Weekly Career Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ

ಜನವರಿ 18 ರಿಂದ 25ರ ವರೆಗೆ ನಿಮ್ಮ ವೃತ್ತಿ ಜೀವನದಲ್ಲಿ ತಿರುವುಗಳು ಎದುರಾಗಬಹುದು. ಸಮಸ್ಯೆಗಳಿಗೆ ಅತಿಯಾಗಿ ಸ್ಪಂದಿಸದೆ, ನಿಮ್ಮ ಗುರಿಯ ಮೇಲೆ ಗಮನಹರಿಸಿ. ಪ್ರತಿಯೊಂದು ರಾಶಿಯವರಿಗೂ ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿಗಳು, ಅವಕಾಶಗಳು, ಸವಾಲುಗಳು ಕಾದಿವೆ. ಆತುರದ ನಿರ್ಧಾರಗಳನ್ನು ತಪ್ಪಿಸಿ, ಹಿರಿಯರ ಮಾರ್ಗದರ್ಶನದಿಂದ ಯಶಸ್ಸು ಸಾಧಿಸಿ.

Weekly Career Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ
Weekly Career Horoscope
Edited By:

Updated on: Jan 17, 2026 | 3:58 PM

18 ರಿಂದ 25 ರವರೆಗೆ ಉದ್ಯೋಗದಲ್ಲಿ ಹಲವಾರು ತಿರುವುಗಳು ಬರಲಿವೆ. ಸಮಸ್ಯೆಗಳನ್ನು ಬೆನ್ನೇರಿ ಹೊರಟರೆ ನಿಮ್ಮನ್ನು ಪ್ರಪಾತಕ್ಕೆ ಬೀಳಿಸಬಹುದು‌. ಎಷ್ಟು ಬೇಕೋ ಅಷ್ಟಕ್ಕೆ ಸ್ಪಂದಿಸಿ, ನಿಮ್ಮ ಗುರಿಯತ್ತ ಇರಿ.

ಮೇಷ ರಾಶಿ :

ಈ ವಾರ ಕೆಲಸದಲ್ಲಿ ಚಟುವಟಿಕೆ ಹೆಚ್ಚಾಗುತ್ತದೆ. ಹೊಸ ಜವಾಬ್ದಾರಿಗಳು ನಿಮ್ಮ ಸಾಮರ್ಥ್ಯ ಪರೀಕ್ಷಿಸಬಹುದು. ಆತುರದ ನಿರ್ಧಾರ ತಪ್ಪಿಸಿ. ಹಿರಿಯರ ಮಾರ್ಗದರ್ಶನ ಲಾಭಕರ. ಸ್ವಂತ ಪ್ರಯತ್ನದಿಂದ ಅವಕಾಶಗಳನ್ನು ರೂಪಿಸಬಹುದು. ಅಧಿಕಾರಿಗಳ ಗಮನ ನಿಮ್ಮ ಮೇಲೆ ಬೀಳುವ ಸಾಧ್ಯತೆ ಇದೆ.

ವೃಷಭ ರಾಶಿ:

ಮೂರನೇ ವಾರದಲ್ಲಿ ವೃತ್ತಿಯಲ್ಲಿ ನಿಧಾನವಾದರೂ ಸ್ಥಿರ ಪ್ರಗತಿ ಕಾಣುತ್ತದೆ. ಹಣಕಾಸು ಸಂಬಂಧಿತ ವಿಚಾರಗಳಲ್ಲಿ ಜಾಗ್ರತೆ ಅಗತ್ಯ. ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ. ಶ್ರಮಕ್ಕೆ ತಕ್ಷಣ ಫಲ ಕಾಣಿಸದಿದ್ದರೂ ನಿರಾಶರಾಗಬೇಡಿ. ವಾರಾಂತ್ಯಕ್ಕೆ ಒತ್ತಡ ಕಡಿಮೆಯಾಗುತ್ತದೆ. ಸ್ಥಿರತೆ ನಿಮ್ಮ ಬಲ.

ಮಿಥುನ ರಾಶಿ:

ನಿಮಗೆ ಈ ವಾರ ಸಂವಹನ, ಸಭೆ, ಬರವಣಿಗೆ, ಮಾರ್ಕೆಟಿಂಗ್ ಕೆಲಸಗಳಲ್ಲಿ ಯಶಸ್ಸು. ಹೊಸ ಸಂಪರ್ಕಗಳು ಭವಿಷ್ಯಕ್ಕೆ ಉಪಯುಕ್ತ. ಕೆಲಸದ ಒತ್ತಡ ಇದ್ದರೂ ಬುದ್ಧಿಚಾತುರ್ಯದಿಂದ ನಿಭಾಯಿಸುತ್ತೀರಿ. ಸಂದರ್ಶನ ಅಥವಾ ಪ್ರಸ್ತಾವನೆಗೆ ಉತ್ತಮ ಸಮಯ. ಏಕಾಗ್ರತೆ ಕಾಪಾಡಿಕೊಳ್ಳಿ.

