Career Horoscope: ನಿಮ್ಮ ರಾಶಿಗನುಗುಣವಾಗಿ ವಾರದ ಉದ್ಯೋಗ ಭವಿಷ್ಯ ಇಲ್ಲಿ ತಿಳಿಯಿರಿ

ಆಗಸ್ಟ್ ಎರಡನೇ ವಾರದಲ್ಲಿ ಸೂರ್ಯ ಉಚ್ಚಸ್ಥಾನಕ್ಕೆ ಬರುವುದರಿಂದ ಆತ್ಮಸೈರ್ಯ ಹೆಚ್ಚುತ್ತದೆ. ಈ ವಾರ ಕಲೆ, ಜವಾಬ್ದಾರಿ, ಸ್ಪರ್ಧಾತ್ಮಕತೆ ಮತ್ತು ತಂಡದ ಕಾರ್ಯಕ್ಕೆ ವಿಶೇಷ ಒತ್ತು. ಗ್ರಹಗಳ ಪ್ರಭಾವದಿಂದ ಪ್ರತಿಯೊಂದು ರಾಶಿಗೂ ಉದ್ಯೋಗದಲ್ಲಿ ಹೊಸ ಅವಕಾಶಗಳು, ಪ್ರಗತಿ ಅಥವಾ ಸವಾಲುಗಳು ಎದುರಾಗಬಹುದು. ತರಾತುರಿ ನಿರ್ಧಾರಗಳನ್ನು ತಪ್ಪಿಸಿ, ತಾಳ್ಮೆಯಿಂದ ಕೆಲಸ ನಿರ್ವಹಿಸಿ ಯಶಸ್ಸು ಗಳಿಸಿ. ನಿಮ್ಮ ವೃತ್ತಿ ಭವಿಷ್ಯವನ್ನು ಇಲ್ಲಿ ತಿಳಿದುಕೊಳ್ಳಿ.

Career Horoscope: ನಿಮ್ಮ ರಾಶಿಗನುಗುಣವಾಗಿ ವಾರದ ಉದ್ಯೋಗ ಭವಿಷ್ಯ ಇಲ್ಲಿ ತಿಳಿಯಿರಿ
ಉದ್ಯೋಗ ಭವಿಷ್ಯ
Image Credit source: Getty Images
Edited By:

Updated on: Aug 09, 2026 | 2:57 PM

ಆಗಷ್ಟ್ ಎರಡೇ ವಾರದಲ್ಲಿ ಸೂರ್ಯನು ಉಚ್ಚಸ್ಥಾನಕ್ಕೆ ಬರಲಿದ್ದು ಆತ್ಮಸೈರ್ಯವನ್ನು ಹೆಚ್ಚಿಸುವನು. ಕಲೆ, ಕೋಪ, ಜವಾಬ್ದಾರಿಗಳ ನಿರ್ವಹಣೆ, ತಂಡವಾಗಿ ಕಾರ್ಯ, ಆತುರ, ಸ್ಪರ್ಧಾತ್ಮಕತೆ, ಕೌಶಲತೆಯ ಪರಿಚಯ ಇದೆಲ್ಲ ಈ ವಾರದ ವಿಶೇಷ‌‌‌‌.

​ಮೇಷ ರಾಶಿ:

​ತೃತೀಯ ಭಾವದಲ್ಲಿ ಮಂಗಳ ಇರುವುದರಿಂದ ಧೈರ್ಯ ಮತ್ತು ಉತ್ಸಾಹ ಹೆಚ್ಚಿರುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸದ ವೇಗ ಹೆಚ್ಚಾಗಲಿದೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇದು ಅತ್ಯುತ್ತಮ ಸಮಯ. ಮೇಲಧಿಕಾರಿಗಳ ಬೆಂಬಲ ದೊರೆಯಲಿದೆ. ತರಾತುರಿಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಡಿ. ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ತಾಳ್ಮೆ ಇರಲಿ.

