ಆಗಸ್ಟ್ 7ರಿಂದ ಹಿಮ್ಮುಖವಾಗಿ ಸಾಗುವ ಶುಕ್ರ: ಯಾವ ರಾಶಿಯ ಜನರಿಗೆ ಏನು ಕಷ್ಟ?

| Updated By: ಗಂಗಾಧರ​ ಬ. ಸಾಬೋಜಿ

Updated on: Aug 01, 2023 | 6:00 AM

ಇಷ್ಟು ದಿನಗಳ ಕಾಲ ನೇರವಾಗಿ ಸಾಗುತ್ತಿದ್ದ ಶುಕ್ರ ಆಗಷ್ಟ್ 7ರಿಂದ ವಕ್ರಗತಿಯಲ್ಲಿ ಸ್ವಲ್ಪ ಕಾಲ ನಡೆಯಲಿದ್ದಾನೆ. ಹಾಗಾದರೆ ಯಾವೆಲ್ಲಾ ರಾಶಿಯ ಜನರಿಗೆ ಏನು ಅನುಕೂಲ ಅಥವಾ ಅನಾನುಕೂಲ ತಿಳಿಯಿರಿ.

ಆಗಸ್ಟ್ 7ರಿಂದ ಹಿಮ್ಮುಖವಾಗಿ ಸಾಗುವ ಶುಕ್ರ: ಯಾವ ರಾಶಿಯ ಜನರಿಗೆ ಏನು ಕಷ್ಟ?
ಪ್ರಾತಿನಿಧಿಕ ಚಿತ್ರ
Follow us on

ಶುಕ್ರ (Venus) ಇಷ್ಟು ದಿನಗಳ ಕಾಲ ನೇರವಾಗಿ ಸಾಗುತ್ತಿದ್ದವ ಇನ್ನು ವಕ್ರಗತಿಯಲ್ಲಿ ಸ್ವಲ್ಪ ಕಾಲ ನಡೆಯಲಿದ್ದಾನೆ. ಸಿಂಹರಾಶಿಯಲ್ಲಿ ಕುಜ ಹಾಗೂ ಬುಧರ ಜೊತೆ ಇದ್ದು ಅನಂತರ ತನ್ನ ನೀಚಸ್ಥಾನವಾದ ಕನ್ಯಾರಾಶಿಯನ್ನು ಪ್ರವೇಶಿಸಬೇಕಿತ್ತು. ಆದರೆ ಆಗಷ್ಟ್ ಏಳರಿಂದ ಕರ್ಕಟಕ ರಾಶಿಯನ್ನು ಪ್ರವೇಶ ಮಾಡುವನು. ಋಜುಗತಿಯಿಂದ ವಕ್ರಗತಿಗೆ ಹೋಗುವಾಗ ಕರ್ಕಾಟಕದಲ್ಲಿಯೇ ಸೂರ್ಯನೂ ಇರುವ ಕಾರಣ ಶುಕ್ರ ಮೌಢ್ಯ ಎಂದು ಕರೆಯುತ್ತಾರೆ. ಈ ಸಂದರ್ಭದಲ್ಲಿ ಮಂಗಳ ಕಾರ್ಯಗಳನ್ನು ಮಾಡಬಾರದು. ಸುಮಾರು ಹತ್ತು ದಿನಗಳ ಈ ಮೌಢ್ಯವು ಇರಲಿದ್ದು ಅನಂತರ ಸೂರ್ಯನು ಸಿಂಹರಾಶಿಗೆ ಪ್ರವೇಶ ಮಾಡುವನು. ಆಗ ಮೌಢ್ಯದಿಂದ ಮುಕ್ತಿ ಸಿಗಲಿದೆ.

ಗ್ರಹಗಳು ವಕ್ರವಾದಷ್ಟು ಬಲಿಷ್ಠ ಎಂಬ ಮಾತಿದೆ. ಶುಕ್ರನೂ ಬಲಿಷ್ಠನಾಗುತ್ತಾನೆ. ಆದರೆ ಸೂರ್ಯನ‌ ಸಮೀಪಕ್ಕೆ ಹೋಗುವ ಕಾರಣ ಮೌಢ್ಯನಾಗುತ್ತಾನೆ.

ಇದನ್ನೂ ಓದಿ: ಸ್ರಕ್ ಮತ್ತು ಸರ್ಪಯೋಗದ ಬಗ್ಗೆ ನಿಮಗೆಷ್ಟು ಗೊತ್ತು?

ಯಾವ ರಾಶಿಗೆ ಏನು ಕಷ್ಟ?

ವೃಷಭ ರಾಶಿ: ಶುಕ್ರನು ರಾಶಿಗೆ ಅಧಿಪತಿಯಾಗಿದ್ದುದರಿಂದ ಶುಕ್ರನು ತೃತೀಯದಲ್ಲಿ ಇದ್ದು ಸಹೋದರಿಯ ನಡುವೆ ಕಲಹವಾಗಬಹುದು. ಸಹೋದರರ ಸಹಕಾರವು ಸಿಗದೇ ಇದ್ದೀತು.

ತುಲಾ ರಾಶಿ: ಶುಕ್ರನೇ ಅಧಿಪತಿಯಾಗಿರುವ ತುಲಾ ರಾಶಿಯಿಂದ‌ ಹತ್ತನೇ ಮನೆಯಲ್ಲಿ ಶುಕ್ರನು ಅಸ್ತವಾದ ಕಾರಣ ಉದ್ಯೋಗದಲ್ಲಿ ಸಮಸ್ಯೆಗಳು ಬರಬಹುದು. ಸ್ತ್ರೀಸಂಬಂಧ ಅಪವಾದದಲ್ಲಿ ಸಿಕ್ಕಿಕೊಳ್ಳುವಿರಿ.

ಇದನ್ನೂ ಓದಿ: ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ನಿಮ್ಮ ಅಂಗೈಯಲ್ಲಿರುವ ಈ 3 ರೇಖೆ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು

ಮಕರ ರಾಶಿ: ಶುಕ್ರನಿಂದ ಸಪ್ತಮಸ್ಥಾನದಲ್ಲಿ ಇದ್ದ ಕಾರಣ ವಿವಾಹಕ್ಕೆ ಇದು ಯೋಗ್ಯವಾದುದಲ್ಲ. ದಾಂಪತ್ಯದಲ್ಲಿ ನಾನಾ ರೀತಿಯ ಮನಸ್ತಾಪಗಳು ಬರಬಹುದು. ನಟರಿಗೆ ಹಿನ್ನಡೆಯಾಗಲಿದೆ. ಅವರಿಗೆ ಅಪಕೀರ್ತಿಯೂ ಲಭಿಸಬಹುದು.

ಎಲ್ಲ ರಾಶಿಯವರಿಗೂ ಮಂಗಲ ಕಾರ್ಯವು ಈ ಸಮಯದಲ್ಲಿ. ‌ವಿಶೇಷವಾಗಿ ಈ ರಾಶಿಯವರು ಜಾಗರೂಕರಾಗಿ ಇರಬೇಕಾಗುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.