Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರು ಬೇರೆಯವರ ಜಗಳದಲ್ಲಿ ಮಧ್ಯಸ್ಥಿಕೆ ವಹಿಸಲು ಹೋಗಬೇಡಿ
ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 18ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಸವಿಸ್ತಾರ ಮಾಹಿತಿ ಇಲ್ಲಿದೆ. ವೃತ್ತಿ, ಹಣಕಾಸು, ಸಂಬಂಧಗಳು ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಜನ್ಮಸಂಖ್ಯೆಯವರಿಗೆ ಎದುರಾಗುವ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ನೀವು ಮನೆಯಲ್ಲಿ ಹಳೆಯ ವಸ್ತುಗಳನ್ನು ವಿಂಗಡಿಸುವಾಗ ಅಥವಾ ಶುಚಿಗೊಳಿಸುವಾಗ ಪ್ರಮುಖವಾದ ದಾಖಲೆ ಅಥವಾ ಕಳೆದುಹೋಗಿದ್ದ ವಸ್ತುಗಳನ್ನು ಮರಳಿ ಪಡೆಯುವಿರಿ. ಸಂಜೆ ವೇಳೆ ಬಾಲ್ಯದ ಸ್ನೇಹಿತರ ಭೇಟಿಯಿಂದ ಮನಸ್ಸು ಹಗುರವಾಗಲಿದೆ. ನೀವು ತೆಗೆದುಕೊಳ್ಳುವ ನಿರ್ಧಾರವೊಂದು ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ದಾರಿಯಾಗಲಿದೆ. ವಿನಾಕಾರಣ ಬೇರೆಯವರ ಜಗಳದಲ್ಲಿ ಮಧ್ಯಸ್ಥಿಕೆ ವಹಿಸಲು ಹೋಗಬೇಡಿ. ನೀವು ಭವಿಷ್ಯದ ಯೋಜನೆಗಳ ಬಗ್ಗೆ ಚಿಂತನೆ ನಡೆಸಲು ಸೂಕ್ತ ಸಮಯ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ಸಣ್ಣ ವಿಷಯಕ್ಕೂ ನೀವು ಅತಿಯಾಗಿ ಆಲೋಚಿಸಿ ದಿನದ ನೆಮ್ಮದಿ ಹಾಳುಮಾಡಿಕೊಳ್ಳುವ ಸಾಧ್ಯತೆ ಇದೆ. ಯಾರದೋ ಮಾತಿಗೆ ಮರುಳಾಗಿ ಇಂದು ಯಾವುದೇ ಹೊಸ ವಸ್ತುಗಳನ್ನು ಅಥವಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸಬೇಡಿ. ನಿಮ್ಮ ಸೃಜನಶೀಲ ಹವ್ಯಾಸಗಳಿಗೆ ಮನೆಯವರಿಂದ ಪ್ರೋತ್ಸಾಹ ಸಿಗಲಿದೆ. ನೀರಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡುವಾಗ ಸ್ವಲ್ಪ ಜಾಗರೂಕರಾಗಿರುವುದು ಒಳಿತು. ನಿಮ್ಮ ಮನಸ್ಸು ಅಧ್ಯಾತ್ಮದ ಕಡೆಗೆ ಹೆಚ್ಚು ಒಲಿಯಲಿದೆ. ಕುಟುಂಬದವರೊಂದಿಗೆ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಸಂಭವವಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ಹತ್ತಿರದ ಸಂಬಂಧಿಗಳ ಶುಭ ಸಮಾರಂಭದಲ್ಲಿ ಭಾಗವಹಿಸುವ ಯೋಗವಿದೆ. ದೀರ್ಘಕಾಲದ ನಂತರ ಹಿರಿಯರ ಆಶೀರ್ವಾದ ಪಡೆಯುವುದರಿಂದ ಮನಸ್ಸಿನ ಗೊಂದಲಗಳು ತಿಳಿಯಾಗಲಿವೆ. ನಿಮ್ಮ ಬುದ್ಧಿವಂತಿಕೆಯನ್ನು ಮೆಚ್ಚಿ ಯಾರಾದರೂ ಸಲಹೆ ಕೇಳಿ ಬರಬಹುದು. ಉದ್ಯೋಗದಲ್ಲಿರುವವರಿಗೆ ನಾಳೆಯ ಕೆಲಸದ ಸಿದ್ಧತೆಗಾಗಿ ಸ್ವಲ್ಪ ಸಮಯ ವ್ಯಯಿಸಬೇಕಾದ ಅನಿವಾರ್ಯ ಎದುರಾಗಬಹುದು. ಮನೆಯ ಶುಭ ಕಾರ್ಯಗಳ ಕುರಿತು ಚರ್ಚೆಗಳು ನಡೆಯಲಿವೆ. ಆರ್ಥಿಕವಾಗಿ ಇದು ಲಾಭದಾಯಕ ದಿನವಾಗಿದ್ದು, ಮಕ್ಕಳ ಅಗತ್ಯತೆಗಳಿಗಾಗಿ ಹಣ ವ್ಯಯಿಸುವಿರಿ.
ಲೇಖನ- ಸ್ವಾತಿ ಎನ್.ಕೆ.
