Horoscope: ರಾಶಿ ಭವಿಷ್ಯ; ಈ ರಾಶಿಯವರು ತಾಳ್ಮೆಯಿಂದ ವರ್ತಿಸುವುದು ಉಚಿತ

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಮೇ 05 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ರಾಶಿ ಭವಿಷ್ಯ; ಈ ರಾಶಿಯವರು ತಾಳ್ಮೆಯಿಂದ ವರ್ತಿಸುವುದು ಉಚಿತ
ರಾಶಿ ಭವಿಷ್ಯ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: May 05, 2024 | 12:33 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 05) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಉತ್ತರಾಭಾದ್ರ, ಯೋಗ: ವೈಧೃತಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ ಸಂಜೆ 05:14 ರಿಂದ 6:49ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:29 ರಿಂದ 02:04 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:39 ರಿಂದ 05:14ರ ವರೆಗೆ.

ಸಿಂಹ ರಾಶಿ: ನಿಮ್ಮವರ ಕೆಲವು ವರ್ತನೆಗಳು ಬೇಸರವನ್ನೂ ತರಿಸಬಹುದು. ಇದರಿಂದ ಸಿಟ್ಟುಕೊಂಡ ದೂರ ಸರಿಯುವ ನಿರ್ಧಾರಗಳನ್ನೂ ತೆಗಕೊಳ್ಳುವ ಸಾಧ್ಯತೆ ಇದೆ. ಉದ್ವೇಗಕ್ಕೆ ಒಳಗಾಗದೇ ತಾಳ್ಮೆಯಿಂದ ವರ್ತಿಸುವುದು ಉಚಿತ. ದಾಂಪತ್ಯದಲ್ಲಿ ಮಾತಿನ ಸಣ್ಣ ಬಿಸಿ ಉಂಟಾಗಬಹುದು. ಮನಸ್ಸಿನಲ್ಲಿ ಒಡಕುಗಳು ಮೂಡಬಹುದು. ಆದಷ್ಟು ಮುಂದುವರಿಯದೇ ನಿಲ್ಲಿಸಲು ಪ್ರಯತ್ನಿಸಿ. ಮುಂದೆ ಅದು ವಿಚ್ಛೇದನಕ್ಕೆ ಕಾರಣವಾಗಬಹುದು. ಎಲ್ಲವನ್ನೂ ಸಿಟ್ಟಿನಿಂದ ಗೆಲ್ಲಲು ಸಾಧ್ಯವಾಗದು. ಗೃಹಬಳಕೆಯ ವಸ್ತುಗಳಿಂದ ಖರ್ಚು ಹೆಚ್ಚಾಗಬಹುದು ಭೂಮಿಯ ವ್ಯವಹಾರಸ್ಥಾರಿಗೆ ಲಾಭವಿದೆ. ನಿಮಗೆ ಗೌರವಕ್ಕೆ ತೊಂದರೆ ಆಗಬಹುದು. ಉತ್ತಮ ಭೋಜನವನ್ನು ಮಾಡುವಿರಿ. ಆರೋಗ್ಯವು ಕೆಡಲಿದ್ದು ಹತ್ತಾರು ಆಲೋಚನೆಗಳು ಬರಬಹುದು. ನಿಮ್ಮನ್ನು ಭಾವನಾತ್ಮಕವಾಗಿ ಕಟ್ಟಿಹಾಕಬಹುದು. ವಿರೋಧಿಗಳ ಮಾತಿನ ಭರದಲ್ಲಿ ನಿಮ್ಮ ಮಾತು ಗೌಣವಾಗಬಹುದು. ನಿಮ್ಮನ್ನು ನಿಂದಿಸುವವರನ್ನು ನೀವು ದೂರವಿರಿಸುವಿರಿ.

ಕನ್ಯಾ ರಾಶಿ: ಇಂದು ನಿಮಗಾದ ಅಪಮಾನವು ದ್ವೇಷವಾಗಿ ಬದಲಾಗುವುದು. ಬಂಧುಗಳು ನಿಮ್ಮನ್ನು ನೋಡಿ ಆಡಿಕೊಳ್ಳುವರು. ನಿಮ್ಮೆದುರು ಮಾತನಾಡದೇ ಹಿಂಬದಿಯಿಂದ ಮಾತನಾಡಲಿದ್ದಾರೆ. ಕೃಷಿಯ ಬಗ್ಗೆ ಆಸಕ್ತಿ ಇರುವ ನೀವು ಕೃಷಿಯನ್ನು ಮಾಡಿ ಸ್ವಲ್ಪಮಟ್ಟಿನ ಲಾಭವನ್ನು ಗಳಿಸುವಿರಿ. ತಂದೆಯು ನಿಮ್ಮ ಕೆಲಸಕ್ಕೆ ಧನಸಹಾಯವನ್ನು ಮಾಡಲಿದ್ದಾರೆ. ಸಹೋದರನು ನಿಮಗೆದುರಾದ ತೊಂದರೆಯನ್ನು ಪರಿಹರಿಸಿಕೊಳ್ಳಲು ನಿಮ್ಮ ಸಹಾಯಕ್ಕೆ ಬರಲಿದ್ದಾನೆ. ಕೆಲಸಗಳು ವಿಘ್ನಗಳ ನಿಧಾನವಾಗಲಿದೆ. ಮಾತಿನಲ್ಲಿ ಹಿಡಿತಬೇಕು ಎನಿಸಬಹುದು. ಯಾರಿಗೂ ಹೇಳಿಕೊಳ್ಳದೇ ನೀವೊಬ್ಬರೇ ರೋಗವನ್ನು ಅನುಭವಿಸುವಿರಿ. ಕೆಲವರ ಸಹವಾಸದಿಂದ ನಿಮ್ಮ ದಿಕ್ಕು ತಪ್ಪಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಉತ್ತಮಸ್ಥಾನವು ಸಿಗಲಿದೆ. ಅಲ್ಪಾವಧಿಯಲ್ಲಿ ಅಧಿಕ ಲಾಭಕ್ಕಾಗಿ ಹೂಡಿಕೆ ಮಾಡುವಿರಿ. ವಿದೇಶೀಯ ವ್ಯಾಪಾರವು ಹೆಸರಿಗಷ್ಟೇ ಇರುವುದು. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು.

