Horoscope Today: ಇಂದಿನ ರಾಶಿಭವಿಷ್ಯ, ಕುಟುಂಬದಲ್ಲಿ ಈ ರಾಶಿಯವರ ವಿಚಾರಕ್ಕೆ ಕಲಹವಾಗಬಹುದು

|

Updated on: Jun 21, 2023 | 12:30 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 21) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ಇಂದಿನ ರಾಶಿಭವಿಷ್ಯ, ಕುಟುಂಬದಲ್ಲಿ ಈ ರಾಶಿಯವರ ವಿಚಾರಕ್ಕೆ ಕಲಹವಾಗಬಹುದು
ಇಂದಿನ ರಾಶಿಭವಿಷ್ಯ
Image Credit source: istock
Follow us on

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮಿಥುನ ಮಾಸ, ಮಹಾನಕ್ಷತ್ರ : ಮೃಗಶಿರಾ, ಮಾಸ : ಆಷಾಢ, ಪಕ್ಷ : ಶುಕ್ಲ, ವಾರ : ಬುಧ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಪುಷ್ಯ, ಯೋಗ : ಧೃತಿ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:34 ರಿಂದ 02:11ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:43 ರಿಂದ 09:20ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:57 ರಿಂದ ಮಧ್ಯಾಹ್ನ 12:34ರ ವರೆಗೆ.

ಸಿಂಹ: ಸಂಗಾತಿಗೆ ಪೂರಕವಾಗಿ ನಡೆಯಲು ನಿಮಗೆ ಕಷ್ಟವಾಗಿ ಅವರ ಜೊತೆ ಜಗಳ ಮಾಡುವಿರಿ. ಹಿರಿಯರಿಗೆ ಎದುರಾಡುವುದನ್ನು ಕಡಿಮೆ ಮಾಡಿ. ಮಾತಿನಿಂದ ನೀವು ಅನೇಕ ಉತ್ತಮವಾದ ವಿಷಯವನ್ನು ಕಳೆದುಕೊಳ್ಳುವಿರಿ. ಕೋಪವನ್ನು ಆದಷ್ಟು ನಿಯಂತ್ರಣಕ್ಕೆ ತಂದುಕೊಳ್ಳಿ. ಆ ಸಮಯಕ್ಕೆ ನಿಮಗೆ ಇಷ್ಟವಾದ ಸಂಗತಿಯನ್ನು ಮಾಡಿ.‌ ಕೋಪವು ಕಡಿಮೆಯಾದೀತು. ಇಂದಿನ ಕೆಲವು ಸಂದಿಗ್ಧಪರಿಸ್ಥಿತಿಯನ್ನು ನೀವು ಸರಳವಾಗಿ ನಿಭಾಯಿಸಲು ಕಲಿಯಬೇಕಾದೀತು. ನೀವು ಇಂದು ಸೌಂದರ್ಯಕ್ಕೆ ಮನಸೋಲಬಹುದು. ಅನಪೇಕ್ಷಿತ ವಿಷಯವನ್ನು ಮರೆತುಬಿಡಿ.

ಕನ್ಯಾ: ನಿಮ್ಮ ಸಮಯವನ್ನು ಸ್ನೇಹಿತರು ವ್ಯರ್ಥಮಾಡಿಯಾರು. ಸ್ತ್ರೀಯರ ಜೊತೆ ಹರಟೆ ಹೊಡೆದರೂ ನಿಮಗೆ ಸಮಯ ವ್ಯರ್ಥವಾಗಿದ್ದು ನೆನಪಾಗದೇ ಇರುವುದು. ಬಾಲ್ಯ ಸ್ನೇಹಿತ ಏಳ್ಗೆಯನ್ನು ಕೇಳಿ ನಿಮಗೆ ಅಸೂಯೆ ಉಂಟಾಗಬಹುದು. ವಾಹನ‌ಖರೀದಿಯನ್ನು ನೀವು ಮುಂದೂಡುವಿರಿ. ಧನವನ್ನು ಕೇಳಿ ಬಂದವರಿಗೆ ನೀಡಲಿದ್ದೀರಿ. ಕಛೇರಿಯ ಕೆಲಸದಲ್ಲಿ ಹೆಚ್ಚಿನ ಆಸಕ್ತಿ ಇರಲಿದೆ. ನಿಮ್ಮ ಉತ್ಸಾಹಕ್ಕೆ ಕೆಲವು ಸಹೋದ್ಯೋಗಿಗಳು ಭಂಗ ತರಬಹುದು. ಸಣ್ಣಗೆ ಆರೋಗ್ಯವೂ ಹದಗೆಡುವ ಸಂಭವವಿದೆ.

