ಶ್ರವಣ ನಕ್ಷತ್ರದಲ್ಲಿ ಸೂರ್ಯ, ಬುಧ, ಶುಕ್ರ ಮತ್ತು ಮಂಗಳ ಸಂಯೋಗ; ಜ್ಯೋತಿಷ್ಯ ವಿಶ್ಲೇಷಣೆ ಪ್ರಕಾರ ಇವರಿಗೆಲ್ಲಾ ಲಾಭ

Quadrille Planetary Alignment 2026: ಮಂಗಳ ಗ್ರಹ ಮತ್ತು ಸೂರ್ಯ ಗ್ರಹ ಮಿತ್ರ ಗ್ರಹರಾದರೂ ಶ್ರವಣ ನಕ್ಷತ್ರದಲ್ಲಿ ಅವರ ಸಂಯೋಗದಿಂದ ಮೇಷ ರಾಶಿಯಿಂದ ಮೀನ ರಾಶಿಯವರೆಗಿನ ಜನರ ಮೇಲೆ ಆಗುವ ಪರಿಣಾಮ ಬೇರೆ ಬೇರೆ ಇರಲಿದೆ. ಇದರಲ್ಲಿ ಅಂಗಾರಕ ದೋಷದ ಪ್ರಭಾವವಿರಬಹುದಾದ್ದರಿಂದ ಈ ಚತುರ್ಗ್ರಹ ಸಂಯೋಗಗೊಂಡ ಅವಧಿಯಲ್ಲಿ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತಿ ಮುಖ್ಯ. ಖುದ್ದು ಜ್ಯೋತಿಷಿಗಳ ಬಳಿ ಜಾತಕ ಪರಿಶೀಲಿಸಿಕೊಳ್ಳುವುದು ಒಳ್ಳೆಯದು.

ಶ್ರವಣ ನಕ್ಷತ್ರದಲ್ಲಿ ಸೂರ್ಯ, ಬುಧ, ಶುಕ್ರ ಮತ್ತು ಮಂಗಳ ಸಂಯೋಗ; ಜ್ಯೋತಿಷ್ಯ ವಿಶ್ಲೇಷಣೆ ಪ್ರಕಾರ ಇವರಿಗೆಲ್ಲಾ ಲಾಭ
ಚತುರ್ಗ್ರಹ ಸಂಯೋಗ
Image Credit source: mediabakery.com
Edited By:

Updated on: Jan 30, 2026 | 2:02 PM

ಗ್ರಹಗಳು ಒಂದೇ ರಾಶಿಯಲ್ಲಿ ಬರುವುದು ಒಂದಾದರೆ, ಒಂದೇ ನಕ್ಷತ್ರದಲ್ಲಿ ಇರುವುದು ಮತ್ತೂ ಸಾಮಿಪ್ಯವನ್ನು ಹೇಳುತ್ತದೆ. ಒಂದೇ ಪಾದವಂತೂ ನಿಕಟವರ್ತಿತ್ವದ ಸೂಚಕ. ಈ ವಾರ ಸೂರ್ಯ, ಬುಧ, ಶುಕ್ರ ಮತ್ತು ಮಂಗಳ ಈ ನಾಲ್ಕು ಪ್ರಮುಖ ಗ್ರಹಗಳು ಶ್ರವಣ ನಕ್ಷತ್ರದಲ್ಲಿ ಅಂದರೆ ಮಕರ ರಾಶಿಯಲ್ಲಿ ಒಂದೇ ಬಾರಿಗೆ ಸಂಧಿಸಿದಾಗ ಅದು ಅತ್ಯಂತ ಪ್ರಭಾವಶಾಲಿ ಸಮಯವಾಗಿರುತ್ತದೆ. ಶ್ರವಣ ನಕ್ಷತ್ರವು ಚಂದ್ರನ ಆಧಿಪತ್ಯದಲ್ಲಿದ್ದು, ಮನಸ್ಸು, ತಾಯಿ, ನೀರಿಗೆ ಸಂಬಂಧಿಸಿದ ವಿಚಾರ, ಜ್ಞಾನ ಮತ್ತು ಶಿಸ್ತಿನ ಸಂಕೇತವಾಗಿದೆ. ​ಈ ಸಂಯೋಜನೆಯಿಂದ ಜ್ಯೋತಿಷ್ಯ ರಿತ್ಯಾ ಬಗ್ಗೋಣ ಪಂಚಾಂಗ ವಿಶ್ಲೇಷಣೆಯ ಪ್ರಕಾರ ಯಾವ ರಾಶಿಗಳಿಗೆ ಏನು ಫಲ ಇಲ್ಲಿದೆ:

