AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ರಾಶಿಭವಿಷ್ಯ; ಈ ರಾಶಿಯವರ ದಾಂಪತ್ಯದಲ್ಲಿ ಇನ್ನೊಬ್ಬರ ಕಾರಣದಿಂದ ಕಲಹವಾಗಬಹುದು, ಎಚ್ಚರ..

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಮಾರ್ಚ್ 24 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ; ಈ ರಾಶಿಯವರ ದಾಂಪತ್ಯದಲ್ಲಿ ಇನ್ನೊಬ್ಬರ ಕಾರಣದಿಂದ ಕಲಹವಾಗಬಹುದು, ಎಚ್ಚರ..
ದಿನಭವಿಷ್ಯ
Rakesh Nayak Manchi
|

Updated on: Mar 24, 2024 | 12:30 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಮಾರ್ಚ್​​​​​ 24) ಭವಿಷ್ಯ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ಪೂರ್ಣಿಮಾ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ಗಂಡ, ಕರಣ : ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 34 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 42 ನಿಮಿಷಕ್ಕೆ, ರಾಹು ಕಾಲ ಸಂಜೆ 05:12 ರಿಂದ 06:43ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:39 ರಿಂದ 02:10ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:41 ರಿಂದ 05:12ರ ವರೆಗೆ.

ಸಿಂಹ ರಾಶಿ : ಇಂದು ಆರ್ಥಿಕ ಸುಭದ್ರತೆಯ ಬಗ್ಗೆ ಯಾರದ್ದಾದರೂ ಸಲಹೆಗಾರ ಪಡೆಯುವುದು ಉತ್ತಮ. ಮನಸೋ ಇಚ್ಛೆ ವ್ಯಕ್ತಪಡಿಸಿ ವ್ಯವಹಾರವನ್ನು ಮಾಡಲು ನಿಮಗೆ ಆಗದು. .ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ತಡೆಗಟ್ಟಲು ಕೆಲಸದಲ್ಲಿ ಅತಿಯಾದ ದೃಢತೆಯನ್ನು ತಪ್ಪಿಸಿ. ಸಣ್ಣ ವ್ಯಾಪಾರವು ಅಧಿಕಫಲವನ್ನು ಕೊಡುವುದು. ಕೆಟ್ಟ ಅಭ್ಯಾಸಕ್ಕೆ ಹಣವನ್ನು ಖರ್ಚು ಮಾಡುವಿರಿ. ನಿಮ್ಮ ಸರಳ ಉಪಾಯವನ್ನು ಕಾರ್ಯದಲ್ಲಿ ಹಾಕುವಿರಿ. ಸಿಟ್ಟನ್ನು ಎಲ್ಲರೆದುರು ಹೊರಹಾಕುವುದು ಬೇಡ. ನಿಮ್ಮ ಮಾತು ಸಂಗಾತಿಯನ್ನು ಮೌನಿಯನ್ನಾಗಿ‌ ಮಾಡುವುದು. ನೀವು ಮನೆಯ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕಾದೀತು. ಅತಿಯಾದ ಮಾತಿನಿಂದ ಇತರರಿಗೆ ಕಷ್ಟವಾದೀತು. ಮನೆಯ ಕಾರ್ಯವು ನಿಮಗೆ ತೃಪ್ತಿ ಕೊಡುವುದು. ಉಪಕಾರದ ಸ್ಮರಣೆಯನ್ನು ನೀವು ಇಟ್ಟುಕೊಳ್ಳುವುದು ಅನಿವಾರ್ಯ. ನಿಮ್ಮ ಬಗ್ಗೆ ನಿಮಗೆ ಇರಲೇಬೇಕಾದ ಕೆಲವು ವಿಚಾರಗಳನ್ನು ರೂಢಿಸಿಕೊಳ್ಳಿ.

ಕನ್ಯಾ ರಾಶಿ : ದೇಹದ ಯಾವುದೋ ಒಂದು ಭಾಗಕ್ಕೆ ಹೊಕ್ಕ ವಿಷವು ಇಡೀ ದೇಹವನ್ನು ನಾಶ ಮಾಡುವಂತೆ ಕುಟುಂಬಕ್ಕೆ ಹೊಕ್ಕ ಕೆಟ್ಟ ವಿಚಾರಗಳು ಕುಟುಂಬವನ್ನೇ ನಾಶ ಮಾಡಲು ಸಾಕು. ಯಾರಿಗೆ ಎಷ್ಟು ಪ್ರಾಮುಖ್ಯ ಕೊಡಬೇಕು ಎನ್ನುವುದನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ‌. ಮುನ್ನುಗ್ಗಿ ನಡೆಯುವುದು ಸರಿಯಾದರೂ, ದಾರಿ ಹೇಗಿದೆ ಎಂಬುದನ್ನು ಗಮನಿಸಬೇಕಾಗುವುದು‌. ಇನ್ನೊಬ್ಬರನ್ನು ಕಂಡು ಕೊರಗುವುದು ಬೇಡ. ನಿಮ್ಮ‌ ತಪ್ಪನ್ನು ಒಪ್ಪಿಕೊಂಡು ಹೊಂದಾಣಿಕೆ ಮಾಡಿಕೊಳ್ಳುವಿರಿ. ನಿಮ್ಮ ಆಲೋಚನೆಗಳನ್ನು ಇನ್ನೊಬ್ಬರ ಮೇಲೆ ಹೇರುವುದು ಬೇಡ. ಚಾಂಚಲ್ಯದ ಕಾರಣ ಉದ್ಯೋಗದಲ್ಲಿಯೂ ಸರಿಯಾದ ಏಕಾಗ್ರತೆಯಿಂದ ಕೆಲಸವನ್ನು ಮಾಡಲಾಗದು. ಸಾಮಾಜಿಕವಾಗಿ ಕಾರ್ಯಗಳಿಗೆ ನಿಮ್ಮ ಹಣವನ್ನೇ ಬಳಸುವಿರಿ. ಯಾವ ವಿರೋಧವನ್ನು ಸಹಿಸುವ ಮನಃಸ್ಥಿತಿ ಇಂದು ನಿಮಗೆ ಇರದು.

