AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashi Bhavishya: ಇಂದಿನ ರಾಶಿಭವಿಷ್ಯ, ದೂರವಿದ್ದ ಈ ರಾಶಿಯ ಪ್ರೇಮಿಗಳು ಇಂದು ಒಂದಾಗುವರು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 19) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ಇಂದಿನ ರಾಶಿಭವಿಷ್ಯ, ದೂರವಿದ್ದ ಈ ರಾಶಿಯ ಪ್ರೇಮಿಗಳು ಇಂದು ಒಂದಾಗುವರು
ಪ್ರಾತಿನಿಧಿಕ ಚಿತ್ರ
Rakesh Nayak Manchi
|

Updated on: Jun 19, 2023 | 12:30 AM

Share

ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ಹಾಗಾದರೆ 2023 ಜೂನ್ 19 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಅಶುಭ ಇದೆಯಾ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮಿಥುನ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಗಂಡ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:42 ರಿಂದ 09:20 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:57 ರಿಂದ ಮಧ್ಯಾಹ್ನ 12:34ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:11 ರಿಂದ 03:48ರ ವರೆಗೆ.

ಸಿಂಹ: ನಿಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳಲಾಗದ ಭೀತಿಯು ಇರಲಿದೆ. ಕೃಷಿಯಲ್ಲಿ ಆಸಕ್ತಿ ಇರುವವರು ಹೊಸತನ್ನು ಮಾಡುವರು. ನೀವು ವಂಶಪಾರಂಪರ್ಯವಾಗಿ ಬಂದ ವಿದ್ಯೆಯನ್ನು ದುಡಿಮೆಗೆ ಬಳಸಿಕೊಳ್ಳುವಿರಿ. ಸಂಗಾತಿಯ ಕೆಲವು ವರ್ತನೆಗಳು ನಿಮಗೆ ವಿಚಿತ್ರ ಎನಿಸಬಹುದು. ಬಹಳ ದಿನಗಳ ಅನಂತರ ಸ್ನೇಹಿತರ ಜೊತೆ ಕಾಲವನ್ನು ಕಳೆಯುವಿರಿ. ನಿಮ್ಮ ವಿದ್ಯುತ್ ಉಪಕರಣಗಳನ್ನು ಯಾರಾದರೂ ಹಾಳುಮಾಡುವರು.‌ ನೀವು ಹಣವನ್ನು ಖರ್ಚುಮಾಡಬೇಕಾಗಿ ಬರಬಹುದು. ಭಕ್ತಿ ಇದ್ದರೂ ಅದನ್ನು ಸದ್ವಿನಿಯೋಗ‌ಮಾಡಲು ಸಮಯ ಸಾಕಾಗದು. ಸಾಧ್ಯವಿದ್ದಲ್ಲಿ ಕುಲದೇವರ ಸ್ಮರಣೆಯನ್ನು ಆಗಾಗ ಮಾಡಿ.

ಕನ್ಯಾ: ಸಂಗಾತಿಯ ನಡುವಿನ ವೈಮನಸ್ಯವು ಮಕ್ಕಳಿಂದ ದೂರಾಗಬಹುದು. ಕಛೇರಿಯಲ್ಲಿ ನಿಮ್ಮ ಕೆಲಸವು ಶಿಸ್ತಿನಿಂದ ಇರಲಿ. ಕರ್ತವ್ಯದ ವಿಚಾರದಲ್ಲಿ ನೀವು ಸೋಲುವಿರಿ. ನಿಮ್ಮ ಮಾತುಗಳು ಕುಹಕದಿಂದ ಇರಬಹುದು. ನಿಮ್ಮನ್ನು ಪ್ರದರ್ಶಿಸಲು ಇದು ಸಕಾಲವಲ್ಲ. ಎಂತಹ ಒಳ್ಳೆಯದನ್ನು ತೋರಿಸಿದರೂ ಅದು ನಿಮಗೆ ವಿಪರೀತ ಪರಿಣಾಮವನ್ನು ಉಂಟುಮಾಡೀತು. ಎಲ್ಲ‌ ಮೋಡಗಳೂ‌‌ ಮಳೆಯನ್ನು ಸುರಿಸುವುದಿಲ್ಲ. ಹಣದ ಅನಿವಾರ್ಯತೆ ಇದ್ದರೂ ಸಿಕ್ಕುವುದು ಕಷ್ಟವಾದೀತು. ದೂರವಿದ್ದ ಪ್ರೇಮಿಗಳು ಇಂದು ಒಂದಾಗುವರು.