​ವೃಷಭ ರಾಶಿ:

ಉದ್ಯೋಗ ಸ್ಥಿತಿ: ಕನ್ಯಾ ರಾಶಿಯಲ್ಲಿರುವ ಶುಕ್ರನ ಪ್ರಭಾವದಿಂದ ಸೃಜನಶೀಲತೆ ಮತ್ತು ಆಡಳಿತಾತ್ಮಕ ಸಾಮರ್ಥ್ಯ ಹೆಚ್ಚುತ್ತದೆ. ಕಲೆ, ಬರವಣಿಗೆ, ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿರುವವರಿಗೆ ಈ ವಾರ ಅತ್ಯಂತ ಶುಭದಾಯಕ. ಹಣಕಾಸಿನ ವಿಚಾರಗಳಲ್ಲಿ ಜಾಗರೂಕರಾಗಿರಿ. ಕೆಲಸದ ಸ್ಥಳದಲ್ಲಿ ಅನಗತ್ಯ ಚರ್ಚೆಗಳಿಂದ ದೂರವಿರಿ.

ಮಿಥುನ ರಾಶಿ :

ನಿಮ್ಮ ರಾಶಿಯಲ್ಲೇ ಮಂಗಳನಿರುವುದರಿಂದ ಕಾರ್ಯನಿರತತೆ ಹೆಚ್ಚಿರುತ್ತದೆ ಮತ್ತು ಸವಾಲುಗಳನ್ನು ಎದುರಿಸುವ ಶಕ್ತಿ ಸಿಗುತ್ತದೆ. ಹೊಸ ಹುದ್ದೆ ಅಥವಾ ಹೆಚ್ಚಿನ ಜವಾಬ್ದಾರಿಗಳು ಹುಡುಕಿಕೊಂಡು ಬರಬಹುದು. ಕೋಪ ಮತ್ತು ಆತುರವನ್ನು ಹತೋಟಿಯಲ್ಲಿಟ್ಟುಕೊಳ್ಳಿ. ಹಿರಿಯ ಅಧಿಕಾರಿಗಳ ಸಲಹೆಯನ್ನು ಅಲಕ್ಷಿಸಬೇಡಿ.

​ಕರ್ಕಾಟಕ ರಾಶಿ:

ನಿಮ್ಮ ರಾಶಿಯಲ್ಲಿ ಉಚ್ಚ ಗುರು, ಸೂರ್ಯ ಮತ್ತು ಬುಧ ಇರುವುದರಿಂದ ವೃತ್ತಿಪರ ಕ್ಷೇತ್ರದಲ್ಲಿ ಅತ್ಯಂತ ಶ್ರೇಷ್ಠ ಫಲಗಳು ದೊರೆಯಲಿವೆ. ಬಡ್ತಿ, ವೇತನ ಏರಿಕೆ ಅಥವಾ ಗೌರವ-ಸನ್ಮಾನಗಳು ಸಿಗುವ ಸಾಧ್ಯತೆ ದಟ್ಟವಾಗಿದೆ. ಅಹಂಕಾರದ ಭಾವನೆ ಬಾರದಂತೆ ನೋಡಿಕೊಳ್ಳಿ ಮತ್ತು ತಂಡದೊಂದಿಗೆ ಸೇರಿ ಕೆಲಸ ಮಾಡಿ.

​ಸಿಂಹ ರಾಶಿ:

ನಿಮ್ಮ ರಾಶಿಯಲ್ಲಿ ಕೇತು ಇರುವುದರಿಂದ ವೃತ್ತಿಯಲ್ಲಿ ಸಣ್ಣಪುಟ್ಟ ಗೊಂದಲಗಳು ಅಥವಾ ಅಸ್ಥಿರತೆ ಕಾಡಬಹುದು. ಆಗಸ್ಟ್ ೧೫ರ ಹೊತ್ತಿಗೆ ಸೂರ್ಯನ ಸಂಚಾರ ಬದಲಾವಣೆಯಿಂದ ವಾರದ ಕೊನೆಯಲ್ಲಿ ಹೊಸ ಭರವಸೆ ಮೂಡಲಿದೆ. ಕೆಲಸ ಬದಲಾಯಿಸುವ ಆಲೋಚನೆ ಇದ್ದರೆ ಈ ವಾರ ಮುಂದೂಡುವುದು ಒಳಿತು. ಪ್ರಸ್ತುತ ಜವಾಬ್ದಾರಿಗಳ ಮೇಲೆ ಗಮನವಿಡಿ.

