
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಮಾರ್ಚ್ 24) ಭವಿಷ್ಯ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ಪೂರ್ಣಿಮಾ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ಗಂಡ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 34 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಸಂಜೆ 05:12 ರಿಂದ 06:43ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:39 ರಿಂದ 02:10ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:41 ರಿಂದ 05:12ರ ವರೆಗೆ.
ಧನು ರಾಶಿ : ನಿಮ್ಮ ಬಗ್ಗೆಯೇ ನಿಮಗೆ ನಕಾರಾತ್ಮಕ ಯೋಚನೆಗಳು ಬರಬಹುದು. ಅದನ್ನು ನಿಲ್ಲಿಸಲು ಪ್ರಯತ್ನಿಸಿ. ಮನಸ್ಸಿಗೆ ಬೇರೆ ಯಾವುದಾದರೂ ಕೆಲಸ ಕೊಡಿ. ಸಹೋದರರ ಬಗ್ಗೆ ನಿಮಗಿರುವ ಭಾವವು ಬದಲಾದೀತು. ಕುಟುಂಬದ ಸಮಸ್ಯೆಗಳಿಂದಾಗಿ ನಿಮ್ಮ ಸಂಗಾತಿ ಇಂದು ಅಸಮಾಧಾನಗೊಳ್ಳಬಹುದು. ಎಲ್ಲವನ್ನೂ ವಹಿಸಿಕೊಂಡು ಅನಂತರ ಅತಂತ್ರವಾದೀತು. ಮಾನಸಿಕ ಅಸಮತೋಲನವನ್ನು ಕಾಯ್ದುಕೊಳ್ಳುವುದು ಸವಾಲಾಗಬಹುದು. ವಾಹನ ಖರೀದಿಗೆ ಆಲೋಚನೆ ಇರಲಿದ್ದು ಸಾಲ ಮಾಡಬೇಕಗಬಹುದು. ನಿಮ್ಮ ವೇಗದ ಮನಸ್ಸನ್ನು ನಿಯಂತ್ರಿಸಬೇಕಾಗುವುದು. ಇಂದು ಮಾಡುವ ಎಲ್ಲ ಕಾರ್ಯಗಳನ್ನೂ ಪೂರ್ಣ ಮಾಡಲಾರಿರಿ. ಇಷ್ಟವಿಲ್ಲದ ವ್ಯಕ್ತಿಗಳ ಜೊತೆ ಇರಲು ಕಸಿವಿಸಿ ಆದೀತು. ಮನೆಯವರ ಸಣ್ಣ ತಪ್ಪುಗಳನ್ನು ಸಹಿಸಲಾರಿರಿ. ಮತ್ತೆ ಮತ್ತೆ ಉಂಟಾದ ಅನಾರೋಗ್ಯದಿಂದ ನಿಮ್ಮ ದಿನಚರಿಯನ್ನೇ ಬದಲಾಯಿಸಿಕೊಳ್ಳಬೇಕಾಗುವುದು.
ಮಕರ ರಾಶಿ : ಇಂದಿನ ಸಮಾರಂಭದಲ್ಲಿ ನಿಮ್ಮನ್ನು ಹುಡುಕಿಕೊಂಡು ಭೇಟಿಮಾಡಬಹುದು. ಮಕ್ಕಳ ಮೇಲೆ ನಿಮ್ಮ ಪ್ರೀತಿಯು ಕಡಿಮೆಯಾಗುವುದು. ನಿಮ್ಮ ಚುರುಕುತನದಿಂದ ಎಲ್ಲರನ್ನೂ ಎಚ್ಚರಿಸುವಿರಿ. ಇದ್ದಕಿದ್ದಂತೆ ಅಭ್ಯಾಸದ ಕಡೆ ಸೆಳೆತ ಹೆಚ್ಚಾಗುವುದು. ಸುಮ್ಮನಿರುವ ಶತ್ರುವನ್ನು ಕೆಣಕಿ ಮೈಮೇಲೆ ಹಾಕಿಕೊಳ್ಳುವಿರಿ. ಪ್ರೀತಿಯ ವಿಚಾರಕ್ಕೆ ನಿಮಗೆ ಬಂದರೆ ಪೂರ್ಣ ಸಮಾಧಾನ ಸಿಗದು. ವಿದ್ಯಾರ್ಥಿಗಳು ಸಹವಾಸದೋಷದಿಂದ ಕೆಡುವ ಸಾಧ್ಯತೆ ಇದೆ. ಸಂಗಾತಿಯ ಮೇಲೆ ಅನುಮಾನವನ್ನು ನಿಮ್ಮ ರೀತಿಯಲ್ಲಿ ವ್ಯಕ್ತಪಡಿಸುವಿರಿ. ನಿಮ್ಮವರ ಪ್ರೀತಿಯು ನಿಮಗೆ ಕಡಿಮೆ ಆದಂತೆ ಅನ್ನಿಸುವುದು. ಕೃಷಿಯಲ್ಲಿ ಉಪಯುಕ್ತ ಯೋಜನೆಯನ್ನು ಹಾಕಿಕೊಳ್ಳುವಿರಿ. ಮಕ್ಕಳ ಬಗ್ಗೆ ಇರುವ ನಿಮ್ಮ ಚಿಂತೆ ನಿವಾರಣೆ ಆಗುವುದು. ಪ್ರಯಾಣವನ್ನು ಆನಂದಿಸುವಿರಿ.
