Nithya Bhavishya: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ಭವಿಷ್ಯ

|

Updated on: May 30, 2023 | 12:20 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 30) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ ಭವಿಷ್ಯ
ಪ್ರಾತಿನಿಧಿಕ ಚಿತ್ರ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 30 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ಪಂಚಾಂಗ: ಶಾಲಿವಾಹನ ಶಕೆ 1947, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ : ರೋಹಿಣೀ, ಮಾಸ : ಜ್ಯೇಷ್ಠ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಹಸ್ತಾ, ಯೋಗ : ಸುಕರ್ಮ. ಕರಣ : ಗರಜ, ಸೂರ್ಯೋದಯ – 06-03 am, ಸೂರ್ಯಾಸ್ತ – 06-55 pm. ರಾಹು ಕಾಲ 03:43 – 05:19, ಯಮಘಂಡ ಕಾಲ 09:17 – 10:53, ಗುಳಿಕ ಕಾಲ 12:30 –02:06ರ ವರೆಗೆ.

ಸಿಂಹ: ಇಂದು ನಿಮ್ಮ ಧೈರ್ಯ ಹೆಚ್ಚಾಗುವುದು. ವ್ಯವಹಾರವು ವೃದ್ಧಿಯಾದಂತೆ ತೋರುತ್ತದೆ. ನೀವು ಹೊಸ ಸಂಪರ್ಕಗಳಿಂದ ವ್ಯಾಪಾರದಲ್ಲಿ ಹೆಚ್ಚಿನ ಪ್ರಯೋಜನ ಪಡೆಯುವಿರಿ. ನಿಮ್ಮ ಬಂಧುಗಳಿಂದ ಗೌರವದ ನೀವು ಪಡೆಯುವಿರಿ. ಮಕ್ಕಳ ವಿವಾಹದ ವಿಚಾರದಲ್ಲಿ ಆತುರ ಬೇಡ. ನಿಮ್ಮ ಹೂಡಿಕೆಯಿಂದ ವ್ಯರ್ಥ ಓಡಾಟವಾಗಬಹುದು. ಯಾರ ಸಹಾಯ ಇಲ್ಲದೆ ಕೆಲಸ ಮುಗಿಸಿದ ತೃಪ್ತಿ ನಿಮ್ಮದಾಗುವುದು. ನಿಮ್ಮ ಆತ್ಮವಿಶ್ವಾಸವೂ ಅಧಿಕವಾಗುವುದು. ಆಸ್ತಿ ಖರೀದಿಗೆ ಕಾಲವು ಉತ್ತವವಾಗಿದ್ದರೂ ನಿಮಗೆ ಧೈರ್ಯವು ಸಾಲದೇ ಹೋದೀತು. ನಿಮಗೆ ಹಣದ ಸಹಾಯವು ತಾನಾಗಿಯೇ ಬರುವುದರಿಂದ ಇದ್ದ ಚಿಂತೆಯು ದೂರಾಗುವುದು.

ಕನ್ಯಾ: ಇಂದು ಹಣದ ವಿಷಯದಲ್ಲಿ ಅನುಕೂಲವಿದೆ. ಮಕ್ಕಳಿಗೆ ಸಂಬಂಧಿಸಿದ ಶುಭ ಸುದ್ದಿಯು ಬರಲಿದೆ. ನೀವು ಸಾಕಷ್ಟು ವಿರೋಧಿಗಳನ್ನು ಹೊಂದಿದ್ದರೂ ನಿಮ್ಮನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ. ಸ್ನೇಹಿತನ ಭೇಟಿಯಿಂದ ಮನಸ್ಸು ತುಂಬಾ ಸಂತೋಷವಾಗುವುದು. ಮನೆಯ ಶುಭ ಕಾರ್ಯಗಳಿಗೆ ಹಣವನ್ನು ಕೊಡುವಿರಿ. ಬಿದ್ದು ಶರೀರವನ್ನು ಗಾಯಮಾಡಿ ಕೊಳ್ಳುವಿರಿ. ಇಂದು ನಿಮ್ಮ ಪತ್ನಿಯು ನಿಮ್ಮ ಕಾರ್ಯಗಳಿಗೆ ಬೆಂಬಲ ನೀಡುವರು. ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡುವರು. ಅವರ ಎಲ್ಲಾ ಸಹಕಾರಗಳನ್ನು ತೆಗೆದುಕೊಳ್ಳಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಬಹುದು.

