
ಬೆಂಗಳೂರು, ಅಕ್ಟೋಬರ್ 04: 07-10-2025ರಿಂದ 13-10-2025ರವರಗೆ ಅಕ್ಟೋಬರ್ ಮೊದಲ ವಾರವಾಗಿದ್ದು, ಕೆಲವು ಆಕಸ್ಮಿಕತೆ, ಪ್ರಯತ್ನದ ಸಾಫಲ್ಯ, ಆದಾಯಕ್ಕೆ ಮಾರ್ಗ, ಅಸಂಖ್ಯ ನಿರೀಕ್ಷೆ, ಉದ್ಯೋಗ ವಿಸ್ತರಣೆ ಎಲ್ಲವೂ ಇದೆ. ಗ್ರಹಗಳು ಎಲ್ಲವನ್ನೂ ಕಾಲಕಾಲಕ್ಕೆ ಕೊಡುತ್ತವೆ. ಅದನ್ನು ಪಡೆದು ಸಂತೋಷದಿಂದ ಇರಬೇಕು. ಅತೃಪ್ತರಾಗಿ ಇದ್ದಷ್ಟೂ ನೆಮ್ಮದಿ ಹಾಳು. ಎಲ್ಲ ಗ್ರಹರು ಶುಭವನ್ನೇ ಕೊಡಲಿ.
ಮೇಷ ರಾಶಿ: ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಶುಭ. ರಕ್ಷಣಾತ್ಮಕ ಉದ್ಯೋಗಗಳಾದ ಸೇನೆ ಮತ್ತು ಪೊಲೀಸ್ ಹಾಗೂ ಎಂಜಿನಿಯರಿಂಗ್ ನಲ್ಲಿ ಪ್ರಗತಿ. ಈ ವಾರ ಮಾನವ ಸಂಪನ್ಮೂಲ ವಿಭಾಗದವರು ಬಹಳ ಮುತುವರ್ಜಿ ವಹಿಸಬೇಕಾಗುವುದು. ನಿಮ್ಮ ಉತ್ಸಾಹ ನಾಯಕತ್ವದ ಹೊಣೆಗಾರಿಕೆಯನ್ನು ನೀಡುವುದು. ಸ್ವತಂತ್ರ ಉದ್ಯೋಗದ ವಿಸ್ತರಣೆ ಮಾಡುವಿರಿ.
ವೃಷಭ ರಾಶಿ: ಅಕ್ಟೋಬರ್ ತಿಂಗಳ ಮೊದಲನೇ ವಾರ ಬ್ಯಾಂಕಿಂಗ್ ಅಥವಾ ಫೈನಾನ್ಸ್ ವೃತ್ತಿಯಲ್ಲಿ ನಿರ್ವಹಣೆ ಸರಿಯಾಗಿರುವುದು. ಸಂಗೀತ ಮುಂತಾದ ಕಲೆಗಳ ಕಾರಣದಿಂದ ಜೀವನ ನಡೆಸುವವರಿಗೆ ಅಲ್ಪ ಸಂಕಟ. ಈ ವಾರ ಆಸ್ತಿಯ ಮೌಲ್ಯವನ್ನು ಹೆಚ್ಚು ಮಾಡಿಸಿಕೊಳ್ಳುವಿರಿ. ಸಹನೆಯನ್ನು ಸ್ಥಿರವಾಗಿ ಉಳಿಸಿಕೊಳ್ಳಲಾಗದು. ತಂತ್ರಜ್ಞಾನದ ಬಳಕೆಯಿಂದ ವೃತ್ತಿಯ ಆರಂಭ.
