ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ 05) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ವೈಧೃತಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ ಸಂಜೆ 05:14 ರಿಂದ 6:49ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:29 ರಿಂದ 02:04 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:39 ರಿಂದ 05:14ರ ವರೆಗೆ.
ಧನು ರಾಶಿ: ಆರ್ಥಿಕವಾಗಿ ಸಬಲರಾದವರು ಖರ್ಚನ್ನು ಹೆಚ್ಚು ಮಾಡುವರು. ಅನಗತ್ಯ ಕಾರ್ಯಹಳ ಪಟ್ಟಿಯೇ ದೊಡ್ಡದಾಗುವುದು. ತುರ್ತು ಅವಶ್ಯಕತೆಗಳನ್ನು ಮಾತ್ರ ನೀಗಿಸಿಕೊಳ್ಳುವ ಪ್ರಯತ್ನವನ್ನು ಮಾಡಿ. ಯಾವುದೇ ಸಾಹಸಕ್ಕೆ ಕೈ ಹಾಕಲು ಹೋಗುವುದು ಬೇಡ. ನಿಮಗೆ ಭವಿಷ್ಯದ ಚಿಂತೆ ಇರಲಿದೆ. ನೀರಿನ ಪ್ರದೇಶಗಳಿಗೆ ಹೋಗುವ ಮನಸ್ಸು ನಿಮ್ಮದಾಗಲಿದೆ. ದೂರದ ಊರಿಗೆ ಪ್ರಯಾಣ ಹೋಗುವಿರಿ. ಕುಳಿತಲ್ಲೇ ಕುಳಿತು ದೇಹ ಮತ್ತು ಮನಸ್ಸು ಜಡವಾಗಿದೆ ಎಂದು ಅನ್ನಿಸಲಿದೆ. ಮಕ್ಕಳ ಜೊತೆ ಕೆಲವು ಸಮಯವನ್ನು ಕಳೆಯುವಿರಿ. ವೈದ್ಯಕೀಯ ವೃತ್ತಿಯಲ್ಲಿ ತುರ್ತು ಕಾರ್ಯಗಳು ಬರುವುದು. ಪ್ರೇಮಕ್ಕಾಗಿ ಹೆಚ್ಚು ಖರ್ಚನ್ನು ಮಾಡಬೇಕಾದೀತು. ಹಿತಶತ್ರುಗಳ ಬಗ್ಗೆ ನಿಮ್ಮ ಊಹೆಯು ಸುಳ್ಳಾಗಬಹುದು. ಆರೋಗ್ಯವು ಬಡವಾದಂತೆ ತೋರುವುದು.
ಮಕರ ರಾಶಿ: ಇಂದು ಅನ್ಯ ಮಾರ್ಗವಿಲ್ಲದೆ ಉದ್ಯೋಗವನ್ನೇ ನಂಬಿದವರಿಗೆ ಸ್ವಲ್ಪ ಆರ್ಥಿಕವಾಗಿ ಹಿನ್ನಡೆಯಾಗಲಿದೆ. ಕಛೇರಿಯಲ್ಲಿ ನಿಮ್ಮನ್ನು ಹಿಮ್ಮೆಟ್ಟಲು ಕಾಯುತ್ತಿರುವರು. ಅವರಿಗೆ ನೀವು ಆಹಾರವಾಗಲಿದ್ದೀರಿ. ಇಂದು ನಿಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವಿರಿ. ನಿಮ್ಮ ಅನಂತರ ಕೆಲಸ ಮಾಡುವವರಿಂದ ನಿಮಗೆ ಕೆಲವು ಮಾತುಗಳು ಸಿಗಬಹುದು. ಮಾತಿನ ಮೇಲೆ ಹಿಡಿತವನ್ನು ಇಟ್ಟು, ಆಲೋಚಿಸಿ ಮಾತನಾಡಿ. ಯಾವುದೇ ನಿರ್ಧಾರಗಳನ್ನು ಆ ಕ್ಷಣದಲ್ಲಿಯೇ ತೆಗೆದುಕೊಂಡು ಆಮೇಲೆ ಚಿಂತೆಗೆ ಒಳಗಾಗುವಂತೆ ಮಾಡಿಕೊಳ್ಳಬೇಡಿ. ಸಾಮಾಜಿಕವಾದ ನಿಮ್ಮ ಕಾರ್ಯಗಳು ಪ್ರಶಂಸೆಯನ್ನು ಪಡೆಯುತ್ತವೆ. ಯಾವ ಬಲವನ್ನು ನಂಬದೇ ಸ್ವಪ್ರಯತ್ನದಿಂದ ಎಲ್ಲವನ್ನೂ ಮಾಡಲು ಬಯಸುವಿರಿ. ಮುರಿದ ಸಂಬಂಧಗಳು ಎಷ್ಟೇ ಆದರೂ ಸರಿಯಾಗಿ ಕೂಡಿಕೊಳ್ಳುವುದು ಕಷ್ಟವಾದೀತು. ಇಂದಿನ ಕಾರ್ಯಗಳಲ್ಲಿ ತೊಂದರೆಗಳು ಎದ್ದು ಕಾಣಿಸುವುದು. ಜಾಣ್ಮೆಯನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ.
