Horoscope: ನಿತ್ಯ ಭವಿಷ್ಯ; ಉದ್ಯೋಗವನ್ನು ಬದಲಾಯಿಸುವ ಮನಸ್ಸು ಮಾಡುವಿರಿ
ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 13 ಮೇ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಧೃತಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 51 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:42 ರಿಂದ 09:18ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:54 ರಿಂದ 12:29ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:05 ರಿಂದ 03:40ರ ವರೆಗೆ.
ಮೇಷ ರಾಶಿ: ಮುಂಜಾಗರೂಕರಾಗಿ ಸಂಪತ್ತನ್ನು ಉಳಿತಾಯ ಮಾಡುವುವುದು ಉತ್ಯಮ. ಕೃಷಿಯಲ್ಲಿ ಆಸಕ್ತಿ ಇರುವವರು ಹೊಸ ಬೆಳೆಗಳ ಅನ್ವೇಷಣೆಯಲ್ಲಿ ನಿರತರಾಗುವಿರಿ. ಉದ್ಯೋಗದ ನಿಮಿತ್ತ ದೇಶಾಂತರ ಹೋಗಬೇಕಾಗಿ ಬರಬಹುದು. ಸ್ವಾವಲಂಬಿಯಾಗಿ ಜೀವಿಸುವ ಆಸೆ ನಿಮ್ಮದಾಗಿರುತ್ತದೆ. ಸುಖವನ್ನೂ ಕಷ್ಟವನ್ನೂ ಸಮಾನವಾಗಿ ಸ್ವೀಕರಿಸುವ ಸ್ವಭಾವವನ್ನು ಬೆಳೆಸಿಕೊಳ್ಳುವುದು ಉತ್ತಮ. ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ತೊಡಗಿಕೊಳ್ಳುವಿರಿ. ನಿಮ್ಮ ನೆಮ್ಮದಿಗೆ ನೀವೇ ಬುನಾದಿ. ಪ್ರಮಾಣಿಕತೆಯನ್ನು ಹಣಕಾಸಿನ ವ್ಯವಹಾರವನ್ನು ಕೊಡಬಹುದು. ನಂಬಿಕೆಯನ್ನು ಗಳಿಸುವುದು ನಿಮಗೆ ಸವಾಲಾಗಬಹುದು. ಉದ್ಯಮಕ್ಕೆ ಸಂಬಂಧಿಸಿದಂತೆ ಹಣದ ಖರ್ಚು ಮಾಡಬೇಕಾದೀತು. ಕಾರ್ಯದಲ್ಲಿ ಉಂಟಾದ ತೊಂದರೆಯನ್ನು ನೀವು ಲೆಕ್ಕಿಸದೇ ಮುನ್ನಡೆಯುವಿರಿ. ಆಭರಣ ಪ್ರಿಯರಿಗೆ ಸಂತೋಷವಾಗುವುದು. ಸಹೋದರರು ನಿಮ್ಮ ಯೋಜನೆಗೆ ಸಹಕರಿಸಬಹುದು.
ವೃಷಭ ರಾಶಿ: ಇಂದು ಸಂಗಾತಿಯ ಮಾತಿನಿಂದ ನಿಮ್ಮ ವರ್ತನೆಯು ಬದಲಾಗುವುದು. ಕಛೇರಿಯಲ್ಲಿ ಒತ್ತಡವು ಇರುವುದರಿಂದ ಉದ್ಯೋಗವನ್ನು ಬದಲಾಯಿಸುವ ಮನಸ್ಸು ಮಾಡುವಿರಿ. ನಿಮ್ಮ ಬೆಳವಣಿಗೆಯನ್ನು ಕಂಡು ಅಸೂಯೆ ಪಡಬಹುದು. ನಿಮಗೆ ಕಳಂಕವನ್ನು ತರಬಹುದು. ಉದ್ವೇಗಕ್ಕೆ ಒಳಗಾಗದೇ ಕಾರ್ಯಗಳನ್ನು ನಿರ್ವಹಿಸಿ. ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಕೆಲಸವನ್ನು ಮಾಡಬೇಡಿ. ಪರಿಚಿತರಂತೆ ಬಂದು ಮೋಸಮಾಡಬಹುದು. ಅಸಭ್ಯ ಮಾತುಗಳನ್ನು ಕಡಿಮೆ ಮಾಡಿ. ನಿಮ್ಮನ್ನು ನೋಡುವ ದೃಷ್ಟಿಕೋನವು ಬದಲಾದೀತು. ನಿಮ್ಮ ಕಾರ್ಯದಲ್ಲಿ ಗುಣಮಟ್ಟ ಕಡಿಮೆ ಆಗಬಹುದು. ಯಾರ ಬೆಂಬಲವನ್ನು ಬಯಸದೇ ಸ್ವತಂತ್ರವಾಗಿ ಕೆಲಸವನ್ನು ಮಾಡುವಿರಿ. ನಿಮ್ಮ ಕಾರ್ಯಕ್ಕೆ ಬೇರೆಯವರನ್ನು ದೂರುವುದು ಬೇಡ. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣವಿದ್ದರೂ ಸಂತೋಷವು ಇರದು.
