Nitya Bhavishya: ಮಕ್ಕಳಿಂದ ಶುಭ ಸಮಾಚಾರ, ಸಂಗಾತಿಯೊಂದಿಗೆ ಉತ್ತಮ ಸಂಬಂಧ ಹೊಂದುವಿರಿ
2023 ಫೆಬ್ರವರಿ 14 ಮಂಗಳವಾರ ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಫೆಬ್ರವರಿ 14 ಮಂಗಳವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಕೃಷ್ಣ, ವಾರ :ಮಂಗಳ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಅನುರಾಧಾ, ಯೋಗ : ಧ್ರುವ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ, ಸೂರ್ಯಾಸ್ತ ಸಂಜೆ 06 ಗಂಟೆ 34 ನಿಮಿಷಕ್ಕೆ. ರಾಹು ಕಾಲ 03:41 ರಿಂದ 05 :07, ಯಮಘಂಡ ಕಾಲ 09:53 ರಿಂದ 11 :20, ಗುಳಿಕ ಕಾಲ 12:47 ರಿಂದ 02:14.
ಮೇಷ: ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ವಹಿಸುವರು. ಪ್ರೇಮ ಜೀವನದಲ್ಲಿ ಸ್ವಲ್ಪ ಉದ್ವಿಗ್ನತೆ ಉಂಟಾಗಬಹುದು. ಆಲೋಚನೆಗೆ ಅನುಕೂಲಕರವಾದ ಸನ್ನಿವೇಶಗಳು ಏರ್ಪಡುವುವು. ಗೊತ್ತಿಲ್ಲ ವಿಚಾರಗಳನ್ನು ಅನುಭವಿಗಳಿಂದ, ಹಿರಿಯರಿಂದ ತಿಳಿದುಕೊಳ್ಳುವಿರಿ. ಸ್ನೇಹಿತರೊಂದಿಗೆ ಸುತ್ತಾಡಲು ಎಲ್ಲೋ ಹೋಗಬಹುದು. ನೀವಿಂದು ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದೀರಿ. ನಿಮ್ಮ ಮಾತಿಗೆ ಮನ್ನಣೆ ಸಿಗಲಿಲಿದೆ. ಶ್ರಮದ ಫಲವನ್ನು ಉಣ್ಣುವ ಕಾಲ ಬಂದಿರುತ್ತದೆ. ಎಂದೂ ಕಾಣದ ನಿಮ್ಮ ನಡೆಯನ್ನು ಕಂಡು ನಿಮ್ಮವರು ಅಚ್ಚರಿಪಡಬಹುದು.
ವೃಷಭ: ಆಸ್ತಿಯ ವಿಷಯದಲ್ಲಿ ಉತ್ತಮ ವ್ಯವಹಾರವಿರಬಹುದು. ನಿಮ್ಮ ಸಹೋದರನ ಸಹಕಾರವು ಇಂದು ನಿಮಗೆ ಉಪಯುಕ್ತವಾಗಿರುತ್ತದೆ. ಮನಸ್ಸು, ಬುದ್ಧಿಗಳನ್ನು ಆರೋಗ್ಯವಾಗಿ ಇಟ್ಟುಕೊಳ್ಳುವ ಕಡೆಗೆ ಗಮನವಿರಬೇಕು. ರಾಜಿಯಾಗುವ ಸನ್ನಿವೇಶಗಳು ಎದುರಾಗಬಹದು. ಹಿರಿಯರ ಮಧ್ಯಸ್ಥಿಕೆಯಲ್ಲಿ ಕಾರ್ಯವು ಮುನ್ನಡೆದರೆ ಸೊಗಸು. ನ್ಯಾಯಾಲಯದಲ್ಲಿ ವಾದ-ವಿವಾದಗಳನ್ನು ಮಾಡಲಿದ್ದೀರಿ. ದೂರಪ್ರಯಾಣವನ್ನು ಮಾಡಿ ಆಯಾಸಗೊಳ್ಳಬೇಡಿ. ಭೂಮಿ, ವಾಹನ ಖರೀದಿಯ ಪ್ರಸ್ತಾಪವು ಆಗಬಹುದು. ಎಲ್ಲರೂ ನಿಮ್ಮ ನಗುಮೊಗವನ್ನು ಕಂಡು ಖುಷಿಪಡಲಿದ್ದಾರೆ.
