Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 15ರ ದಿನಭವಿಷ್ಯ 

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 15ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 15ರ ದಿನಭವಿಷ್ಯ 
ಪ್ರಾತಿನಿಧಿಕ ಚಿತ್ರImage Credit source: iStock Photo
Follow us
ಸ್ವಾತಿ ಎನ್​ಕೆ
| Updated By: Rakesh Nayak Manchi

Updated on: Dec 15, 2023 | 1:00 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 15ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಹಣ್ಣಿನ ಬೆಳೆಗಾರರಿಗೆ ಆದಾಯದಲ್ಲಿ ಹೆಚ್ಚಳ ಆಗುವಂತಹ ಮಾರ್ಗಗಳು ಗೋಚರ ಆಗಲಿವೆ. ಕೃಷಿ ಜಮೀನಿನಲ್ಲಿ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಲಿದ್ದೀರಿ. ನಿಮ್ಮಲ್ಲಿ ಕೆಲವರು ಅಧ್ಯಯನ ಪ್ರವಾಸಕ್ಕಾಗಿ ದೂರದ ಊರುಗಳಿಗೆ ತೆರಳುವಂತಹ ಯೋಗ ಇದೆ. ಮನೆಗೆ ಸಾಕುಪ್ರಾಣಿಗಳನ್ನು ತರುವಂತಹ ಸಾಧ್ಯತೆ ಇದೆ. ತಂದೆ ಅಥವಾ ತಂದೆಗೆ ಸಮಾನರಾದವರ ಅನಾರೋಗ್ಯ ಸಮಸ್ಯೆ ಒಂದಿಷ್ಟು ಚಿಂತೆಗೆ ಕಾರಣವಾಗಬಹುದು. ಈ ವಿಚಾರವಾಗಿ ಕುಟುಂಬದಲ್ಲಿ ಗಂಭೀರವಾದ ಚರ್ಚೆಗಳು ಆಗಲಿವೆ. ನಿಮ್ಮಲ್ಲಿ ಕೆಲವರು ಕೆಲಸದಿಂದ ದೀರ್ಘವಾದ ರಜೆ ತೆಗೆದುಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಈಗಾಗಲೇ ಪ್ರಯಾಣ ಮಾಡಬೇಕು ಅಂದುಕೊಂಡು, ಸಿದ್ಧತೆಗಳು ಎಲ್ಲವನ್ನೂ ಮಾಡಿಕೊಂಡು, ಕೊನೆ ಕ್ಷಣದಲ್ಲಿ ಬೇಡ ಅಂದುಕೊಳ್ಳುವ ಸಾಧ್ಯತೆಗಳಿವೆ. ನಿಮ್ಮ ನಿರ್ಧಾರದಿಂದ ಸ್ನೇಹಿತರಿಗೆ ಅಥವಾ ಸಂಬಂಧಿಕರಿಗೆ ಬೇಸರವಾಗಲಿದೆ. ನಿಮ್ಮ ಸಂಬಂಧಿಕರ ಆರ್ಥಿಕ ಪರಿಸ್ಥಿತಿಯ ಬಗ್ಗೆ ಈ ಹಿಂದೆ ಯಾವಾಗಲೋ ನೀವು ಮಾತನಾಡಿದ್ದು ಈ ದಿನ ಸಮಸ್ಯೆಯಾಗಿ ಕಾಣಿಸಿಕೊಳ್ಳಲಿದೆ. ಯಾರದೋ ಮೇಲಿನ ಪ್ರತಿಷ್ಠೆಗಾಗಿ ಈ ದಿನ ನೀವು ವಿಪರೀತ ಖರ್ಚು ಮಾಡಲಿದ್ದೀರಿ. ಯಾರು ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಡುತ್ತಾರೆ ಎಂದು ಬಲವಾಗಿ ನಂಬಿರುತ್ತೀರೋ ಅಂಥವರು ಕೊನೆ ಕ್ಷಣದಲ್ಲಿ ತಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿಬಿಡುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿಮ್ಮ ಸ್ನೇಹಿತರಿಗೆ ಅಥವಾ ಸಂಬಂಧಿಗಳಿಗೆ ಸಹಾಯದ ಅಗತ್ಯ ಬೀಳಲಿದ್ದು, ಅದಕ್ಕಾಗಿ ನಿಮ್ಮ ಬಳಿ ಹಣವನ್ನೋ ವಾಹನವನ್ನೋ ಅಥವಾ ನಿಮ್ಮ ಶಿಫಾರಸ್ಸನ್ನು ಕೇಳಿಕೊಂಡು ಬರುವ ಸಾಧ್ಯತೆಗಳಿವೆ. ಮನೆಯಲ್ಲಿ ಕೆಲವು ದುರಸ್ತಿ ಕಾರ್ಯಗಳನ್ನು ಮಾಡಿಸುವ ಸಲುವಾಗಿ ಸಿವಿಲ್ ಕೆಲಸಗಳನ್ನು ಮಾಡುವಂಥವರ ಜೊತೆಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಪಿತ್ರಾರ್ಜಿತ ಆಸ್ತಿ ವಿಚಾರಗಳು ಈ ದಿನ ಪ್ರಾಮುಖ್ಯ ಪಡೆದುಕೊಳ್ಳಲಿವೆ. ಸೋದರ ಅಥವಾ ಸೋದರಿಯರಿಗೆ ಅಗತ್ಯ ಬೀಳುವಂತಹ ನೆರವನ್ನು ಈ ದಿನ ನೀಡಲಿದ್ದೀರಿ. ಭೂಮಿಗೆ ಸಂಬಂಧಪಟ್ಟಂತೆ ಈ ಹಿಂದೆ ನೀವು ಯಾವಾಗಲೋ ತೆಗೆದುಕೊಂಡ ನಿರ್ಧಾರ ಈಗ ಸರಿ ಎಂದು ಸಾಬೀತಾಗಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ತಮಾಷೆ ಎಂಬಂತೆ ಆರಂಭವಾದ ಮಾತುಕತೆ ದಿಢೀರನೆ ಗಾಂಭೀರ್ಯ ಪಡೆದುಕೊಳ್ಳಲಿದೆ. ನಿಮ್ಮ ಸ್ನೇಹಿತರ ಮಕ್ಕಳು ಅಥವಾ ಪರಿಚಿತರ ಮಕ್ಕಳು ವಯಸ್ಸಿಗೆ ಮೀರಿದಂತಹ ಮಾತುಗಳನ್ನು ಆಡುತ್ತಿದ್ದಾರೆ ಎಂಬ ಕಾರಣಕ್ಕೆ ನಿಮಗೆ ಸಿಟ್ಟು ಬರಲಿದೆ. ತುಂಬಾ ಸಂತೋಷದಿಂದ ಭಾಗೀ ಆಗಿದ್ದ ಪಾರ್ಟಿ ಅಥವಾ ಗೆಟ್ ಟು ಗೆದರ್ ಒಂದು ಬೇಸರದಲ್ಲಿ ಮುಕ್ತಾಯ ಕಾಣಲಿದೆ. ಉದ್ಯೋಗದ ವಿಚಾರವಾಗಿ ಈ ಹಿಂದೆ ನೀವು ತೆಗೆದುಕೊಂಡಿದ್ದ ನಿರ್ಧಾರ ಅಥವಾ ಇನ್ನೊಬ್ಬರಿಗೆ ನೀಡಿದ ಸಲಹೆಯನ್ನು ಮುಂದೆ ಮಾಡಿ, ಅವಮಾನಕ್ಕೆ ಗುರಿ ಮಾಡುವುದಕ್ಕೆ ಕೆಲವರು ಪ್ರಯತ್ನಿಸಲಿದ್ದಾರೆ. ಸಾಧ್ಯವಾದಲ್ಲಿ 10 ನಿಮಿಷ ಧ್ಯಾನ ಮಾಡಿ, ಇದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನೀವು ನಿರೀಕ್ಷೆ ಕೂಡ ಮಾಡದ ರೀತಿಯಲ್ಲಿ ಆದಾಯದ ಮೂಲಗಳು ಕಾಣಿಸಿಕೊಳ್ಳಲಿವೆ. ಕ್ರೀಡಾಪಟುಗಳು ಇದ್ದಲ್ಲಿ ಹಾಗೂ ಒಂದು ವೇಳೆ ಪ್ರಾಯೋಜಕತ್ವಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಈ ದಿನ ನಿಮ್ಮ ಸ್ನೇಹಿತರು ಅಥವಾ ನೀವು ಗುರುಗಳಾಗಿ ಭಾವಿಸುವಂಥವರ ಮೂಲಕವಾಗಿ ಶುಭ ಸುದ್ದಿ ಕೇಳುವ ಯೋಗ ಇದೆ. ವಿದೇಶಗಳಲ್ಲಿ ಉದ್ಯೋಗ ಅಥವಾ ವ್ಯಾಸಂಗಕ್ಕಾಗಿ ಪ್ರಯತ್ನ ಮಾಡುತ್ತಿದ್ದೀರಿ ಅಂತಾದಲ್ಲಿ ಸಂಬಂಧಿಕರಿಂದ ನಿಮಗೆ ದೊಡ್ಡ ಮಟ್ಟದ ಸಹಾಯ ಸಿಗಲಿದೆ. ಯಾರು ವಿವಾಹಕ್ಕಾಗಿ ಪ್ರಯತ್ನ ಮಾಡುತ್ತಿದ್ದೀರಿ ಅಂತಹವರಿಗೆ ಮನಸ್ಸಿಗೆ ಒಪ್ಪುವಂಥ ಕಡೆಯಿಂದ ಸಂಬಂಧ ದೊರೆಯುವ ಸಾಧ್ಯತೆ ಇದೆ. ಯಾವುದೇ ಮುಖ್ಯ ಕೆಲಸದ ನಿಮಿತ್ತ ಮನೆಯಿಂದ ಹೊರಡುವವರು ಗಣಪತಿಯನ್ನು ಮನಸ್ಸಿನಲ್ಲಿ ಆರಾಧನೆ ಮಾಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನನ್ನ ಕೆಲಸವಾದರೆ ಆಯಿತು, ನನಗೆ ಸಮಸ್ಯೆ ಆಗದಿದ್ದರೆ ಸಾಕು, ನನಗೆ ಬರುವ ಲಾಭ ಬಂದರೆ ಸಾಕು – ಈ ರೀತಿಯ ನಿಮ್ಮ ಧೋರಣೆಯಿಂದ ಕೆಲವು ಸಮಸ್ಯೆಗಳನ್ನು ಮಾಡಿಕೊಳ್ಳಲಿದ್ದೀರಿ. ನೀವು ಇನ್ನೊಬ್ಬರ ಬಗ್ಗೆ ಹಗುರವಾಗಿ ಆಡಿದ ಮಾತನ್ನು ನಿಮಗೆ ಪರಿಚಿತರೇ ಸಂಬಂಧಪಟ್ಟ ವ್ಯಕ್ತಿಯ ಎದುರು ಚಾಡಿಯಾಗಿ ಹೇಳಲಿದ್ದಾರೆ. ನಿಮ್ಮ ಅತಿಯಾದ ಆತ್ಮವಿಶ್ವಾಸವೇ ಮುಳುವಾಗಲಿದೆ. ಯಾರು ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದೀರೋ ಅಂಥವರಿಗೆ ನಿಮ್ಮ ಜವಾಬ್ದಾರಿಯಲ್ಲಿ ಕೆಲವು ಬದಲಾವಣೆಗಳು ಆಗಬಹುದು. ನೀವು ಈ ಹಿಂದೆ ಕೆಲಸ ಮಾಡಿದ್ದ ಸಂಸ್ಥೆಗಳಿಂದಲೇ ಉದ್ಯೋಗಕ್ಕೆ ಆಫರ್ ಕೂಡ ಬರುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಹೊಸ ಮನೆ, ಅಪಾರ್ಟ್ ಮೆಂಟ್ ಅಥವಾ ಕೃಷಿ ಭೂಮಿ ಖರೀದಿ ಮಾಡಬೇಕು ಎಂದುಕೊಂಡು ಪ್ರಯತ್ನ ಮಾಡುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಅವಕಾಶಗಳು ಈ ದಿನ ಹೆಚ್ಚಾಗಿವೆ. ಹೊಸದಾಗಿ ಪರಿಚಯ ಆದ ವ್ಯಕ್ತಿಗಳಿಂದ ನಿಮಗೆ ಕೆಲವು ಅನುಕೂಲಗಳು ಒದಗಿ ಬರಲಿವೆ. ಮನೆಯಲ್ಲಿ ಕೆಲವು ಶುಭ ಕಾರ್ಯಗಳನ್ನು ಆಯೋಜಿಸುವ ಬಗ್ಗೆ ಚರ್ಚೆ ನಡೆಸಲಿದ್ದೀರಿ. ಬೆನ್ನು ನೋವು ಅಥವಾ ತೀವ್ರತರವಾದ ಕಾಲು ನೋವು ಕಾಡುತ್ತಿರುವವರಿಗೆ ಸೂಕ್ತ ವೈದ್ಯೋಪಚಾರ ದೊರೆಯುವ ಯೋಗ ಇದೆ. ನಿಮ್ಮಲ್ಲಿ ಕೆಲವರಿಗೆ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸುವಂತಹ ಯೋಗ ಇದೆ. ನಿಮಗೆ ಸಮಸ್ಯೆ ಮಾಡಬೇಕು ಅಂದುಕೊಂಡು ಆಲೋಚಿಸುತ್ತಿರುವವರು ತಾವೇ ಸಮಸ್ಯೆಗಳಿಗೆ ಸಿಲುಕಿಕೊಳ್ಳಲಿದ್ದಾರೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮಲ್ಲಿ ಕೆಲವರು ಬ್ರಾಂಡೆಡ್ ಬಟ್ಟೆಗಳು ಅಥವಾ ಶೂ ಅಥವಾ ವಾಚ್ ಗಳನ್ನು ಖರೀದಿಸುವಂತಹ ಸಾಧ್ಯತೆಗಳಿವೆ. ಅದರಲ್ಲೂ ದೂರ ಪ್ರಯಾಣ ಮಾಡಬೇಕು ಎಂದು ಸಿದ್ಧತೆ ನಡೆಸುತ್ತಿರುವವರು ಈ ರೀತಿಯಾದ್ದನ್ನು ಖರೀದಿಸುವ ಅವಕಾಶಗಳು ಹೆಚ್ಚಿವೆ. ಯಾವುದನ್ನು ನಿಮ್ಮ ಕೈ ಅಳತೆಯಲ್ಲೇ ಇದೆ ಅದನ್ನು ಯಾವಾಗ ಬೇಕಾದರೂ ಪಡೆದುಕೊಳ್ಳಬಹುದು ಅಂದುಕೊಂಡಿರುತ್ತೀರೋ ಅಂಥ ವಿಚಾರದಲ್ಲಿ ಪರಿಸ್ಥಿತಿಯು ನೀವು ಭಾವಿಸಿದ ರೀತಿಯಲ್ಲಿ ಇಲ್ಲ ಎಂಬುದು ಈ ದಿನ ಮನದಟ್ಟಾಗಲಿದೆ. ಸಂಗಾತಿಯ ಕುಟುಂಬದ ಕಡೆ ನಡೆಯುವಂತಹ ಶುಭಕಾರ್ಯಗಳಿಗೆ ಅಥವಾ ಸಮಾರಂಭಗಳಿಗೆ ಹೆಚ್ಚು ಓಡಾಟ ನಡೆಸಬೇಕಾಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಇತರರಿಗೆ ಯಾವುದಾದರೂ ಕೆಲಸವನ್ನು ಮಾಡಿಕೊಡುವುದಾಗಿ ಮಾತು ನೀಡುವ ಮುನ್ನ ಅದರ ಸಾಧ್ಯ ಅಸಾಧ್ಯತೆಗಳನ್ನು ಆಲೋಚನೆ ಮಾಡಿ. ಏಕೆಂದರೆ ಕೆಲವು ಕೆಲಸಗಳು ಮೇಲ್ನೋಟಕ್ಕೆ ಕಾಣಿಸುವಷ್ಟು ಸಲೀಸಾಗಿರುವುದಿಲ್ಲ. ಯಾರು ಟೂರಿಸ್ಟ್ ಆಪರೇಟರ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದೀರೋ ಈ ದಿನ ನಿಮ್ಮದಲ್ಲದ ತಪ್ಪಿಗೆ ಅಪರಾಧಿ ಸ್ಥಾನದಲ್ಲಿ ನಿಲ್ಲುವಂಥ ಪರಿಸ್ಥಿತಿ ಎದುರಾಗಲಿದೆ. ಎಲ್ಲರನ್ನೂ ಒಪ್ಪಿಸಿ, ಒಂದು ತೀರ್ಮಾನಕ್ಕೆ ಬರುವಂತಹ ಜವಾಬ್ದಾರಿಯನ್ನು ನಿಮ್ಮ ಮೇಲೆ ಯಾರಾದರೂ ವಹಿಸಿದಲ್ಲಿ ಅದನ್ನು ಒಪ್ಪಿಕೊಳ್ಳಲು ಹೋಗಬೇಡಿ. ಮನೆಯಲ್ಲಿರುವ ಬೆಲೆ ಬಾಳುವ ವಸ್ತುಗಳ ಕಡೆಗೆ ಈ ದಿನ ಹೆಚ್ಚಿನ ನಿಗಾ ಇರಲಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