Astrology: ರಾಶಿ ಭವಿಷ್ಯ: ಇಂದು ಕೋಪವನ್ನು ಆದಷ್ಟು ನಿಯಂತ್ರಣಕ್ಕೆ ತಂದುಕೊಳ್ಳಿ
ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಆಗಸ್ಟ್.21 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಸೋಮವಾರ(ಆಗಸ್ಟ್. 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಅತಿಗಂಡ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:50 ಗಂಟೆ, ರಾಹು ಕಾಲ ಮಧ್ಯಾಹ್ನ 12:36 ರಿಂದ ಸಂಜೆ 14:09, ಯಮಘಂಡ ಕಾಲ ಬೆಳಿಗ್ಗೆ 07:54 ರಿಂದ 09:28ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 11:02 ರಿಂದ 12:36ರ ವರೆಗೆ.
ಸಿಂಹ ರಾಶಿ : ಇಂದು ಅನಿರೀಕ್ಷಿತ ಬಂಧುಗಳ ಆಗಮನದಿಂದ ಯೋಜಿತವಾದ ಕಾರ್ಯಗಳನ್ನು ಬದಲಿಸುವುದು ಬೇಡ. ನಿಮ್ಮ ಇಚ್ಛಾಶಕ್ತಿಯು ನಿಮ್ಮ ಇಂದಿನ ಮೇಲಧಿಕಾರಿಗಳಿಗೆ ಖುಷಿಯಾಗುವಂತೆ ನಡೆದುಕೊಳ್ಳುವಿರಿ. ಸುಲಭದ ವಿಚಾರವನ್ನು ಬಹಳ ಸಂಕೀರ್ಣ ಮಾಡಿಕೊಳ್ಳಲಿದ್ದೀರಿ. ನಿಮ್ಮ ಬಗ್ಗೆ ಇರುವ ಭಾವನೆಗಳು ಬದಲಾಗಬಹುದು. ಸಂಗಾತಿಯ ವಿಚಾರದಲ್ಲಿ ನೀವು ತಟಸ್ಥರಾಗುವಿರಿ. ಭೂಮಿಯಿಂದ ಬರುವ ಲಾಭವನ್ನು ಉಳಿತಾಯ ಮಾಡುವ ಬಗ್ಗೆ ಇರುವುದು. ಕುಟುಂಬದಲ್ಲಿ ನಿಮ್ಮ ವಿಚಾರಕ್ಕೆ ಕಲಹವಾಗಬಹುದು. ಸರಿಯಾದ ಮಾಹಿತಿಯನ್ನು ಅವರಿಗೆ ನೀಡಿ. ಮಾನಸಿಕವಾಗಿ ನೀವು ದುರ್ಬಲರಾಗುವಿರಿ. ನಿನ್ನೆಯ ಘಟನೆಯನ್ನು ನೆನಪಿಸಿಕೊಳ್ಳದೇ ಕಾರ್ಯಪ್ರವೃತ್ತರಾಗಿ. ಕಾನೂನಿನ ವಿಚಾರದಲ್ಲಿ ನಿರ್ದಿಷ್ಟತೆ ಇರಲಿ. ಇಂದೇ ಕಾರ್ಯವನ್ನು ಎರಡು ರೀತಿಯ ಲಾಭವಾಗುವಂತೆ ನೋಡಿಕೊಳ್ಳುವಿರಿ.
ಕನ್ಯಾ ರಾಶಿ : ನೀವು ಇಂದು ಯಾವುದಾದರೂ ಸತ್ಕಾರ್ಯದಲ್ಲಿ ಜೋಡಿಸಿಕೊಳ್ಳುವಿರಿ. ಹೂಡಿಕೆಯು ನಿಮ್ಮ ಆರ್ಥಿಕತೆಯನ್ನು ಹೆಚ್ಚಿಸುವುದು. ಏಕಾಂಗಿಯಾಗಿ ನೀವು ಎಲ್ಲಿಗಾದರೂ ಹೋಗುವಿರಿ. ನಿಮ್ಮ ವಸ್ತುವನ್ನು ಸ್ನೇಹಿತರಿಗೆ ಕೊಟ್ಟಿದ್ದು ಅದನ್ನು ಪಡೆಯಲು ನೀವು ಕಷ್ಟ ಪಡುವಿರಿ. ಕಾನೂನಿಗೆ ಮೊರೆ ಹೋಗಿ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಯಾವ ಮೂಲದಿಂದ ಹಣ ಬಂದರೂ ಅದನ್ನು ಸ್ವೀಕರಿಸುವಿರಿ. ನಿಮ್ಮ ವಂಶಸ್ಥರ ಜೊತೆ ಸಮಯವನ್ನು ಕಳೆಯುವಿರಿ. ಮನೆಯಿಂದ ಇಂದು ಹೊರಗೆ ಇರಬೇಕಾದೀತು. ಉದ್ಯೋಗದಲ್ಲಿ ನಿಮಗಿರುವ ಗೊಂದಲವು ಪರಿಹಾರವಾಗಿ ನಿಶ್ಚಿಂತೆಯಿಂದ ಕಾರ್ಯವನ್ನು ಮಾಡುವಿರಿ. ನಿಮ್ಮ ಬಗ್ಗೆ ಇರುವ ಭಾವನೆ ಬದಲಾಗುವುದು. ಪ್ರೇಯಸಿಯನ್ನು ಕಾಣದೇ ಬೇಸರಿಸುವಿರಿ. ನೆನಪಿನ ಶಕ್ತಿಗೆ ಸೂಕ್ತವಾದ ಪರಿಹಾರವನ್ನು ಮೊದಲು ಮಾಡಿಕೊಳ್ಳುವುದು ಉತ್ತಮ. ನಿಮ್ಮ ಭಾವದಂತೆ ಭವಿಷ್ಯವೂ ಇರಲಿದೆ. ಮಾತುಗಾರರು ಎಂದಿನ ವಾಚಾಳಿತನವನ್ನು ಕಡಿಮೆಮಾಡುವರು.