​ಕನ್ಯಾ ರಾಶಿ:

​ನಿಮ್ಮ ರಾಶಿಯಲ್ಲಿ ಚಂದ್ರ ಮತ್ತು ಶುಕ್ರ ಇರುವುದರಿಂದ ಕಾರ್ಯಕ್ಷೇತ್ರದಲ್ಲಿ ಜನಪ್ರಿಯತೆ ಮತ್ತು ಶುಭ ಫಲಗಳು ದೊರೆಯಲಿವೆ. ಹೊಸ ಒಪ್ಪಂದಗಳು, ವ್ಯಾಪಾರ-ವಹಿವಾಟು ವೃದ್ಧಿ ಮತ್ತು ಉದ್ಯೋಗದಲ್ಲಿ ಸ್ಥಿರತೆ ಕಂಡುಬರುತ್ತದೆ. ಕೆಲಸದಲ್ಲಿ ಪರಿಪೂರ್ಣತೆ ತರಲು ಹೋಗಿ ಸಮಯ ವ್ಯರ್ಥ ಮಾಡಬೇಡಿ.

ತುಲಾ ರಾಶಿ:

​ದಶಮ ಭಾವದಲ್ಲಿ ಉಚ್ಚ ಗುರುವಿನ ಶುಭ ದೃಷ್ಟಿ ಇರುವುದರಿಂದ ವೃತ್ತಿಜೀವನದಲ್ಲಿ ಸುಧಾರಣೆ ಕಂಡುಬರುತ್ತದೆ. ಸಿದ್ಧರಾಗಿರುವ ಯೋಜನೆಗಳಿಗೆ ಅನುಮೋದನೆ ಸಿಗಲಿದೆ. ದೂರದ ಪ್ರಯಾಣ ಅಥವಾ ಆಡಳಿತಾತ್ಮಕ ಕೆಲಸಗಳಲ್ಲಿ ಯಶಸ್ಸು. ಕೆಲಸದ ಒತ್ತಡದಿಂದ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ಜಾಗ್ರತೆ ವಹಿಸಿ.

​ವೃಶ್ಚಿಕ ರಾಶಿ:

ಭಾಗ್ಯ ಸ್ಥಾನದಲ್ಲಿ ಶುಭ ಗ್ರಹಗಳ ಸನ್ನಿಧಾನವಿರುವುದರಿಂದ ಕೆಲಸದಲ್ಲಿ ಅದೃಷ್ಟದ ಬೆಂಬಲ ದೊರೆಯಲಿದೆ. ಹೊಸ ಕೆಲಸದ ಹುಡುಕಾಟದಲ್ಲಿದ್ದವರಿಗೆ ಉತ್ತಮ ಕರೆಗಳು ಬರಬಹುದು. ವಿದೇಶಿ ಅಥವಾ ದೂರದ ಸಂಸ್ಥೆಗಳಿಂದ ಶುಭ ವಾರ್ತೆ. ಸಮಯದ ಸದ್ಬಳಕೆ ಮಾಡಿಕೊಳ್ಳಿ ಮತ್ತು ಸೋಮಾರಿತನವನ್ನು ಬಿಡಿ.

