AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 17ರ ದಿನಭವಿಷ್ಯ

ಜನ್ಮಸಂಖ್ಯೆಗೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 17ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಸವಿಸ್ತಾರ ಮಾಹಿತಿ ಇಲ್ಲಿದೆ. ವೃತ್ತಿ, ಹಣಕಾಸು, ಸಂಬಂಧಗಳು ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಜನ್ಮಸಂಖ್ಯೆಯವರಿಗೆ ಎದುರಾಗುವ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಗಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 17ರ ದಿನಭವಿಷ್ಯ
Numerology
ಸ್ವಾತಿ ಎನ್​ಕೆ
| Edited By: |

Updated on: Jan 17, 2026 | 12:30 AM

Share

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಮನೆ ಕೆಲಸಗಳು ನಿಮ್ಮ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಮಕ್ಕಳ ಶಿಕ್ಷಣದ ಪ್ರಗತಿಗಾಗಿ ನೀವು ಕೆಲವು ತ್ಯಾಗ ಮಾಡಲಿಕ್ಕೆ ಮುಂದಾಗಲಿದ್ದೀರಿ. ಹೆಣ್ಣುಮಕ್ಕಳಿಗೆ ತವರು ಮನೆಯಿಂದ ಉಡುಗೊರೆ ದೊರೆಯಲಿದೆ. ಹೂವು- ಹಣ್ಣಿನ ವ್ಯಾಪಾರ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಏರಿಕೆ ಆಗಲಿದ್ದು, ಹೊಸ ಆರ್ಡರ್ ಗಳು- ಹೊಸ ಗ್ರಾಹಕರು ದೊರೆಯಲಿದ್ದಾರೆ. ಆಸ್ತಮಾ- ಕಫ ಇಂಥ ಸಮಸ್ಯೆ ಈಗಾಗಲೇ ಇದೆ ಎಂದಾದಲ್ಲಿ ಪರಿಸ್ಥಿತಿ ಉಲ್ಬಣ ಅಗುತ್ತದೆ. ಔಷಧದ ಪದ್ಧತಿಯಲ್ಲಿ ಅಥವಾ ವೈದ್ಯರನ್ನು ಬದಲಾವಣೆ ಮಾಡುವ ಮುಂಚೆ ಆಲೋಚಿಸಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಭಾವನಾತ್ಮಕವಾಗಿ ತುಂಬ ಕಠಿಣವಾದ ದಿನ ಇದಾಗಿರಲಿದೆ. ಬಹಳ ವರ್ಷಗಳಿಂದ ಬಾಂಧವ್ಯ ಇರುವ ವ್ಯಕ್ತಿ, ಸಂಘಟನೆ, ಸಂಸ್ಥೆಯಿಂದ ದೂರ ಆಗಬೇಕಾದ ಪರಿಸ್ಥಿತಿ ಸೃಷ್ಟಿ ಆಗುತ್ತದೆ. ಮುಂದೆ ಏನು ಮಾಡಬೇಕು ಎಂದು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಂಥ ಒತ್ತಡವೊಂದು ಮೇಲೆ ಬೀಳಲಿದೆ. ಮುಖ್ಯ ಕೆಲಸಗಳನ್ನು ಗಡುವಿನ ಒಳಗಾಗಿ ಮಾಡಿ ಮುಗಿಸುವುದು ಬಹಳ ಮುಖ್ಯ. ಮರೆವಿನ ಕಾರಣಕ್ಕೆ ಸಣ್ಣ ಪ್ರಮಾಣದಲ್ಲಿಯಾದರೂ ತೊಂದರೆ ಅನುಭವಿಸುವಂತೆ ಆಗಲಿದೆ. ಮಾಂಸಾಹಾರ ಸೇವಿಸುವವರು ದಿನದ ಮಟ್ಟಿಗೆ ದೂರ ಇರುವುದು ಉತ್ತಮ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ದೇಹದಲ್ಲಿನ ವಿಟಮಿನ್, ಹಿಮೋಗ್ಲೋಬಿನ್ ಇತರ ಮುಖ್ಯ ಅಂಶಗಳು ಸರಿಯಾದ ಪ್ರಮಾಣದಲ್ಲಿ ಇದೆಯೇ ಅಥವಾ ಕೊರತೆ ಇದೆಯಾ ಎಂದು ತಿಳಿದುಕೊಳ್ಳಲು ಕೆಲವು ವೈದ್ಯಕೀಯ ಪರೀಕ್ಷೆ ಮಾಡಿಸಲಿದ್ದೀರಿ. ಬ್ಯಾಂಕ್ ಗಳಲ್ಲಿ ಕೆಲಸ ಮಾಡುವವರು ಈ ದಿನ ನಡೆಸುವ ಹಣಕಾಸು ವ್ಯವಹಾರಗಳಲ್ಲಿ ಸಾಮಾನ್ಯ ದಿನಕ್ಕಿಂತ ಹೆಚ್ಚಿನ ಎಚ್ಚರಿಕೆಯನ್ನು ವಹಿಸಿ. ಕುಟುಂಬ ಸದಸ್ಯರಿಂದ ಆಗುವ ಸಣ್ಣ- ಪುಟ್ಟ ತಪ್ಪುಗಳನ್ನು ದೊಡ್ಡದು ಮಾಡಿ, ಕೂಗಾಟ- ಕಿರುಚಾಟ ಮಾಡಲಿಕ್ಕೆ ಹೋಗಬೇಡಿ.

