೆ. ಸಂಘಟನೆಯಲ್ಲಿ ತೊಡಗಿರುವಂಥವರಿಗೆ ಬಿಡುವೇ ಆಗದಷ್ಟು ಕೆಲಸಗಳು ಮೈ ಮೇಲೆ ಬರಲಿವೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಸೋದರ ಸಂಬಂಧಿಗಳು ನಿಮ್ಮಿಂದ ಹಣದ ಹೊರತಾದ ಸಹಾಯವನ್ನು ಕೇಳಿಕೊಂಡು ಬರುವ ಸಾಧ್ಯತೆಗಳು ಹೆಚ್ಚಿವೆ. ಬಡ್ತಿ, ವರ್ಗಾವಣೆಗೆ ಪ್ರಯತ್ನ ಮಾಡುತ್ತಿದ್ದಲ್ಲಿ ಈ ಬಗ್ಗೆ ಶುಭ ಸುದ್ದಿ ಕೇಳುವ ಯೋಗ ಇದೆ. ಆದರೆ ಇದಕ್ಕಾಗಿ ನೀವು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ನಿತ್ಯದ ಕೆಲಸಗಳಲ್ಲಿ ಕೆಲವು ಮಟ್ಟಿಗೆ ಗೊಂದಲ ಏರ್ಪಡಬಹುದು. ಇನ್ನೊಬರು ಮಾಡುತ್ತಾರೆ ಎಂದುಕೊಂಡು ನೀವು ಹಾಗೂ ನೀವೇ ಮಾಡುತ್ತಿರಿ ಎಂದುಕೊಂಡು ಇತರರು ಗೊಂದಲ ಮಾಡಿಕೊಂಡು ಕೆಲಸವು ಕೊನೆ ಕ್ಷಣದ ಹಾಗೇ ಬಾಕಿ ಉಳಿದುಹೋಗುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಇರುವವರುಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಸಾಧ್ಯತೆ ಇದೆ. ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಹಣವನ್ನು ಹೂಡಿಕೆ ಮಾಡಲಿದ್ದೀರಿ. ಆಯುರ್ವೇದ ಮೂಲಿಕೆಗಳನ್ನು ಬೆಳೆಯುತ್ತಾ ಇರುವವರಿಗೆ ಆದಾಯ ಜಾಸ್ತಿ ಆಗುವ ಜತೆಗೆ ಹೆಸರು, ಕೀರ್ತಿ ಹಾಗೂ ಮನ್ನಣೆ ಕೂಡ ಜಾಸ್ತಿ ಆಗುತ್ತದೆ. ಹೊಸ ವಾಹನ, ಲ್ಯಾಪ್ ಟಾಪ್, ಕಚೇರಿಗೆ ಬೇಕಾದಂಥ ಸಲಕರಣೆಗಾಗಿ ಹಣ ಖರ್ಚು ಮಾಡುವಂಥ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಬ್ಯಾಂಕಿಂಗ್ ವ್ಯವಹಾರಗಳಿಗೆ ಅಲೆದಾಟ ನಡೆಸುತ್ತಾ, ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸ ಈ ದಿನ ಮುಗಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಯಾರನ್ನಾದರೂ ಸರಿ, ಸುಖಾ- ಸುಮ್ಮನೆ ಬೈದಾಡಿಕೊಂಡು ಓಡಾಡಬೇಡಿ.ಯಾರು- ಯಾವ ಸಮಯದಲ್ಲಿ ಹಾಗೂ ಹೇಗೆ ಸಹಾಯಕ್ಕೆ ಬರುತ್ತಾರೆ ಎಂಬುದನ್ನು ಹೇಳುವುದೇ ಕಷ್ಟವಾದ ದಿನಗಳಿವು. ವಾಹನ ಖರೀದಿ ಮಾಡಬೇಕು ಎಂದು ಕೊನೆ ಕ್ಷಣದ ತನಕ ಯೋಚನೆ ಮಾಡದೆ ದಿಢೀರ್ ಎಂದು ತೀರ್ಮಾನ ಮಾಡಲಿದ್ದೀರಿ.
ಲೇಖನ- ಎನ್.ಕೆ.ಸ್ವಾತಿ