ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 6ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಕೃಷಿ ಜಮೀನು ಖರೀದಿ ಮಾಡಬೇಕು ಎಂದಿರುವವರಿಗೆ ಸೂಕ್ತ ಸ್ಥಳವನ್ನು ಹುಡುಕುವುದಕ್ಕೆ ನೆರವು ದೊರೆಯಲಿದೆ. ರಾಜಕಾರಣದಲ್ಲಿ ಇರುವವರಿಗೆ ಬಹಳ ಒತ್ತಡದ ದಿನ ಇದಾಗಿರುತ್ತದೆ. ವಿದ್ಯಾರ್ಥಿಗಳಿಗೆ ಉತ್ಸಾಹ ಕಡಿಮೆ ಇರುತ್ತದೆ. ಅಲರ್ಜಿ ಸಮಸ್ಯೆ ಇರುವವರು ಮಾಮೂಲಿಗಿಂತ ಜಾಸ್ತಿ ಜಾಗರೂಕತೆಯಿಂದ ಇರಬೇಕು. ಇತರರಿಗೆ ನೆರವು ನೀಡಲಿದ್ದೀರಿ. ಇದರಿಂದ ಭವಿಷ್ಯದಲ್ಲಿ ಅನುಕೂಲ ಆಗಲಿದೆ.
ತನಗೆ ಒಳಿತನ್ನು ಮಾಡಿಕೊಳ್ಳುವುದಕ್ಕೆ ಸಾಧ್ಯವಾಗದ ವ್ಯಕ್ತಿ ಇತರರಿಗೆ ಹೇಗೆ ನೆರವು ನೀಡುವುದಕ್ಕೆ ಸಾಧ್ಯ? ಆದ್ದರಿಂದ ಮೊದಲಿಗೆ ನಿಮ್ಮ ಸಮಸ್ಯೆಗಳು, ಸವಾಲುಗಳನ್ನು ನಿವಾರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ಹೊಸ ವಸ್ತ್ರಾಭರಣಗಳ ಖರೀದಿಗಾಗಿ ಹಣವನ್ನು ಖರ್ಚು ಮಾಡಲಿದ್ದೀರಿ. ಯಾರು ಮಾನಸಿಕ ಒತ್ತಡ ಎದುರಿಸುತ್ತಿದ್ದೀರೋ ಕಡ್ಡಾಯವಾಗಿ ಮನಶ್ಶಾಸ್ತ್ರಜ್ಞರನ್ನು ಭೇಟಿ ಆಗಬೇಕು.
ಕೃತಕ ಗರ್ಭಧಾರಣೆ ಮೂಲಕ ಸಂತಾನಕ್ಕೆ ಪ್ರಯತ್ನ ಪಡುತ್ತಿರುವವರು ಒಳ್ಳೆ ಸುದ್ದಿಯನ್ನು, ಬೆಳವಣಿಗೆ ಮಾಹಿತಿಯನ್ನು ಕೇಳಿಸಿಕೊಳ್ಳುವ ಯೋಗ ಇದೆ. ವಿದೇಶದಲ್ಲಿ ವಾಸ ಇರುವವರಿಗೆ ಕುಟುಂಬದವರ ನೆನಪು ಬಹಳ ಕಾಡಲಿದೆ. ಬಹಳ ಮುಖ್ಯವಾದ ದಾಖಲೆಗಳನ್ನು ಸರಿಯಾದ ಜಾಗದಲ್ಲಿ ಇಡುವ ಕಡೆಗೆ ಲಕ್ಷ್ಯ ನೀಡಿ. ತಂದೆಯ ಸಂಬಂಧಿಕರು ನಿಮ್ಮ ನೆರವು ಕೇಳಿಕೊಂಡು ಬರುವ ಸಾಧ್ಯತೆಗಳಿವೆ.
ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಬಹಳ ಕಾಲದಿಂದ ಹುಡುಕಾಡುತ್ತಿರುವ ವ್ಯಕ್ತಿಗಳು ಅಥವಾ ವಸ್ತುಗಳು ಇಂದು ಸಿಕ್ಕಿಬಿಡುವ ಸಾಧ್ಯತೆ ಇದೆ. ಮನೆಯಲ್ಲಿ ಎಲೆಕ್ಟ್ರಿಕ್ ವಸ್ತುಗಳನ್ನು ಬಳಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಬ್ಯೂಟಿಪಾರ್ಲರ್ ನಡೆಸುವಂಥವರು ದೀರ್ಘ ಕಾಲದ ಪ್ರಾಜೆಕ್ಟ್ ಪಡೆಯುವ ಅವಕಾಶಗಳು ಹೆಚ್ಚಿವೆ. ವಿದೇಶ ವ್ಯಾಸಂಗಕ್ಕೆ ಪ್ರಯತ್ನಿಸುತ್ತಿರುವವರಿಗೆ ಅಡೆತಡೆಗಳು ಎದುರಾಗಲಿವೆ.
ಈ ಹಿಂದೆ ಆಡಿದ ಮಾತು ಯಾಕಾದರೂ ಆಡಿದೆನೋ ಎಂದು ಬಹಳ ಯೋಚನೆ ಮಾಡಲಿದ್ದೀರಿ. ಪ್ರೀತಿ- ಪ್ರೇಮದ ವಿಚಾರಗಳು ಪ್ರಾಮುಖ್ಯ ಪಡೆಯಲಿವೆ. ಡಿಜಿಟಲ್ ಆಸ್ತಿಗಳಲ್ಲಿ ಹೂಡಿಕೆ ಮಾಡಿದವರಿಗೆ ಅನುಭವಿಗಳ ಮಾರ್ಗದರ್ಶನ ಅಗತ್ಯ ಬರಲಿದೆ. ದಾಕ್ಷಿಣ್ಯಕ್ಕೆ ಸಿಲುಕಿ, ಒಪ್ಪಿಕೊಂಡ ಕೆಲಸವೊಂದಕ್ಕೆ ನಿಮ್ಮ ಕೈಯಿಂದಲೇ ಹಣ ಖರ್ಚು ಮಾಡಿ ಮುಗಿಸಿಕೊಡಬೇಕಾದ ಸನ್ನಿವೇಶ ಬರಲಿದೆ.
ನಿಮ್ಮ ಅಗತ್ಯಗಳ ಬಗ್ಗೆ ಸ್ಪಷ್ಟತೆ ಇರಲಿ. ಅನಗತ್ಯ ವಿಷಯ, ವಸ್ತುಗಳಿಗೆ ಖರ್ಚು ಮಾಡದಿರಿ. ನಿಮ್ಮ ಮನಸ್ಸಿನಲ್ಲಿರುವ ವಿಚಾರ ಎದುರಿನಲ್ಲಿ ಇರುವವರಿಗೆ ಬಾಯಿ ಬಿಟ್ಟು ಹೇಳದಿದ್ದಲ್ಲಿ ಹೇಗೆ ಗೊತ್ತಾಗಬೇಕು? ಆದ್ದರಿಂದ ನಿಮಗೆ ಬೇಕಿರುವುದನ್ನು ಸರಿಯಾಗಿ ಬಾಯಿ ಬಿಟ್ಟು ಕೇಳಿ. ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯನ್ನು ಮಾಡುವುದರಿಂದ ವಿವಾಹ ಅಡೆತಡೆಗಳು ಎದುರಿಸುತ್ತಿರುವವರಿಗೆ ಅನುಕೂಲ ಕೂಡಿಬರಲಿದೆ.