ತುಲಾ: ಇತರರಿಗೆ ನೋವನ್ನು ಕೊಟ್ಟು ನಿಮ್ಮ ಕೆಲಸವನ್ನು ಮಾಡಿಕೊಳ್ಳಲು ನೀವು ಇಷ್ಟಪಡುವುದಿಲ್ಲ. ಏಕಾಂಗಿಯಾಗಿ ನೀವು ಎಲ್ಲಿಗಾದರೂ ಹೋಗುವಿರಿ. ನಿಮ್ಮ ವಸ್ತುವನ್ನು ಸ್ನೇಹಿತರಿಗೆ ಕೊಟ್ಟಿದ್ದು ಅದನ್ನು ಪಡೆಯಲು ನೀವು ಕಷ್ಟ ಪಡುವಿರಿ. ಕಾನೂನಿಗೆ ಮೊರೆ ಹೋಗಿ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ದಿನದ ಆರಂಭದಲ್ಲಿ ಏನೋ ಚಿಂತೆ ಕಾಡಲಿದ್ದು ಸಮಯ ಸರಿದಂತೆ ಅದು ಮಾಯವಾಗಿ ನೆಮ್ಮದಿಯಿಂದ ಇರುವಿರಿ. ನಿಮ್ಮ ವಂಶಸ್ಥರ ಜೊತೆ ಸಮಯವನ್ನು ಕಳೆಯುವಿರಿ. ಮನೆಯಿಂದ ಇಂದು ಹೊರಗೆ ಇರಬೇಕಾದೀತು. ಆಹಾರವು ಅಲಭ್ಯವಾಗುವ ಸಾಧ್ಯತೆ ಇದೆ.

ವೃಶ್ಚಿಕ: ನಿಮ್ಮ ಇಚ್ಛಾಶಕ್ತಿಯು ನಿಮ್ಮ ಇಂದಿನ ಕೆಲಸವನ್ನು ಪೂರ್ಣಗೊಳ್ಳುವಂತೆ ಮಾಡಲಿದೆ. ನಿಮ್ಮಲ್ಲಿ ಪ್ರತಿಭೆ ಇದ್ದರೂ ಅದನ್ನು ಹೊರ ಹಾಕಲು ಸೂಕ್ತ ವೇದಿಕೆ ಸಿಗದೇಹೋದೀತು. ಸುಲಭದ ವಿಚಾರವನ್ನು ಬಹಳ ಸಂಕೀರ್ಣ ಮಾಡಿಕೊಳ್ಳಲಿದ್ದೀರಿ. ನಿಮ್ಮ ಬಗ್ಗೆ ಇರುವ ಭಾವನೆಗಳು ಬದಲಾಗಬಹುದು. ಸಂಗಾತಿಯ ವಿಚಾರದಲ್ಲಿ ನೀವು ತಟಸ್ಥರಾಗುವಿರಿ. ಸಮಯವನ್ನು ಉಳಿಸಲು ಹೋಗಿ ಹಣವನ್ನು ಖಾಲಿಮಾಡಿಕೊಳ್ಳಬೇಕಾಗಬಹುದು. ಕುಟುಂಬದಲ್ಲಿ ನಿಮ್ಮ ವಿಚಾರಕ್ಕೆ ಕಲಹವಾಗಬಹುದು. ಸರಿಯಾದ ಮಾಹಿತಿಯನ್ನು ಅವರಿಗೆ ನೀಡಿ. ಮಾನಸಿಕವಾಗಿ ನೀವು ದುರ್ಬಲರಾಗುವಿರಿ.

-ಲೋಹಿತಶರ್ಮಾ ಇಡುವಾಣಿ