ಮಿಥುನ: ಜೀವನಕ್ಕೆ ಸಂಬಂಧಿಸಿದಂತೆ ನಿಮ್ಮ ತಂದೆ ಮತ್ತು ಸಂಗಾತಿಯ ಸಲಹೆಯನ್ನು ತೆಗೆದುಕೊಳ್ಳುವಿರಿ. ನಿಮ್ಮ ದೇಹ ನಿಮಗೆ ದುರ್ಬಲವಾಗಿ ಕಾಣಿಸಬಹುದು. ಹಾಗಾಗಿ ದೇಹವನ್ನು ದೃಢವಾಗಿಸಿಕೊಳ್ಳುವ ಕುರಿತು ಪ್ರಯತ್ನಿಸುವಿರಿ. ಪ್ರೀತಿಯ ಜೀವನದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ ಮತ್ತು ನೀವು ಚಿಕ್ಕ ಮಕ್ಕಳೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಸಾಲವನ್ನು ಮಾಡಿ ವಾಹನವನ್ನೋ, ಭೂಮಿಯನ್ನೋ, ಮನೆಯನ್ನೋ ಖರೀದಿಸಲು ಹೋಗಬೇಡಿ. ಹಾಸ್ಯಪ್ರಜ್ಞೆಯಿಂದ ನಿಮ್ಮವರನ್ನು ಸಂತೋಷವಾಗಿ ಇಡುವಿರಿ. ನಿಮ್ಮವರಿಗೆ ನಿಮ್ಮನ್ನು ನೋಡಿ ಮಾತನಾಡಬೇಕು ಎನ್ನಿಸಬಹುದು. ಅದಕ್ಕೆ ಇಲ್ಲವೆನ್ನಬೇಡಿ. ತಿನ್ನುವ ಆಹಾರವು ಆರೋಗ್ಯಯುಕ್ತವಾಗಲಿರಲಿ.
ಕರ್ಕ: ನೀವು ಹೊಸ ಯೋಜನೆಯಲ್ಲಿ ಕೆಲಸ ಮಾಡಲು ಬಯಸಿದರೆ, ನಿಮ್ಮ ಅಧಿಕಾರಿಗಳ ಬೆಂಬಲವನ್ನು ನೀವು ಪಡೆಯುತ್ತೀರಿ ಮತ್ತು ನಿಮ್ಮ ಕೆಲವು ಹಳೆಯ ಸ್ನೇಹಿತರು ಸಹ ನಿಮಗೆ ಸಹಕರಿಸುತ್ತಾರೆ. ಇದು ನಿಮ್ಮನ್ನು ಉದ್ವೇಗಕ್ಕೆ ತಳ್ಳಬಹುದು. ಗೊತ್ತಿಲ್ಲದೇ ನಿಮ್ಮ ಸಮಯವು ವ್ಯರ್ಥವಾಗಬಹುದು. ಸಂಗಾತಿಯ ಜೊತೆಗೆ ಸಣ್ಣ ಕಲಹವು ಆಗಬಹುದು. ಯಾವುದೋ ಒಂದು ಬಲವಾದ ಆಲೋಚನೆಯಿಂದ ಮಾಡಲೇ ಬೇಕಾದ ಕಾರ್ಯಗಳು ನೆನಪಾಗದೇ ಇರಬಹುದು. ಹಣವನ್ನು ಮಿತವಾಗಿ ವ್ಯಯ ಮಾಡಿ.
ಸಿಂಹ: ಸಂಗಾತಿಯೊಂದಿಗಿನ ಸಂಬಂಧವು ಮಧುರವಾಗಿರುತ್ತದೆ ಹಾಗೂ ಕೌಟುಂಬಿಕ ಖರ್ಚುಗಳು ನಿಯಂತ್ರಣದಲ್ಲಿರುತ್ತವೆ. ಹೊಸ ವಿಚಾರಗಳನ್ನು ತಿಳಿದುಕೊಳ್ಳುವತ್ತ ನಿಮ್ಮ ಗಮನವಿರಲಿದೆ. ಆನಾರೋಗ್ಯದಿಂದ ವ್ಯತ್ಯಾಸವಾದ ನಿಮ್ಮ ದೇಹ, ಮನಸ್ಸುಗಳು ಸ್ವಸ್ಥವಾಗುವ ಕಡೆಗೆ ಹೋಗುತ್ತಿವೆ. ಅಪ್ರಿಯಾವಾದ ಆಪಾದನೆಗಳು ಬರಬಹುದು. ಹಠದ ಸ್ವಭಾವವು ನಿಮ್ಮನ್ನು ಒಂಟಿಗನನ್ನಾಗಿ ಮಾಡುತ್ತದೆ. ಸರ್ಕಾರಿ ಉದ್ಯೋಗಿಗಳಿಗೆ ಉನ್ನತ ಪದವಿಗೆ ಆಹ್ವಾನ ಬರಬಹುದು. ನಿಮ್ಮ ಯಶಸ್ಸಿನ ರಹಸ್ಯವನ್ನು ಯಾರ ಜೊತೆಯೂ ಹಂಚಿಕೊಳ್ಳಬೇಡಿ. ನಿಮ್ಮನ್ನು ನೋಡುವ ದೃಷ್ಟಿಯೇ ಬದಲಾದೀತು.
ಕನ್ಯಾ: ನಿಮ್ಮ ಒಡಹುಟ್ಟಿದವರ ಬಗ್ಗೆ ನೀವು ಚಿಂತೆ ಮಾಡುತ್ತಿರುವಿರಿ. ನಿಮ್ಮ ಸೌಂದರ್ಯದ ಬಗ್ಗೆ ನಿಮಗಿರುವ ಕಾಳಜಿಗೆ ಇಂದು ಹೆಚ್ಚು ಸಮಯವನ್ನು ಅದಕ್ಕಾಗಿ ಮೀಸಲಿಡುವಿರಿ. ನೀವು ಹೂಡಿಕೆ ಮಾಡಲು ಬಯಸಿದರೆ ಇಂದು ಉತ್ತಮ ದಿನವಲ್ಲ. ಯಾರ ಭಾವನೆಗಳಿಗೂ ನೋವನ್ನು ತರಲು ಹೋಗಬೇಡಿ. ಮಕ್ಕಳ ಜೊತೆ ಖುಷಿಯಿಂದ ಕಾಲವನ್ನು ಕಳೆಯುವಿರಿ. ಸಂಪಾದನೆಗೆ ಉತ್ತಮಮಾರ್ಗವು ನಿಮಗೆ ಗೊತ್ತಾಗಲಿದೆ. ಮಂದಿರಗಳಿಗೆ ಭೇಟಿ ನೀಡಿ ಸ್ವಲ್ಪ ಸಮಯವನ್ನು ಅಲ್ಲಿ ಕಳೆದು ಬರುವುದು ಒಳಿತು.
ತುಲಾ: ನಿಮ್ಮ ಅಚಾತುರ್ಯದಿಂದ ವ್ಯಾಪಾರದಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ಆಪ್ತರ ಜೊತೆ ತೀರ್ಥಯಾತ್ರೆಯನ್ನು ಮಾಡಬಹುದು. ಅವಮಾನದವನ್ನು ನೀವು ಅನುಭವಿಸುವ ಪ್ರಸಂಗವು ಎದುರಾಗಲಿದೆ. ಸಂಗಾತಿಯ ಮುನಿಸಿಗೆ ನೀವು ಆಹಾರವಾಗುವಿರಿ. ಈ ಸಂದರ್ಭದಲ್ಲಿ ಮರುಮಾತನಾಡದೇ ಇರುವುದು ಒಳ್ಳೆಯದು. ಕೆಲವು ನಿಮಿಷಗಳಲ್ಲಿ ಇದು ಸರಿಯಾಗಲಿದೆ. ವಿದ್ಯಾರ್ಥಿಗಳು ಓದಿನಲ್ಲಿ ಮನಸ್ಸನ್ನು ಇಡಬಹುದು. ಪಿತ್ತ ಮತ್ತು ಕಫಗಳ ಸಂಬಂಧದಿಂದ ರೋಗಗಳು ಬರಬಹುದು. ಪಿರ್ತಾರ್ಜಿತ ಆಸ್ತಿಯನ್ನು ಗೊಂದಲಗಳು ಇರಬಹುದು.
ವೃಶ್ಚಿಕ: ಸಂಗಾತಿಯೊಂದಿಗೆ ಕಲಹಕ್ಕೆ ಇಳಿಯಬೇಡಿ. ಜಗಳವು ವಿಚ್ಛೇದನಕ್ಕೂ ಕಾರಣವಾದೀತು. ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಂದ ಬೆಂಬಲವನ್ನು ಪಡೆಯುತ್ತಾರೆ ಮತ್ತು ಅವರು ತಮ್ಮ ಎಲ್ಲಾ ಕಾರ್ಯಗಳನ್ನು ಪೂರ್ಣಗೊಳಿಸುತ್ತಾರೆ. ಭೂಮಿಯ ವ್ಯವಹಾರದಲ್ಲಿ ಜಯವಾಗುವ ಸಾಧ್ಯತೆ ಇದೆ. ಹೊಸ ಉತ್ಸಾಹದ ದಿನವಾಗಿ ಇಂದು ಇರಲಿದೆ. ಮಕ್ಕಳು ಎಲ್ಲಿಗೆ ಹೋಗುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಗಮನವಿರಲಿ. ಅನಿರೀಕ್ಷಿತ ಹಣದ ವ್ಯಯದಿಂದ ಚಂಚಲರಾಗುವಿರಿ. ಮೊದಲ ವೇತನವನ್ನು ಪಡೆದು ಖುಷಿ ಪಡುವಿರಿ.
ಧನುಸ್ಸು: ಮಕ್ಕಳಿಂದ ಕೆಲವು ಶುಭ ಸಮಾಚಾರ ಸಿಗಬಹುದು. ಇಂದು ಆರ್ಥಿಕ ಲಾಭದ ಪರಿಸ್ಥಿತಿಯು ನಿಮಗೆ ಉತ್ತಮವಾಗಿದೆ. ಶತ್ರುಗಳ ಬಾಧೆಯು ನಿವಾರಣೆಯಾಗಲಿದೆ. ಪ್ರಯಾಣದ ಆಯಾಸವು ನಿಮ್ಮ ಆಲಸ್ಯಕ್ಕೆ ಕಾರಣವಾಗುವುದು. ಮಾತನ್ನು ಆಡುವಾಗ ಎಚ್ಚರವಿರಲಿ. ಬೇರೆಯವರ ನಾಶವನ್ನು ಮಾಡಲು ಹೋಗಿ ನಿಮ್ಮದೇ ಯಶಸ್ಸು ನಾಶವಾಗಬಹುದು. ಮಕ್ಕಳ ಅನಾರೋಗ್ಯದಿಂದ ಮನಸ್ಸು ಹಾಳಾಗುವುದು. ನಿದ್ರೆಯು ಚೆನ್ನಾಗಿ ಆಗದು. ಸಂಗಾತಿಯ ಜೊತೆ ಇಂದು ಸಂತೋಷದಿಂದ ಕಳೆಯುವಿರಿ. ಸಮಾಧಾನದ ಮನಃಸ್ಥಿತಿಯು ಉಂಟಾಗುವುದು.
