ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಮಂಗಳವಾರ (ಜೂನ್ 25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಜ್ಯೇಷ್ಠಾ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಶ್ರವಣಾ, ಯೋಗ: ವೈಧೃತಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ 15:50 ರಿಂದ 17:27ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:21 ರಿಂದ 10:58ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:35 ರಿಂದ 14:13ರ ವರೆಗೆ.
ಮೇಷ ರಾಶಿ :ಇಂದು ನಿಮಗೆ ಗೊತ್ತಿಲ್ಲದೇ ಸುಕೃತವು ನಿಮ್ಮನ್ನು ಸೇರಿಸುವ ಸ್ಥಳಕ್ಕೆ ಸೇರಿಸುವುದು. ಕೆಲವೇ ಕೆಲವು ಮಿತ್ರರ ಬಳಗವನ್ನು ಹೊಂದಿರುವಿರಿ. ನಿಮಗೆ ಎಂದು ಯಾರ ಬಳಿಯೂ ಏನನ್ನೂ ಹೇಳಬೇಕು ಎಂದು ಅನ್ನಿಸದಿರಬಹುದು. ನಿಮ್ಮ ಬಗ್ಗೆ ಹಗುರವಾದ ಮಾತುಗಳು ಬರಬಹುದು. ಖಾಸಗಿ ಉದ್ಯೋಗದಲ್ಲಿ ಇದ್ದವರಿಗೆ ಮುಖ್ಯವಾದ ಅಧಿಕಾರ ಸಿಗಲಿದೆ. ವೈಯಕ್ತಿಕ ಜೀವನವನ್ನು ಕೆಲವರು ಅನುಸರಿಸಲು ಇಷಗಟಪಡಬಹುದು. ನೀವಂದಕೊಂಡಿದ್ದೇ ಸತ್ಯ ಎಂಬುದನ್ನು ಬಿಟ್ಟು ಸಂತೋಷದದಿಂದ ಮಾತನಾಡಿ. ನಗುಮುಖವು ನಿಮ್ಮನ್ನು ಮತ್ತಷ್ಡು ಆಪ್ತವಾಗಿಸೀತು. ಪ್ರಾಮಾಣಿಕವಾದ ಪ್ರಯತ್ನವು ಇರಲಿ. ಸುಲಭವಾದ ಕಾರ್ಯವನ್ನು ಮೊದಲು ಮಾಡಿ ಮುಗಿಸಿ. ಫಲವೂ ಉತ್ತಮವಾದುದೇ ಸಿಗುವುದು. ಹೆಚ್ಚಿನ ನೀರಿಕ್ಷೆಯನ್ನು ಮಾಡಿ ಕೊರಗಬೇಡಿ ಆನಂತರದ ಜೀವನದಲ್ಲಿ.
ನೀವು ಯಾರಿಂದಲೂ ಸಲಹೆಯನ್ನು ಪಡೆಯಲು ಇಷ್ಟಪಡುವುದಿಲ್ಲ.
ವೃಷಭ ರಾಶಿ :ಮನಸ್ಸಿನ ನಿಯಂತ್ರಣದಿಂದ ಇಂದಿನ ಎಲ್ಲ ಒತ್ತಡವನ್ನೂ ಸರಿಮಾಡಿಕೊಳ್ಳುವಿರಿ. ಅತಿಯಾದ ಪ್ರಯಾಣದಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ಕುಟುಂಬದ ವಿರೋಧದ ನಡುವೆಯೂ ನೀವು ನಿಮ್ಮ ಕೆಲಸವನ್ನು ಮಾಡಿಕೊಳ್ಳುವಿರಿ. ನಂಬಿಕೆಯನ್ನು ಕಳೆದುಕೊಳ್ಳುವುದು ಸುಲಭ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಬಂಧುಗಳ ನಡುವೆ ಭಿನ್ನಾಭಿಪ್ರಾಯವು ಬರಲಿದೆ. ಬರುವ ಹಣದ ನಿರೀಕ್ಷೆಯಲ್ಲಿ ಇರುವುದು ಬೇಡ. ನಿಮ್ಮವರ ಆರೋಗ್ಯದ ಬಗ್ಗೆ ಗಮನಕೊಡುವಿರಿ. ರಾಜಕೀಯಕ್ಕೆ ಪ್ರವೇಶಿಸಬೇಕು ಎನ್ನುವ ಹಂಬಲ ಪೂರ್ಣವಾಗದೇ ಇರಬಹುದು. ಸಕಾರಾತ್ಮಕ ಚಿಂತನೆಯನ್ನು ಮಾಡಿ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಅಧಿಕ ಓಡಾಟದಿಂದ ದಣಿವಾಗಲಿದೆ. ಸಂಗಾತಿಯಿಂದ ಅಧಿಕ ಸಂಪತ್ತನ್ನು ನಿರೀಕ್ಷಿಸುವಿರಿ.