ಕುಂಭ ರಾಶಿ: ನಿಮ್ಮ ಮೇಲೆ ಇಂದು ಎಂದೂ ಮಾಡದ ಕೆಲಸಕ್ಕೆ ಅಪವಾದಗಳು ಬರಲಿವೆ. ಅದನ್ನು ನ್ಯಾಯಸಮ್ಮತವಾಗಿ ದೃಷ್ಟಾಂತ ಸಹಿತ ಅಲ್ಲಗಳೆಯುವಿರಿ. ದೂರದ ಊರಿಗೆ ವೈಯಕ್ತಿಕ ಕಾರ್ಯದ ನಿಮಿತ್ತ ಪ್ರಯಾಣ ಮಾಡಲಿದ್ದೀರಿ. ಸ್ನೇಹಿತ ಮಾತುಗಳು ನಿಮಗೆ ಕಸಿವಿಸಿ ವಾತಾವರಣವನ್ನು ಉಂಟುಮಾಡಲಿದೆ. ಉನ್ನತ ವಿದ್ಯಾಭ್ಯಾಸವನ್ನು ಮಾಡುವವರಿಗೆ ವಿದೇಶಗಳಲ್ಲಿ ಅವಕಾಶವು ದೊರೆಯಲಿದೆ. ಇನ್ನೊಬ್ಬರಿಗೆ ತೊಂದರೆ ಕೊಡುವ ಕಾರ್ಯದಲ್ಲಿ ಹಿಂದೇಟು ಹಾಕುವಿರಿ. ಸಾಲವನ್ನು ಮಾಡುವುದಿದ್ದರೆ ಅವಶ್ಯಕತೆಗೆ ತಕ್ಕಂತೆ ಮಾಡಬಹುದು. ಅಪರಿಚಿತರ ಜೊತೆ ವೃಥಾ ಕಲಹವಾಗಬಹುದು. ನಿಮ್ಮ ಇಂದಿನ ನಡೆಯು ಅನೂಹ್ಯವಾಗಿರುವುದು. ರಾಜಕೀಯದಲ್ಲಿ ಬದಲಾವಣೆಯನ್ನು ತರಿಸುವುದು. ಮಕ್ಕಳ ವಿದ್ಯಾಭ್ಯಾಸದ ಚಿಂತೆ ಇರಲಿದೆ. ಕೆಲವು ಗೊಂದಲವು ಪರಿಹಾರವಾಗದೇ ಹಾಗೆಯೇ ಇರುವುದು.
ಮೀನ ರಾಶಿ: ಇಂದು ಗುರುತು ಪರಿಚಯವಿಲಗಲದ ವ್ಯಕ್ತಿಗಳಿಂದ ಜೀವನಕ್ಕೆ ಬೇಕಾದ ಉಪದೇಶವು ಸಿಗಲಿವೆ. ಖುಷಿಯಾಗಿರಲು ಕೆಲವು ಸಂಗತಿಗಳು ನಿಮ್ಮ ಪಾಲಿಗೆ ಇರಲಿವೆ. ವಿನಾಕಾರಣ ಸಂಗಾತಿಯ ನಡುವೆ ಸಣ್ಣ ಕಲಹಗಳು ಹುಟ್ಟಿಕೊಳ್ಳಬಹುದು. ಅನಿವಾರ್ಯವಾಗಿ ಹೊರಗಿನ ತಿಂಡಿಯನ್ನು ತಿನ್ನಬೇಕಾದೀತು. ಉದರಕ್ಕೆ ಸಂಬಂಧಿಸಿದ ರೋಗವು ಬಂದು ಆರೋಗ್ಯವು ಕೆಡುವುದು. ನಿಮಗೆ ಕೆಲವು ಶುಭ ಶಕುನಗಳು ಕಾಣಿಸಿಕೊಳ್ಳಲಿದ್ದು ಅದರಂತೆ ನಿಮ್ಮ ನಡಿಗೆ ಇರಲಿ. ಸಹನೆಯ ಪರೀಕ್ಷೆಯಲ್ಲಿ ನೀವು ಗೆಲ್ಲುವಿರಿ. ವಿನಾಕಾರಣ ನೆಮ್ಮದಿಯನ್ನು ಹಾಳುಮಾಡಿಕೊಳ್ಳುವ ಪ್ರಯತ್ನವನ್ನು ಮಾಡುವಿರಿ. ನಿಮ್ಮನ್ನು ನಗಿಸುವ ಪ್ರಯತ್ನ ಮಾಡಿದರೂ ನೀವು ಯಾವುದೋ ಆಲೋಚನೆಯಲ್ಲಿಯೇ ಇರುವಿರಿ. ನಿಮ್ಮ ಇಂದಿನ ಶ್ರಮಕ್ಕೆ ತಕ್ಕುದಾದ ಫಲವು ಸಿಗಬಹುದು. ಭೂಮಿಯ ವ್ಯಾಪಾರದಲ್ಲಿ ಜಯವಾಗಲಿದೆ. ಎಲ್ಲರ ಮಾತನ್ನು ಧಿಕ್ಕರಿಸುವ ಉದ್ಧಟತನ ಬೇಡ.
ಲೋಹಿತ ಹೆಬ್ಬಾರ್ – 8762924271 (what’s app only)