ಮಿಥುನ ರಾಶಿ: ಬುಧನ ಆಧಿಪತ್ಯದ ಈ ರಾಶಿಗೆ ಈ ವಾರ ಬರಹ ಕ್ಷೇತ್ರದಲ್ಲಿ ದುಡಿಮೆ ಅಧಿಕ ಮಾಡಿಕೊಳ್ಳುವಿರಿ. ಈವಾರ ಮಾಧ್ಯಮದಲ್ಲಿ ವೃತ್ತಿಯನ್ನು ಮಾಡುವವರು ಓಡಾಟವನ್ನು ಹೆಚ್ಚು ಮಾಡಬೇಕಾಗವುದು. ಶಿಕ್ಷಕ ಉದ್ಯೋಗದಲ್ಲಿ ಒತ್ತಡ ಹೆಚ್ಚು. ಐಟಿ ಉದ್ಯೋಗದ ಸಮಯ ಬದಲಾವಣೆಯಿಂದ ಕಷ್ಟ. ನಿಮ್ಮ ಬಹುಮುಖ ಪ್ರತಿಭೆಯ ಪರಿಚಯವಾಗಲಿದೆ. ಭಾಷೆಯ ಮೇಲಿನ ಹಿಡಿತಕ್ಕೆ ಪ್ರಶಂಸೆ.
ಕರ್ಕಾಟಕ ರಾಶಿ: ಅಕ್ಟೋಬರ್ ತಿಂಗಳ ಈ ವಾರ ಹೋಟೆಲ್ ಉದ್ಯಮದಲ್ಲಿ ಅನಿರೀಕ್ಷಿತ ಲಾಭ. ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸ್ಥಾನದ ನಿರೀಕ್ಷೆ ಇರಲಿದೆ. ವೈದ್ಯಕೀಯ ವೃತ್ತಿಗಾಗಿ ನಿಮ್ಮ ಎಲ್ಲ ಪ್ರಯತ್ನವೂ ಇರಲಿದೆ.
ಭೂ ವ್ಯವಹಾರದಲ್ಲಿ ಗ್ರಾಹಕರ ಇಂಗಿತಕ್ಕೆ ತಕ್ಕಂತೆ ಮಾತನಾಡಿ, ಲಾಭ ಪಡೆಯುವಿರಿ. ಈ ವಾರ ಮಾರ್ಗದರ್ಶಕ ವೃತ್ತಿಯಿಂದ ತೃಪ್ತಿಯ ಲಾಭವಿದೆ.
ಸಿಂಹ ರಾಶಿ: ಐದನೇ ರಾಶಿಯವರಿಗೆ ಈ ವಾರ ಸರ್ಕಾರಿ ಅಧಿಕಾರಿಗಳಿಂದ ಕಿರಿಕಿರಿ ಹೆಚ್ಚು. ಕ್ರೀಡೆಯಲ್ಲಿ ಮುಂದುವರಿಯಲು ಅವಕಾಶಗಳ ಅನ್ವೇಷಣೆ ನಡೆಯುವುದು. ಸಿನೆಮಾ ನಿರ್ಮಾಪಕರಿಗೆ ಅಲ್ಪ ಲಾಭ. ಆರ್ಥಿಕ ವ್ಯವಸ್ಥೆಯನ್ನು ಮಾಡುವವರಿಗೆ ಹಣದ ಹೊಂದಾಣಿಕೆ ಸುಲಭಕ್ಕೆ ಆಗದು. ಸೇವಾ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ.
ಕನ್ಯಾ ರಾಶಿ: ರಾಶಿ ಚಕ್ರದ ಆರನೇ ರಾಶಿಯವರಿಗೆ ಈ ವಾರ ವೈದ್ಯಕೀಯ ವೃತ್ತಿಯಲ್ಲಿ ಮೇಲುಗೈ. ವೃತ್ತಿಯ ಆರಂಭಕ್ಕೆ ಸಕಾಲ. ಸಂಶೋಧನೆಯಲ್ಲಿ ಹೊಸತನ್ನು ಅನ್ವೇಷಿಸಬಹುದು. ಐಟಿ ಶಿಕ್ಷಣವನ್ನು ಪಡೆಯುವುದು ಕಷ್ಟವೆನಿಸುವುದು. ಸೂಕ್ಷ್ಮಾತಿಸೂಕ್ಷ್ಮ ಕೆಲಸಗಳನ್ನು ಈ ವಾರದ ಕೆಲವು ಸಮಯ ಮಾಡಲಾಗದು. ಆಕರ್ಷಣೆಯಿಂದ ಎಲ್ಲರನ್ನೂ ವಶಪಡಿಸುವಿರಿ.