ಕರ್ಕಟಕ ರಾಶಿ:

ನಾಲ್ಕನೇ ರಾಶಿಗೆ ಈ ವಾರ ಕೆಲಸದ ಸ್ಥಳದಲ್ಲಿ ಭಾವನಾತ್ಮಕತೆ ಹೆಚ್ಚಾಗಬಹುದು. ಸಹೋದ್ಯೋಗಿಗಳ ಮಾತುಗಳಿಂದ ಬೇಸರವಾಗುವ ಸಾಧ್ಯತೆ. ಶಾಂತವಾಗಿ ಕಾರ್ಯನಿರ್ವಹಿಸಿದರೆ ಸಮಸ್ಯೆ ತೀರಿಕೊಳ್ಳುತ್ತದೆ. ಕುಟುಂಬ ಬೆಂಬಲ ಮನೋಬಲ ನೀಡುತ್ತದೆ. ಹೊಣೆಗಾರಿಕೆ ಹೆಚ್ಚಾದರೂ ನಿಮ್ಮ ಶ್ರಮ ಗುರುತಿಸಲಾಗುತ್ತದೆ.

ಸಿಂಹ ರಾಶಿ:

ನಿಮ್ಮ ನೇತೃತ್ವದ ಗುಣ ಮೆಚ್ಚುಗೆ ಪಡೆಯುವ ವಾರ. ಗೌರವ, ಪ್ರಶಂಸೆ ದೊರೆಯಬಹುದು. ಅಧಿಕಾರ ಸಂಬಂಧಿತ ಕೆಲಸಗಳಲ್ಲಿ ಮುನ್ನಡೆ. ಆದರೆ ಅಹಂಕಾರ ಮತ್ತು ತ್ವರಿತ ನಿರ್ಧಾರ ತಪ್ಪಿಸಿ. ತಂಡದ ಸಹಕಾರದಿಂದ ದೊಡ್ಡ ಗುರಿ ಸಾಧಿಸುವ ಅವಕಾಶ ಇದೆ. ವೃತ್ತಿಯಲ್ಲಿ ಹೆಸರು ಹೆಚ್ಚಾಗುತ್ತದೆ.

ಕನ್ಯಾ ರಾಶಿ:

ನೀವು ಈ ವಾರ ಯೋಜನೆ, ಲೆಕ್ಕಪತ್ರ, ದಾಖಲೆ ಕೆಲಸಗಳಲ್ಲಿ ಒತ್ತಡದಿಂದ ಇರುವಿರಿ. ಸೂಕ್ಷ್ಮ ಪರಿಶೀಲನೆ ನಿಮ್ಮ ಶಕ್ತಿಯಾಗುತ್ತದೆ. ಕೆಲಸದ ಒತ್ತಡ ಇದ್ದರೂ ಫಲ ತೃಪ್ತಿದಾಯಕ. ಆರೋಗ್ಯದ ಕಡೆ ಸ್ವಲ್ಪ ಗಮನ ಅಗತ್ಯ. ಶಿಸ್ತು ಮತ್ತು ಸಮಯಪಾಲನೆ ನಿಮಗೆ ಪ್ರಗತಿಯ ದಾರಿ ತೋರಿಸುತ್ತದೆ.

ತುಲಾ ರಾಶಿ:

ಇದು ನಿಮಗೆ ಪಾಲುದಾರಿಕೆ ಮತ್ತು ಸಾಮೂಹಿಕ ಕಾರ್ಯದಲ್ಲಿ ಲಾಭ ನೀಡುವ ವಾರ. ಮಾತುಕತೆ, ಒಪ್ಪಂದಗಳಲ್ಲಿ ಜಯ. ನಿರ್ಧಾರಗಳಲ್ಲಿ ಸ್ಪಷ್ಟತೆ ಇರಲಿ. ವಿಳಂಬ ಮಾಡಿದರೆ ಅವಕಾಶ ಕೈತಪ್ಪಬಹುದು. ಸಮತೋಲನದ ನಿಲುವು ವೃತ್ತಿಯಲ್ಲಿ ಗೌರವ ತರುತ್ತದೆ. ಕಾನೂನು ಅಥವಾ ಕಲಾತ್ಮಕ ಕ್ಷೇತ್ರಗಳಲ್ಲಿ ಬೆಳವಣಿಗೆ.