ಮಿಥುನ ರಾಶಿ :ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸದ ಕಡೆ ಗಮನವಿಡಿ. ಅದೇ ಉತ್ತರವಾಗಲಿದೆ. ನಿಮ್ಮ ಎಂದಿನ ನಿಚ್ಚಲ ಮನಸ್ಸಿನಿಂದ ವಿಚಲಿತರಾಗಬೇಡಿ. ನಿಮಗೆ ಯಾರಿಂದಲಾದರೂ ಕೆಲಸವಾಗಬೇಕಿದ್ದರೆ ಪ್ರೀತಿಯಿಂದ ಹೇಳಿ, ಅನಾಯಾಸವಾಗಿ ಆಗುವುದು. ನೀವಿಂದು ನಡವಳಿಕೆಯಿಂದ ಎಲ್ಲರ ಮನಗೆಲ್ಲುವಿರಿ. ವ್ಯಪಾರಕ್ಕೆ ವಿದೇಶದ ನಂಟು ಸಿಗುವ ಸಾಧ್ಯತೆ ಇದೆ. ನೀವಿಂದು ನಿಮ್ಮ ಗುರುಗಳನ್ನು ಕಾಣಬೇಕೆನಿಸಿ ಅವರನ್ನು ಭೇಟಿಯಾಗಲು ಇಚ್ಛಿಸುವಿರಿ. ಕೆಲಸಗಳನ್ನು ನಿರಾಸಕ್ತಿಯಿಂದ ಮಾಡಬೇಡಿ. ಪಾಲುದಾರಿಕೆ ನಿಮಗೆ ಸರಿಯಾಗದು. ಸಮಾಜದ ಬಗ್ಗೆ ಚಿಂತಕರಾಗಿದ್ದರೆ ಅತಿಥಿಯಾಗಿ ನೀವು ಇರುವಿರಿ. ಒತ್ತಾಯಕ್ಕೆ ನೀವು ಕಾರ್ಯವನ್ನು ಮಾಡಬೇಕಾಗುವುದು. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ. ನೀವು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ಭಾಗಿಯಾಗಲಾರಿರಿ.
ಕರ್ಕ ರಾಶಿ :ಇಂದು ನೀವು ಬಹಳ ದಿನಗಳ ಅನಂತರ ಸಂಗಾತಿಯ ಜೊತೆ ದೂರದ ಊರಿಗೆ ಪ್ರಯಾಣ ಮಾಡುವಿರಿ. ನಿಮ್ಮೊಳಗಿದ್ದ ಮೋಡಗಟ್ಟಿದ ವಾತಾವರಣ, ಕರಗಿಹರೊಯವುದು. ಮಕ್ಕಳಿಂದ ಮಾನಸಿಕ ಹಿಂಸೆ ಎದುರಾದೀತು. ಸಾಧ್ಯವಾದಷ್ಟು ಇಂದು ಮೌನವಾಗಿ ಇರುವುದಕ್ಕೆ ಪ್ರಯತ್ನಿಸಿ. ಉದ್ಯೋಗದ ನಿಮಿತ್ತ ಹೊರ ಪ್ರದೇಶಕ್ಕೆ ನಡೆಯಬೇಕಾಗಬಹುದು. ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಚೇತರಿಕೆ ಕಂಡರೂ ಇನ್ನಷ್ಟು ಸಂಪಾದಿಸುವ ಆಸೆ ಇರಲಿದೆ. ಯಾರದೋ ಕಾರ್ಯವನ್ನು ನಿಮ್ಮದೆಂದು ಬಿಂಬಿಸುವುದು ಬೇಡ. ಸರ್ಕಾರದಿಂದ ಲಾಭವನ್ನು ಪಡೆಯದೇ ಸ್ವಂತವಾಗಿ ಉದ್ಯೋಗವನ್ನು ನಡೆಸುತ್ತೇನೆಂಬ ನಿರ್ಧಾರ ಮಾಡಲಿದ್ದೀರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿ, ಹಣವನ್ನು ಖಾಲಿ ಮಾಡುವಿರಿ. ಇಂದು ಕಡಿಮೆ ಕಾರ್ಯದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುವಿರಿ. ಯಾರಿಗಾದರೂ ನೀವು ಹಣವನ್ನು ಕೊಡುವ ಸಂದರ್ಭವು ಬರಬಹುದು. ಜಾಣತನದಿಂದ ಇಂದಿನ ಕಾರ್ಯವನ್ನು ಮಾಡುವಿರಿ.
