ಈ ಮೂರು ರಾಶಿಯ ಜನರಿಗೆ ಪ್ರೀತಿ ಪ್ರೇಮ ಅಂದರೆ ಭಯವೋ ಭಯ; ಯಾರು ಆ ರಾಶಿಯವರು, ತಿಳಿದುಕೊಳ್ಳಿ

ಧನು ರಾಶಿಯ ಜನ ಸಜಹವಾಗಿರುತ್ತಾರೆ, ಸಾಹಸಿಗಳೂ ಆಗಿರುತ್ತಾರೆ. ಆದರೆ ಹೃದಯದ ವಿಷಯ ಬಂದಾಗ ಅವರನ್ನು ಭಯ ಆವರಿಸಿಬಿಡುತ್ತದೆ. ಪ್ರೀತಿ ಪ್ರೇಮದಿಂದ ಹಿಂಜರಿದುಬಿಡುತ್ತಾರೆ. ತಮ್ಮ ಮೇಲೆ ತಾವೇ ಕಾವಲು ಹಾಕಿಕೊಂಡುಬಿಡುತ್ತಾರೆ.

ಈ ಮೂರು ರಾಶಿಯ ಜನರಿಗೆ ಪ್ರೀತಿ ಪ್ರೇಮ ಅಂದರೆ ಭಯವೋ ಭಯ; ಯಾರು ಆ ರಾಶಿಯವರು, ತಿಳಿದುಕೊಳ್ಳಿ
ಈ ಮೂರು ರಾಶಿಯ ಜನರಿಗೆ ಪ್ರೀತಿ ಪ್ರೇಮ ಅಂದರೆ ಭಯವೋ ಭಯ; ಯಾರು ಆ ರಾಶಿಯವರು, ತಿಳಿದುಕೊಳ್ಳಿ

ಅನೇಕರು ತಮ್ಮ ನೆಚ್ಚಿನವರ ಜೊತೆ ಪ್ರೀತಿ ಪ್ರೇಮದಲ್ಲಿ ಸಿಲುಕಿ ಬೀಳುವ ಕನಸು ಕಾಣುತ್ತಾ ಇರುತ್ತಾರೆ. ಅವರು ಸದಾ ರಮ್ಯ ಕಾಲ್ಪನಿಕ ರೊಮ್ಯಾನ್ಸ್​​ ಲೋಕದಲ್ಲಿ ವಿಹರಿಸುತ್ತಾ ಇರುತ್ತಾರೆ. ತಮ್ಮ ಪ್ರಿಯ ವ್ಯಕ್ತಿಯ ಜೊತೆ ಜೀವನ ಕಳೆಯಲು ಹಾತೊರೆಯುತ್ತಿರುತ್ತಾರೆ. ಅಂತಹವರು ಸಿಕ್ಕಿಬಿಟ್ಟರೆ ಅವರು ಜೀವನವಿಡೀ ಸುಂದರವಾಗಿ ಕಳೆಯಲು ಇಚ್ಛಿಸುತ್ತಾ ಇರುತ್ತಾರೆ.

ಯಾವುದೇ ವ್ಯಕ್ತಿಯಾಗಲಿ ಜೀವನದಲ್ಲಿ ಒಮ್ಮೆಯಾದರೂ ಯಾವುದೋ ಒಬ್ಬ ವ್ಯಕ್ತಿಯ ಜೊತೆ ಪ್ರೀತಿಯಲ್ಲಿ ಸಿಲುಕಲು ಶಕ್ತಿಮೀರಿ ಹಾತೊರೆಯುತ್ತಾರೆ. ಆದರೆ ಕೆಲವರು ಇರುತ್ತಾರೆ. ಅಂತಹ ಪ್ರೀತಿ ಪ್ರೇಮದ ಬಗ್ಗೆ ತಲೆಯೇ ಕೆಡಿಸಿಕೊಳ್ಳುವುದಿಲ್ಲ. ಅವರು ಪ್ರೀತಿಯನ್ನರಸಿ ಹೋಗುವುದಿಲ್ಲ; ಬದಲಿಗೆ ಪ್ರೀತಿ ಪ್ರೇಮ ಎಂಬುದು ಅವರನ್ನೇ ಹುಡುಕಿ ಬರುತ್ತದೆ. ಆದರೆ ಇನ್ನು ಕೆಲವರು ಇರುತ್ತಾರೆ, ಅಂತಹವರು ಪ್ರೀತಿ ಪ್ರೇಮ ಅಂದರೇನೇ ಭಯದಲ್ಲಿರುತ್ತಾರೆ. ತಮ್ಮನ್ನು ತಾವು ಹಿಡಿತದಲ್ಲಿಟ್ಟುಕೊಳ್ಳಲು ಸದಾ ಜಾಗೃತರಾಗಿರುತ್ತಾರೆ. ತಮ್ಮನ್ನು ನಿಗ್ರಹದಲ್ಲಿರಿಸಿಕೊಳ್ಳಲು ತುಡಿಯುತ್ತಿರುತ್ತಾರೆ. ಅವರಿಗೆ ಪ್ರೀತಿಯ ಮಹತ್ವ ಅರಿವಿಗೆ ಬರುವುದಿಲ್ಲ.

