Saturn Transit In Aquarius: 29 ವರ್ಷಗಳ ನಂತರ ಏ.28ಕ್ಕೆ ಬಲಿಷ್ಠ ಸ್ಥಾನ ಕುಂಭಕ್ಕೆ ಶನಿ ಪ್ರವೇಶ; ಇಡೀ ಜಗತ್ತೇ ಆಗಲಿದೆ ಬದಲಾವಣೆ

| Updated By: Srinivas Mata

Updated on: Apr 25, 2022 | 10:45 AM

ಶನಿ ಗ್ರಹವು ಏಪ್ರಿಲ್ 28ನೇ ತಾರೀಕಿನಂದು ತನ್ನ ಬಲಿಷ್ಠ ಸ್ಥಾನವಾದ ಕುಂಭ ರಾಶಿಗೆ ಪ್ರವೇಶ ಮಾಡಲಿದೆ. ಇದರಿಂದ ಜಗತ್ತಿನ ಮೇಲೆ ಏನು ಪ್ರಭಾವ ಆಗಲಿದೆ ಎಂಬುದನ್ನು ತಿಳಿದುಕೊಳ್ಳಿ.

Saturn Transit In Aquarius: 29 ವರ್ಷಗಳ ನಂತರ ಏ.28ಕ್ಕೆ ಬಲಿಷ್ಠ ಸ್ಥಾನ ಕುಂಭಕ್ಕೆ ಶನಿ ಪ್ರವೇಶ; ಇಡೀ ಜಗತ್ತೇ ಆಗಲಿದೆ ಬದಲಾವಣೆ
ಸಾಂದರ್ಭಿಕ ಚಿತ್ರ
Follow us on

ಇದೇ ಏಪ್ರಿಲ್ 28ನೇ ತಾರೀಕಿನಂದು ಶನಿ (Saturn) ಗ್ರಹವು ಕುಂಭ ರಾಶಿಗೆ ಪ್ರವೇಶಿಸಲಿದೆ. ಇದು ಮಂದ ಗ್ರಹಕ್ಕೆ ಬಹಳ ವಿಶೇಷವಾದ ಬಲ ಇರುವ ಮನೆ. ಏನೇ ಮಕರ- ಕುಂಭ ರಾಶಿಗಳು ಶನಿ ಗ್ರಹದ ಸ್ವಕ್ಷೇತ್ರವಾದರೂ ಕುಂಭ ಶನಿ ವಿಶೇಷವಾದ ಬಲ ಇರುವಂಥ ಸ್ಥಾನ. 2022 ಏಪ್ರಿಲ್​ನಿಂದ ಜುಲೈವರೆಗೆ ಹಾಗೂ 2023ರ ಜನವರಿಯಿಂದ 2025ರ ಮಾರ್ಚ್ ತನಕ ಶನಿ ಗ್ರಹವು ಕುಂಭ ರಾಶಿಯಲ್ಲೇ ಸಂಚರಿಸಲಿದೆ. ಈ ಮಧ್ಯೆ ಕೆಲ ತಿಂಗಳು ವಕ್ರೀ ಗತಿಯಲ್ಲಿ ಮಕರ ರಾಶಿಯಲ್ಲಿ ಸಂಚಾರ ಮಾಡಲಿದೆ. ಈ ಅವಧಿಯಲ್ಲಿ ಜಗತ್ತು ಬಹಳ ಬದಲಾಗಲಿದೆ ಎನ್ನುತ್ತಾರೆ ಖ್ಯಾತ ಜ್ಯೋತಿಷಿ ಹಾಗೂ ದೇವಿ ಉಪಾಸಕರಾದ ಪಂಡಿತ್ ವಿಠ್ಠಲ ಭಟ್. ಕುಂಭ ರಾಶಿಯ ಶನಿ ಏಕೆ ವಿಶೇಷ ಮತ್ತು ಜಗತ್ತಿನ ಮೇಲೆ ಆಗುವ ಪರಿಣಾಮಗಳೇನು ಎಂಬುದನ್ನು ಅವರು ಟಿವಿ9 ಕನ್ನಡ ಡಿಜಿಟಲ್ ಜತೆಗೆ ಹಂಚಿಕೊಂಡಿದ್ದು, ಅದನ್ನು ಇಲ್ಲಿ ನೀಡಲಾಗುತ್ತದೆ.