ಸಿಂಹ ರಾಶಿ :ಇಂದು ಸಿಕ್ಕಿದ್ದರಲ್ಲಿ ಸಂತೃಪ್ತಿಯಿಂದ ಅನುಭವಿಸುವುದು ಅವಶ್ಯಕ. ಇನ್ನೊಬ್ಬರನ್ನು ಗೌರವಿಸುವ ಅಭ್ಯಾಸದಿಂದ ನಿಮಗೆ ಶ್ರೇಷ್ಠವಾದ ಮಾರ್ಗವು ತೆರೆದುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಅವಶ್ಯಕತೆ ಇರಲಿದೆ. ಬೇರೆಯಬರ ಭಾವನೆಗಳಿಗೆ ತೊಂದರೆ ಕೊಡದೇ ವರ್ತಿಸಿ. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಇರಲಿದೆ. ಆರಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಹುದ್ದೆಯು ಸಿಗಬಹುದು. ವಾಹನ ಚಾಲನೆ ವೇಳೆ ಆತುರ ಬೇಡ. ಖರ್ಚು ಸಾಮಾಜಿಕ ಜೀವನದಲ್ಲಿ ಮತ್ತು ಭಾವನಾತ್ಮಕ ಪ್ರಪಂಚದಲ್ಲಿ ಹೆಚ್ಚು ಪ್ರಗತಿ ಕಾಣುವಿರಿ. ಇಂದು ನಿಮ್ಮ ದೃಷ್ಟಿಯಲ್ಲಿ ಎಲ್ಲರೂ ತಪ್ಪಿತಸ್ಥರೇ. ನಿಮ್ಮ ವಿದ್ಯಾಭ್ಯಾಸ ಮಟ್ಟ ಬಹಳ ಕೆಳಗಿದೆ ಎಂದು ಮನವರಿಕೆ ಆಗುವುದು. ನೀವು ಕೆಲಸಕ್ಕೆ ಸಂಬಂಧಿಸಿದಂತೆ ಯಾರೊಂದಿಗಾದರೂ ಸಂವಹನ ನಡೆಸಲು ಪ್ರಯತ್ನಿಸುತ್ತಿದ್ದರೆ, ಇಂದು ನಿಮಗೆ ಅದೃಷ್ಟವನ್ನು ತರಬಹುದು. ಸಂಗಾತಿಯ ವಿಷಯದಲ್ಲಿ ವಾಗ್ವಾದ ನಡೆಯಲಿದೆ.