ಲೇಖನ- ಸ್ವಾತಿ ಎನ್.ಕೆ.

ಗಿಲ್ಲಿ ಎಂದರೆ ಯಾಕೆ ಇಷ್ಟ? ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಹೇಳಿದ್ದಿಷ್ಟು..
ಗಿಲ್ಲಿ ಎಂದರೆ ಯಾಕೆ ಇಷ್ಟ? ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಹೇಳಿದ್ದಿಷ್ಟು..
6 ಅಡಿ ಉದ್ದದ ಹಾವನ್ನು ಹಿಡಿದು ಆಟವಾಡುತ್ತಿದ್ದ ವೃದ್ಧನ ಕತೆ ಏನಾಯ್ತು?
6 ಅಡಿ ಉದ್ದದ ಹಾವನ್ನು ಹಿಡಿದು ಆಟವಾಡುತ್ತಿದ್ದ ವೃದ್ಧನ ಕತೆ ಏನಾಯ್ತು?
ಚೊಚ್ಚಲ ಅರ್ಧಶತಕ ಚಚ್ಚಿದ ರಾಧಾ ಯಾದವ್
ಚೊಚ್ಚಲ ಅರ್ಧಶತಕ ಚಚ್ಚಿದ ರಾಧಾ ಯಾದವ್
ಆಮೆಗತಿಯ ಬ್ಯಾಟಿಂಗ್‌; ಬಾಬರ್​ ಆಝಂಗೆ ಸ್ಟ್ರೈಕ್ ನೀಡದ ಸ್ಮಿತ್
ಆಮೆಗತಿಯ ಬ್ಯಾಟಿಂಗ್‌; ಬಾಬರ್​ ಆಝಂಗೆ ಸ್ಟ್ರೈಕ್ ನೀಡದ ಸ್ಮಿತ್
ಗಿಲ್ಲಿ ನಟನ ಹುಟ್ಟೂರಲ್ಲಿ ಬ್ಯಾನರ್, ಕಟೌಟ್: ಹಳ್ಳಿ ಮಂದಿ ಖುಷಿ ನೋಡಿ..
ಗಿಲ್ಲಿ ನಟನ ಹುಟ್ಟೂರಲ್ಲಿ ಬ್ಯಾನರ್, ಕಟೌಟ್: ಹಳ್ಳಿ ಮಂದಿ ಖುಷಿ ನೋಡಿ..
ಲಕ್ಕುಂಡಿಯಲ್ಲಿ ಮೊದಲ ದಿನದ ಉತ್ಖನನ ಅಂತ್ಯ: ಅಧಿಕಾರಿ ಹೇಳಿದ್ದೇನು?
ಲಕ್ಕುಂಡಿಯಲ್ಲಿ ಮೊದಲ ದಿನದ ಉತ್ಖನನ ಅಂತ್ಯ: ಅಧಿಕಾರಿ ಹೇಳಿದ್ದೇನು?
ಡಿಕೆಶಿಗೂ ಮೊದಲೇ ರಾಹುಲ್ ಗಾಂಧಿ ಭೇಟಿಯಾದ ಕೆಜೆ ಜಾರ್ಜ್
ಡಿಕೆಶಿಗೂ ಮೊದಲೇ ರಾಹುಲ್ ಗಾಂಧಿ ಭೇಟಿಯಾದ ಕೆಜೆ ಜಾರ್ಜ್
ಬಸ್​​ಗೆ ಹಿಂದಿನಿಂದ ಬೊಲೆರೋ ಪಿಕ್-ಅಪ್ ಡಿಕ್ಕಿ: ಚಾಲಕ ಬದುಕಿದ್ದೇ ಪವಾಡ
ಬಸ್​​ಗೆ ಹಿಂದಿನಿಂದ ಬೊಲೆರೋ ಪಿಕ್-ಅಪ್ ಡಿಕ್ಕಿ: ಚಾಲಕ ಬದುಕಿದ್ದೇ ಪವಾಡ
ಇದು ಯಾವುದೋ ಜಾತ್ರೆಯಲ್ಲ: ಹೋರಿ ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ
ಇದು ಯಾವುದೋ ಜಾತ್ರೆಯಲ್ಲ: ಹೋರಿ ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ
‘ಅನ್ನ ಕದ್ದು ತಿಂದಿದ್ದೆ’; ಗಿಲ್ಲಿಯ ಹಳೆಯ ಕಥೆ ಕೇಳಿ ರಕ್ಷಿತಾ ಕಣ್ಣೀರು
‘ಅನ್ನ ಕದ್ದು ತಿಂದಿದ್ದೆ’; ಗಿಲ್ಲಿಯ ಹಳೆಯ ಕಥೆ ಕೇಳಿ ರಕ್ಷಿತಾ ಕಣ್ಣೀರು