Virgo Yearly Horoscope 2024: ಕನ್ಯಾ ರಾಶಿ ವರ್ಷ ಭವಿಷ್ಯ; ನಿಮ್ಮ ಜೀವನ ಕುಂಟುತ್ತ, ಏರುತ್ತ ಇಳಿಯುತ್ತ ವಾರ್ಷಿಕ ಭವಿಷ್ಯ ಇಲ್ಲಿದೆ
ಕನ್ಯಾ ರಾಶಿ ವರ್ಷ ಭವಿಷ್ಯ 2024: ಈ ವರ್ಷದ ಮಧ್ಯಾವಧಿಯ ವರೆಗೆ ನಿಮ್ಮ ಜೀವನ ಕುಂಟುತ್ತ, ಏರುತ್ತ ಇಳಿಯುತ್ತ, ಡೋಲಾಯಮಾನವಾಗಿ ಒಂದು ಸರಿಯಾದ ದಿಕ್ಕಿನತ್ತ ಸಾಗುವುದಿಲ್ಲ. ಒತ್ತಡಗಳು ನಿಮ್ಮ ಮನಸ್ಸನ್ನು ಒಂದೆಡೆ ನಿಲ್ಲಿಸಲು ಬಿಡದು. ಅನಂತರ ನಿಮ್ಮ ಪ್ರಯಾಣ ಒಂದೊಂದೇ ಸೋಪಾನವನ್ನು ಏರಿ ಉನ್ನತ ಮಟ್ಟಕ್ಕೆ ಏರುವುದು.
ರಾಶಿಚಕ್ರದ ಆರನೆ ರಾಶಿ ಕನ್ಯಾ. ವರ್ಷಾರಂಭದಲ್ಲಿ ಗುರುಬಲವು ನಿಮಗೆ ಇರದು. ಹಾಗಾಗಿ ಮುಂದೆ ಹೆಜ್ಜೆ ಹಾಕಲು, ಹಾಕಿದ ಹೆಜ್ಜೆಯನ್ನು ದೃಢ ಮಾಡಿಕೊಳ್ಳಲು, ಸಮಯ ಬೇಕಾಗುವುದು. ಸಪ್ತಮದಲ್ಲಿ ರಾಹು, ಸ್ವಸ್ಥಾನದಲ್ಲಿ ಕೇತು, ರಾಶಿಯ ಅಧಿಪತಿಯೂ ದಶಮಾಧಿಪತಿಯೂ ಆದ ಬುಧನು ಚತುರ್ಥದಲ್ಲಿ ಗುರುವಿನ ಮನೆಯಲ್ಲಿ ಸೂರ್ಯನ ಜೊತೆ ಇರುವನು.
2024ರ ಕನ್ಯಾ ರಾಶಿಯ ಭವಿಷ್ಯ
ಈ ವರ್ಷದ ಮಧ್ಯಾವಧಿಯ ವರೆಗೆ ನಿಮ್ಮ ಜೀವನ ಕುಂಟುತ್ತ, ಏರುತ್ತ ಇಳಿಯುತ್ತ, ಡೋಲಾಯಮಾನವಾಗಿ ಒಂದು ಸರಿಯಾದ ದಿಕ್ಕಿನತ್ತ ಸಾಗುವುದಿಲ್ಲ. ಒತ್ತಡಗಳು ನಿಮ್ಮ ಮನಸ್ಸನ್ನು ಒಂದೆಡೆ ನಿಲ್ಲಿಸಲು ಬಿಡದು. ಅನಂತರ ನಿಮ್ಮ ಪ್ರಯಾಣ ಒಂದೊಂದೇ ಸೋಪಾನವನ್ನು ಏರಿ ಉನ್ನತ ಮಟ್ಟಕ್ಕೆ ಏರುವುದು.