ಮಿಥುನ ರಾಶಿ: ನೀವು ಅನುಭವಿಸುತ್ತಿರುವ ಕಷ್ಟಗಳು ಇಂದಿಗೆ ಮುಕ್ತಯವಾಗಿ ನಿರಾಳವೆನಿಸಬಹುದು. ಅನಿರೀಕ್ಷಿತವಾಗಿ ಅಮೂಲ್ಯವಾದ ವಸ್ತುವೊಂದು ಸಿಗಲಿದೆ. ನಿಮ್ಮ ಸಹಾಯಕ್ಕೆ ಮಿತ್ರರು ಬರಲಿದ್ದಾರೆ. ಮನೆಗೆ ಸಂಬಂಧಿಸಿದ ಅಲಂಕಾರಿಕ ವಸ್ತುಗಳ ಖರೀದಿಯನ್ನು ಮಾಡಲಿದ್ದೀರಿ. ಜಾಡ್ಯವು ನಿಮ್ಮ ಕೆಲಸಗಳನ್ನು ನಿಧಾನ ಮಾಡಬಹುದು. ಪ್ರಯಾಣ ಮಾಡುವ ಸಂದರ್ಭವಿದ್ದರೆ ಜಾಗರೂಕರಾಗಿ. ವಸ್ತುಗಳು ಕಳ್ಳತನವಾಗುವಬಹುದು. ನಿಶ್ಚಿತ ಕಾರ್ಯವು ನಿಮ್ಮಿಂದ ಆಗದೇ ಹೋಗಬಹುದು. ಆದಾಯದಿಂದ ಸಂತೋಷವಿದ್ದರೂ ಅದನ್ನು ರಕ್ಷಿಸುವ ಹೊಣೆಗಾರಿಕೆಯೂ ಇರುವುದು. ಕೆಲವರಿಂದ ಭೀತಿಯಾಗುವುದು. ಗೊಂದಲವನ್ನು ನೀವು ಮೀರುವುದು ಕಷ್ಟವಾದೀತು. ಶತ್ರುಗಳನ್ನು ಹಿಮ್ಮೆಟ್ಟಿಸುವ ಕಾರ್ಯವು ನಿಮ್ಮ ಕಡೆಯಿಂದ ಆಗುವುದು. ಯಾವುದಾದರೂ ರೀತಿಯಲ್ಲಿ ನೀವು ಆರ್ಥಿಕ ಉಳಿತಾಯವನ್ನು ಮಾಡಬೇಕಾಗುವುದು.
ಕರ್ಕ ರಾಶಿ: ಇಂದು ಆರ್ಥಿಕ ವಿಚಾರಕ್ಕೆ ಸಂಗಾತಿಯ ಜೊತೆ ಕಲಹವಾಗಬಹುದು. ನಿಮ್ಮ ಮೇಲೆ ಉಂಟಾದ ಅಪನಂಬಿಕೆಯನ್ನ ದೂರಮಾಡಿಕೊಳ್ಳಲು ಪ್ರಯತ್ನಿಸುವಿರಿ. ಮಕ್ಕಳಿಂದ ಸಂತೋಷವಾಗಲಿದೆ. ಸರ್ಕಾರಿ ಉದ್ಯೋಗಿಗಳು ಶುಭವಾರ್ತೆ ನಿರೀಕ್ಷೆಯಲ್ಲಿ ಇರಬಹುದು. ಮಾಧ್ಯಮದಲ್ಲಿ ಇರುವವರು ತಮ್ಮ ಕಾರ್ಯದಿಂದ ಪ್ರಶಂಸೆಯನ್ನು ಪಡೆಯುವರು. ಸ್ತ್ರೀಯರಿಗೆ ಸಂಬಂಧಿಸಿದ ಅಪವಾದಗಳು ಬರಬಹುದು. ನೀವು ಹೇಳಿದ ಕೆಲಸವು ಆಗದೇ ಇರುವುದಕ್ಕೆ ಬೇಸರವಾಗುವುದು. ಅಪರಿಚಿತರ ಜೊತೆ ಸಣ್ಣ ಕಾರಣಕ್ಕೆ ಕಲಹವಾಗಲಿದೆ. ಯಾರನ್ನೋ ಆಡಿಕೊಳ್ಳುವುದು ಪ್ರಿಯವಾಗಬಹುದು. ವೇಗದ ನಡಿಗೆಯಿಂದ ಬೀಳುವಿರಿ. ಆರ್ಥಿಕ ನೆರವನ್ನು ನೀಡಿದವರಿಗೆ ಕೃತಜ್ಞತೆಯನ್ನು ಸಲ್ಲಿಸಿ. ಯಾವಿದೇ ವ್ಯವಸ್ಥೆಯಲ್ಲಿ ಮುಂದುವರಿಯಲು ಇಷ್ಟವಾಗದು. ವ್ಯಂಗ್ಯ ಮಾತುಗಳನ್ನು ಆಡಿ ಯಾರಿಂದಲೂ ಏನನ್ನೂ ನಿರೀಕ್ಷಿಸಲಾಗದು. ಸ್ತ್ರೀಯರಿಂದ ನಿಮಗೆ ಬೈಗುಳವು ಸಿಗಬಹುದು.