AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Peddi First Half review: ‘ಪೆದ್ದಿ’ ಮೊದಲಾರ್ಧದಲ್ಲಿ ಏನಿದೆ? ಏನಿಲ್ಲ?

Peddi movie first half review: ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಇಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಗ್ರಾಮೀಣ ಭಾಗದ ಕ್ರೀಡಾಪಟು ಯುವಕನ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಸಿನಿಮಾದ ಮೊದಲಾರ್ಧ ಹೇಗಿದೆ? ಇಂಟರ್ವೆಲ್​​ಗೆ ಮುಂಚೆ ಸಿನಿಮಾದ ಕತೆಯಲ್ಲಿ ಬರುವ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ....

Peddi First Half review: ‘ಪೆದ್ದಿ’ ಮೊದಲಾರ್ಧದಲ್ಲಿ ಏನಿದೆ? ಏನಿಲ್ಲ?
Peddi Movie
ಮಂಜುನಾಥ ಸಿ.
| Edited By: |

Updated on:Jun 04, 2026 | 11:43 AM

Share

ರಾಮ್ ಚರಣ್ (Ram Charan), ಶಿವರಾಜ್ ಕುಮಾರ್ (Shiva Rajkumar), ಜಾನ್ಹವಿ ಕಪೂರ್ ನಟನೆಯ ‘ಪೆದ್ದಿ’ ಸಿನಿಮಾ ಇಂದು (ಜೂನ್ 4) ವಿಶ್ವದಾದ್ಯಂತ ಬಿಡುಗಡೆ ಆಗಿದೆ. ‘ಆರ್​​ಆರ್​​ಆರ್’ ಬಳಿಕ ಸತತ ಸೋಲು ಕಂಡಿರುವ ರಾಮ್ ಚರಣ್​​ ಪಾಲಿಗೆ ಇದು ಬಲು ಮಹತ್ವದ ಸಿನಿಮಾ ಆಗಿದೆ. ಬುಚ್ಚಿಬಾಬು ಸನಾ ನಿರ್ದೇಶಿಸಿರುವ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದು, ಸಿನಿಮಾದ ಪ್ರಚಾರವನ್ನು ಚಿತ್ರತಂಡ ಬಲು ಜೋರಾಗಿ ಮಾಡಿದೆ. ‘ಪೆದ್ದಿ’ ಸಿನಿಮಾವು ಗ್ರಾಮೀಣ ಭಾಗದ ಕತೆ ಹೊಂದಿರುವ ಸಿನಿಮಾ ಆಗಿದ್ದು, ಕ್ರೀಡಾಪಟು ಯುವಕನೊಬ್ಬನ ಸುತ್ತ ಕತೆ ಸುತ್ತುತ್ತದೆ.

‘ಪೆದ್ದಿ’ ಸಿನಿಮಾದ ಮೊದಲಾರ್ಧ ಏನಿದೆ? ಏನಿಲ್ಲ?

  1. ‘ಪೆದ್ದಿ’ ಆಟದ ಕತೆಯ ಜೊತೆಗೆ ಐಡೆಂಟಿಟಿಯ ಕತೆ
  2. ಮೊದಲಾರ್ಧ ನಾಯಕನ ಎಂಟ್ರಿ, ನಾಯಕಿಯ ಗ್ಲಾಮರ್, ಇತರೆ ಪಾತ್ರಗಳ ಪರಿಚಯಕ್ಕೆ ಹೆಚ್ಚಿನ ಸಮಯ ಮೀಸಲು.
  3. ಗುರುತೂ, ಇಲ್ಲದ ರಸ್ತೆಯೂ ಇಲ್ಲದ ಬೆಟ್ಟದ ಬುಡದ ಊರಿನ ಯುವಕ ಪೆದ್ದಿಯ ಕತೆ ಆರಂಭವಾಗುವುದು ಕ್ರಿಕೆಟ್ ಆಟದ ಜೊತೆ
  4. ಜಾನ್ಹವಿಯ ಎಂಟ್ರಿ ಸೂಪರ್, ಮೊದಲಾರ್ಧದಲ್ಲಿ ನಾಯಕಿ ಕೇವಲ ಗ್ಲಾಮರ್ ಗಷ್ಟೆ ಸೀಮಿತ.
  5. ಶಿವಣ್ಣನಿಗೆ ಮೊದಲಾರ್ಧದಲ್ಲಿ ಹೆಚ್ಚು ದೃಶ್ಯಗಳಿಲ್ಲ ಆದರೆ ಕತೆಗೆ ತಿರುವು ನೀಡುವುದು ಶಿವಣ್ಣನ ಪಾತ್ರ ಮೊದಲಾರ್ಧದ ಅಂತ್ಯಕ್ಕೆ ನಾಯಕನಿಗೆ ತನ್ನ ಗುರಿ ಏನೆಂಬುದು ತಿಳಿಯುತ್ತದೆ, ದ್ವಿತೀಯಾರ್ಧ ನಿಜವಾದ ಕತೆ ತೆರೆದುಕೊಳ್ಳಲಿದೆ
  6. ಮೊದಲಾರ್ಧದಲ್ಲಿ ಎರಡು ಹಾಡುಗಳಿದ್ದು ಎರಡೂ ಚೆನ್ನಾಗಿವೆ, ಅಲ್ಲಲ್ಲಿ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ.
  7. ರಾಮ್ ಚರಣ್ ಆಕ್ಷನ್, ಡ್ಯಾನ್ಸ್ ಹಾಗೂ ಎಮೋಷನಲ್ ದೃಶ್ಯದಲ್ಲಿ ಗಮನ ಸೆಳೆಯುತ್ತಾರೆ
  8. ಮೊದಲಾರ್ಧ ಕೂಲಿಗಾಗಿ ಕ್ರಿಕೆಟ್ ಆಡುವ ನಾಯಕ, ಇಂಟರ್ವೆಲ್ ವೇಳೆಗೆ ಕುಸ್ತಿ ಅಖಾಡಕ್ಕೆ ಕಾಲಿಟ್ಟಿದ್ದಾನೆ.
  9. ಮೊದಲಾರ್ಧದಲ್ಲಿ ವಿಲನ್ ದಿವ್ಯೇಂದು ಗಮನ ಸೆಳೆಯುತ್ತಾರೆ. ಜಗಪತಿ ಬಾಬು ಪೋಷಕ ಪಾತ್ರ ಭಾವುಕವಾಗಿದೆ. ಬೊಮನ್ ಇರಾನಿಗೆ ಹೆಚ್ಚು ಕೆಲಸವಿಲ್ಲ.
  10. ಮೊದಲಾರ್ಧದಲ್ಲಿ ನಾಯಕಿ, ನಾಯಕನ ಭೇಟಿಯೇ ಆಗಿಲ್ಲ, ಪೆದ್ದಿ ಎಂಬ ವ್ಯಕ್ತಿ ಇದ್ದಾನೆಂಬುದು ಸಹ ನಾಯಕಿಗೆ ತಿಳಿಯದು

‘ಪೆದ್ದಿ’ ಸಿನಿಮಾನಲ್ಲಿ ರಾಮ್ ಚರಣ್, ಶಿವರಾಜ್ ಕುಮಾರ್, ಜಾನ್ಹವಿಯ ಹೊರತಾಗಿ ಬಾಲಿವುಡ್ ನಟ ದಿವ್ಯೇಂದು, ಬೊಮನ್ ಇರಾನಿ ಸಹ ನಟಿಸಿದ್ದಾರೆ. ಜಗಪತಿ ಬಾಬು ಸೇರಿದಂತೆ ಇನ್ನೂ ಹಲವಾರು ಕಲಾವಿದರು ನಟಿಸಿದ್ದಾರೆ. ಶಿವಣ್ಣನ ಪಾತ್ರ ಸಹ ಸಿನಿಮಾನಲ್ಲಿ ಹೈಲೆಟ್, ಸಿನಿಮಾಕ್ಕೆ ಆಸ್ಕರ್ ವಿಜೇತ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಮೈತ್ರಿ ಮೂವಿ ಮೇಕರ್ಸ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:42 am, Thu, 4 June 26

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ರೋಗಿ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಕ್ಯಾಂಟರ್​​ಗೆ ಡಿಕ್ಕಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ವಿದ್ಯಾರ್ಥಿ ಜೀವನದಲ್ಲಿ ಇವುಗಳಿದ್ದರೆ ಉದ್ಧಾರ ಗ್ಯಾರಂಟಿ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಸಾಯಿಬಾಬಾ ನೆನೆದರೆ ಕಷ್ಟಗಳೆಲ್ಲಾ ನಿವಾರಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