ವೃಶ್ಚಿಕ ರಾಶಿ:

ನಿಮ್ಮ ಅತಿಯಾದ ಒಳಗಿನ ಒತ್ತಡ ಕೆಲಸದಲ್ಲಿ ಪ್ರತಿಫಲಿಸಬಹುದು. ಮೌನವಾಗಿ ಮಾಡಿದ ಶ್ರಮ ಫಲ ನೀಡುತ್ತದೆ. ಆಂತರಿಕ ರಾಜಕೀಯದಿಂದ ದೂರವಿರುವುದು ಒಳಿತು. ಹಣಕಾಸು ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯ. ಸಂಶೋಧನೆ, ತನಿಖೆ ಅಥವಾ ತಾಂತ್ರಿಕ ಕೆಲಸಗಳಲ್ಲಿ ಮುನ್ನಡೆ ಸಾಧ್ಯ.

ಧನು ರಾಶಿ:

ಈ ವಾರ ಯಾರದೋ ಮೂಲಕ ಹೊಸ ಅವಕಾಶಗಳ ಸೂಚನೆ ಸಿಗುತ್ತದೆ. ತರಬೇತಿ, ಪ್ರಯಾಣ ಅಥವಾ ವಿದೇಶಿ ಸಂಪರ್ಕ ಲಾಭಕರ. ಭವಿಷ್ಯದ ವೃತ್ತಿಗೆ ಸ್ಪಷ್ಟ ದಿಕ್ಕು ದೊರೆಯುತ್ತದೆ. ಉತ್ಸಾಹ ಹೆಚ್ಚಾಗುತ್ತದೆ. ಆದರೆ ಅತಿಯಾದ ನಿರೀಕ್ಷೆ ತಪ್ಪಿಸಿ. ಕಲಿಕೆ ಮತ್ತು ಜ್ಞಾನ ವೃದ್ಧಿಗೆ ಉತ್ತಮ ವಾರ.

ಮಕರ ರಾಶಿ:

ಬೇಸರದಿಂದ ಇರುವ ನಿಮಗೆ ಈ ವಾರ ಶ್ರಮಕ್ಕೆ ಫಲ ದೊರೆಯುವ ಸಮಯ. ಹಿರಿಯರ ವಿಶ್ವಾಸ ಮತ್ತು ಬೆಂಬಲ ಸಿಗುತ್ತದೆ. ಹುದ್ದೆ ಅಥವಾ ಜವಾಬ್ದಾರಿ ಹೆಚ್ಚಾಗುವ ಸಾಧ್ಯತೆ. ಕೆಲಸದ ಒತ್ತಡ ಇದ್ದರೂ ಸಹನೆ ನಿಮ್ಮ ಗೆಲುವು. ಸರ್ಕಾರಿ ಅಥವಾ ಆಡಳಿತ ಕ್ಷೇತ್ರದಲ್ಲಿ ಪ್ರಗತಿ ಕಾಣಿಸುತ್ತದೆ.

ಕುಂಭ ರಾಶಿ:

ನಿಮ್ಮ ಹೊಸ ಆಲೋಚನೆಗಳು ಮತ್ತು ವಿಭಿನ್ನ ಪ್ರಯತ್ನಗಳು ಮೆಚ್ಚುಗೆ ಪಡೆಯುತ್ತವೆ. ತಂತ್ರಜ್ಞಾನ, ವಿಜ್ಞಾನ, ಇನೋವೇಶನ್ ಕ್ಷೇತ್ರದಲ್ಲಿ ಮುನ್ನಡೆ. ತಂಡದಲ್ಲಿ ನಿಮ್ಮ ಪಾತ್ರ ಮಹತ್ವ ಪಡೆಯುತ್ತದೆ. ದೊಡ್ಡ ಪ್ರಯಾಣದ ಭಂಗ ತಪ್ಪಿಸಿದರೆ ದೊಡ್ಡ ಸಾಧನೆ ಸಾಧ್ಯ. ಸಾಮಾಜಿಕ ಕಾರ್ಯಗಳಿಂದ ಹೆಸರು ಬರುತ್ತದೆ.

ಮೀನ ರಾಶಿ:

ಈ ವಾರ ಸೃಜನಶೀಲತೆ ಮತ್ತು ಕಲ್ಪನೆ ಕೆಲಸಕ್ಕೆ ಹೊಸ ರೂಪ ನೀಡುತ್ತದೆ. ಕಲೆ ಅಥವಾ ಆಧ್ಯಾತ್ಮಿಕ ಕ್ಷೇತ್ರದಲ್ಲಿ ತೃಪ್ತಿ. ನಿರ್ಧಾರಗಳಲ್ಲಿ ಗೊಂದಲ ಸಾಧ್ಯ, ಸ್ಪಷ್ಟ ಗುರಿ ಹಿಡಿಯಿರಿ. ಶಾಂತ ಮನಸ್ಸಿನಿಂದ ಕೆಲಸ ಮಾಡಿದರೆ ಯಶಸ್ಸು ನಿಮ್ಮದಾಗುತ್ತದೆ.

– ಲೋಹಿತ ಹೆಬ್ಬಾರ್ – 8762924271 (what’s app only)