ಕನ್ಯಾ ರಾಶಿ :ಇಂದು ನಿಮ್ಮ ವ್ಯವಹಾರದಲ್ಲಿ ಕೆಲವು ಬದಲಾವಣೆಗಳು ಬೇಕು ಎಂದು ಅನ್ನಿಸಬಹುದು. ಮನೆಯಲ್ಲಿ ಸಣ್ಣ ಸಣ್ಣ ಖರ್ಚುಗಳಿಗೆ ಧನವನ್ನು ಖರ್ಚು ಮಾಡಬೇಕಾಗಬಹುದು. ಬಂಗಾರದ ವ್ಯಾಪಾರಿಗಳಿಗೆ ಲಾಭವು ಚನ್ನಾಗಿರಲಿದ್ದು ಹಣವು ಮಾತ್ರ ಸಿಗದಾಗಿದೆ. ಸತತ ಪ್ರಯತ್ನದಿಂದ ನಿಮಗೆ ಸಫಲತೆಯು ಸಿಗಬಹುದು. ದ್ರವ ವ್ಯಾಪಾರದಲ್ಲಿ ಹೆಚ್ಚಿನ ಆದಾಯ ಸಿಗಲಿದೆ. ಆದಾಯವು ನಿರೀಕ್ಷಿತ ಮಟ್ಟದಲ್ಲಿದ್ದರೂ ಖರ್ಚು ಅದನ್ನು ಮೀರಿರುತ್ತದೆ. ನಿಮ್ಮನ್ನು ಅರ್ಥಮಾಡಿಕೊಳ್ಳಲು ಇತರರು ಸೋಲಬಹುದು. ಕೃಷಿಯಲ್ಲಿ ಬದಲಾವಣೆಯನ್ನು ಮಾಡಲು ಆಲೋಚಿಸುವಿರಿ. ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ವಾಹನದ ಅಪಘಾತವನ್ನು ನಿಮ್ಮದೇ ತಪ್ಪಿನಿಂದ ಆಗಲಿದೆ. ಸಾಹಿತ್ಯಕ್ಷೇತ್ರದವರು ಸಾಧಿಸಲು ಮಾರ್ಗಗಳು ಗೊತ್ತಾಗಲಿವೆ. ಯಾರ ಮಾತನ್ನೂ ಕೇಳುವ ಸಹನೆ ಇಲ್ಲವಾದೀತು. ವಿದ್ಯಾರ್ಥಿಗಳು ಓದಿನ ಬಗ್ಗೆ ಗಮನವನ್ನು ಕೊಡುವುದು ಕಷ್ಟವಾಗಬಹುದು.
ತುಲಾ ರಾಶಿ :ನಿಮ್ಮ ನಡೆ ಹಾಗು ನುಡಿಗಳು ಕೆಲವರಿಗೆ ವಿರೋಧದಂತೆ ಭಾಸವಾಗಬಹುದು. ಮನಸ್ಸು ಶಕ್ತಿಯನ್ನು ಕಳೆದುಕೊಳ್ಳಬಹುದು. ಪರಿಹಾರದ ದಾರಿಗಳು ಆ ಕ್ಷಣದಲ್ಲಿ ಸ್ಫುರಿಸುವುದು. ಯಾರ ಮಾತನ್ನು ಕೇಳುವುದು ಬಿಡುವುದು ಎಂಬ ಗೊಂದಲಾಗುವುದು. ಮಿತ್ರರ ಸಹಾಯದಿಂದ ಕೆಲಸವನ್ನು ಗಿಟ್ಟಿಸಿಕೊಳ್ಳುವಿರಿ. ಸಾಲ ಮಾಡಿಯಾದರೂ ಏನನ್ನಾದರೂ ಸಾಧಿಸಬೇಕು ಎಂಬ ಆತುರವಿರುವುದು. ದುಷ್ಕೃತ್ಯಕ್ಕೆ ಹಣದ ಸಹಾಯವನ್ನು ಮಾಡಿದರೆ ನಿಮಗೆ ಮುಂಬರುವ ದಿನಗಳ ತೊಂದರೆಗಳು ಬರಬಹುದು. ಉದ್ಯೋಗದಲ್ಲಿ ಒತ್ತಡವನ್ನು ನಿವಾರಿಸಿಕೊಳ್ಳಲು ಯಾರದ್ದಾದರೂ ಸಹಾಯವನ್ನು ಪಡೆಯುವಿರಿ. ದೂರದ ಊರಿಗೆ ಹೋಗಬೇಕಾಗುವುದು. ನಿಮಗೆ ಸಿಗಬೇಕಾದ ಗೌರವವು ಗೊಂದಲದಲ್ಲಿ ಇದ್ದು ಕೊನೆಗೂ ನಿಮಗೇ ಸಿಗಲಿದೆ. ತಾಳ್ಮೆಯನ್ನು ಕಳೆದುಕೊಳ್ಳದೇ ಎಲ್ಲರ ಜೊತೆ ವ್ಯವಹರಿಸಿ. ನಿಮ್ಮ ವಿರುದ್ಧ ನಡೆಸುವ ತಂತ್ರಗಾರಿಕೆಯು ಹೊಸ ವಿಧಾನದಲ್ಲಿ ಇರಲಿದೆ.
