Weekly Horoscope: ಜನವರಿ ತಿಂಗಳ ಮೂರನೇ ವಾರ ನಿಮ್ಮ ರಾಶಿಗನುಗುಣವಾಗಿ ಭವಿಷ್ಯ ತಿಳಿಯಿರಿ
ಜನವರಿ ತಿಂಗಳ ಮೂರನೇ ವಾರದಲ್ಲಿ ನಾಲ್ಕು ಗ್ರಹಗಳು ಧನುವಿನಿಂದ ಮಕರ ರಾಶಿಗೆ ಸಂಚರಿಸಲಿವೆ. ಕುಜನ ಉಚ್ಚ ಸ್ಥಾನ ಇದಾಗಿದ್ದು, ಇದು ಎಲ್ಲರಿಗೂ ಧೈರ್ಯ ನೀಡುವ ವಾರವಾಗಿದೆ. ಆತ್ಮವಿಶ್ವಾಸದಿಂದ ಮುನ್ನಡೆದರೆ ಅಸಾಧ್ಯವಾದ ಕಾರ್ಯಗಳೂ ಸುಲಭವಾಗಿ ಪೂರ್ಣಗೊಳ್ಳುತ್ತವೆ. ಈ ಗ್ರಹ ಸಂಕ್ರಮಣದ ಪ್ರಭಾವವು ಪ್ರತಿ ರಾಶಿಯ ಮೇಲೆ ಹೇಗೆ ಬೀಳುತ್ತದೆ, ಆರ್ಥಿಕ ಸ್ಥಿತಿ, ಸಂಬಂಧಗಳು ಮತ್ತು ಆರೋಗ್ಯದ ಬಗ್ಗೆ ತಿಳಿಯಿರಿ.

ಜನವರಿ ತಿಂಗಳ ಮೂರನೇ ವಾರ ನಾಲ್ಕು ಗ್ರಹಗಳೂ ಧನುವಿನಿಂದ ಮಕರಕ್ಕೆ ಹೋಗುವರು. ಕುಜನ ಉಚ್ಚ ಸ್ಥಾನ ಇದಾಗಿದ್ದು ಎಲ್ಲರ ಬೆಂಬಲವೂ ಇದೆ. ಧೈರ್ಯದಿಂದ ಮುನ್ನಡೆದರೆ ಅಸಾಧ್ಯವೂ ತಾನಾಗಿಯೇ ಸಾಧ್ಯವಾಗಲಿದೆ. ಶುಭಮಸ್ತು ಸರ್ವದಾ
ಮೇಷ ರಾಶಿ:
ಮೂರನೇ ವಾರದಲ್ಲಿ ಆರ್ಥಿಕ ಸ್ಥಿರತೆ, ವ್ಯವಹಾರದಲ್ಲಿ ನಿಧಾನ ಪ್ರಗತಿ. ಬಂಧು ಸಹಕಾರ. ಮಾತುಕತೆಯಲ್ಲಿ ಸಂಯಮ ಅಗತ್ಯ. ಆರೋಗ್ಯದಲ್ಲಿ ವಿಶ್ರಾಂತಿ ಮುಖ್ಯ. ಹಿರಿಯರ ಮಾರ್ಗದರ್ಶನ ಲಾಭ ನೀಡುತ್ತದೆ.
ವೃಷಭ ರಾಶಿ:
ಈ ವಾರ ಹಣಕಾಸು ನಿರ್ಧಾರಗಳಲ್ಲಿ ಎಚ್ಚರ. ಕುಟುಂಬ ಬೆಂಬಲ ದೊರೆಯುತ್ತದೆ. ವ್ಯವಹಾರದಲ್ಲಿ ಲೆಕ್ಕಾಚಾರ ಅಗತ್ಯ. ಮಾತಿನ ಸ್ಪಷ್ಟತೆ ಗೌರವ ತರುತ್ತದೆ. ಆರೋಗ್ಯ ಗಮನಿಸಬೇಕು.
ಮಿಥುನ ರಾಶಿ:
ಮೂರನೇ ವಾರದಲ್ಲಿ ಆದಾಯ ಸುಧಾರಣೆಯ ಸೂಚನೆ ಸಿಗಲಿದೆ. ಬಂಧುಗಳೊಂದಿಗೆ ಸಂವಾದ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಹೊಸ ಆಲೋಚನೆಗಳು ಫಲ ಕೊಡುತ್ತವೆ. ಮಾತಿನ ಜಾಣ್ಮೆ ಯಶಸ್ಸು ತರುತ್ತದೆ.
ಕರ್ಕಾಟಕ ರಾಶಿ:
ನಾಲ್ಕನೇ ರಾಶಿಯವರಿಗೆ ಖರ್ಚು ನಿಯಂತ್ರಣ ಅಗತ್ಯ. ಕುಟುಂಬ ಜವಾಬ್ದಾರಿ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ತಾಳ್ಮೆ ಅವಶ್ಯ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ. ಹಿರಿಯರ ಸಲಹೆಯಿಂದ ನಿಮಗೆ ಸಹಾಯ.
ಸಿಂಹ ರಾಶಿ:
ಜನವರಿಯ ಈ ವಾರದಲ್ಲಿ ಆರ್ಥಿಕವಾಗಿ ಧೈರ್ಯ ತೋರಬಹುದು. ಬಂಧುಗಳಲ್ಲಿ ಗೌರವ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ನಾಯಕತ್ವ ಲಾಭ. ಮಾತಿನ ಪ್ರಭಾವ ಹೆಚ್ಚಾಗುತ್ತದೆ. ಆರೋಗ್ಯ ಸ್ಥಿರತೆ.
