Horoscope: ರಾಶಿಭವಿಷ್ಯ, ಉದ್ಯೋಗದ ವಿಚಾರದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಿ, ಕೋಪ ನಿಯಂತ್ರಿಸಿ

|

Updated on: Dec 02, 2023 | 12:10 AM

ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಡಿಸೆಂಬರ್​​ 02) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ, ಉದ್ಯೋಗದ ವಿಚಾರದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಿ, ಕೋಪ ನಿಯಂತ್ರಿಸಿ
ಪ್ರಾತಿನಿಧಿಕ ಚಿತ್ರ
Follow us on

ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಡಿಸೆಂಬರ್​​ 02) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಪುಷ್ಯಾ, ಯೋಗ: ಬ್ರಹ್ಮ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 43 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 00 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:33 ರಿಂದ 10:57 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:47 ಗಂಟೆ 03:11 ನಿಮಿಷಕ್ಕೆ, ಗುಳಿಕ ಕಾಲ ಬೆಳಗ್ಗೆ 06:43 ರಿಂದ 08:08ರ ವರೆಗೆ.

ಮೇಷ ರಾಶಿ: ನಿಮ್ಮದಲ್ಲದ ಕೆಲಸವನ್ನು ನೀವು ಮಾಡಬೇಕಾಗುವುದು. ಕೆಲವರಿಂದ ನಕಾರಾತ್ಮಕ ಮಾತುಗಳನ್ನು ಕೇಳಬೇಕಾಗುವುದು. ನಿಮ್ಮ ನೆಚ್ಚಿನ ಜನರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಸ್ತ್ರೀಯರು ನಿಮ್ಮ ಮೇಲೆ ಏನಾದರೂ ಆರೋಪ ಮಾಡಿಯಾರು. ಪಕ್ಷಪಾತ ಮಾಡುವುದು ಬೇಡ. ಸಂಬಂಧಿಸಿದ ವಿಚಾರಕ್ಕೆ ನಿಮ್ಮ ಸಮರ್ಥನೆ ಇರಲಿ. ಯಾರ ಮೇಲೂ ನಿಮ್ಮದೇ ಆದ ನಿಲವು ಬೇಡ. ನೋವಿನಿಂದ ಹೊರಬರಲು ನಿಮಗೆ ಕಷ್ಟವಾದೀತು. ದಿನದಲ್ಲಿ ಬದಲಾವಣೆಯನ್ನು ತಂದುಕೊಳ್ಳುವಿರಿ.‌ ನಿಮ್ಮ ಮನಸ್ಸು ಬಹಳ ದುರ್ಬಲವಾಗಿದ್ದು ಬಲಮಾಡಿಕೊಳ್ಳು ಮಾರ್ಗವನ್ನು ಕಂಡುಕೊಳ್ಳಿ. ಮಾತಿನಲ್ಲಿ ಕುಚೋದ್ಯ ಮಾಡುವುದನ್ನು ಕಡಿಮೆ ಮಾಡಿ. ವ್ಯಾಪಾರದಲ್ಲಿ ಲಾಭವನ್ನೇ ಗಮನದಲ್ಲಿಟ್ಟು ಉಳಿದುದನ್ನು ಮರೆಯುವಿರಿ. ನಿಮ್ಮ ಬಗ್ಗೆ ಅನುಕಂಪ ಬರುವುದು. ಪ್ರೀತಿಸಿದವರು ನಿಮಗೆ ಸಮಯ ಕೊಡದೇ ಬೇಸರಿಸಿಕೊಳ್ಳುವಿರಿ.

ವೃಷಭ ರಾಶಿ: ಯಾರ ಮಾತನ್ನೂ ಕೇಳದೇ ಸ್ವತಂತ್ರವಾಗಿ ನೀವು ಆಲೋಚಿಸುವಿರಿ. ಯಾವುದಾದರೂ ಸಂಘವನ್ನು ಕಟ್ಟಿಕೊಳ್ಳುವ ನಿರ್ಧಾರವನ್ನು ಮಾಡುವಿರಿ. ಸ್ತ್ರೀಯರಿಂದ ಲಾಭವನ್ನು ಪಡೆಯುವಿರಿ. ಇಂದಿನ‌ ಸ್ನೇಹಿತರ ಭೇಟಿಯಿಂದ ನಿಮ್ಮಲ್ಲಿ‌ ಉತ್ಸಾಹವನ್ನು ಜಾಗರೂಕಗೊಳಿಸುವುದು. ಕಛೇರಿಯಲ್ಲಿ ನಿಮ್ಮ ಶ್ರಮವು ಲೆಕ್ಕಕ್ಕೆ ಬಾರದೇ ಹೋದೀತು. ಶ್ರಮಕ್ಕೆ ಫಲವನ್ನು ನಿರೀಕ್ಷಿಸುತ್ತ‌ ಸಮಯವನ್ನು ವ್ಯರ್ಥ ಮಾಡುವಿರಿ. ಮಾತಿನಲ್ಲಿ ಮಾರ್ದವವು ಇಲ್ಲವಾಗುವುದು. ಅತಿಯಾದ ಭಾರದ ವಸ್ತುಗಳನ್ನು ಒಯ್ಯುವಿರಿ. ನಿಮ್ಮ ಚೌಕಟ್ಟನ್ನು ಮೀರಿ ವರ್ತಿಸುವುದು ಬೇಡ. ಅಸಾಮಾನ್ಯ ವಿಚಾರವನ್ನು ಸರಳೀಕರಿಸುವಿರಿ. ಕಠಿಣ ನಿರ್ಧಾರಗಳು ನಿಮ್ಮ‌ ಮಾನಸಿಕತೆಯನ್ನು ಹೇಳುತ್ತದೆ. ಇಂದು ಕೆಲವು ವಿಚಾರಕ್ಕೆ ನಿಮ್ಮ ಜಾಡ್ಯವು ವರವಾಗಬಹುದು.

