ಈ ನಕ್ಷತ್ರದಲ್ಲಿ ಜನಿಸಿದವರ ಲಕ್ ಹೇಗಿದೆ ನೋಡಿ? ಜೀವನದಲ್ಲಿ ಇವರಷ್ಟು ಸುಖ ಪಡುವವರು ಯಾರು ಇಲ್ಲ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 15, 2025 | 12:18 PM

ಈ ನಕ್ಷತ್ರದಲ್ಲಿ ಜನಿಸಿದವರು ಎಲ್ಲ ಕ್ಷಣವನ್ನು ಆನಂದಿಸುವರು. ಕಷ್ಟದ ಸಮಯವನ್ನೂ ಸುಖಕರವಾಗಿ ಮಾಡಿಕೊಳ್ಳುವುದು ಗೊತ್ತಾಗಲಿದೆ. ದುಃಖವು ಇವರ ಜೀವನದಲ್ಲಿ ಅತಿ ಕಡಿಮೆ.ಈ ನಕ್ಷತ್ರದ ಜನಿಸಿದವರ ಸ್ವಭಾವ ವಿಭಿನ್ನವಾಗಿ ಇರಲಿದೆ. ಆ ನಕ್ಷತ್ರ ಯಾವುದು? ಈ ನಕ್ಷತ್ರಕ್ಕೆ ಯಾಕಿಷ್ಟು ಮಹತ್ವ, ಈ ನಕ್ಷತ್ರ ಯಾವ ರಾಶಿಯನ್ನು ಹೊಂದಿದೆ. ಈ ನಕ್ಷತ್ರಕ್ಕಿರುವ ಲಾಭಗಳೇನು? ಎಂಬ ಬಗ್ಗೆ ಲೋಹಿತ ಹೆಬ್ಬಾರ್ ಮಾಹಿತಿ ನೀಡಿದ್ದಾರೆ.

ಈ ನಕ್ಷತ್ರದಲ್ಲಿ ಜನಿಸಿದವರ ಲಕ್ ಹೇಗಿದೆ ನೋಡಿ? ಜೀವನದಲ್ಲಿ ಇವರಷ್ಟು ಸುಖ ಪಡುವವರು ಯಾರು ಇಲ್ಲ
ಸಾಂದರ್ಭಿಕ ಚಿತ್ರ
Follow us on

ಉತ್ತರಾ ನಕ್ಷತ್ರಕ್ಕೆ ಉತ್ತರಾಫಲ್ಗುಣೀ ಎಂದೂ ಹೆಸರಿದೆ. ಇದರ ದೇವತೆ ಅರ್ಯಮಾ. ಅಂದರೆ ಸೂರ್ಯನ ಇನ್ನೊಂದು ರೂಪವಾಗಿದೆ. ಅರ್ಯಮಾ ಎಂದರೆ ಶ್ರೇಷ್ಠವಾದ ಶಬ್ದವನ್ನು ಮಾಡುವವನು ಎಂದರ್ಥ. ಸೂರ್ಯನಿಂದ ಶಬ್ದವು ಉತ್ಪತ್ರಿಯಾಗುತ್ತದೆ ಎಂಬುದನ್ನು ಆಧುನಿಕ ವಿಜ್ಞಾನವೂ ಈಗ ತಿಳಿಸಿದೆ. ಆದರೆ ಇದು ಎಷ್ಟೋ ವರ್ಷಗಳ ಭಾರತೀಯರು ಹೇಳಿದ್ದಾರೆ. ಈ ನಕ್ಷತ್ರ ಹಾಸಿಗೆಯಂತೆ ಕಾಣುವ ಎರಡು ನಕ್ಷತ್ರಗಲಕು. ಕನ್ಯಾ ಹಾಗೂ ಸಿಂಹ ರಾಶಿಗಳಲ್ಲಿ ಇದರ ಸ್ಥಾನವಿರಲಿದೆ. ಟೇ ಟೋ ಪಾ ಪಿ ಈ ನಕ್ಷತ್ರದ ಅಕ್ಷರಗಳು. ಇದನ್ನು ಧ್ರುವ ನಕ್ಷತ್ರ ಎಂದು ಕರೆದು ಎಲ್ಲ ಕಾರ್ಯಗಳೂ ಶುಭವಾಗಿದೆ. ಈ ನಕ್ಷತ್ರದ ಜನಿಸಿದವರ ಸ್ವಭಾವ ವಿಭಿನ್ನವಾಗಿ ಇರಲಿದೆ.

ಸುಸಂಪದ :

ಶುಭಕಾರ್ಯಗಳಿಂದ ಸಂಪಾದಿಸಿದ ಧನವು ಇವರ ಬಳಿ ಇರಲಿದೆ. ಅಥವಾ ಪೂರ್ವಾರ್ಜಿತ ಧನವು ಸತ್ಕರ್ಮದಿಂದ ಪಡೆದುದಾಗಿರಲಿದೆ.

