ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಸೆಪ್ಟೆಂಬರ್ 10 ರಿಂದ 16 ರವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.
ಮೇಷ ರಾಶಿ : ಈ ವಾರವು ಸಪ್ಟೆಂಬರ್ ತಿಂಗಳ ಎರಡನೇ ವಾರವಾಗಿದ್ದು ಮಿಶ್ರಫಲವು ಇರಲಿದೆ. ಕುಟುಂಬ ಸೌಖ್ಯವು ಶತ್ರುಗಳ ನಾಶವೂ ಮಕ್ಕಳಿಂದ ಕೀರ್ತಿಯೂ ಲಭಿಸುವುದು. ಏಕಾದಶದ ಶನಿಯು ನಿಮಗೆ ಕಾರ್ಯದಲ್ಲಿ ಏಳ್ಗೆಯಾಗುವಂತೆ ನೋಡಿಕೊಳ್ಳುವನು. ಈ ವಾರ ನಿಮ್ಮ ಬಗೆಗಿನ ಗೌರವ ಆದರಗಳು ಜನರಲ್ಲಿ ಹೆಚ್ಚಿರುವುದು. ಅದನ್ನು ಇನ್ನೊಬ್ಬರ ಬಳಿಯೂ ಹೇಳುವರು. ಪತ್ನಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಕಾರ್ತಿಕೇಯನ ಧ್ಯಾನವನ್ನು ಮಾಡಿ. ಬರುವ ಕತ್ತನ್ನು ಬೆಳಕಾಗಿಸುವನು.
ವೃಷಭ ರಾಶಿ : ಇದು ಸಪ್ಟೆಂಬರ್ ನ ಎರಡನೇ ವಾರವಾಗಿದ್ದು ಚತುರ್ಥದ ಬುಧನ ಕಾರಣ ಮನೆಯಲ್ಲಿ ಹೆಚ್ಚು ಬಂಧುಗಳು ಇರುವರು. ಅತಿಥಿ ಸತ್ಕಾರವನ್ನು ಹೆಚ್ಚು ಮಾಡುವಿರಿ. ಸಹೋದರ ಜೊತೆ ಉತ್ತಮ ಬಾಂಧವ್ಯವು ಉಂಟಾಗಬಹುದು. ಈ ವಾರ ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಫಲಾಫಲಗಳು ದೊರೆಯುವುದು ಕಷ್ಡವಾದೀತು. ಮಾತು ಎಷ್ಟೇ ಆರ್ದ್ರವಾಗಿದ್ದರೂ ಅದನ್ನು ಕೇಳಿಸಿಕೊಳ್ಳುವ ಸಹೃದಯರು ಸಿಗುವುದಿಲ್ಲ. ನಿಮ್ಮ ಸಂಕಟವನ್ನು ನೀವೇ ನುಂಗಿಕೊಳ್ಳಬೇಕಾದೀತು. ಗುರುದರ್ಶನದಿಂದ ನಿಮಗೆ ಸಮಾಧಾನವು ಸಿಗಲಿದೆ.
ಮಿಥುನ ರಾಶಿ : ಈ ತಿಂಗಳ ಎರಡನೇ ವಾರದಲ್ಲಿ ಗ್ರಹಗತಿಗಳು ಕೊಂಚ ಬದಲಾಗಿದ್ದು ನಿಮಗೆ ಶುಭಫಲವನ್ನೇ ಕೊಡುವರು. ದ್ವಿತೀಯದಲ್ಲಿ ಶುಕ್ರನಿದ್ದು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹವನ್ನೂ ಅನುಕೂಲವನ್ನೂ ಮಾಡಿಕೊಡುವನು. ತೃತೀಯದಲ್ಲಿ ಬುಧನಿರುವುದರಿಂದ ನಿಮ್ಮ ಜ್ಞಾನದ ಪ್ರದರ್ಶನವಾಗುವುದು. ಈ ವಾರ ದೂರದ ಊರಿನಿಂದ ಬಂದ ಬಂಧುಗಳು ನಿಮ್ಮ ಜೊತೆ ವಾಗ್ವಾದವನ್ನು ಮಾಡಬಹುದು. ತಂದೆಯ ಯಜಮಾನತ್ವದಲ್ಲಿ ಕುಟುಂಬವು ಬಹಳ ಚಂದವಾಗಿ ಇರುವುದು.