ವೃಶ್ಚಿಕ ರಾಶಿ :ಮಕ್ಕಳ ಪ್ರೀತಿಯಲ್ಲಿ ನೀವು ಕಳೆದುಹೋಗುವಿರಿ. ಕ್ರೀಡೆಯಲ್ಲಿ ಹೆಚ್ಚು ಮನಸ್ಸುಳ್ಳವರಾಗುವಿರಿ. ಸರ್ಕಾರಿ ಕೆಲಸಗಳು ನಿಧಾನಗತಿಯಲ್ಲಿ ಆಗುವುದು. ಆಸ್ತಿಯ ವಿಚಾರದಲ್ಲಿ ಕಾನೂನಿನ ತೊಂದರೆಗಳು ಇದ್ದು ಅದನ್ನು ಸರಿಪಡಿಸಿಕೊಳ್ಳಲು ಓಡಾಟಗಳಾಗಬಹುದು. ಕಾರ್ಯದಲ್ಲಿ ಅಶಿಸ್ತು ಬೇಡ. ವೃತ್ತಿಯಲ್ಲಿ ಬರುವ ಯಾವುದೇ ಹೊಸ ಜವಾಬ್ದಾರಿಗಳನ್ನು ಅಲ್ಲಗಳೆಯಬೇಡಿ. ಸಂಪೂರ್ಣವಾಗಿ ತಿಳಿದುಕೊಂಡು ಒಪ್ಪಿಕೊಳ್ಳಿ. ಭಾರವಾದ ವಸ್ತುಗಳನ್ನು ಎತ್ತಲು ಹೋಗುವುದು ಬೇಡ. ಓದಿನಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಉನ್ನತ ವ್ಯಾಸಂಗಕ್ಕೆ ತೆರಳುವ ಮನಸ್ಸು ಮಾಡುವಿರಿ. ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಆಸಕ್ತಿ ಮೂಡಲಿದೆ. ಸಂಗಾತಿಗೆ ಉಡುಗೊರೆಯನ್ನು ಕೊಟ್ಟು ಸಂತೋಷಗೊಳಿಸುವಿರಿ. ಅನಿರೀಕ್ಷಿತವಾಗಿ ಪ್ರಭಾವಿ ವ್ಯಕ್ತಿಗಳ ಸಂಪರ್ಕವು ಸಿಗುವುದು.
ಧನು ರಾಶಿ :ಇಂದು ಕಛೇರಿಯಲ್ಲಾಗಲಿ ನಿಮ್ಮ ಮಾತನ್ನು ಬೆಂಬಲಿಸತ್ತಾರೆ. ಅನಿರೀಕ್ಷಿತ ಸಂಪತ್ತು ಸಿಗುವ ಸಾಧ್ಯತೆ ಇದೆ. ಇಂದು ಬಂದ ಅತಿಥಿಯ ಜೊತೆ ಹರಟೆಯನ್ನು ಹೊಡೆಯುತ್ತೀರಿ. ಕಛೇರಿಯ ಕೆಲಸದ ನಡುವೆ ಕುಟುಂಬದ ಜೊತೆ ಸಮಯವನ್ನು ಕಳೆಯುವುದು ಕಷ್ಡವಾದೀತು. ಸ್ತ್ರೀಯರ ಜೊತೆಗಿನ ಸಂಬಂಧ ಹಾಳಾಗುವುದು. ಮನೆಯಲ್ಲಿ ನಡೆದ ಕಲಹದಿಂದ ಕಛೇರಿಯಲ್ಲಿ ಕೆಲಸ ಮಾಡಲು ಅಸಾಧ್ಯವಾದೀತು. ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪಬಹುದು. ಬಂಧುಗಳು ತಾವು ಮಾಡಿದ ತಪ್ಪನ್ನು ನಿಮ್ಮ ಮೇಲೆ ಹಾಕಲು ಯತ್ನಿಸುವರು. ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿರುವುದು ಹಿಂಸೆಯಾದೀತು. ಆತುರಾತುರದಿಂದ ನೀವು ಮಾಡುವ ನಿರ್ಧಾರಗಳು ಮುಜುಗರ ಉಂಟುಮಾಡಲಿದೆ. ನಿಮಗೆ ಪ್ರಶಂಸೆಯು ಬಲವನ್ನು ಕೊಡುವುದು. ಇಂದು ಹಣಕಾಸಿನ ವ್ಯವಹಾರ ಮಾಡಲು ಧೈರ್ಯವು ಸಾಕಾಗದು.
