AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 18ರ ದಿನಭವಿಷ್ಯ

ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 18ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ವೃತ್ತಿ, ಹಣಕಾಸು, ಸಂಬಂಧಗಳು ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಜನ್ಮಸಂಖ್ಯೆಯವರಿಗೆ ಎದುರಾಗುವ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಗಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 18ರ ದಿನಭವಿಷ್ಯ
Numerology Prediction
ಸ್ವಾತಿ ಎನ್​ಕೆ
| Edited By: |

Updated on: Jan 18, 2026 | 12:35 AM

Share

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನೀವು ಅಧ್ಯಾತ್ಮ ಅಥವಾ ಯೋಗಾಭ್ಯಾಸದಲ್ಲಿ ಅತಿ ಹೆಚ್ಚು ಸಮಯ ಕಳೆಯುವಿರಿ. ನೀವು ತುಂಬ ನಂಬಿಕೆ ಇರಿಸಿದ್ದ ವ್ಯಕ್ತಿಯಿಂದ ವಂಚನೆ ಆಗಿರುವ ಬಗ್ಗೆ ಮಾಹಿತಿ ತಿಳಿಯಲಿದೆ. ಪ್ರಾಪಂಚಿಕ ವಿಷಯಗಳಿಗಿಂತ ಒಳಮನಸ್ಸಿನ ಶಾಂತಿ ಮುಖ್ಯವೆಂದು ನಿಮಗನಿಸುತ್ತದೆ. ಹತ್ತಿರದ ಕಾಡು ಅಥವಾ ಗುಡ್ಡಗಾಡು ಪ್ರದೇಶಗಳಿಗೆ ಸಣ್ಣ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಆದಾಯ ಹೆಚ್ಚಿಸಿಕೊಳ್ಳಲು ಬೇಕಾದ ಪ್ರಯತ್ನಗಳನ್ನು ಮಾಡುವಿರಿ. ಮಕ್ಕಳ ವರ್ತನೆಯಿಂದ ಸ್ವಲ್ಪ ಬೇಸರವಾಗಬಹುದು, ಆದರೆ ಪ್ರೀತಿಯಿಂದ ಅವರಿಗೆ ಬುದ್ಧಿ ಹೇಳುವುದು ಸೂಕ್ತ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಸ್ನೇಹಿತರ ವರ್ತನೆಯಿಂದ ಸ್ವಲ್ಪ ಮಟ್ಟಿಗೆ ಕಿರಿಕಿರಿ ಆಗಲಿದೆ. ಇತರರು ಮಾಡಬೇಕಿದ್ದ ಕೆಲಸಗಳನ್ನು ನೀವೇ ಮಾಡಬೇಕಾಗುವುದರಿಂದ ದೈಹಿಕ ಶ್ರಮ ನಿಮ್ಮನ್ನು ಆವರಿಸಿಕೊಳ್ಳಲಿವೆ. ಮನೆ ರಿಪೇರಿ ಅಥವಾ ತೋಟದ ಕೆಲಸಗಳಲ್ಲಿ ಬಿಡುವಿಲ್ಲದೆ ತೊಡಗಿಕೊಳ್ಳುವಿರಿ. ನಿಮ್ಮ ಪರಿಶ್ರಮಕ್ಕೆ ತಕ್ಕಂತೆ ಹಣಕಾಸಿನ ಲಾಭವು ಅಲ್ಪ ಪ್ರಮಾಣದಲ್ಲಿ ಇರಲಿದೆ. ಹಳೆಯ ಸಾಲವನ್ನು ಮರುಪಾವತಿಸಲು ಅಥವಾ ನೀಡಿದ ಹಣವನ್ನು ವಾಪಸ್ ಪಡೆಯಲು ಗಟ್ಟಿಯಾಗಿ ಪ್ರಯತ್ನಿಸಿ. ಕಾಲುನೋವು ಅಥವಾ ಕೀಲು ನೋವಿನ ಬಗ್ಗೆ ಎಚ್ಚರವಿರಲಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನೀವು ಅನಿರೀಕ್ಷಿತವಾಗಿ ದೂರದ ಊರಿನಿಂದ ಬಂದ ಅತಿಥಿಗಳನ್ನು ಸ್ವಾಗತಿಸುವಿರಿ. ಅವರಿಗೆ ಆಗಬೇಕಾದ ಕೆಲಸದ ಸಲುವಾಗಿ ಓಡಾಟ ಹೆಚ್ಚಾಗಿ ಇರಲಿದೆ. ನೀವು ಈ ಹಿಂದೆ ಮಾಡಿದ ಸಹಾಯಕ್ಕೆ ಪ್ರತಿಯಾಗಿ ಅವಕಾಶವೊಂದನ್ನು ಪಡೆದುಕೊಳ್ಳಲು ಉತ್ತಮ ಯೋಗ ಸಿಗಲಿದೆ. ಕೋಪ ಮಾಡಿಕೊಳ್ಳುವುದೋ ಅಥವಾ ಹಣಕಾಸನ್ನು ನೀಡುವ ಮೂಲಕವೋ ಮಾಡುವ ಬದಲಾಗಿ, ಪ್ರೀತಿ ಮತ್ತು ಅನುಕಂಪದ ಮೂಲಕ ಜನರ ಮನಸ್ಸನ್ನು ಗೆಲ್ಲುವಿರಿ. ಆಧ್ಯಾತ್ಮಿಕ ಗ್ರಂಥಗಳ ಓದಿನಲ್ಲಿ ಆಸಕ್ತಿ ಮೂಡಲಿದೆ.

ಲೇಖನ- ಸ್ವಾತಿ ಎನ್.ಕೆ.