ಕುಂಭ ರಾಶಿ : ಪುಣ್ಯಕ್ಷೇತ್ರಗಳ ದರ್ಶನದಿಂದ ವ್ಯಾವಹಾರಿಕ ಒತ್ತಡಗಳು ಕಡಿಮೆಯಾಗುವುದು. ನೂತನ ಗೃಹನಿರ್ಮಾಣದ ಬಗ್ಗೆ ಆಸಕ್ತಿ ಹೆಚ್ಚುವುದು. ನಿಮ್ಮ ಉತ್ಸಾಹಕ್ಕೆ ಯಾರಾದರೂ ಅಡ್ಡಗಾಲು ಹಾಕಿಯಾರು. ನಿಮ್ಮ ಇಚ್ಛೆಗಳು ಪೂರ್ಣವಾಗದೇ ಬೇಸರವಾಗಬಹುದು. ಪ್ರಭಾವಿಗಳ ಬೆಂಬಲವನ್ನು ಅಪೇಕ್ಷಿಸುವಿರಿ. ಉದ್ಯೋಗಕ್ಕಾಗಿ ಅಲೆದಾಡುವ ಸ್ಥಿತಿ ಬರಲಿದ್ದು, ಆಯಾಸವೂ ಬೇಸರವೂ ನಿಮಗೆ ಆಗಬಹುದು. ನಿಮ್ಮ ಪಿತ್ರಾರ್ಜಿತ ಆಸ್ತಿಯು ನಷ್ಟವಾಗಬಹುದು ಎಂಬ ಆತಂಕವು ಇರಲಿದೆ. ಹಣಕಾಸಿನ ಒತ್ತಡವು ಕಡಿಮೆ ಆಗಲಿದೆ. ಅನಂತರ ನೀವೂ ಹಗುರಾಗಬಹುದು. ಅನಾರೋಗ್ಯದ ಕಾರಣದಿಂದ ನೀವು ಇಂದಿನ ಪ್ರಯಾಣವನ್ನು ನಿಲ್ಲಿಸುವಿರಿ. ಕಳ್ಳತನದ ಭೀತಿಯು ನಿಮಗೆ ಇರವುದು. ಸಜ್ಜನರಿಗೆ ಕೆಲವು ಅಪವಾದದ ಮಾತುಗಳು ಬರಬಹುದು. ಯಾರಿಗಾಗಿಯೋ ನೀವು ಸಮಯವನ್ನು ಕೊಡಬೇಕಾಗಬಹುದು.
ಮೀನ ರಾಶಿ : ಇಂದು ನೀವು ಮನೆ ಕೆಲಸವನ್ನು ಬೇಗ ಮುಗಿಸಿ ಸ್ವಲ್ಪ ಬಿಡುವು ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಹೂಡಿಕೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವಿರಿ. ಕೌಟುಂಬಿಕ ಜೀವನವು ಶಾಂತಿಯುತ ಮತ್ತು ಸಂತೋಷದಿಂದ ಇರುವುದು. ಎಲ್ಲದಕ್ಕೂ ಇಂದು ತಾಳ್ಮೆ ಅತ್ಯಂತ ಅವಶ್ಯಕ. ಸಂಬಂಧಗಳನ್ನು ಆಪ್ತವಾಗಿಸಿಕೊಳ್ಳುವ ಪ್ರಯತ್ನದಲ್ಲಿ ಇರುವಿರಿ. ಸ್ತ್ರೀಯರಿಂದ ಇಂದಿನ ನಿಮ್ಮ ಕೆಲಸವನ್ನು ಮಾಡಿಕೊಳ್ಳುವಿರಿ. ಅಗೌರವವನ್ನು ಕೊಟ್ಟಂತೆ ನಿಮಗೆ ಅನ್ನಿಸಬಹುದು. ಅದನ್ನು ನಿರ್ಲಕ್ಷಿಸಿ ಬೇಕಾದ ಕಡೆಯಲ್ಲಿ ತೊಡಗಿಸಿ. ಸ್ನೇಹಿತರ ಜೊತೆ ಮನಸ್ತಾಪವು ಬರಬಹುದು. ವ್ಯಾಪಾರದ ಏರಿಳಿತಗಳು ನಿಮ್ಮ ಗಮನಕ್ಕೆ ಬಾರದೇ ಹೋಗಬಹುದು. ಆಪ್ತರು ನಿಮ್ಮಿಂದ ಕಾರಣಾಂತರಗಳಿಂದ ದೂರಾಗಬಹುದು. ಇನ್ನೊಬ್ಬರನ್ನು ರಿಪೇರಿ ಮಾಡಲು ಹೋಗಿ ಸಮಯ ಹಾಳಾದೀತು. ಮಕ್ಕಳು ಅಡ್ಡದಾರಿಗೆ ಹೋಗುವ ಸನ್ನಿವೇಶವು ಬರಬಹುದು.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