​ಧನು ರಾಶಿ:

​ಅಷ್ಟಮದಲ್ಲಿ ಸೂರ್ಯ, ಬುಧ, ಗುರು ಇರುವುದರಿಂದ ಕೆಲಸದ ಸ್ಥಳದಲ್ಲಿ ಹಠಾತ್ ಬದಲಾವಣೆ ಅಥವಾ ಹೆಚ್ಚುವರಿ ಜವಾಬ್ದಾರಿ ಬರಬಹುದು. ಸಂಶೋಧನೆ, ಗುಪ್ತ ಮಾಹಿತಿ ಮತ್ತು ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಉತ್ತಮ ಸಮಯ. ಮೇಲಧಿಕಾರಿಗಳೊಂದಿಗೆ ಕಿರಿಕಿರಿ ಮಾಡಿಕೊಳ್ಳಬೇಡಿ. ಕೆಲಸದ ದಾಖಲೆಗಳನ್ನು ಜಾಗರೂಕತೆಯಿಂದ ನಿರ್ವಹಿಸಿ.

ಇದನ್ನೂ ಓದಿ: ಈ ರಾಶಿಗೆ ಸೂರ್ಯನ ಆಗಮನ, ಈ ರಾಶಿಗಳಿಗೆ ಸೂರ್ಯನ ಬೆಳಕು…?

​ಮಕರ ರಾಶಿ:

​ಸಪ್ತಮ ಭಾವದಲ್ಲಿ ಉಚ್ಚ ಗುರು ಇರುವುದರಿಂದ ಪಾಲುದಾರಿಕೆ ಉದ್ಯೋಗ ಮತ್ತು ಸಾರ್ವಜನಿಕ ಸಂಪರ್ಕದಲ್ಲಿ ಯಶಸ್ಸು ಸಿಗಲಿದೆ. ಹೊಸ ಸಹಯೋಗ ಹಾಗೂ ಉದ್ಯೋಗದಲ್ಲಿ ಉತ್ತಮ ಬೆಳವಣಿಗೆಯ ಲಕ್ಷಣಗಳಿವೆ. ನಿಮ್ಮ ನಿಲುವುಗಳಲ್ಲಿ ಸ್ಪಷ್ಟತೆ ಇರಲಿ, ಅನಗತ್ಯ ಗೊಂದಲಗಳಿಗೆ ಕಿವಿಗೊಡಬೇಡಿ.

​ಕುಂಭ ರಾಶಿ:

​ನಿಮ್ಮ ರಾಶಿಯಲ್ಲಿ ರಾಹು ವಕ್ರಿಯಾಗಿದ್ದು, ಷಷ್ಠ ಭಾವದಲ್ಲಿ ಗುರು-ಬುಧ ಇರುವುದರಿಂದ ಸ್ಪರ್ಧಾತ್ಮಕ ವಾತಾವರಣವಿರುತ್ತದೆ. ಶ್ರಮಕ್ಕೆ ತಕ್ಕಂತೆ ಶತ್ರುಗಳು ಅಥವಾ ಸ್ಪರ್ಧಿಗಳ ಮೇಲೆ ಜಯ ಸಿಗಲಿದೆ. ಕೆಲಸದ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವಿರಿ. ಸಹೋದ್ಯೋಗಿಗಳ ಜೊತೆ ಅನಗತ್ಯ ವಾದ-ವಿವಾದಗಳಿಂದ ದೂರವಿರಿ.

​ಮೀನ ರಾಶಿ:

ನಿಮ್ಮ ರಾಶಿಯಲ್ಲೇ ಶನಿ ವಕ್ರಿಯಾಗಿದ್ದು, ಪಂಚಮದಲ್ಲಿ ಉಚ್ಚ ಗುರು ಇರುವುದರಿಂದ ಬುದ್ಧಿವಂತಿಕೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ. ಶಿಕ್ಷಣ, ಸಲಹಾ ಕ್ಷೇತ್ರ ಮತ್ತು ಕೌಶಲ್ಯ ಆಧಾರಿತ ಕೆಲಸಗಳಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ. ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬ ಮಾಡಬೇಡಿ. ಕೆಲಸದಲ್ಲಿ ಆಲಸ್ಯ ತೋರದೆ ಚಟುವಟಿಕೆಯಿಂದಿರಿ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us