ಮಿಥುನ ರಾಶಿ: ಅಶುಭ ಸಮಾಚಾರವನ್ನು ಕೇಳಬೇಕಾಗುವುದು. ಬಹಳ ದಿನಗಳ ಅನಂತರ ಶೋಕದಲ್ಲಿ ಇರುವಿರಿ. ನೂತನ ವಸ್ತುಗಳನ್ನು ಖರೀದಿಸುವ ಬಗ್ಗೆ ವಿಚಾರ ಮಾಡುವುದು ಉತ್ತಮ. ವ್ಯವಹಾರಕ್ಕೆ ಸಂಬಂಧಿಸಿದಂತೆ ಕೋಪವು ಹೆಚ್ಚಾಗಿರುವುದು. ದೇಹಾರೋಗ್ಯವು ಸರಿಯಾಗಿ ಇಲ್ಲದ ಕಾರಣ ಮನಸ್ಸು ಸರಿಯಾಗಿ ಕೆಲಸ ಮಾಡದು. ಉದ್ಯೋಗದ ಕಾರಣದಿಂದ ಬೇರೆ ಕಡೆ ಇದ್ದರೂ ಮನೆಯ ನೆನಪು ಕಾಡುವುದು. ಉದ್ಯೋಗವು ಸಾಕು ಎನಿಸಬಹುದು.‌ ನಿಮ್ಮ ಆಚರಣೆಯು ಇತರರಿಗೆ ಇಷ್ಟವಾಗುವುದು. ಅತಿಯಾದ ಒತ್ತಡದಿಂದ ಹೊರಬರಲು ಸಹೋದ್ಯೋಗಿಗಳ ಸಹಾಯವನ್ನು ಪಡೆಯುವಿರಿ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಓದು ಹೆಚ್ಚು ಫಲಿಸುವುದು. ಅನಗತ್ಯ ಓಡಾಟದಿಂದ ನಿಮಗೆ ಬೇಸರವಾಗಲಿದೆ. ಸಲುಗೆಯು ಅತಿಯಾಗುವುದು ಬೇಡ. ಸಂಗಾತಿಯನ್ನು ನೀವು ಇಂದು ದೂರ ಮಾಡಿಕೊಳ್ಳುವಿರಿ.

ಕಟಕ ರಾಶಿ: ಉದ್ಯೋಗದ ವಿಚಾರದಲ್ಲಿ ಸರಿಯಾದ ನಿರ್ಧಾರವೇ ಇರದು. ಕೋಪವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಉತ್ತಮ. ಸಮಯೋಚಿತ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಪ್ರಭಾವೀ ವ್ಯಕ್ತಿಗಳಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಕೆಟ್ಟವರ ಸಹವಾಸ ಸಿಗುವ ಸಾಧ್ಯತೆ ಇದೆ. ಬೇಡವೆಂದರೂ ಕೆಟ್ಟವರ ಸಹವಾಸವೇ ಸಿಗುವುದು. ನಂಬಿಕೆಯನ್ನು ಕಳೆದುಕೊಳ್ಳಬಹುದು. ನಿಮಗೆ ಸಂಬಂಧಿಸದ ವಿಚಾರದಲದಲಿ ಹೆಚ್ಚು ಮಾತನಾಡುವಿರಿ. ಹೂಡಿಕೆಯ ಬಗ್ಗೆ ಗಂಭೀರವಾಗಿ ಚಿಂತಿಸುವ ಅಗತ್ಯವಿದೆ. ಸಿಕ್ಕಿದ್ದನ್ನು ಜೋಪಾನವಾಗಿ ಇಟ್ಟುಕೊಳ್ಳುವ ಬಗ್ಗೆ ಚಿಂತಿಸುವುದು ಉತ್ತಮ. ನಿಮಗೆ ಅನೇಕ ವಿಚಾರಗಳಿಗೆ ಸಾಂತ್ವನ ಸಿಗಬಹುದು. ಇರುವುದರಲ್ಲಿ ತೃಪ್ತಿಯು ಕಾಣದೇ ಇನ್ನೊಂದಕ್ಕೆ ಆಸೆಪಡುವಿರಿ. ಸ್ತ್ರೀಯರು ಹೆಚ್ಚಿನ ಸಮಯವನ್ನು ಸೌಂದರ್ಯಕ್ಕೆ ಮೀಸಲಿಡುವರು. ಇಂದು ಹೆಚ್ಚು ಆಡಂಬರವನ್ನು ನೀವು ಇಷ್ಟಪಡುವಿರಿ.