ಮಕರ ರಾಶಿ :ಇಂದು ನಿಮಗೆ ಸೇವೆಯಲ್ಲಿ ಸಂತೋಷ ಸಿಗಲಿದೆ. ನೀವು ತೊಂದರೆಗೆ ಸಿಲುಕದಂತೆ ದಾಟಲು ನಿಮಗೆ ಯಾರಿಂದಲಾದರೂ ಸೂಚನೆ ಬರಬಹುದು. ಇಂದು ನಿಮ್ಮ ಕೆಲಸವನ್ನು ಕೇಳಿ ಸಲಹೆಗಳನ್ನು ಕೊಡಲು ಯಾರಾದರೂ ಬರಬಹುದು. ರಾಜಕೀಯ ವ್ಯಕ್ತಿಗಳಿಗೆ ಓಡಾಟ ಹೆಚ್ಚಾಗಿ, ಹೆಚ್ಚು ಜನಸಂಪರ್ಕ ಮಾಡಬೇಕಾದ ಅನಿವಾರ್ಯವಿರುತ್ತದೆ. ಬರಬೇಕಾದ ಹಣವು ಮಧ್ಯವರ್ತಿಗಳ ಕೈಯ್ಯಲ್ಲಿರುತ್ತದೆ. ಕೆಲವನ್ನು ಕೇಳಿ ಪಡೆಯಬೇಕಾಗುವುದು. ಕುಟುಂಬದಲ್ಲಿ ಖುಷಿಯ ವಾತಾವರಣ ಇರಲಿದೆ. ಮಕ್ಕಳು ನಿಮ್ಮನ್ನು ವಿಧವಿಧವಾಗಿ ಪ್ರಶ್ನಿಸಬಹುದು. ಉನ್ನತ ಶಿಕ್ಷಣವನ್ನು ಪಡೆಯಲು ನೀವು ಸಫಲರಾಗಬಹುದು. ಉದ್ಯೋಗದಲ್ಲಿ ನಿಮ್ಮ ಕಣ್ತಪ್ಪಿನಿಂದ ಆದ ತಪ್ಪಿಗೆ ನೀವೇ ಜವಾಬ್ದಾರಿ ಆಗಿರುವಿರಿ. ಭೂಮಿಯ ವ್ಯವಹಾರದಲ್ಲಿ ಸುಮ್ಮನೆ ಕೆಲವನ್ನು ನಿಮ್ಮ ಮೇಲೆ ಬರುವಂತೆ ಮಾಡಿಕೊಳ್ಳುವಿರಿ.