ವಿದ್ಯೆಯಿಂದ ಧನಾಗಮನ :

ಇವರು ಹೆಚ್ಚು ವಿದ್ಯಾಭ್ಯಾಸದಲ್ಲಿ ತೊಡಗಿ ಅದರಿಂದ ಅಧಿಕ ಸಂಪತ್ತನ್ನು ಗಳಿಸುವರು. ಬೋಧಕ ವೃತ್ತಿಯಿಂದಲೂ ಸಂಪಾದನೆ ಮಾಡಿಕೊಳ್ಳುವರು. ಒಟ್ಟಿನಲ್ಲಿ ದೈಹಿಕ‌ಶ್ರಮಕ್ಕಿಂತ ವಿದ್ಯಾಭ್ಯಾಸಕ್ಕೆ ಯೋಗ್ಯವಾದ ವೃತ್ತಿಯನ್ನು ಆರಿಸಿಕೊಂಡು ಸಂಪತ್ತನ್ನು ಪಡೆಯುವರು.

ಭೋಗದಲ್ಲಿ ರಕ್ತಿ :

ಇವರು ಭೋಗ ಜೀವನವನ್ನು ಇಷ್ಟಪಡುವರು. ಭೋಗಿಸಲು ಬೇಕಾದ ಮಾರ್ಗ ವಸ್ತುಗಳ ಅನ್ವೇಷಣೆ ಮಾಡುವರು.

ಎಲ್ಲಿಯೂ ಸುಖ :

ಎಲ್ಲ ಕ್ಷಣವನ್ನು ಆನಂದಿಸುವರು. ಕಷ್ಟದ ಸಮಯವನ್ನೂ ಸುಖಕರವಾಗಿ ಮಾಡಿಕೊಳ್ಳುವುದು ಗೊತ್ತಾಗಲಿದೆ. ದುಃಖವು ಇವರ ಜೀವನದಲ್ಲಿ ಅತಿ ಕಡಿಮೆ.

ಸಾಹಸಿ :

ಸಾಹಸದ ಕೆಲಸದಲ್ಲಿ ಆಸಕ್ತಿ ಹೆಚ್ಚು. ರಿಸ್ಕ್ ತಗೆದುಕೊಂಡು ಕೆಲಸ ಮಾಡಿ ಸಾಧಿಸುವವರಲ್ಲಿ ಇವರು ಉತ್ತಮರು.

ಮೃದು ಮಾತು :

ಈ ನಕ್ಷತ್ರದವರು ಮಾತನಾಡುವುದು ಕಡಿಮೆ ಮತ್ತು ಬಹಳ ಮೃದುವಾಗಿರುತ್ತದೆ. ಏರುದನಿಯಲ್ಲಿ ಇವರ ಮಾತು ಕೇಳಲು ಸಿಗದು.

ಧನುರ್ವೇದಜ್ಞ :

ಬಿಲ್ಲು ವಿದ್ಯೆಯನ್ನು ಚೆನ್ನಾಗಿ ಅರಿಯುವವನಾಗುವನು ಅಥವಾ ಧನುರ್ವಿದ್ಯೆಯಂತಹ ಗುರಿಯಿಡುವ ವಿದ್ಯೆಯನ್ನು ಕರಗತ ಮಾಡಿಕೊಳ್ಳುವನು. ಶಸ್ತ್ರವನ್ನು ಬಳಸಿ ಗುರಿಯಿಡುವ ಸ್ಪರ್ಧೆಯಲ್ಲಿ ಅಗ್ರ.

ಸೈನಿಕ :

ಸೈನ್ಯಕ್ಕೆ ಸೇರುವ ಆಸಕ್ತಿ ಇರುವುದು. ಹಾಗಯೇ ಸೈನ್ಯದಲ್ಲಿ ಉತ್ತಮಸ್ಥಾನವನ್ನೂ ಗಳಿಸಬಹುದು, ನಾಯಕನೂ ಆಗಬಹುದು. ಜನ್ಮಕಾಲದಲ್ಲಿ ಈ ನಕ್ಷತ್ರದಲ್ಲಿ ಶುಭಗ್ರಹರಿದ್ದರೆ ಇದು ಸಾಧ್ಯವಾಗಲಿದೆ.

ತನ್ನವರಲ್ಲಿ ಪ್ರೀತಿ :

ಬಂಧುಗಳು ತನ್ನವರ ಮೇಲೆ ಸಹಾನುಭೂತಿ ಇರಲಿದೆ. ಅವರಿಗೆ ಬೇಕಾದ ಸಹಾಯವನ್ನು ಮಾಡುವ ಮನಸ್ಸು ಇರಲಿದೆ. ನಾವು ನಮ್ಮವರು ಎಂಬ ಬಾಂಧವ್ಯವನ್ನು ಈ ನಕ್ಷತ್ರದವರು ಬೆಳೆಸಿಕೊಳ್ಳುವರು.

ಈ ಫಲಗಳು ನಕ್ಷತ್ರದಲ್ಲಿ ಶುಭಾಶುಭಗ್ರಹಗಳ ಆಗಮ ಮತ್ತು ಜನ್ಮ ಕಾಲದಲ್ಲಿ ಇರುವ ಗ್ರಹಸ್ಥಿತಿಗಳನ್ನು ಅನುಸರಿಸಿ ಇರಲಿದೆ‌.

– ಲೋಹಿತ ಹೆಬ್ಬಾರ್ – 8762924271

Published On - 12:13 pm, Wed, 15 January 25