ತುಲಾ ರಾಶಿ: ನಿಮ್ಮ ವಿವಾಹಕ್ಕೆ ಸಂಬಂಧಿಸಿದಂತೆ ಮಾತುಕತೆಗಳು ನಡೆಯುವುದು. ಗೌರವ ಹಾಗೂ ಸಮ್ಮಾನಗಳು ನಿಮಗೆ ಸಿಗಲಿವೆ. ಕಛೇರಿಯಲ್ಲಿ ನೀವು ಸಿದ್ಧಪಡಿಸಿರುವ ಯೋಜನೆಗಳಿಗೆ ಪ್ರಶಂಸೆ ಸಿಗುವುದು. ಒತ್ತಡಗಳನ್ನು ನಿವಾರಿಸುವ ವಿದ್ಯೆಯು ಕರಗತವಾಗಿದ್ದು ಅನಾಯಾಸದಿಂದ ಕಾರ್ಯಗಳನ್ನು ಮಾಡಿ ಮುಗಿಸುವಿರಿ. ಹೊಸ ಕೆಲಸವನ್ನು ಆರಂಭಿಸುವವರು ಆರಂಭಿಸಲು ಯೋಗ್ಯವಾದ ಸಮಯವಾಗಿದೆ. ಯಾರಿಂದಲೋ ಪ್ರೇರಿತರಾಗಿ ಆಸ್ತಿಯನ್ನು ಪಡೆಯುವ ಹುನ್ನಾರ ನಡೆಸುವಿರಿ. ರಾಜಕೀಯದಲ್ಲಿ ವಿವಾದಸ್ಪದ ಮಾತುಗಳು ಆಡಿ ಎಲ್ಲರ ಕೆಂಗಣ್ಣಿಗೆ ಸಿಲುಕುವಿರಿ. ಮುಖಂಡರ ಜೊತೆ ಗುರುತಿಸಿಕೊಳ್ಳಲು ಇಷ್ಟಪಡುವಿರಿ. ಅಮೂಲ್ಯವಾದ ವಸ್ತುಗಳು ಪಡೆದುಕೊಳ್ಳುವಿರಿ. ಇಂದು ನಿಮ್ಮ ಮಾತಿನ ಆರಂಭವೇ ನೀವು ಎಂತಹವರು ಎನ್ನುವುದನ್ನು ತಿಳಿಸುತ್ತದೆ. ಕೆಲಸಗಳಲ್ಲಿ ನೀವು ಜಯವನ್ನು ಸಾಧಿಸಬಹುದು.

ವೃಶ್ಚಿಕ ರಾಶಿ: ಇಂದು ಹಿಡಿದ ಕೆಲಸವನ್ನು ಬಿಡದೇ ಮುಗಿಸುವ ಸ್ವಭಾವವಿರಲಿದೆ. ನೀವು ಬಹಳ ದಿನಗಳಿಂದ ಮಾಡುತ್ತಿರುವ ಕಾರ್ಯಗಳು ಮುಂದೆ ಹೋಗುತ್ತಿದ್ದು ಇಂದು ಅದನ್ನು ಪೂರೈಸುವಿರಿ. ಇಂದು ಮನಸ್ಸು ನಿರಾಳವಾಗಿ ಯಾವದೇ ಒತ್ತಡಕ್ಕೆ ಸಿಲುಕದೇ ಇರುವುದು. ನಿಮ್ಮ ಯಾರಾದರೂ ಕೆಣಕಬಹುದು. ದುರಭ್ಯಾಸವು ಮನೆಯವರಿಗೆ ಗೊತ್ತಾಗಲಿದೆ. ಉದ್ವೇಗಕ್ಕೆ ಒಳಗಾಗಿ ಸ್ನೇಹಿತರ ಅಪಹಾಸ್ಯಕ್ಕೆ ಸಿಲುಕಬೇಡಿ. ಆಯಾಸದ ಪ್ರಯಾಣವನ್ನು ಮಾಡುವಿರಿ. ಅತಿಯಾದ ಭಾರವನ್ನು ಎತ್ತುವ ಕೆಲಸಕ್ಕೆ ಹೋಗಬೇಡಿ. ನಿಮ್ಮ ಇಂದಿನ ಗಂಭೀರ ಮೌನಕ್ಕೂ ಅರ್ಥವು ಇರಲಿದೆ. ಮಕ್ಕಳ‌ ಜೊತೆ ಅನ್ಯೋನ್ಯ ಸಂಬಂಧವು ಕಾಣಿಸಿಕೊಂಡೀತು. ನೀವು ಹೇಳಿದ ಕೆಲಸವೂ ವೇಗವಾಗಿ ಮುಗಿಯದು. ಸ್ನೇಹಿತರಿಗೆ ಬೇಸರವಾಗಬಾರದೆಂದು ಅವರ ಜೊತೆ ಸಮಸ್ಯೆ ಕಳೆಯುವಿರಿ. ಆರ್ಥಿಕ ಅಧಿಕಾರಿಗಳು ನಿಮಗೆ ತೊಂದರೆ ಕೊಡಬಹುದು.

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