ಧನಾಗಮನ :
ಧನಾಧಿಪತಿಯಾದಿ ಶುಕ್ರನು ವರ್ಷಾರಂಭ ತೃತೀಯಸ್ಥಾನದಲ್ಲಿದ್ದು ಸಹೋದರನಿಂದ ನಿಮ್ಮ ಕೆಲಸಗಳಿಗೆ ಧನಸಹಾಯವನ್ನು ಪಡೆಯಬಹುದು. ಏಪ್ರಿಲ್ ತಿಂಗಳ ಸಮಯಕ್ಕೆ ದ್ವಿತೀಯದ ಅಧಿಪತಿಯು ಉಚ್ಚ ಸ್ಥಾನ ಎಂದರೆ ಮೀನರಾಶಿಗೆ ಹೋಗುವುದರಿಂದ ನಿಮ್ಮ ಕಾಮನೆಗಳನ್ನು ಪೂರೈಸಿಕೊಳ್ಳುವಿರಿ.
ಪ್ರೀತಿ ಮತ್ತು ವಿವಾಹ
ಜನವರಿಯಲ್ಲಿ ಶುಕ್ರನು ಕುಜನ ಸ್ಥಾನದಲ್ಲಿ ಇರಲಿದ್ದು ಪ್ರೀತಿಯು ಉಂಟಾಗುವುದು. ಮಾರ್ಚ್ ನಲ್ಲಿ ನಿಮ್ಮ ವಿವಾಹವು ನಿಶ್ಚಿತವಾಗಿ ಗುರುಬಲವು ಬಂದಾಗ ವಿವಾಹವೂ ಆಗಲಿದೆ. ವಿವಾಹಕ್ಕೆ ಮೊದಲು ಸರಿಯಾದ ಪರೀಕ್ಷೆಯನ್ನು ಮಾಡಿಕೊಳ್ಳುವುದು ಉತ್ತಮ.
ವೃತ್ತಿ :
ವೃತ್ತಿಯ ಅಧಿಪತಿ ವರ್ಷಾರಂಭದಲ್ಲಿ ತೃತೀಯದಲ್ಲಿ ಇರುವನು. ತಂತ್ರಜ್ಞರಿಗೆ ಹೆಚ್ಚು, ಶಿಕ್ಷಣ ವೃತ್ತಿಯಲ್ಲಿ ಕಾರ್ಯವನ್ನು ಮಾಡುವವರಿಗೆ ಮಾಧ್ಯಮದಲ್ಲಿ ಕಾರ್ಯವನ್ನು ಮಾಡುವವರಿಗೆ ಪ್ರಶಂಸೆ ಹಾಗೂ ಉನ್ನತ ಸ್ಥಾನ ಮಾಪನಗಳನ್ನು ಪಡೆಯುವಿರಿ. ಏಪ್ರಿಲ್ ನಲ್ಲಿ ನಿಮ್ಮ ಬುದ್ಧಿಯನ್ನು ಸ್ತಿಮಿತದಲ್ಲಿ ಇರಿಕೊಳ್ಳಿ. ಬುದ್ಧಿವಂತಿಕೆಯನ್ನು ತೋರಿಸಲು ಹೋಗಿ ಮುಗ್ಗರಿಸಿಬೇಕಾದೀತು.
ಆರೋಗ್ಯ ಸ್ಥಿತಿ :
ಆರೋಗ್ಯದ ಸ್ಥಾನದಲ್ಲಿ ಶನಿಯು ಇದ್ದು ನಿಮ್ಮ ಆರೋಗ್ಯವನ್ನು ಸ್ಥಿರಗೊಳಿಸುವನು. ಆದರೆ ಅಷ್ಟಮಸ್ಥಾನವು ಕುಜನದ್ದಾಗಿರುವ ಕಾರಣ ಆಯುಧ, ವಾಹನ, ವಿದ್ಯುತ್ ಉಪಕರಣಗಳ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ಅವಶ್ಯಕ. ಹುಂಬುತನದಿಂದ ತೊಂದರೆಯನ್ನು ತಂದುಕೊಳ್ಳುವಿರಿ.
ಮಹಾವಿಷ್ಣುವಿನ ಆರಾಧನೆಯನ್ನು ಸಾಧ್ಯವಾದಷ್ಟು ಮಾಡಿ.
ಲೋಹಿತ ಹೆಬ್ಬಾರ್, ಇಡುವಾಣಿ
Published On - 6:35 pm, Fri, 15 December 23