Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 19ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 19ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 19ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us
ಸ್ವಾತಿ ಎನ್​ಕೆ
| Updated By: ರಮೇಶ್ ಬಿ. ಜವಳಗೇರಾ

Updated on: Nov 19, 2024 | 1:29 AM

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಅಡುಗೆ ಕಾಂಟ್ರಾಕ್ಟ್, ಈವೆಂಟ್ ಮ್ಯಾನೇಜ್ ಮೆಂಟ್ ಇಂಥ ವೃತ್ತಿಯನ್ನು ಮಾಡುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗುವ ಸಾಧ್ಯತೆಯಿದೆ. ದ್ವಿಚಕ್ರ ವಾಹನವೋ ಅಥವಾ ಕಾರು ನಿಮ್ಮ ಬಳಿ ಇದ್ದಲ್ಲಿ ಅದನ್ನು ಮಾರಾಟವೋ ವಿನಿಮಯವೋ ಮಾಡಿಕೊಳ್ಳುವುದಕ್ಕೆ ಚಿಂತನೆ ಬರಬಹುದು. ಮನೆಯ ನಿರ್ಮಾಣದಲ್ಲಿ ತೊಡಗಿರುವವರಿಗೆ ಹಣಕಾಸಿನ ಹರಿವಿಗೆ ಅಡೆತಡೆಗಳು ಎದುರಾಗಿದ್ದಲ್ಲಿ ಅದು ನಿವಾರಣೆ ಆಗಲಿದೆ. ಯೋಗ, ಪ್ರಾಣಾಯಾಮ ಇಂಥದ್ದರ ತರಬೇತಿ ಕೇಂದ್ರಗಳನ್ನು ನಡೆಸುತ್ತಿರುವವರಿಗೆ ವಿಸ್ತರಣೆಗೆ ಅವಕಾಶಗಳು ತೆರೆದುಕೊಳ್ಳಲಿವೆ. ಮಾತಿನ ಮೂಲಕವಾಗಿ ಸರಿದೂಗಿಸುವಂಥ ವ್ಯವಹಾರಗಳು ಏನಾದರೂ ಇದ್ದಲ್ಲಿ ಅವುಗಳನ್ನು ತುಂಬ ಚೆನ್ನಾಗಿ ಮಾಡಿ ಮುಗಿಸುವಂಥ ಯೋಗ ಇದೆ. ತಾಯಿ ಅಥವಾ ತಾಯಿಗೆ ಸಮಾನರಾದವರ ಅನಾರೋಗ್ಯ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಆತಂಕಕ್ಕೆ ಕಾರಣ ಆಗಬಹುದು. ದೇವರಿಗೆ ಹರಕೆ ಹೇಳಿಕೊಳ್ಳಬೇಕು ಎಂದುಕೊಳ್ಳುವವರು ಒಂದಕ್ಕೆ ನಾಲ್ಕು ಬಾರಿಗೆ ಆಲೋಚಿಸಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನೀವು ನಿರೀಕ್ಷೆ ಮಾಡುತ್ತಿದ್ದ ವ್ಯಕ್ತಿ, ಬೆಳವಣಿಗೆ, ಘಟನೆಯು ಈ ದಿನ ನಡೆಯುವ ಸಾಧ್ಯತೆ ಹೆಚ್ಚಿದೆ. ಕೈಯಲ್ಲಿ ಇರುವಂಥ ಹಣಕ್ಕೆ ಯೋಜನೆಯನ್ನು ರೂಪಿಸಲಿದ್ದೀರಿ. ಮೊಬೈಲ್ ಅಥವಾ ಲ್ಯಾಪ್ ಟಾಪ್ ಚಾರ್ಜರ್ ಅಥವಾ ಸ್ಕ್ರೀನ್ ಗಾರ್ಡ್ ಸೇರಿದಂತೆ ಬೇಕಾದಂಥ ಆಕ್ಸೆಸರಿಗಳನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚು ಮಾಡುವಂಥ ಯೋಗ ಇದೆ. ವೃತ್ತಿಯಲ್ಲಿಯೋ ಉದ್ಯೋಗದಲ್ಲಿಯೋ ನಿಮಗಿರುವಂಥ ಅನುಭವದ ಆಧಾರದ ಮೇಲೆ ನಿಮ್ಮನ್ನು ಕೆಲವರು ಹುಡುಕಿಕೊಂಡು ಬಂದು, ಸಲಹೆ- ಸೂಚನೆಗಳನ್ನು ನೀಡಬೇಕೆಂದೂ ಅದಕ್ಕಾಗಿ ಗೌರವಧನವನ್ನು ನೀಡುವುದಾಗಿಯೂ ಹೇಳುವ ಸಾಧ್ಯತೆಗಳಿವೆ. ಇನ್ನು ಈಗಾಗಲೇ ನಿವೃತ್ತಿಯಾದಂಥ ವ್ಯಕ್ತಿಗಳಿಗೆ ರಿಟೈರ್ ಮೆಂಟ್ ಅನುಕೂಲಗಳು ಕೈ ಸೇರುವುದು ತಡವಾಗಬಹುದು ಎಂಬುದು ತಿಳಿದುಬರುತ್ತದೆ. ಅಥವಾ ಕೆಲವು ಅರ್ಜಿಗಳನ್ನು ಭರ್ತಿ ಮಾಡುವಾಗ ತಪ್ಪುಗಳಾಗಿ, ಅದರಿಂದಾಗಿ ನಿಮಗೆ ಹಣ ಬರುವುದು ತಡವಾಗಬಹುದು.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿಮ್ಮಲ್ಲಿ ಯಾರಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸ ಇರುತ್ತದೋ ಅಥವಾ ನಿದ್ದೆಯಲ್ಲಿ ಮಾತನಾಡುವ ಅಭ್ಯಾಸ ಇರುತ್ತದೋ ಅದಕ್ಕಾಗಿ ಚಿಕಿತ್ಸೆ ಪಡೆಯುವುದಕ್ಕೆ ತೀರ್ಮಾನವನ್ನು ಮಾಡಲಿದ್ದೀರಿ. ಈ ಸಮಸ್ಯೆ ಗಂಭೀರ ಸ್ವರೂಪ ಪಡೆಯುವ ಸಾಧ್ಯತೆಗಳಿವೆ. ಬಸ್, ಟೆಂಪೋ ಟ್ರಾವೆಲರ್ ಅಥವಾ ಲಾರಿ ಡ್ರೈವರ್ ಆಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಕೆಲಸದ ಒತ್ತಡ ಜಾಸ್ತಿ ಆಗುತ್ತದೆ. ಮಕ್ಕಳ ಶಿಕ್ಷಣಕ್ಕೋ ಅಥವಾ ಆರೋಗ್ಯದ ಕಾರಣಕ್ಕಾಗಿ ಹಣ ಖರ್ಚು ಮಾಡಬೇಕಾಗುತ್ತದೆ; ನೀವು ಅಂದಾಜು ಮಾಡಿದ್ದಕ್ಕಿಂತ ಹೆಚ್ಚಿನ ಖರ್ಚಾಗುವ ಸೂಚನೆಯು ದೊರೆಯಲಿದೆ. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸ ಬಹಳ ಸಮಯದಿಂದ ಬಾಕಿ ಉಳಿದಿದ್ದಲ್ಲಿ ಈ ದಿನ ಆಗಲೇಬೇಕು ಎಂದು ಪಟ್ಟು ಹಿಡಿದು, ಮಾಡಿಸಲಿದ್ದೀರಿ. ನಿಮಗೆ ಗುರು ಸಮಾನರಾದವರಿಗೆ ಆಗುವ ವೈಯಕ್ತಿಕ ಸಮಸ್ಯೆಗೆ ಪರಿಹಾರವನ್ನು ದೊರಕಿಸಿಕೊಡುವಂತೆ ಕೇಳಿಕೊಂಡು ಬರುವಂಥ ಯೋಗ ಇದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಈ ದಿನ ನೀವು ಯಾವುದೇ ಸ್ಥಳದಲ್ಲಿ ಇದ್ದರೂ ಒಂದು ಬಗೆಯ ಆತಂಕದ ವಾತಾವರಣ ಸೃಷ್ಟಿಯಾಗಲಿದೆ. ನಿಮ್ಮ ಸಾಮರ್ಥ್ಯವನ್ನು ಮೀರಿ ಕೆಲಸ ಮಾಡಿದರೂ ನಿರೀಕ್ಷಿತ ಫಲಿತಾಂಶ ದೊರೆಯುವುದು ಕಷ್ಟವಾಗಲಿದೆ. ಹಣಕಾಸಿನ ವಿಚಾರಗಳಲ್ಲಿ ನೀವು ಅಂದುಕೊಂಡಂಥ ಯಾವುದೇ ಸಕಾರಾತ್ಮಕ ಬೆಳವಣಿಗೆಗಳು ಆಗುವುದಿಲ್ಲ. ಅದರಲ್ಲೂ ನೀವು ಈಗಾಗಲೇ ಕೆಲಸ ಮಾಡಿ ಆಗಿದೆ, ಅದರ ಹಣವನ್ನು ಈ ದಿನ ಕೊಡುತ್ತಾರೆ ಅಥವಾ ಇಂಥದ್ದೇ ದಿನ ಕೊಡುವುದಾಗಿ ಹೇಳುತ್ತಾರೆ ಎಂದು ನಿರೀಕ್ಷೆ ಮಾಡುತ್ತಿದ್ದಲ್ಲಿ ಅದು ಅಂದುಕೊಂಡಂತೆ ಆಗುವುದಿಲ್ಲ. ವೈಯಕ್ತಿಕ ದ್ವೇಷದ ಕಾರಣಕ್ಕೋ ಅಥವಾ ಇನ್ಯಾವುದಾದರೂ ಕಾರಣದಿಂದಲೋ ಇತರರ ಬಗ್ಗೆ ಹಗುರವಾದ ಮಾತುಗಳನ್ನು ಆಡುವುದಕ್ಕೆ ಹೋಗಬೇಡಿ. ನಿಮ್ಮ ಮಿತಿಯನ್ನು ಅರಿತುಕೊಂಡು ವರ್ತಿಸಿದಲ್ಲಿ ಹೆಚ್ಚಿನ ಸಮಸ್ಯೆಗಳು ಆಗದಂತೆ ಪರಿಸ್ಥಿತಿಯನ್ನು ನಿಭಾಯಿಸುವುದು ಸಾಧ್ಯವಾಗಬಹುದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನೀವು ನಿರೀಕ್ಷೆಯೇ ಮಾಡದ ರೀತಿಯಲ್ಲಿ ಹಲವರು ಈ ದಿನ ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. ನೀವು ಉದ್ಯೋಗ ಮಾಡುತ್ತಿರುವ ಸ್ಥಳದಲ್ಲಿ ಹೊಸ ಪ್ರಾಜೆಕ್ಟ್ ಒಂದಕ್ಕೆ ನೇತೃತ್ವ ವಹಿಸುವಂತೆ ಸೂಚಿಸುವ ಸಾಧ್ಯತೆಗಳಿವೆ. ಕೆಲವು ಕೆಲಸಗಳನ್ನು ಪೂರ್ಣಗೊಳಿಸುವುದಕ್ಕೆ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ. ಮನೆಗಳ ಪೇಂಟ್, ಮರದ ಕೆಲಸಗಳು, ಸ್ಟೀಲ್ ಕೆಲಸಗಳು ಮಾಡುವಂಥವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಹೊಸದಾಗಿ ದೊಡ್ಡ ಮೊತ್ತದ ಆರ್ಡರ್ ಗಳು ದೊರೆಯುವ ಯೋಗ ಇದೆ. ಈ ದಿನ ನಿಮಗೆ ಎಚ್ಚರಿಕೆ ಏನೆಂದರೆ, ಪ್ರಮುಖ ವಿಚಾರಗಳನ್ನು ಸರಿಯಾಗಿ ನೆನಪಿನಲ್ಲಿ ಇಟ್ಟುಕೊಂಡು ಆದ್ಯತೆಯ ಮೇಲೆ ಕೆಲಸಗಳನ್ನು ಮಾಡಿ. ನೀವಾಗಿಯೇ ವಹಿಸಿಕೊಂಡ ಜವಾಬ್ದಾರಿಗಳನ್ನು ಡೆಡ್ ಲೈನ್ ಒಳಗಾಗಿ ಮುಗಿಸುವುದಕ್ಕೆ ಪ್ರಯತ್ನಿಸಿ. ಇತರರು ನೀಡುವ ಸಲಹೆಗಳನ್ನು ವಿಶ್ಲೇಷಿಸಿ, ತೀರ್ಮಾನ ಕೈಗೊಳ್ಳಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಈ ತನಕ ನೀವು ಪಟ್ಟಂತಹ ಶ್ರಮಕ್ಕೆ ಸಿಕ್ಕ ಪ್ರತಿಫಲ ಏನು ಎಂಬ ಬಗ್ಗೆ ಬಹಳ ಆಲೋಚನೆ ಮಾಡಲಿದ್ದೀರಿ. ನಿಮಗೆ ಬಹಳ ಆಪ್ತರಾಗಿ ಇರುವವರ ಕೆಲವು ವರ್ತನೆಯ ಬಗ್ಗೆ ತುಂಬಾ ಬೇಸರ ಆಗಲಿದೆ. ಇದಕ್ಕೆ ತಕ್ಕಂತೆ ಕೆಲವು ವ್ಯಕ್ತಿಗಳು ನಿಮ್ಮ ಆಪ್ತರ ವಿಚಾರದಲ್ಲಿಯೇ ಕೆಲವು ಆಕ್ಷೇಪಗಳನ್ನು ಸಹ ಎತ್ತಬಹುದು. ಒಂದಿಷ್ಟು ಸಮಯ ಕೊಟ್ಟು ನೋಡೋಣ ಹಾಗೂ ಇನ್ನೊಂದಿಷ್ಟು ಸಮಾಧಾನವಾಗಿ ಯೋಚಿಸೋಣ ಎಂಬ ಮನಸ್ಥಿತಿಯಲ್ಲಿ ಈ ದಿನ ನೀವು ಇರುವುದಿಲ್ಲ. ಈ ಕಾರಣದಿಂದಾಗಿ ಆಪ್ತರಿಂದ ದೂರವಾಗುವ ಯೋಗ ನಿಮ್ಮ ಪಾಲಿಗೆ ಇದೆ ಎಂದು ಹೇಳಬಹುದು. ತುರ್ತಾಗಿ ದೂರ ಪ್ರಯಾಣ ಮಾಡಲೇಬೇಕಾದ ಸನ್ನಿವೇಶ ಸೃಷ್ಟಿಯಾದಲ್ಲಿ ನೀವು ಆ ಪ್ರಯಾಣ ಮಾಡಿದ ನಂತರದಲ್ಲಿ ಹೋದ ಕೆಲಸ ಆಗಬಹುದೇ ಎಂಬ ಬಗ್ಗೆ ಸರಿಯಾಗಿ ವಿಶ್ಲೇಷಿಸಿ, ವಿಚಾರಿಸಿ ಆ ನಂತರ ಮುಂದುವರಿಯಿರಿ. ಹೋಟೆಲ್ ಗಳಲ್ಲಿಯೇ ಊಟ- ತಿಂಡಿ ಮಾಡುವಂಥವರಿಗೆ ಅನಾರೋಗ್ಯ ಸಮಸ್ಯೆ ಎದುರಾಗಬಹುದು.