ಹಣಕಾಸು ಆದಾಯ ಹೆಚ್ಚಳಕ್ಕೆ ಪ್ರಯತ್ನಗಳನ್ನು ತೀವ್ರಗೊಳಿಸಲಿದ್ದೀರಿ. ದೀರ್ಘ ಕಾಲದಿಂದ ಕಾಡುತ್ತಿರುವ ಅನಾರೋಗ್ಯ ಸಮಸ್ಯೆಗಳಿಗೆ ಸೂಕ್ತ ವೈದ್ಯರು ದೊರೆಯಲಿದ್ದಾರೆ. ನೇರವಂತಿಕೆ ಇರುವುದು ತಪ್ಪಲ್ಲ, ಆದರೆ ಯಾವುದೇ ವಿಚಾರವನ್ನು ಹೇಳುವುದಕ್ಕೆ ವಿಧಾನ ಇದೆ, ಅದನ್ನು ಆ ರೀತಿ ಹೇಳುವುದನ್ನು ರೂಢಿಸಿಕೊಳ್ಳಿ. ಮಕ್ಕಳ ಸಲುವಾಗಿ ಖರ್ಚು ಮಾಡಲಿದ್ದೀರಿ. ಮನಸ್ಸಿಗೆ ನೆಮ್ಮದಿ ದೊರೆಯಲಿದೆ.
ಯಾರದೋ ಬದಲಾವಣೆಗೆ ನೀವು ಎದ್ದು- ಬಿದ್ದು ಪ್ರಯತ್ನಿಸುವ ಅಗತ್ಯ ಇಲ್ಲ. ಆ ವ್ಯಕ್ತಿಗೆ ತನ್ನ ಏಳ್ಗೆ ಬಗ್ಗೆ ಉತ್ಸಾಹ, ಆಸಕ್ತಿ ಇರಬೇಕು ಎಂಬುದನ್ನು ಅರಿತುಕೊಂಡು, ನೆರವಾಗಿ. ಇನ್ನು ನಿಮ್ಮ ಕೈ ಕೆಳಗೆ ಕೆಲಸ ಮಾಡುವಂಥವರೇ ಆದರೂ ಕಠೋರ ಶಬ್ದಗಳನ್ನು ಬಳಕೆ ಮಾಡದಿರಿ. ಜಿಮ್, ಯೋಗ ಈ ರೀತಿಯದ್ದಕ್ಕೆ ಸೇರಿಕೊಳ್ಳುವ ಕುರಿತು ಯೋಚನೆ ಮಾಡಲಿದ್ದೀರಿ. ಬೇರೆಯವರು ಜತೆಗೆ ಬರಲಿ ಎಂದು ಕಾಯುತ್ತಾ ಕೂರಬೇಡಿ.
ಒಂದು ವಿಚಾರವನ್ನೇ ಧೇನಿಸುತ್ತಾ ಮುಂದವರಿದಲ್ಲಿ ಅದರಲ್ಲಿ ಯಶ ಕಾಣಬಹುದು. ನಿಮಗೇ ಅನುಮಾನ ಇರುವಂಥ, ಅರೆ ಮನಸ್ಸಿನಿಂದ ಯಾವುದೇ ಕೆಲಸ ವಹಿಸಿಕೊಳ್ಳಬೇಡಿ. ಮದುವೆ ನಿಶ್ಚಯ ಆಗಿರುವವರಿಗೆ ಬಹಳ ಉತ್ತಮವಾದ ಸಮಯವನ್ನು ಕಳೆಯುವ ಅವಕಾಶಗಳಿವೆ. ಸ್ವಾದಿಷ್ಟವಾದ ಊಟ- ತಿಂಡಿಗಳನ್ನು ಸವಿಯುವ ಯೋಗ ನಿಮ್ಮ ಪಾಲಿಗೆ ಒದಗಿ ಬರಲಿದೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚಿನ ಜವಾಬ್ದಾರಿ ಹೆಗಲೇರಲಿದೆ.
ಲೇಖನ- ಎನ್.ಕೆ.ಸ್ವಾತಿ
Published On - 6:06 am, Fri, 6 January 23