  1. ಕುಂಭ ರಾಶಿಯು ಶನಿಗೆ ಸ್ವಕ್ಷೇತ್ರ. ಅಲ್ಲಿ ಮಕರ ರಾಶಿಯ ರೀತಿಯಲ್ಲಿ ಕುಜ ಗ್ರಹವೋ ಮತ್ತೊಂದೋ ಉಚ್ಚ ಸ್ಥಾನದಲ್ಲಿ ಇರುವುದಿಲ್ಲ. ಈ ರಾಶಿಯಲ್ಲಿ ಮಂದಗ್ರಹದ ಬಲ ಸಂಪೂರ್ಣವಾಗಿ ಇರುತ್ತದೆ. ಒಳ್ಳೆ ಫಲವೋ ಅಥವಾ ದುಷ್ಫಲವೋ ಬಲಯುಕ್ತನಾಗಿ ನೀಡುತ್ತಾನೆ. ಕೊರೊನಾದಿಂದ ಆರ್ಥಿಕತೆ ಹಿಂದುಳಿಯಿತು, ಜನ ಖರ್ಚು ಮಾಡುವುದು ಕಡಿಮೆ ಆಯಿತು ಹೀಗೆ ಏನೆಲ್ಲ ಆರ್ಥಿಕ ತಜ್ಞರು ಹೇಳುತ್ತಿದ್ದರೋ ಅವೆಲ್ಲ ಏಕಾಏಕಿ ಬಿರುಸಾಗುತ್ತವೆ. ಸಿಕ್ಕಾಪಟ್ಟೆ ಬೇಡಿಕೆ ಹೆಚ್ಚಾಗುತ್ತದೆ.
  2. ಜನರು ಸಾಲದ ಬಗ್ಗೆ ಚಿಂತೆ ಮಾಡುವುದಿಲ್ಲ. ಅದೆಂಥ ಕೃಪಣನೇ ಆದರೂ ಬ್ರ್ಯಾಂಡೆಡ್ ವಸ್ತುಗಳನ್ನು ಖರೀದಿಸಲು ಮುಂದಾಗುವುದನ್ನು ಕಾಣಬಹುದು. ಏನಿದ್ದರೇನು ಜೀವನವನ್ನು ಅನುಭವಿಸದಿದ್ದ ಮೇಲೆ ಇದೆಂಥ ಹಣ ಎಂಬ ಭಾವನೆ ಜನರಲ್ಲಿ ಮೂಡುವುದರಿಂದ ಖರ್ಚು, ಸಾಲ ಹೆಚ್ಚಾಗುತ್ತದೆ.
  3. ಸರ್ಕಾರದಿಂದ ನೈಸರ್ಗಿಕ ಸಂಪನ್ಮೂಲದ ಬಳಕೆ ವಿಪರೀತ ಜಾಸ್ತಿ ಆಗುತ್ತದೆ. ಸೇತುವೆ, ರಸ್ತೆಗಳು ಸೇರಿದಂತೆ ಲೌಕಿಕ ದೃಷ್ಟಿಯಲ್ಲಿ ಅಭಿವೃದ್ಧಿ ಎಂದು ಕರೆಸಿಕೊಳ್ಳುವುದಕ್ಕೆ ಖರ್ಚು ಹೆಚ್ಚು ಮಾಡುತ್ತಾರೆ. ಭವಿಷ್ಯಕ್ಕೆ ಅಗತ್ಯ ಇದೆ ಎಂಬುದನ್ನು ಸಹ ಕಡೆಗಣಿಸಿ ನೈಸರ್ಗಿಕ ಸಂಪನ್ಮೂಲದ ಬಳಕೆ ಆಗುತ್ತದೆ.
  4. ಶನಿ ಗ್ರಹವು ಕುಂಭ ರಾಶಿಗೆ ಬಂದಾಗ ಆ ಅವಧಿಯಲ್ಲಿ ಇಡೀ ಜಗತ್ತನ್ನು ಬದಲಿಸುತ್ತಾನೆ. ಹೊಸ ಆವಿಷ್ಕಾರಗಳು, ಶೋಕಿ ವಸ್ತುಗಳನ್ನು ಕಂಡು ಹಿಡಿಯಲಾಗುತ್ತದೆ. ಜನರು ಸಹ ಅವುಗಳ ವ್ಯಸನಕ್ಕೆ ಬೀಳುತ್ತಾರೆ. ಸಾಮಾನ್ಯಕ್ಕಿಂತ ಸ್ವಲ್ಪ ಜಾಸ್ತಿಯೇ ಸೋಮಾರಿಗಳಾಗುತ್ತದೆ.