ಮಕರ: ನೀವು ಇಂದು ಸೋಮಾರಿತನವನ್ನು ತ್ಯಜಿಸಿದರೆ, ಕೆಲಸದ ಸ್ಥಳದಲ್ಲಿ ಹೊಸ ಶಕ್ತಿಯು ಹರಿಯುತ್ತದೆ. ಇನ್ನೊಬ್ಬರ ಗೋಜಿಗೆ ಹೋಗದ, ನಿಮ್ಮ ಗೋಜಿಗೆ ಬಂದವರನ್ನು ಸುಮ್ಮನೆ ಬಿಡುವ ಛಾತಿ ನಿಮ್ಮದಲ್ಲ. ಎಲ್ಲರ ಜೊತೆ ಪ್ರೀತಿಯಿಂದ ಇರುವ, ವರ್ತಿಸುವ ಗುಣ ನಿಮ್ಮದು. ಸಹಾಯವನ್ನು ಪಡೆದುಕೊಂಡವರ ಭೇಟಿಯಾಗಲಿದೆ. ಅವರಿಂದ ಗೌರವವಾದರು ಸಿಗಲಿವೆ. ರಮಣೀಯ ಸ್ಥಳಗಳನ್ನು ನೋಡಲು ಬಯಸುವಿರಿ. ಸಂಗೀತದ ಕಲಾವಿದರಿಗೆ ಉತ್ತಮ ಅವಕಾಶಗಳು ಬಾಗಿಲನ್ನು ತೆರೆದು ಸ್ವಾಗತಿಸಲಿವೆ.
ಕುಂಭ: ತಂದೆಯೊಂದಿಗಿನ ನಿಮ್ಮ ಸಂಬಂಧವು ಸುಧಾರಿಸಬಹುದು. ನಿಮಗೆ ಗೊಂದಲವನ್ನು ಉಂಟುಮಾಡಲು ಹತ್ತಾರು ಜನರು ಸಲಹೆಗಳನ್ನು ಕೊಡಬಹುದು. ಘಟನೆಗಳು ನಡೆಯಬಹುದು. ನಿಮ್ಮ ನಿರ್ಧಾರ ಅಚಲವಾಗಿರಲಿ. ರಾಜಕಾರಣಿಗಳ ಭೇಟಿಯಾಗಿ ಜೀವನದಲ್ಲಿ ಹೊಸ ಮಾರ್ಗವನ್ನು ತುಳಿಯುವ ಅವಕಾಶ ನಿಮಗೆ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ನಂಬಿಕೆ ಕಡಿಮೆ ಇರಲಿದೆ. ಮನಸ್ಸು ಶುದ್ಧವಾಗಿದ್ದು ಪುರುಷಪ್ರಯತ್ನವೇ ಶ್ರೇಷ್ಠ ಎಂದು ನಂಬುವವರು ಇಂದು ನೀವಾಗುವಿರಿ. ಈ ದಿನವನ್ನು ಅನಾಯಾಸವಾಗಿ ಕಳೆಯುವಿರಿ.
ಮೀನ: ಕೆಲವು ಅಗತ್ಯ ಖರ್ಚುಗಳು ಸಹ ಮುನ್ನೆಲೆಗೆ ಬರುತ್ತವೆ. ನಿಮ್ಮ ಶಕ್ತಿ, ಸಾಮರ್ಥ್ಯಗಳು ವ್ಯರ್ಥವಾಗುವ ದಿನ. ತನ್ನನ್ನು ಸಮಾಜ ಗುರುತಿಸುತ್ತಿಲ್ಲ ಎಂಬ ಕೊರಗು ಇಂದು ಕೊರಗು ಅತಿಯಾಗಿ ಕಾಡಲಿದೆ. ಆರೋಗ್ಯದಿಂದ ಕೂಡಿರುವಿರಿ. ಬರಬೇಕಾದ ಸಂಪತ್ತು ನಿಮ್ಮ ಕೈಸೇರಲಿದೆ. ಇಂದು ನಿಮ್ಮ ಜೀವನಕ್ಕೆ ಅವಶ್ಯಕವಾದ ವಸ್ತುವನ್ನು ಪಡೆಯಲು ಅಸತ್ಯವನ್ನು ಹೇಳುವಿರಿ. ಸಂಗಾತಿಯಿಂದ ಅನಿರೀಕ್ಷಿತ ಮಾತುಗಳನ್ನು ಕೇಳಿ ಅಚ್ಚರಿಪಡುವಿರಿ.
ಲೋಹಿತಶರ್ಮಾ, ಇಡುವಾಣಿ