ಕಟಕ ರಾಶಿ : ಈ ವಾರ ಶುಭಾಶುಭಫಲಗಳೆರಡೂ ಅಲ್ಪವೇ ಇರುವುವು. ಅಷ್ಟಮದಲ್ಲಿ ಇರುವ ಶನಿಯು ಕಂಟಕಗಳನ್ನು ತಪ್ಪಿಸಿ ನಿಮ್ಮ ಆಯುಸ್ಸನ್ನು ಹೆಚ್ಚು ಮಾಡುವನು. ಆರೋಗ್ಯದ ಕಡೆ ಗಮನಬೇಕಾಗುವುದು. ಈ ವಾರ ನೀವು ಕುಟುಂಬದಲ್ಲಿ ತನ್ನ ನಿರ್ಧಾರವೇ ಅಂತಿಮವಾಗಬೇಕು ಎಂಬ ಪಟ್ಟು ಹಿಡಿಯುವಿರಿ. ಅಹಂಕಾರ ಪಡುವ ಸನ್ನಿವೇಶಗಳು ಎದುರಾಗಬಹುದು. ಕುಟುಂಬದಲ್ಲಿ ಕಿರಿಕಿರಿಯಾಗುವ ಸಾಧ್ಯತೆ ಇದೆ. ಕುಲದೇವರ ಆರಾಧನೆಯಿಂದ ಆರೋಗ್ಯವು ಸುಧಾರಿಸುವುದು.
ಸಿಂಹ ರಾಶಿ : ಶುಭಾಶುಭಗಳು ಎರಡೂ ಈ ವಾರದಲ್ಲಿ ನಿಮಗೆ ಇರಲಿದೆ. ಸಪ್ತಮದಲ್ಲಿ ಶನಿಯು ಇದ್ದು ಸಂಗಾತಿಯ ಜೊತೆ ವೈಮನಸ್ಯ ಬರುವುದು. ಹಿರಿಯರ ಮೇಲೆ ಅನಾದರವು ಇರುವುದು. ಮಾತಿನಲ್ಲಿ ಸಿಟ್ಟಿರುವುದು. ಈ ವಾರ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಸರಿಯಾದ ಮಾರ್ಗವು ಸಿಗಲಿದೆ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುವಿರಿ. ಧಾರ್ಮಿಕ ಕಾರ್ಯಗಳು ನಿಮ್ಮ ನೇತೃತ್ವದಲ್ಲಿ ನಡೆಯುವುದು. ಮಹಾಲಕ್ಷ್ಮಿಯ ಕೃಪೆಯನ್ನು ಪಡೆಯಿರಿ.
ಕನ್ಯಾ ರಾಶಿ : ಸಪ್ಟೆಂಬರ್ ತಿಂಗಳ ಎರಡನೇ ವಾರವು ಶುಭಶುಭಾಫಲಗಳು ಇರಲಿದ್ದು ಸ್ವಲ್ಪ ಸಂತೋಷವಾಗುವುದು. ಗುರು ಹಾಗೂ ರಾಹುಗಳು ಅಷ್ಟಮದಲ್ಲಿ ಇರುವುದರಿಂದ ಆರೋಗ್ಯದಲ್ಲಿ ವ್ಯತ್ಯಾಸ, ವ್ಯವಹಾರದಲ್ಲಿ ಹಿನ್ನಡೆ, ಅಪಮಾನವನ್ನು ಅನುಭವಿಸಬೇಕಾಗುವುದು. ಈ ವಾರ ಅಂತರಂಗ ಮತ್ತು ಬಹಿರಂಗಗಳನ್ನು ಸಮತೋಲನದಿಂದ ಇರಿಸಿಕೊಳ್ಳಬೇಕಾದೀತು. ಆರ್ಥಿಕ ವಿಚಾರದಲ್ಲಿ ಲೆಕ್ಕ ಪರಿಶೋಧಕರ ಮಾರ್ಗದರ್ಶನ ಪಡೆಯಿರಿ. ವಿಪತ್ತು ಬರುವ ಸೂಚನೆ ಇರಲಿದ್ದು ಬೇಕಾದ ತಯಾರಿ ಮಾಡಿಕೊಳ್ಳಿ. ದೋಷಪರಿಹಾರಾರ್ಥವಾಗಿ ನೀವು ಗೋಗ್ರಾಸವನ್ನು ನೀಡಿ.