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ತೀವ್ರತರವಾದ ಜ್ವರ, ಕೆಮ್ಮು, ಕಫ ಇಂಥ ಸಮಸ್ಯೆಗಳು ಕಾಡಲಿದೆ. ದೂರದ ಊರುಗಳಿಗೆ ತೆರಳಬೇಕು ಎಂದುಕೊಂಡವರು ಕೊನೆಕ್ಷಣದಲ್ಲಿ ಬದಲಾವಣೆಗಳನ್ನು ಮಾಡಬೇಕಾಗಲಿದೆ. ಅಥವಾ ಪ್ರಯಾಣವನ್ನೇ ರದ್ದು ಮಾಡಬೇಕಾದ ಸನ್ನಿವೇಶ ನಿರ್ಮಾಣ ಆಗಲಿದೆ. ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಬೇರೆ ವಿಭಾಗಕ್ಕೋ ಅಥವಾ ಪ್ರಾಜೆಕ್ಟ್ ಗೋ ನೇಮಿಸುವ ಸೂಚನೆಗಳು ದೊರೆಯಲಿವೆ. ಪರ್ಸನಲ್ ಲೋನ್ ಅಥವಾ ಚಿನ್ನವನ್ನು ಅಡಮಾನ ಮಾಡಿ ಸಾಲ ಪಡೆದುಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದ್ದಲ್ಲಿ ಈ ದಿನ ಸಾಧ್ಯವಾಗಲಿದೆ. ಇತರರ ವೈಯಕ್ತಿಕ ವಿಚಾರಗಳಲ್ಲಿ ವಿಪರೀತ ಆಸಕ್ತಿ ತೋರಿಸದಿರುವುದು ನೆಮ್ಮದಿಯಾಗಿ ಇರುವುದಕ್ಕೆ ದಾರಿ ಎಂಬುದು ನಿಮಗೇ ಅರಿವಿಗೆ ಬರಲಿದೆ. ಇತರರು ತಮ್ಮ ಬೆಲೆಬಾಳುವ ವಸ್ತುಗಳನ್ನು ನಿಮ್ಮ ಬಳಿ ಇರಿಸಿಕೊಳ್ಳುವಂತೆ ಏನಾದರೂ ಕೇಳಿಕೊಂಡಲ್ಲಿ ನಯವಾಗಿಯೇ ನಿರಾಕರಿಸಿದಲ್ಲಿ ಉತ್ತಮ. ಇಲ್ಲದಿದ್ದರೆ ಸಮಸ್ಯೆಗೆ ಸಿಲುಕಿಕೊಳ್ಳುತ್ತೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಸಣ್ಣಪುಟ್ಟ ವಿಚಾರಗಳಿಗೂ ಈ ದಿನ ನಿಮಗೆ ವಿಪರೀತ ಸಿಟ್ಟು ಬರಲಿದೆ. ಯಾವ ಸ್ಥಳದಲ್ಲಿ, ಯಾರ ಮುಂದೆ, ಯಾವ ವಿಚಾರವನ್ನು ಮಾತನಾಡಬಾರದೋ ಅದೇ ವಿಚಾರವನ್ನು ಮಾತನಾಡಿ, ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಯಾರು ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರೋ ಅಂತಹವರಿಗೆ ವಿಪರೀತ ಕೆಲಸದ ಒತ್ತಡ ಬೀಳಲಿದೆ. ಸರಿಯಾದ ಜನರ ಸಹಾಯ ದೊರೆಯದೆ ಅಥವಾ ಅಗತ್ಯ ಸಂಖ್ಯೆಯ ಮಾನವ ಸಂಪನ್ಮೂಲ ಬೆಂಬಲ ದೊರೆಯದೆ ನೀವೇ ಎಲ್ಲ ಕೆಲಸಗಳನ್ನು ಮಾಡಬೇಕಾಗುತ್ತದೆ. ಪ್ರೀತಿ- ಪ್ರೇಮದಲ್ಲಿ ಇರುವಂತಹವರಿಗೆ ಮೂರನೇ ವ್ಯಕ್ತಿಗಳ ಪ್ರವೇಶದಿಂದಾಗಿ ಮಾನಸಿಕ ನೆಮ್ಮದಿ ಹಾಳಾಗಬಹುದು. ನೀವು ವೃತ್ತಿನಿರತರು ಆಗಿದ್ದಲ್ಲಿ ಇತರರಿಗೆ ಯಾವುದೇ ಕೆಲಸಕ್ಕೆ ಸಂಬಂಧಪಟ್ಟಂತಹ ಗಡುವು ನೀಡುವ ಮುನ್ನ ಒಂದಕ್ಕೆ ನಾಲ್ಕು ಸಲ ಆಲೋಚನೆಯನ್ನು ಮಾಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಧಾನವಾಗಿ ಆಗಲಿ ಕೆಲಸ ಅಂದುಕೊಂಡು ನೀವಾಗಿಯೇ ಹೇಳಿದ್ದ ವಿಚಾರವೊಂದನ್ನು ತುರ್ತಾಗಿ ಮುಗಿಸಬೇಕು ಎಂಬ ಸನ್ನಿವೇಶ ನಿರ್ಮಾಣ ಆಗಲಿದೆ. ಯಾರು ನಿಮಗೆ ಬಹಳ ಹತ್ತಿರದಲ್ಲಿ ಇರುತ್ತಾರೋ ಅವರ ಮೇಲೆ ನಿಮ್ಮ ವರ್ತನೆಯು ಒತ್ತಡವಾಗಿ ಪರಿಣಮಿಸಲಿದೆ. ನಿಮಗೆ ಪ್ರತಿಷ್ಠೆಯಾಗಿ ಇದ್ದಂಥ ವಿಚಾರಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಪ್ರಭಾವಿಗಳ ನೆರವು ಕೇಳಬೇಕೆಂದು ನಿರ್ಧಾರವನ್ನು ಮಾಡಲಿದ್ದೀರಿ. ಯಾರಿಗೆ ಮಾನಸಿಕ ಖಿನ್ನತೆ ಇರುತ್ತದೋ ಅಂಥವರಿಗೆ ವೈದ್ಯೋಪಚಾರದ ಅಗತ್ಯ ಕಂಡುಬರಲಿದೆ. ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತ ಮಾರ್ಗದರ್ಶನ ದೊರೆಯಲಿದೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಪಾಲ್ಗೊಳ್ಳುವ ಆಸಕ್ತಿಯನ್ನು ತೋರಲಿದ್ದೀರಿ. ಮನೆಯಲ್ಲಿ ಆಗಬೇಕಾದ ಶುಭ ಕಾರ್ಯಗಳನ್ನು ಮುಂದಕ್ಕೆ ಹಾಕಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಕೈಯಲ್ಲಿ ಇರುವಷ್ಟು ಹಣಕ್ಕೆ ಬಜೆಟ್ ಯೋಜಿಸುವುದು ಕ್ಷೇಮ.

ಲೇಖನ- ಎನ್‌.ಕೆ.ಸ್ವಾತಿ

ರಜೆ ಮುಗಿಸಿ ಬೆಂಗಳೂರಿನತ್ತ ಜನ: ನೆಲಮಂಗಲ ಬಳಿ ಫುಲ್ ಟ್ರಾಫಿಕ್ ಜಾಮ್
ರಜೆ ಮುಗಿಸಿ ಬೆಂಗಳೂರಿನತ್ತ ಜನ: ನೆಲಮಂಗಲ ಬಳಿ ಫುಲ್ ಟ್ರಾಫಿಕ್ ಜಾಮ್
ವಿಚಾರಣೆ ನಂತರ ಮಾತಾಡದೆ ಕಾರಲ್ಲಿ ಹೊರಟುಹೋದ ಮಲ್ಲಿಕಾರ್ಜುನ ಸ್ವಾಮಿ
ವಿಚಾರಣೆ ನಂತರ ಮಾತಾಡದೆ ಕಾರಲ್ಲಿ ಹೊರಟುಹೋದ ಮಲ್ಲಿಕಾರ್ಜುನ ಸ್ವಾಮಿ
ಜಯನಗರ ಶಾಸಕರು ಬೆಂಗಳೂರಿನ ಆಧೋಗತಿಯನ್ನು ತೋರಿಸಬೇಕು: ಡಿಕೆಶಿ ಸವಾಲ್
ಜಯನಗರ ಶಾಸಕರು ಬೆಂಗಳೂರಿನ ಆಧೋಗತಿಯನ್ನು ತೋರಿಸಬೇಕು: ಡಿಕೆಶಿ ಸವಾಲ್
ಬಿಗ್ ಬಾಸ್ ಮನೆಗೆ ಕಾಲಿಡುತ್ತಲೇ ವಿಶೇಷ ಅಧಿಕಾರ ಪಡೆದ ರಜತ್, ಶೋಭಾ ಶೆಟ್ಟಿ
ಬಿಗ್ ಬಾಸ್ ಮನೆಗೆ ಕಾಲಿಡುತ್ತಲೇ ವಿಶೇಷ ಅಧಿಕಾರ ಪಡೆದ ರಜತ್, ಶೋಭಾ ಶೆಟ್ಟಿ
ಗೋದಾವರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಿಸಿದ ಪತ್ರಕರ್ತರು
ಗೋದಾವರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಿಸಿದ ಪತ್ರಕರ್ತರು
ನನ್ನಂತೆ ಬಸವರಾಜ ಬೊಮ್ಮಾಯಿ ಸಹ ಮಧುಮೇಹದಿಂದ ಬಳಲುತ್ತಿದ್ದಾರೆ: ಸಿದ್ದರಾಮಯ್ಯ
ನನ್ನಂತೆ ಬಸವರಾಜ ಬೊಮ್ಮಾಯಿ ಸಹ ಮಧುಮೇಹದಿಂದ ಬಳಲುತ್ತಿದ್ದಾರೆ: ಸಿದ್ದರಾಮಯ್ಯ
ಉಗ್ರಂ ಮಂಜು-ಮೋಕ್ಷಿತಾ ನಡುವೆ ದುಷ್ಮನಿ; ತೊಡೆ ತಟ್ಟಿದ ತ್ರಿವಿಕ್ರಮ್
ಉಗ್ರಂ ಮಂಜು-ಮೋಕ್ಷಿತಾ ನಡುವೆ ದುಷ್ಮನಿ; ತೊಡೆ ತಟ್ಟಿದ ತ್ರಿವಿಕ್ರಮ್
ಕೋವಿಡ್ ಹಗರಣ: ಕೆಲ ಅಂತೆ-ಕಂತೆಗಳಿಗೆ ತೆರೆ ಎಳೆದ ಡಾ ಸಿಎನ್​ ಮಂಜುನಾಥ್
ಕೋವಿಡ್ ಹಗರಣ: ಕೆಲ ಅಂತೆ-ಕಂತೆಗಳಿಗೆ ತೆರೆ ಎಳೆದ ಡಾ ಸಿಎನ್​ ಮಂಜುನಾಥ್
ನಮ್ಮ ಸರ್ಕಾರದ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ: ಚಲುವರಾಯಸ್ವಾಮಿ
ನಮ್ಮ ಸರ್ಕಾರದ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ: ಚಲುವರಾಯಸ್ವಾಮಿ
ಬಾಗಲಕೋಟೆ: ಸ್ನೇಹಿತನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ವಿದೇಶಿಗರು
ಬಾಗಲಕೋಟೆ: ಸ್ನೇಹಿತನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ವಿದೇಶಿಗರು