ತುಲಾ ರಾಶಿ : ನೀವು ಎಲ್ಲ ರೀತಿಯಿಂದ ಸುರಕ್ಷಿತರಾಗಿದ್ದರೂ ಎಲ್ಲೋ ಒಂದು ಕಡೆ ಅಸಮಾಧಾನ ನಿಮ್ಮ ತಲೆಯೊಳಗೆ ನುಸುಳುವುದು. ಶತ್ರುಗಳ ಬಗೆಗೆ ನಿಮಗೆ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವಿರಿ. ದಾಂಪತ್ಯದಲ್ಲಿ ಇನ್ನೊಬ್ಬರ ಕಾರಣದಿಂದ ಕಲಹವಾಗಬಹುದು. ರಾಜಕೀಯದಲ್ಲಿ ತೃಪ್ತಿ ಸಿಗದೇ ತೊಳಲಾಟ ಇರಲಿದೆ. ಸಂಗಾತಿಯ ಆರೋಗ್ಯದ ಕಡೆ ನಿಮ್ಮ ಗಮನವು ಹೆಚ್ಚಿರುವುದು. ಹಿರಿಯರ ಮಾರ್ಗದರ್ಶನವನ್ನು ಶಿರಸಾ ಅಲಿಸುವಿರಿ. ಅವ್ಯಕ್ತವಾದ ನೆಮ್ಮದಿಯಿಂದ ಬೀಗಬಹುದು. ಕಿರಿಯರಿಂದ ಆಕಸ್ಮಿಕವಾಗಿ ಗೌರವಕ್ಕೆ ಪಾತ್ರರಾಗುವಿರಿ. ಎಂದೋ ಆದ ಬೇಸರವನ್ನು ಸ್ನೇಹಿತನ ಮುಂದೆ ಇಂದು ಪ್ರಕಟಿಸುವಿರಿ. ಅಸಹಜ ಮಾತುಗಳಿಗೆ ಸ್ಪಂದನೆ ಸಿಗದು. ಪ್ರತ್ಯೇಕತೆಯನ್ನು ನೀವು ಬಯಸುತ್ತಿರುವಿರಿ. ಹೂಡಿಕೆಯಿಂದ ಆರ್ಥಿಕ ಅಭಿವೃದ್ಧಿಯಾಗಲಿದೆ ಎಂಬ ನೆಮ್ಮದಿ ಇರುವುದು.

ವೃಶ್ಚಿಕ ರಾಶಿ : ನಿಮ್ಮಿಂದಾದ ತಪ್ಪಿಗೆ ನೀವೇ ಕ್ಷಮೆ ಯಾಚಿಸಿ ಅದನ್ನು ಸರಿಮಾಡಿಕೊಳ್ಳುವಿರಿ. ಸಮಾಜಿಕ ಕಾರ್ಯಗಳಿಂದ ಪ್ರಶಂಸೆಯು ನಿಮ್ಮತ್ತ ಅನಾಯಾಸವಾಗಿ ಹರಿದುಬರುವುದು. ಸಮಚಿತ್ತವು ನಿಮ್ಮ ದುಃಖದ ನಿವಾರಣೆಗೆ ಕಾರಣವಾಗುತ್ತದೆ. ನಕಾರಾತ್ಮಕ ವಿಚಾರಗಳ ಕಡೆ ಗಮನ ಬೇಡ. ಆದಾಯ ಮೂಲದ ಬಗ್ಗೆ ಅಸಮಾಧಾನ ಬರಬಹುದು. ನಿಮ್ಮ ಬಗ್ಗೆ ಇರುವ ಭಾವವು ಬದಲಾಗಲಿದ್ದು ನಕಾರಾತ್ಮಕ ಪ್ರತಿಕ್ರಿಯೆಯು ನಿಮ್ಮಂದ ಬರಲಿದೆ. ಭೂಮಿಯ ಲಾಭವು ಆಗಲಿದ್ದು ಅನೇಕ‌ ದಿನದ ಚಿಂತೆಗಳು ದೂರಾಗುವುದು. ಅಧಿಕ ಆದಾಯಕ್ಕಾಗಿ ಉದ್ಯೋಗವನ್ನು ನೀವು ತ್ಯಾಗಮಾಡುವಿರಿ. ಹೊಸ ಉದ್ಯಮದ ಕಡೆ ಸೆಳೆತವು ಅತಿಯಾಗಬಹುದು. ಮಾನಸಿಕ ಅಸಮತೋಲನವನ್ನು ಸರಿ ಮಾಡಿಕೊಳ್ಳುವಿರಿ. ಬಿರುಸು ನುಡಿಯಿಂದ ನಿಮಗೆ ಆಗಬೇಕಾದ ಕಾರ್ಯವು ಆಗದು. ಮಾತಿಗೆ ಸಂಬಂಧಿಸದಂತೆ ದೋಷವು ನಿಮಗೆ ಕಾಣಲಿಕ್ಕೆ ಸಿಗುವುದು. ನಿಮ್ಮ ಕೆಲಸವನ್ನು ಶಿಸ್ತಿನಿಂದ ಮಾಡಿ ಮುಗಿಸುವಿರಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