ತುಲಾ: ನಿಮ್ಮ ಗೌಪ್ಯತೆಯನ್ನು ಬಯಲು ಮಾಡಲು ಯಾರಾದರೂ ಪ್ರಯತ್ನಿಸಬಹುದು. ನಿಮ್ಮ ವ್ಯವಹಾರದ ಬಗ್ಗೆ ಕಣ್ಣಿಟ್ಟಿರುತ್ತಾರೆ. ನಿಮ್ಮ ಆಪ್ತರೆನಿಸಕೊಂಡವರ ಜೊತೆ ಬೇಕಾದುದಷ್ಟನ್ನೇ ಮಾತನಾಡಿ. ಪುಣ್ಯಕ್ಷೇತ್ರಕ್ಕೆ ನೀವು ಹೋಗಲಿದ್ದೀರಿ. ಹಿರಿಯರ ಮಾತನ್ನು ಕೇಳಿದ ಪರಿಣಾಮ ನಿಮಗೆ ಅನುಕೂಲವಾಗಿದೆ ಎಂದು ಅನ್ನಿಸುವುದು. ಏಕಾಗ್ರತೆಯಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ತಂದೆಯಿಂದ ನಿಮಗೆ ಶುಭವಾರ್ತೆ ಸಿಗಬಹುದು. ನಿಮ್ಮ ಕೈಲಾಗುವ ಕೆಲಸವನ್ನಷ್ಟೇ ಮಾಡಿ. ನಿಮ್ಮನ್ನು ಮೀರಿದ ಕೆಲಸವನ್ನು ಮಾಡುವುದು ಬೇಡ.

ವೃಶ್ಚಿಕ: ಉದ್ಯಮದಲ್ಲಿ ಸ್ವಲ್ಪ ಒತ್ತಡ ಹಾಗೂ ಗೊಂದಲದ ಸನ್ನಿವೇಶಗಳು ಬರಬಹುದು. ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಆಲೋಚನೆಗಳು ಮಾರ್ಗವನ್ನು ತಪ್ಪಬಹುದು. ವಾಹನ‌ ಖರೀದಿಗೆ ನಿಮ್ಮದೇ ಆದ ಕೆಲವು ನಿಯಮಗಳು ಇರಬಹುದು. ಇಂದು ನಿಮ್ಮ ಮಾತಿನ‌ ಹರಿತ ಮುಂದಿನವರನ್ನು ಘಾಸಿ ಮಾಡೀತು. ನಿಮ್ಮ ಸಹಾಯಕ‌ ನೌಕರರ ಕಾರಣದಿಂದ ನೀವು ಹೇಳಿಸಿಕೊಳ್ಳಬೇಕಾದೀತು. ಬಾಲಿಶ ಆಲೋಚನೆಯನ್ನು ಬಿಡುವುದು ಉತ್ತಮ. ನಿಮ್ಮ ದೃಷ್ಟಿ ವಿಶಾಲವಾಗಿ ಇರಲಿ. ಕಾಲು ನೋವು ಅಧಿಕವಾಗಬಹುದು.

-ಲೋಹಿತಶರ್ಮಾ ಇಡುವಾಣಿ

​ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?
​ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?
ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?
ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?
ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್
ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್
ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು