AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೈಪರ್ ಚೇಂಜ್ ಮಾಡೋದು ಅಂದ್ರೆ ಆಗಲ್ಲ, ಅಲ್ಲಿಂದ ಜಾರಿಕೊಳ್ತೀನಿ; ರಾಮ್ ಚರಣ್

ರಾಮ್ ಚರಣ್ ತಮ್ಮ ಮುಂಬರುವ 'ಪೆದ್ದಿ' ಚಿತ್ರದ ಪ್ರಚಾರದ ವೇಳೆ ವೈಯಕ್ತಿಕ ಜೀವನದ ಕುರಿತು ಮಾತನಾಡಿದ್ದಾರೆ. ತಾವೊಬ್ಬ ಜವಾಬ್ದಾರಿಯುತ ತಂದೆ ಎಂದು ಒಪ್ಪಿಕೊಂಡರೂ, ಮಕ್ಕಳ ಡೈಪರ್ ಬದಲಾಯಿಸುವ ಜವಾಬ್ದಾರಿಯಿಂದ ದೂರ ಉಳಿಯುವುದಾಗಿ ನಗುತ್ತಾ ಹೇಳಿದ್ದಾರೆ. ಇದೇ ವಿಷಯವಾಗಿ ವಿಕ್ಕಿ ಕೌಶಲ್ ಕೂಡ ಈ ಹಿಂದೆ ಇದೇ ರೀತಿ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದರು.

ಡೈಪರ್ ಚೇಂಜ್ ಮಾಡೋದು ಅಂದ್ರೆ ಆಗಲ್ಲ, ಅಲ್ಲಿಂದ ಜಾರಿಕೊಳ್ತೀನಿ; ರಾಮ್ ಚರಣ್
ರಾಮ್ ಚರಣ್-ಉಪಾಸನಾ Image Credit source: Ram Charan Instagram
ರಾಜೇಶ್ ದುಗ್ಗುಮನೆ
|

Updated on:Jun 03, 2026 | 8:52 AM

Share

ರಾಮ್ ಚರಣ್ ಸದ್ಯ ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ ‘ಪೆದ್ದಿ’ (Peddi) ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ವಿವಿಧ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ತಮ್ಮ ವೈಯಕ್ತಿಕ ಜೀವನ ಹಾಗೂ ಮೂವರು ಮಕ್ಕಳ ತಂದೆಯಾಗಿರುವ ಜವಾಬ್ದಾರಿಯ ಬಗ್ಗೆ ಕೆಲವು ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಾವೊಬ್ಬ ಜವಾಬ್ದಾರಿಯುತ ತಂದೆ ಹೌದಾದರೂ, ಮಕ್ಕಳ ಡೈಪರ್ ಬದಲಾಯಿಸುವ ವಿಷಯ ಬಂದಾಗ ಅಲ್ಲಿಂದ ಜಾರಿಕೊಳ್ತೀನಿ ಎಂದು ರಾಮ್ ಚರಣ್ ಒಪ್ಪಿಕೊಂಡಿದ್ದಾರೆ.

ಸಂದರ್ಶನ ಒಂದರಲ್ಲಿ ಮಾತನಾಡಿದ ರಾಮ್ ಚರಣ್, ‘ನಾನು ಒಳ್ಳೆಯ ತಂದೆಯೋ ಅಥವಾ ಸಾಮಾನ್ಯ ತಂದೆಯೋ ಗೊತ್ತಿಲ್ಲ. ಆದರೆ ಮಕ್ಕಳ ಎಲ್ಲಾ ಜವಾಬ್ದಾರಿಗಳಲ್ಲೂ ನಾನು ಭಾಗಿಯಾಗುತ್ತೇನೆ. ಅವರಿಗೆ ಊಟ ಮಾಡಿಸುವುದು, ಮಲಗಿಸುವುದು ಎಲ್ಲವನ್ನೂ ಮಾಡುತ್ತೇನೆ.  ಮಗಳು ಕಾರಾ ಪ್ರತಿ ರಾತ್ರಿಯೂ ನನ್ನ ಜೊತೆಯಲ್ಲೇ ಮಲಗುತ್ತಾಳೆ. ಒಬ್ಬ ಸಾಮಾನ್ಯ ತಂದೆ ಮಾಡುವ ಎಲ್ಲಾ ಕೆಲಸಗಳನ್ನೂ ನಾನು ಮಾಡುತ್ತೇನೆ. ಆದರೆ, ಡೈಪರ್ ಬದಲಾಯಿಸುವ ಕೆಲಸ ಮಾತ್ರ ನನ್ನ ಕೈಲಿ ಆಗಲ್ಲ. ಆ ಸಮಯ ಬಂದಾಗ ಸದ್ದಿಲ್ಲದೆ ರೂಮ್‌ನಿಂದ ಹೊರಟುಬಿಡುತ್ತೇನೆ’ ಎಂದು ನಗುತ್ತಾ ಹೇಳಿದ್ದಾರೆ.