ತುಲಾ: ಇಂದು ನೀವು ವೃತ್ತಿಪರವಾದ ಪ್ರತಿಷ್ಠೆಯ ಲಾಭವನ್ನು ಪಡೆಯುವಿರಿ‌. ನಿಮ್ಮ ಶತ್ರುಗಳ ಸಂಖ್ಯೆಯು ಇಂದು ಹೆಚ್ಚಾಗಬಹುದು. ರಾಜಕೀಯದಲ್ಲಿ ತೊಡಗಿರುವ ಜನರಿಗೆ ಒಳ್ಳೆಯ ಅನುಕೂಲವಿರಲಿದೆ. ಹೊಸ ಆದಾಯದ ಮೂಲಗಳನ್ನು ನಿರ್ಮಿಸಿಕೊಳ್ಳುವಿರಿ. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯವಾಗಿರಲಿದೆ. ಹಣದ ಅಪವ್ಯಯವು ಆಗದಂತೆ ನೋಡಿಕೊಳ್ಳಿ. ಮಾತಿನಲ್ಲಿ ಹಿಡಿತವಿದ್ದರೆ ನಿಮಗೆ ಇಂದು ಕ್ಷೇಮ. ತಪ್ಪಿದಲ್ಲಿ ಬಂಧುಗಳ ನಡುವೆ ಅಸಮಾಧಾನವು ಉಂಟಾಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ನಿಮ್ಮ ತಂತ್ರಗಾರಿಕೆಗೆ ಫಲಾದಾಯಕವಾಗಲಿದೆ.

ವೃಶ್ಚಿಕ: ಇಂದು ನೀವು ಜೀವನೋಪಾಯಕ್ಕೆ ತೋಚಿದ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವಿರಿ. ನೀವು ಇಂದು ದೂರದ ಪ್ರವಾಸವನ್ನು ಯೋಜಿಸುತ್ತಿದ್ದರೆ, ನೀವು ಸಫಲರಾಗುವಿರಿ. ವೈವಾಹಿಕ ಜೀವನವು ಪರಸ್ಪರರ ಪ್ರೀತಿ ಮತ್ತು ನಂಬಿಕೆ ಬಲವಾಗಿರುತ್ತದೆ. ಹಳೆಯ ಸ್ನೇಹಿತನ ಬಗ್ಗೆ ಗೊಂದಲಗಳು ಬರಬಹುದು. ಹಿಡಿದ ಕಾರ್ಯವನ್ನು ಮುಗಿಸುವಂತಹ ಛಲಗಾರಿಕೆ ನಿಮಗೆ ಅವಶ್ಯಕ. ಇದು ನಿಮ್ಮ ಯಶಸ್ಸಿನ ಗುಟ್ಟೂ ಆಗಿದೆ. ಮಾತನಾಡುವ ಪೂರ್ವದಲ್ಲಿ ಅದರಿಂದ ಉಂಟಾಗುವ ಪರಿಣಾಮದ ಬಗ್ಗೆಯೂ ಗಮನವಿರಲಿ. ಮತ್ತೊಬ್ಬರ ಮೇಲೆ ಅಧಿಕಾರವನ್ನು ಸ್ಥಾಪಿಸಲು ಹೋಗಬೇಡಿ. ಧನ ಮತ್ತು ಮಾನಗಳನ್ನು ಕಳೆದುಕೊಳ್ಳಬೇಕಾಗುವುದು.