ತುಲಾ ರಾಶಿ : ಈ ವಾರವು ಮಿಶ್ರಫಲವೇ ಇರುವುದು. ಸೂರ್ಯ ಹಾಗೂ ಕುಜರು ದ್ವಾದಶಸ್ಥಾನದಲ್ಲಿ ಇದ್ದು ನಿಮ್ಮ ಸಂಪತ್ತನ್ನು ವ್ಯಯಗೊಳಿಸುವರು. ಶನಿಯು ಪಂಚಮದಲ್ಲಿ ಇರುವ ಕಾರಣ ನಿಮ್ಮ ಪ್ರತಿಭೆಗಳು ಸಕಾಲಕ್ಕೆ ಪ್ರದರ್ಶನವಾಗದೇ ಹೋಗಬಹುದು. ಈ ವಾರ ಕೆಲವು ವಿಚಾರಗಳ ಬಗ್ಗೆ ಅತಿಯಾದ ಆಲೋಚನೆಯನ್ನು ಮಾಡುವುದು ಬೇಡ. ಇದರಿಂದ ಕಾಲಾನಂತರ ನೋವೇ ಸಿಗಬಹುದು. ಕಳೆದ ವಿಚಾರಗಳನ್ನು ಮತ್ತೆ ನೆನಪಿಸಿಕೊಳ್ಳುವುದು ಬೇಡ. ಸುಬ್ರಹ್ಮಣ್ಯನ ಆರಾಧನೆಯನ್ನು ಮಾಡಿ.
ವೃಶ್ಚಿಕ ರಾಶಿ : ಈ ಮಾಸದ ಎರಡನೇ ವಾರವು ಹೆಚ್ಚು ಶುಭಫಲದಿಂದ ಕೂಡಿದ್ದು ನಿಮಗೆ ಉತ್ಸಾಹವು ಹೆಚ್ಚಾಗುವುದು. ನವಮದಲ್ಲಿ ಶುಕ್ರನಿದ್ದು ನಿಮ್ಮ ಸಂಪತ್ತು ವರ್ಧಿಸುವಂತೆ ಮಾಡುವನು. ಬರಬೇಕಾದ ಹಣವೂ ನಿಮಗೆ ಯಾವುದೇ ಚಿಂತೆ ಇಲ್ಲದೇ ಬರುವುದು. ಈ ವಾರ ಸರಿಯಾದ ಕ್ರಮದಲ್ಲಿ ಕಾರ್ಯವನ್ನು ಮತ್ತು ಅದರ ಪ್ರಸ್ತುತಿಯನ್ನು ಮಾಡಿದರೆ ನಿಮ್ಮ ಬೆಳವಣಿಗೆಯು ಸಾಧ್ಯವಾಗಬಹುದು. ಸರ್ಕಾರದ ಕಡೆಯಿಂದ ಆಗಬೇಕಾದ ಕಾರ್ಯಗಳು ಬೇಗನೆ ಆಗುವುದು. ಕುಟುಂಬದಲ್ಲಿ ಏನಾದರೂ ಮನಸ್ತಾಪಗಳು ಬರುತ್ತ ಇರಬಹುದು. ಶನೈಶ್ಚರಿಗೆ ಎಳ್ಳಿನ ದೀಪವನ್ನು ಬೆಳಗಿ.
ಧನು ರಾಶಿ : ಸಪ್ಟೆಂಬರ್ ಮಾಸದ ಎರಡನೇ ವಾರವು ನಿಮಗೆ ಹೆಚ್ಚು ಶುಭಪ್ರದವಾಗಿದೆ. ಅಷ್ಟಮದಲ್ಲಿ ಇರುವ ಶುಕ್ರನು ಪತ್ನಿಯ ಆರೋಗ್ಯವನ್ನು ಕೆಡಬಹುದು. ಉಳಿದಂತೆ ಎಲ್ಲರ ಗ್ರಹರೂ ಉತ್ತಮಸ್ಥಾನದಲ್ಲಿದ್ದು ಮಂಗಲವನ್ನು ಮಾಡುವರು. ಈ ವಾರ ಹಳೆಯ ಅನಗತ್ಯ ದಾಖಲೆಗಳನ್ನು ತೆಗೆದು ಹಾಕಿ ಅಗತ್ಯವಾದುದನ್ನು ಮಾತ್ರ ಇಟ್ಟುಕೊಳ್ಳುವಿರಿ. ಕಬ್ಬಿಣದ ಮಾರಾಟವನ್ನು ಮಾಡುವವರು ಆದಷ್ಟು ಜಾಗರೂಕರಾಗಿರಬೇಕಾದೀತು. ವಾಹನ ಸಂಚಾರವನ್ನು ಕಡಿಮೆ ಮಾಡಿಕೊಳ್ಳುವುದು ಉಚಿತ. ಕುಲದೇವರ ಆರಾಧನೆಯನ್ನು ಮಾಡಬೇಕಾಗುವುದು.