ಕೆಲವೇ ವಾರಗಳ ಹಿಂದೆ ಬಾಲಿವುಡ್ ನಟ ವಿಕ್ಕಿ ಕೌಶಲ್ ಕೂಡ ತಮ್ಮ ಮಗುವಿನ ವಿಷಯದಲ್ಲಿ ಇಂತಹುದೇ ಹೇಳಿಕೆ ನೀಡಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಕಳೆದ ವರ್ಷ ತಂದೆಯಾಗಿದ್ದ ವಿಕ್ಕಿ ಕೌಶಲ್, ‘ಮಗುವಿಗೆ ಈಗ ಮೂರು ತಿಂಗಳು. ಇಷ್ಟು ಸಣ್ಣ ಮಗುವಿದ್ದಾಗ ತಂದೆಯಾಗಿ ಮಾಡಲು ಹೆಚ್ಚಿನ ಕೆಲಸ ಇರುವುದಿಲ್ಲ. ನಾನು ಕೇವಲ ಚೀರ್ ಲೀಡರ್ ತರಹ ಇದ್ದು, ಮಗು ಸ್ವಲ್ಪ ದೊಡ್ಡದಾಗಲಿ ಎಂದು ಕಾಯುತ್ತಿದ್ದೇನೆ. ಆಗ ನಾನು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬಹುದು’ ಎಂದಿದ್ದರು.

ಜೊತೆಗೆ ಪತ್ನಿ ಕತ್ರಿನಾ ಕೈಫ್ ಅವರನ್ನು ಹೊಗಳುತ್ತಾ, ‘ಸದ್ಯಕ್ಕೆ ತಾಯಿಯೇ ಸೂಪರ್ ಹೀರೋ. ಪ್ರೆಗ್ನೆನ್ಸಿ ಹಾಗೂ ಮಗುವಿನ ಪಾಲನೆಯಲ್ಲಿ ಆಕೆ ಒಬ್ಬ ಯೋಧನಂತೆ ಶ್ರಮಿಸುತ್ತಿದ್ದಾಳೆ. ಆಕೆಯ ಬಗ್ಗೆ ನನಗೆ ಹೆಮ್ಮೆಯಿದೆ’ ಎಂದು ಹೇಳಿದ್ದರು.

ಇದನ್ನೂ ಓದಿ: ಜಾನ್ವಿ ಕಪೂರ್ ಮೈಮೇಲೆ ಬೀಳಲು ಬಂದ ರಾಮ್ ಚರಣ್ ಅಭಿಮಾನಿ; ವಿಡಿಯೋ ವೈರಲ್

ವಿಕ್ಕಿ ಕೌಶಲ್ ಅವರ ಈ ಹೇಳಿಕೆ ಹಲವರಿಗೆ ಇಷ್ಟವಾಗಿರಲಿಲ್ಲ. ರೆಡ್ಡಿಟ್​ನಲ್ಲಿ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, ‘ಮಗುವಿಗೆ ಹಾಲುಣಿಸುವುದನ್ನು ಬಿಟ್ಟರೆ ತಾಯಿ ಮಾಡುವ ಯಾವ ಕೆಲಸವನ್ನು ತಂದೆ ಮಾಡಲು ಸಾಧ್ಯವಿಲ್ಲ ಹೇಳಿ? ವಿಕ್ಕಿ ಅವರ ಈ ಹೇಳಿಕೆ 20ನೇ ಶತಮಾನದ ಚಿಂತನೆಯನ್ನು ನೆನಪಿಸುತ್ತದೆ’ ಎಂದು ಆಕ್ರೋಶ ಹೊರಹಾಕಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:39 am, Wed, 3 June 26

Follow Us
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