ಜ್ಯೋತಿಷ್ಯದ ಪ್ರಕಾರ ಈ ಮೂರು ರಾಶಿಯ ಜನರಿಗೆ ಪ್ರೀತಿ ಪ್ರೇಮ ಅಂದರೆ ರಾಶಿ ರಾಶಿ ಭಯವಿರುತ್ತದೆ; ಯಾರು ಆ ರಾಶಿಯವರು, ತಿಳಿದುಕೊಳ್ಳಿ.

1. ಸಿಂಹ ರಾಶಿ Leo:

ಸಿಂಹ ರಾಶಿಯ ಜನ ಭರಪೂರ ಆತ್ಮವಿಶ್ವಾಸಿಗಳು. ಜೊತೆಗೆ ಅಂತರ್ಮುಖಿಗಳೂ ಹೌದು. ಅವರಿಗೆ ಹೃದಯ ಹೊಡೆದು ಚೂರಾಗುವ ಭೀತಿಯಿರುತ್ತದೆ. ಅವರು ಜನರ ಮೇಲೆ ಭರವಸೆ ಇಡುವುದಿಲ್ಲ. ಏಕೆಂದರೆ ಜನರ ಮೇಲೆ ಅವರಿಗೆ ಭರವಸೆಯಿರುವುದಿಲ್ಲ. ಹಾಗಾಗಿಯೇ ಪೂರ್ತಿ ಮನಸಿನಿಂದ ಯಾರಿಗೂ ಸಮರ್ಪಿತರಾಗುವುದಿಲ್ಲ.

2. ಕನ್ಯಾ ರಾಶಿ Virgo:

ಕನ್ಯಾ ರಾಶಿ ಜಾತಕದವರು ಪ್ರೀತಿ ಪ್ರೇಮದಿಂದ ಗಾವುದ ಗಾವುದ ದೂರ ಇರುತ್ತಾರೆ. ಅವರಿಗೆ ಪ್ರೀತಿ ಪ್ರೇಮವೆಂದರೆ ಅದೊಂಥರಾ ಅವ್ಯಕ್ತ ಭಯವಿರುತ್ತದೆ. ಅವರಿಗೆ ತಮ್ಮ ಮೇಲೆ ವಿಶ್ವಾಸ ಇದ್ದರೂ ಬೇರೆಯವರು ತಮಗೆ ಎಲ್ಲಿ ಮೋಸ ಮಾಡಿಬಿಡುವರೋ ಎಂಬ ಭಯ- ಆತಂಕ ಕಾಡುತ್ತಿರುತ್ತದೆ. ಹಾಗಾಗಿಯೇ ಯಾವಾಗಲಾದರೂ ತಮಗೆ ಯಾರ ಮೇಲಾದರೂ ಪ್ರೀತಿ ಪ್ರೇಮ ಮೂಡಿದರೆ, ಪ್ರೇಮ ವೈಫಲ್ಯದ ಭಯದಿಂದ ಹಿಂದೆಸರಿದುಬಿಡುತ್ತಾರೆ. ತಮ್ಮನ್ನು ತಾವೇ ನಿಗ್ರಹಿಸಿಕೊಂಡುಬಿಡುತ್ತಾರೆ.

3. ಧನು ರಾಶಿ Sagittarius:

ಧನು ರಾಶಿಯ ಜನ ಸಜಹವಾಗಿರುತ್ತಾರೆ, ಸಾಹಸಿಗಳೂ ಆಗಿರುತ್ತಾರೆ. ಆದರೆ ಹೃದಯದ ವಿಷಯ ಬಂದಾಗ ಅವರನ್ನು ಭಯ ಆವರಿಸಿಬಿಡುತ್ತದೆ. ಪ್ರೀತಿ ಪ್ರೇಮದಿಂದ ಹಿಂಜರಿದುಬಿಡುತ್ತಾರೆ. ತಮ್ಮ ಮೇಲೆ ತಾವೇ ಕಾವಲು ಹಾಕಿಕೊಂಡುಬಿಡುತ್ತಾರೆ!

(these 3 zodiac sign people have a phobia of falling in love)

Read Full Article

Click on your DTH Provider to Add TV9 Kannada