AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ರಕ್ ಮತ್ತು ಸರ್ಪಯೋಗದ ಬಗ್ಗೆ ನಿಮಗೆಷ್ಟು ಗೊತ್ತು?

ಎರಡು ಯೋಗಗಳನ್ನು ದಲಯೋಗ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಕರೆಯುತ್ತಾರೆ. ಇದರಲ್ಲಿ ಒಂದು ಶುಭಯೋಗ ಮತ್ತೊಂದು ಅಶುಭಯೋಗವಾಗಿದೆ. ಇದೊಂದು ವಿಶೇಷ ಯೋಗವಾಗಿದೆ.

ಸ್ರಕ್ ಮತ್ತು ಸರ್ಪಯೋಗದ ಬಗ್ಗೆ ನಿಮಗೆಷ್ಟು ಗೊತ್ತು?
ಪ್ರಾತಿನಿಧಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jul 29, 2023 | 6:30 AM

Share

ಎರಡು ಯೋಗಗಳನ್ನು ದಲಯೋಗ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರ(Astrology) ದಲ್ಲಿ ಕರೆಯುತ್ತಾರೆ. ಇದರಲ್ಲಿ ಒಂದು ಶುಭಯೋಗ ಮತ್ತೊಂದು ಅಶುಭಯೋಗವಾಗಿದೆ.

ಈ ಯೋಗವು ಹೇಗೆ ಸಂಭವಿಸುತ್ತದೆ?

ಇದೊಂದು ವಿಶೇಷ ಯೋಗವಾಗಿದೆ. ನಿಮ್ಮ ಜನ್ಮ ಕುಂಡಲಿಯಲ್ಲಿ ಇದನ್ನು ನೀವು ಗಮನಿಸಬಹುದು. ಶುಭಗ್ರಹರು ಒಂದು, ನಾಲ್ಕು, ಏಳು, ಹತ್ತರಲ್ಲಿ ಅಂದರೆ ಜ್ಯೋತಿಷ್ಯದ ಪ್ರಕಾರ ಇದನ್ನು ಕೇಂದ್ರಸ್ಥಾನ ಎಂದು ಕರೆಯುತ್ತಾರೆ. ಈ ಸ್ಥಾನಗಳಲ್ಲಿ ಇದ್ದರೆ ಸ್ರಕ್ ಎನ್ನುವ ಯೋಗವಾಗುವುದು.

ಇದನ್ನೂ ಓದಿ: ರಜ್ಜು ಯೋಗ, ಮುಸಲ ಯೋಗ, ನಲ ಯೋಗ: ನಿಮ್ಮ ಜಾತಕದಲ್ಲಿ ಈ ಮೂರು ಯೋಗಗಳಿವೆಯೇ ನೋಡಿಕೊಳ್ಳಿ

ಅಶುಭಗ್ರಹರು ಒಂದು, ನಾಲ್ಕು, ಏಳು, ಹತ್ತರಲ್ಲಿ ಇದ್ದರೆ ಅದನ್ನು ಸರ್ಪಯೋಗ ಎಂದು ಕರೆಯುವರು.

ಶುಭ ಮತ್ತು ಅಶುಭಗ್ರಹರು ಯಾರು?

ಸೂರ್ಯ, ಅಮಾವಾಸ್ಯೆಯ ಚಂದ್ರ, ಪಾಪಗ್ರಹರ ಜೊತೆಗೆ ಇರುವ ಬುಧ, ಕುಜ, ಶನಿ ಇವರನ್ನು ಅಶುಭಗ್ರಹರೆಂದೂ ಹುಣ್ಣಿಮೆಯ ಚಂದ್ರ, ಶುಭಗ್ರಹರ ಜೊತೆ ಇರುವ ಬುಧ, ಗುರು ಹಾಗೂ ಶುಕ್ರರು ಶುಭಗ್ರಹರು. ರಾಹು ಮತ್ತು ಕೇತುಗಳೂ ಅಶುಭಗ್ರಹರಾಗಿರುತ್ತಾರೆ.

ಇದನ್ನೂ ಓದಿ: Virgo Zodiac Sign: ಕನ್ಯಾ ರಾಶಿಯವರು ಬೇರೆ ಅವರಲ್ಲಿ ಹೆಚ್ಚು ತಪ್ಪನ್ನು ಹುಡುಕುತ್ತಾರಾ? ವೈಯಕ್ತಿಕ, ವೃತ್ತಿಪರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ಈ ಸಲಹೆಗಳನ್ನು ಅನುಸರಿಸಿ

ಈ ಯೋಗಗಳಿಂದ ಏನಾಗುತ್ತದೆ?

ಅತಿಯಾದ ಭೋಗ ಜೀವನವನ್ನು ನಡೆಸುವವನು ಸ್ರಕ್ ಯೋಗವನ್ನು ಹೊಂದಿದವನು ಆಗುತ್ತಾನೆ. ಸರ್ಪ ಯೋಗದಲ್ಲಿ ಜನಿಸಿದವನು ಜೀವನದಲ್ಲಿ ಅನೇಕ ವಿಧವಾದ ದುಃಖವನ್ನು ಅನುಭವಿಸುತ್ತಾ ಇರುತ್ತಾನೆ.

ವಿಶೇಷವಾಗಿ ಆಯಾ ಗ್ರಹಗಳ ದಶಾಕಾಲದಲ್ಲಿ ಯಾವ ಭಾವದಲ್ಲಿ ಗ್ರಹರಿರುತ್ತಾರೋ ಅದರಿಂದ ಸುಖ ಮತ್ತು ದುಃಖವನ್ನು ಪಡೆಯುತ್ತಾರೆ ಎನ್ನಬೇಕು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Lohitha Hebbar
Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More