ಕುಂಭ ರಾಶಿ :ಆತುರದಲ್ಲಿ ಏನಾದರೂ ನಿರ್ಧಾರವನ್ನು ತೆಗದುಕೊಳ್ಳಬೇಡಿ. ಪ್ರತ್ಯಕ್ಷವಾಗಿ ಕಂಡಿದ್ದು ಮಾತ್ರ ಸತ್ಯವಲ್ಲವೆಂಬುದನ್ನು ನೀವು ಅರಿತುಕೊಳ್ಳಬೇಕು. ಎಷ್ಟೋ ದಿನದ ಸಾಲಗಳು ಇಂದು ಮುಕ್ತಾಯಗೊಳ್ಳುವುವು. ಕಛೇರಿಯಿಂದ ಬಂದ ಊಹಾಪೋಹ ಸುದ್ದಿಗಳಿಂದ ವಿಕ್ಷಿಪ್ತಗೊಳ್ಳಬೇಡಿ. ಆರೋಗ್ಯದ ವಿಚಾರದಲ್ಲಿ ನೆಮ್ಮದಿ ಇರಲಿದೆ. ಹತ್ತಿರದ ವ್ಯಕ್ತಿಗಳು ಕಾರಣಾಂತರಗಳಿಂದ ದೂರಾಗಬಹುದು. ಸ್ವಂತ ವ್ಯವಹಾರಗಳಿಗೆ ಮಧ್ಯವರ್ತಿಗಳನ್ನು ಬಳಸಿಕೊಳ್ಳಬೇಡಿ. ನಿಮ್ಮ ಮೇಲಿನ ನಂಬಿಕೆಯಿಂದ ಸುಳ್ಳನ್ನೂ ನಂಬುವ ಸಾಧ್ಯತೆ ಇದೆ. ಒತ್ತಡವುಂಟು ಮಾಡುವ ಕೆಲಸಗಳನ್ನು ಕೈಬಿಡಿ. ಸಮಯ ಸಂದರ್ಭಗಳನ್ನು ನೋಡಿಕೊಂಡು ಮಾತನಾಡಿ. ಅಪಹಾಸ್ಯಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆಬಿದೆ. ನಿಮಗೆ ಸಿಗುವ ಸೂಚನೆಗಳನ್ನು ಗಮನಿಸಿಕೊಂಡು ವ್ಯವಹಾರಾದಿಗಳನ್ನು ಮಾಡಿ. ಸ್ನೇಹವು ಬೇರೆಯಾಗಲಿದೆ. ಯಾರ ಮೇಲಾದರೂ ದೋಷಾರೋಪ ಮಾಡುವ ಸಂಭವವಿದೆ.
ಮೀನ ರಾಶಿ :ಇಂದು ಧಾರ್ಮಿಕ ಕಾರ್ಯಗಳಿಂದ ನಿಮ್ಮ ಹಣದ ಸಂಪಾದನೆಯಾಗಲಿದೆ. ಇದು ನಿಮ್ಮ ಮನಸ್ಸಿಗೆ ಶಾಂತಿಯನ್ನೂ ನೆಮ್ಮದಿಯನ್ನೂ ನೀಡುತ್ತದೆ. ಹಾಸ್ಯದಿಂದ ಇನ್ನೊಬ್ಬರಿಗೆ ನೋವಾಂಟಾಗಬಹುದು. ತಾಳ್ಮೆಯನ್ನು ಇಟ್ಟುಕೊಂಡು ಮಾತನಾಡಿ. ಏನಾದರೂ ಪ್ರಯೋಜನವಾದೀತು. ಸಂಬಂಧದಲ್ಲಿ ವ್ಯವಹಾರವನ್ನು ಬಹಳ ಜಾಗರೂಕತೆಯಿಂದ ಮಾಡಬೇಕಿದೆ. ಸಿಟ್ಟನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವಿರಿ. ಆಪ್ತರ ನಡುವಿನ ಸಂಬಂಧವು ಹಾಳಾಗಲಿದೆ. ಸಂಗಾತಿಯ ಆದಾಯವು ಹೆಚ್ಚಾಗಲಿದೆ. ಸರ್ಕಾರಿ ಕೆಲಸದಲ್ಲಿರುವವರಿಗೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆ ಇದೆ. ಸಂಗಾತಿಯ ಜೊತೆ ಪ್ರಯಾಣ ಮಾಡಲಿರುವಿರಿ. ವಸ್ತುಗಳು ಕಾಣೆಯಾಗಬಹುದು. ಎಲ್ಲವನ್ನೂ ನಿಮ್ಮ ಮೇಲೆ ಹೇರಬಹುದು. ನಿಮ್ಮ ಪ್ರಾಮಾಣಿಕತೆಯ ಮಾರ್ಗವನ್ನು ಬಿಡುವುದು ಬೇಡ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಪೂರ್ಣ ಮಾಡುವಿರಿ.
-ಲೋಹಿತ ಹೆಬ್ಬಾರ್ – 8762924271 (what’s app only)