ತುಲಾ ರಾಶಿ : ನಿಮ್ಮ ಪ್ರಯತ್ನವು ಹೇಗೇ ಇದ್ದರೂ ದೈವದ ಯೋಜನೆ ಬೇರೆಯೇ ಇರುತ್ತದೆ. ನಿಮ್ಮ ಸಮಯವನ್ನು ಸ್ನೇಹಿತರು ವ್ಯರ್ಥಮಾಡಿಯಾರು. ವೃತ್ತಿಯಲ್ಲಿ ಯಾರಾದರೂ ಕೋಪವನ್ನು ತರಿಸಬಹುದು. ಬಾಲ್ಯ ಸ್ನೇಹಿತ ಏಳ್ಗೆಯನ್ನು ಕೇಳಿ ನಿಮಗೆ ಅಸೂಯೆ ಉಂಟಾಗಬಹುದು. ವಾಹನ ಖರೀದಿಯನ್ನು ನೀವು ಮುಂದೂಡುವಿರಿ. ಧನವನ್ನು ಕೇಳಿ ಬಂದವರಿಗೆ ನೀಡಲಿದ್ದೀರಿ. ಸುಳ್ಳಾಡಿ ನೀವು ಯಾವುದಾದರೂ ಲಾಭವನ್ನು ಮಾಡಿಕೊಳ್ಳುವಿರತಿ. ಸಿಟ್ಟು ಬರುತ್ತದೆ ಎಂದು ಗೊತ್ತಿದ್ದರೂ ಅದನ್ನು ನಿಗ್ರಹಿಸಲು ಶ್ರಮವಹಿಸದೇ ಇರುವುದು ವಿಷಾದಕರ ಸಂಗತಿಯಾಗುವುದು. ಸ್ನೇಹಿತರ ನಡುವೆ ಸೈದ್ಧಾಂತಿಕ ಭಿನ್ನತೆ ಬರುವುದು. ಕೆಲವನ್ನು ಅಳೆದು ತೂಗಿ ಮಾತಾನಾಡಿದರೆ ಮಾತ್ರ ನೀವು ಎಲ್ಲರ ಜೊತೆ ಸೌಹಾರ್ದದಿಂದ ಇರಲು ಸಾಧ್ಯ. ಸಂಗಾತಿಯಿಂದ ಧನಸಹಾಯವನ್ನು ಪಡೆಯುವಿರಿ. ಉದ್ಯೋಗವನ್ನು ಬಿಡುವ ಆಲೋಚನೆ ಇದ್ದು, ಮನೆಯ ಸ್ಥಿತಿಯನ್ನು ಕಂಡು ಈ ತೀರ್ಮಾನಕ್ಕೆ ಬರುವುದು ಉತ್ತಮ.
ವೃಶ್ಚಿಕ ರಾಶಿ : ನಿಮ್ಮ ಅಂತರಂಗದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಯೋಚಿಸುವಿರಿ. ಇನ್ನೊಬ್ಬರ ಏಳ್ಗೆಯನ್ನು ಕಂಡು ಮನಸ್ಸಿನಲ್ಲಿ ಸಂಕಟಪಡುವಿರಿ. ಹಿರಿಯರಿಗೆ ಎದುರಾಡುವುದನ್ನು ಕಡಿಮೆ ಮಾಡಿ. ಮಾತಿನಿಂದ ನೀವು ಅನೇಕ ಉತ್ತಮವಾದ ವಿಷಯವನ್ನು ಕಳೆದುಕೊಳ್ಳುವಿರಿ. ಕೋಪವನ್ನು ಆದಷ್ಟು ನಿಯಂತ್ರಣಕ್ಕೆ ತಂದುಕೊಳ್ಳಿ. ಎಲ್ಲವೂ ಗೊತ್ತಿದ್ದರೂ ಏನೂ ಗೊತ್ತಿರದಂತೆ ವರ್ತಿಸುವಿರಿ. ಆ ಸಮಯಕ್ಕೆ ನಿಮಗೆ ಇಷ್ಟವಾದ ಸಂಗತಿಯನ್ನು ಮಾಡಿ. ನಿಮ್ಮ ಹಣವೇ ಆದರೂ ಸಮಯಕ್ಕೆ ಸರಿಯಾಗಿ ಸಿಗದೇಹೋಗಬಹುದು. ನೀವು ಇಂದು ಸೌಂದರ್ಯಕ್ಕೆ ಮನಸೋಲಬಹುದು. ಅನಪೇಕ್ಷಿತ ವಿಷಯವನ್ನು ಮರೆತುಬಿಡಿ. ಆಯ್ಕೆಗಳ ವಿಚಾರದಲ್ಲಿ ನೀವು ಹಿಂದುಳಿಯಬಹುದು. ಲಾಭಾಕ್ಕಾಗಿ ವ್ಯಾಪಾರದಲ್ಲಿ ಹೊಸದಾದ ಆಕರ್ಷ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಮೇಲಧಿಕಾರಿಗಳಿಗೆ ನಿಮ್ಮ ಕಾರ್ಯದ ಒತ್ತಡವನ್ನು ವಿವರಿಸುವಿರಿ.