  5. ಮನೆ ಕಟ್ಟುವುದು, ಪ್ರವಾಸ, ವಿಮಾನ ಪ್ರಯಾಣ ದರ, ರೈಲು- ಬಸ್ಸು ಪ್ರಯಾಣ ದರ, ಪೆಟ್ರೋಲ್- ಡೀಸೆಲ್, ಆಹಾರ ಪದಾರ್ಥಗಳು, ಚಿನ್ನ- ಬೆಳ್ಳಿ ಇವುಗಳೆಲ್ಲದರ ಧಾರಣೆ ಜಾಸ್ತಿ ಆಗುತ್ತಾ ಸಾಗಿದರೂ ಜನರು ಖರೀದಿಗೆ ಮುಗಿಬೀಳುತ್ತಾರೆ. ಆರಂಭದಲ್ಲೇ ಹೇಳಿದಂತೆ ಸಾಲ ಮಾಡಿಯಾದರೂ ತಮಗೆ ಬೇಕಾದದ್ದನ್ನು ಪಡೆಯಬೇಕು ಎಂಬ ಮನಸ್ಥಿತಿ ಇರುತ್ತದೆ.
  6. ಯಾವಾಗ ಜನರಲ್ಲಿ ಖರೀದಿ ಮಾಡುವ ಉಮ್ಮೇದಿ ಬರುತ್ತದೋ ಅದಕ್ಕೆ ತಕ್ಕಂತೆ ಹೊಸ ವ್ಯಾಪಾರ, ವ್ಯವಹಾರಗಳು ಸಾಲ ನೀಡುವ ಆ್ಯಪ್, ಬ್ಯಾಂಕ್​ಗಳು, ಸಂಸ್ಥೆಗಳು ವಿಜೃಂಭಿಸುವುದನ್ನು ಕಾಣಬಹುದು. ತಂತ್ರಜ್ಞಾನ ಕ್ಷೇತ್ರದಲ್ಲಿ ಏಕ್ದಂ ದೊಡ್ಡ ಬದಲಾವಣೆ ಕಾಣಿಸಿಕೊಳ್ಳಲಿದೆ.
  7. ಹೀಗೆ ಕುಂಭ ರಾಶಿಯಲ್ಲಿ ಇರುವ ಶನಿ ಇಷ್ಟೆಲ್ಲ ಶುಭ ಫಲ ಕೊಡುತ್ತಾನಲ್ಲಾ ಎಂದು ಯೋಚಿಸುವ ಹಾಗಿಲ್ಲ. ಏಕೆಂದರೆ ಈ ಬೆಳವಣಿಗೆಯೆಲ್ಲ ಅಸಹಜವಾಗಿ, ದಿಢೀರ್ ಎಂದ ಆದಂತದ್ದಾಗಿರುವುದರಿಂದ ಅದರ ಅಡ್ಡ ಪರಿಣಾಮಗಳು ಇರುತ್ತದೆ. ಜನರ ಆರೋಗ್ಯದ ಮೇಲೆ, ಹಣಕಾಸು ಸ್ಥಿತಿ, ಸಾಲ ಹೀಗೆ ನಾನಾ ರೀತಿಯಲ್ಲಿ ಆಗುತ್ತದೆ.

(ಲೇಖಕರು: ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್
ಸಂಪರ್ಕ ಸಂಖ್ಯೆ: 6361335497)

ಇದನ್ನೂ ಓದಿ: Saturn Transit: 30 ವರ್ಷಗಳ ನಂತರ ಕುಂಭ ರಾಶಿಗೆ ಶನಿ ಪ್ರವೇಶ; ಏ. 28ರ ನಂತರ ಯಾವ ರಾಶಿಗೆ ಏನಿದೆ ವಿಶೇಷ?

Published On - 12:07 pm, Sat, 23 April 22