ಶುಭ ಫಲ ರಾಶಿಗಳು

​ಮಕರ:
ನಿಮ್ಮದೇ ರಾಶಿಯಲ್ಲಿ ಗ್ರಹಗಳ ಸಮ್ಮಿಲನವಿರುವುದರಿಂದ ಆತ್ಮವಿಶ್ವಾಸ ಹೆಚ್ಚಲಿದೆ. ವೃತ್ತಿಯಲ್ಲಿ ದೊಡ್ಡ ಬದಲಾವಣೆ ಮತ್ತು ಗೌರವ ಪ್ರಾಪ್ತಿಯಾಗಲಿದೆ.

ವೃಷಭ:
ಭಾಗ್ಯ ಸ್ಥಾನದಲ್ಲಿ ಈ ಗ್ರಹಗಳಿರುವುದರಿಂದ ಅದೃಷ್ಟ ಒಲಿಯಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮತ್ತು ವಿದೇಶ ಪ್ರಯಾಣದ ಯೋಗವಿದೆ.

ಕನ್ಯಾ:
ಪಂಚಮ ಸ್ಥಾನದಲ್ಲಿ ಈ ಸಂಯೋಜನೆ ಇರುವುದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಜಯ, ಮಕ್ಕಳಿಂದ ಸುಖ ಮತ್ತು ಆಕಸ್ಮಿಕ ಧನಲಾಭವಾಗಲಿದೆ.

ಮಿಶ್ರ ಫಲ ರಾಶಿಗಳು

​ಮೇಷ:
ದಶಮ ಸ್ಥಾನದಲ್ಲಿ ಗ್ರಹಗಳಿರುವುದರಿಂದ ಕೆಲಸದಲ್ಲಿ ಒತ್ತಡವಿದ್ದರೂ ಯಶಸ್ಸು ಸಿಗಲಿದೆ.

​ಕರ್ಕಾಟಕ:
ಸಪ್ತಮ ಸ್ಥಾನದಲ್ಲಿ ಗ್ರಹಗಳಿರುವುದರಿಂದ ವೈವಾಹಿಕ ಜೀವನದಲ್ಲಿ ಮಿಶ್ರ ಫಲ ಇರಲಿದೆ. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರಬಹುದು.

​ವೃಶ್ಚಿಕ:
ಧೈರ್ಯ ಹೆಚ್ಚಲಿದೆ, ಆದರೆ ಸಹೋದರರೊಂದಿಗೆ ಜಾಗರೂಕತೆಯಿಂದ ಇರಿ.

​ಅಶುಭ ಫಲ ರಾಶಿಗಳು

​ಧನು:
ದ್ವಿತೀಯ ಸ್ಥಾನದಲ್ಲಿ ಮಂಗಳ ಮತ್ತು ಸೂರ್ಯ ಇರುವುದರಿಂದ ಮಾತಿನಲ್ಲಿ ಕಟುತ್ವ ಬರಬಹುದು. ಕುಟುಂಬದಲ್ಲಿ ಕಲಹ ಸಾಧ್ಯತೆ, ಹಣಕಾಸಿನ ವ್ಯಯವಾಗಬಹುದು.

​ಮಿಥುನ:
ಅಷ್ಟಮ ಸ್ಥಾನದಲ್ಲಿ ಈ ಗ್ರಹಗಳಿರುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವಾಹನ ಚಾಲನೆಯಲ್ಲಿ ಜಾಗ್ರತೆ ಅಗತ್ಯ.

​ಕುಂಭ:
ವ್ಯಯ ಸ್ಥಾನದಲ್ಲಿ ಗ್ರಹಗಳಿರುವುದರಿಂದ ಅನಗತ್ಯ ಖರ್ಚುಗಳು ಹೆಚ್ಚಾಗಲಿವೆ ಮತ್ತು ನಿದ್ರಾಹೀನತೆ ಕಾಡಬಹುದು.

 

– ಲೋಹಿತ ಹೆಬ್ಬಾರ್