ಕನ್ಯಾ ರಾಶಿ:
ಆರನೇ ರಾಶಿಯವರಿಗೆ ಹಣಕಾಸಿನಲ್ಲಿ ಲೆಕ್ಕಪತ್ರ ಮುಖ್ಯ. ಕುಟುಂಬದಲ್ಲಿ ಸಣ್ಣ ಅಸಮಾಧಾನ. ವ್ಯವಹಾರದಲ್ಲಿ ಕ್ರಮಬದ್ಧತೆ ಲಾಭ. ಮಾತಿನಲ್ಲಿ ಸಂಯಮ ಕಾಯ್ದುಕೊಳ್ಳಿ. ಆರೋಗ್ಯ ಸರಾಸರಿ.
ತುಲಾ ರಾಶಿ:
ಆರ್ಥಿಕ ಸಮತೋಲನ ಸಾಧ್ಯ ಈ ವಾರ ಸಾಧ್ಯವಾಗಬಹುದು. ಬಂಧು ಸಂಬಂಧ ಬಲವಾಗುತ್ತದೆ. ವ್ಯವಹಾರ ಒಪ್ಪಂದಗಳಲ್ಲಿ ಜಾಗ್ರತೆ. ಮಾತುಕತೆ ಯಶಸ್ಸಿಗೆ ದಾರಿ. ಆರೋಗ್ಯದ ಕಡೆಗೆ ಗಮನಹರಿಸಿ.
ವೃಶ್ಚಿಕ ರಾಶಿ:
ನಿಮ್ಮದೇ ಆದ ಹಠ ತಪ್ಪಿಸಿ ಈ ವಾರ ಹಣಕಾಸಿನ ರಕ್ಷಣೆಯ ನಿರ್ಧಾರ ಮಾಡಿ. ಕುಟುಂಬದಲ್ಲಿ ಭಾವನಾತ್ಮಕ ಕ್ಷಣಗಳು. ವ್ಯವಹಾರದಲ್ಲಿ ರಹಸ್ಯ ಯೋಜನೆ ಲಾಭ. ಮಾತಿನಲ್ಲಿ ತೀಕ್ಷ್ಣತೆ ಕಡಿಮೆ ಮಾಡಿಕೊಳ್ಳುವಿರಿ.
ಧನು ರಾಶಿ:
ಒಂಭತ್ತನೇ ರಾಶಿಯವರಿಗೆ ಈ ವಾರ ಆದಾಯ ಅವಕಾಶಗಳು ಕಾಣಿಸುತ್ತವೆ. ಬಂಧುಗಳಿಂದ ಸಹಾಯ. ವ್ಯವಹಾರದ ವಿಸ್ತರಣೆಯ ಯೋಚನೆ ಬರಲಿದೆ. ಮಾತಿನ ಉತ್ಸಾಹ ಫಲ ನೀಡುತ್ತದೆ. ಆರೋಗ್ಯದಲ್ಲಿ ಚುರುಕು.
ಮಕರ ರಾಶಿ:
ಈ ವಾರ ನಿಮಗೆ ಆರ್ಥಿಕ ಸ್ಥಿರತೆಯನ್ನು ಕಂಡುಕೊಳ್ಳುವ ಮನಸ್ಸು ಹೆಚ್ಚಾಗುತ್ತದೆ. ಕುಟುಂಬ ಜವಾಬ್ದಾರಿ ನಿರ್ವಹಣೆ ಅಗತ್ಯ. ವ್ಯವಹಾರದಲ್ಲಿ ಶ್ರಮ ಫಲಿಸುತ್ತದೆ. ಮಾತಿನಲ್ಲಿ ಗಂಭೀರತೆಯಿಂದ ಗೌರವ ಬರುತ್ತದೆ.
ಕುಂಭ ರಾಶಿ:
ನಿಮಗೆ ಹಣಕಾಸಿನ ವಿಚಾರಗಳಲ್ಲಿ ಹೊಸ ದಾರಿ ಸಿಗಬಹುದು. ಬಂಧುಗಳಲ್ಲಿ ಸ್ನೇಹ ಬೆಳವಣಿಗೆಯಾಗಲಿದೆ. ವ್ಯವಹಾರದಲ್ಲಿ ತಂತ್ರಬದ್ಧ ಚಿಂತನೆ ಲಾಭ. ಮಾತಿನಲ್ಲಿ ಹೊಸತನ ಗಮನ ಸೆಳೆಯುತ್ತದೆ.
ಮೀನ ರಾಶಿ:
ಈ ವಾರ ನಿಮಗೆ ಆರ್ಥಿಕವಾಗಿ ತಾಳ್ಮೆ ಅಗತ್ಯ. ಕುಟುಂಬ ಬೆಂಬಲ ಮನಶ್ಶಾಂತಿ ಕೊಡುತ್ತದೆ. ವ್ಯವಹಾರದಲ್ಲಿ ಗೊಂದಲ ತಪ್ಪಿಸಿ. ಮಾತಿನಲ್ಲಿ ಸೌಮ್ಯತೆ ಜಯ ತರುತ್ತದೆ.
-ಲೋಹಿತ ಹೆಬ್ಬಾರ್ – 8762924271 (what’s app only)