ಮಕರ ರಾಶಿ : ಈ ವಾರವು ಹೆಚ್ಚು ಶುಭವಿರುವ ವಾರವಾಗಲಿದೆ. ಸಪ್ತಮದಲ್ಲಿ ಶುಕ್ರನು ನಿಮಗೆ ವಿವಾಹಕ್ಕೆ ಬೇಕಾದ ಅನುಕೂಲತೆಗಳನ್ನು ಮಾಡುವನು. ಅಷ್ಟಮದಲ್ಲಿರುವ ಬುಧನಿಂದ ಅರೋಗ್ಯದಲ್ಲಿ ವ್ಯತ್ಯಾಸವಾಗುವುದು. ಈ ವಾರ ಅನವಶ್ಯಕ ವಿಷಯಗಳಿಗೆ ಹಣವನ್ನು ಖರ್ಚು ಮಾಡುವಿರಿ. ಉದ್ಯೋಗವನ್ನು ಕೊಡಿಸುವುದಾಗಿ ಹಣವನ್ನು ಕೇಳಬಹುದು. ತಂತ್ರಜ್ಞರಿಗೆ ಈ ವಾರವು ಅನುಕೂಲಕರವಾಗಿದೆ. ಮಹಾವಿಷ್ಣುವಿನ ಅವತಾರವಾದ ಧನ್ವಂತರಿಯನ್ನು ಉಪಾಸನೆ ಮಾಡಿ. ಆರೋಗ್ಯದ ಸಮಸ್ಯೆಯು ದೂರಾಗಬಹುದು.
ಕುಂಭ ರಾಶಿ : ಇದು ಎರಡನೇ ವಾರವಾಗಿದ್ದು ಗ್ರಹಗಳು ಶುಭಾಶುಭಗಳನ್ನು ಮಿಶ್ರಣ ಮಾಡಿ ಕೊಡುವರು. ನಿಮ್ಮ ರಾಶಿಯಲ್ಲಿ ಶನಿಯು ಇರುವುದರಿಂದ ದೇಹಾಲಸ್ಯವು ಅಧಿಕವಾಗಿ ಇರುವುದು. ಈ ವಾರ ವಿರಸದ ಸನ್ನಿವೇಶಗಳು ಅಧಿಕವಾಗಿ ಬರಬಹುದು. ಎಲ್ಲರ ಜೊತೆ ಸ್ನೇಹದಿಂದ ಮಾತನಾಡಿ. ನಿಮ್ಮ ಗುಣಗಳಿಂದ ನೀವು ದೊಡ್ಡವರಾಗುವಿರಿ. ಈ ವಾರವು ನೀವು ಅಂದುಕೊಂಡಷ್ಟು ಆರ್ಥಿಕಸುಧಾರಣೆ ಸಾಧ್ಯವಾಗದಿದ್ದರೂ ತಕ್ಕಮಟ್ಟಿಗೆ ನೆಮ್ಮದಿಯು ಸಿಗುವುದು. ಆದಿತ್ಯಹೃದಯವನ್ನು ಪಠಿಸಿರಿ.
ಮೀನ ರಾಶಿ : ಸಪ್ಟೆಂಬರ್ ತಿಂಗಳ ಎರಡನೇ ವಾರವು ಇದಾಗಿದ್ದು ಮಿಶ್ರಫಲವು ನಿಮಗೆ ಇರಲಿದೆ. ಸೂರ್ಯನು ಸಪ್ತಮದಲ್ಲಿ ಇರುವನು. ಕುಜನೂ ಇರುವುದರಿಂದ ದಾಂಪತ್ಯದಲ್ಲಿ ವೈಮನಸ್ಯವು ಬರಬಹುದು. ಈ ವಾರ ನಿಮ್ಮ ಕುರಿತು ಅಪಸ್ವರಗಳು ಬಂದರೂ ಆ ಬಗ್ಗೆ ಕಿವಿಗೊಡದೆ ಮಾನಸಿಕವಾಗಿ ಧೈರ್ಯದಿಂದ ಇರಬೇಕಾಗುವುದು. ಇದರಿಂದ ನಿಮಗೆ ಅನುಕೂಲವಿರಲಿದೆ. ಈ ವಾರ ಮನೆಯ ಸದಸ್ಯರು ನಿಮಗೆ ಬೇಕಾದ ಸಹಕಾರವನ್ನು ನೀಡುವರು. ಮಹಾವಿಷ್ಣುವಿನ ಉಪಾಸನೆಯಿಂದ ಆರೋಗ್ಯವು ಸುಧಾರಿಸುವುದು.
-ಲೋಹಿತಶರ್ಮಾ 8762924271 (what’s app only)