ತುಲಾ ರಾಶಿ: ಅಕ್ಟೋಬರ್ ತಿಂಗಳ ಈ ವಾರ ನಿಮಗೆ ಕಾನೂನು ಅಭ್ಯಾಸ ಮಾಡುತ್ತಿದ್ದರೆ ಹೊಸ ಕೇಸ್ ಗಳು ಬರುವುವು. ಮನೆಯ ವಿನ್ಯಾಸಗಾರರಿಗೆ ಬೇಡಿಕೆ ಬರಲಿದೆ. ಬದಲಿ ಕಾರ್ಯವನ್ನು ಮಾಡಬೇಕಾಗಿದ್ದು ಒತ್ತಡ ಅಧಿಕವಾಗಿ, ಆರೋಗ್ಯವೂ ಹಾಳು. ಉದ್ಯೋಗ ತರಬೇತಿಗೆ ತೆರಳುವಿರಿ.
ವೃಶ್ಚಿಕ ರಾಶಿ: ಎಂಟನೇ ರಾಶಿಯವರಿಗೆ ಈ ವಾರ ಖರ್ಚು ಅಧಿಕವಾಗಿ ಉದ್ಯೋಗ ಬದಲಿಸುವ ಯೋಚನೆ ಬರಲಿದೆ. ರಹಸ್ಯ ಕಾರ್ಯಾಚರಣೆಯಲ್ಲಿ ಯಶಸ್ಸು ಸಿಗುವುದು. ಖಾಸಗಿ ಉದ್ಯೋಗದಲ್ಲಿ ಸಿಗುವ ಆಪರ್ ಗಳಿಂದ ಸರಿಯಾದುದು ಬುದ್ಧಿಗೆ ಸೂಚಿಸದು. ಮುದ್ರಕರಿಗೆ ಒತ್ತಡ ಹೆಚ್ಚು.
ಧನು ರಾಶಿ: ಈ ರಾಶಿಯವರಿಗೆ ಅಕ್ಟೋಬರ್ ತಿಂಗಳ ಈ ವಾರ ಪ್ರವಾಸದ ಜವಾಬ್ದಾರಿ ಹೊತ್ತವರಿಗೆ ಮಾನಸಿಕ ಸಮತೋಲನ ಹೆಚ್ಚಾಗುವುದು. ಕಾನೂನು ಅಧ್ಯಯನಯನಕ್ಕೆ ಹೊಸ ತಿರುವು ಸಿಗುವುದು. ಆಧ್ಯಾತ್ಮದ ಮಾರ್ಗದರ್ಶನರಿಗೆ ಸಂತಸ. ಜ್ಞಾನ ಪ್ರಸಾರವು ವಿದೇಶಕ್ಕೂ ವ್ಯಾಪಿಸಲಿದೆ.
ಮಕರ ರಾಶಿ: ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ನಿಮಗೆ ಜೀವನಕ್ಕಾಗಿ ಸಂಗಾತಿಯ ಹಣವನ್ನು ಪಡೆಯುವ ಸಂದರ್ಭ ಬರಲಿದೆ. ಮುಜುಗರವಾದರೂ ಅನಿವಾರ್ಯ. ಆನ್ ಲೈನ್ ಖರೀದಿಯನ್ನು ಮಾಡಿಸಿ, ಆದಾಯ ಬರುವಂತೆ ಮಾಡಿಕೊಳ್ಳುವಿರಿ. ನಿರುದ್ಯೋಗ ನಿಮಗೆ ಏನೂ ಅನ್ನಿಸದು.
ಕುಂಭ ರಾಶಿ: ಶನಿಯ ಆಧಿಪತ್ಯದ ಈ ರಾಶಿ ಮೊದಲ ವಾರ ನಟನಾತ್ಮಕ ವಿಚಾರಕ್ಕೆ ಸಣ್ಣ ಅವಕಾಶ ಲಭ್ಯ. ರಕ್ಷಣೆಯ ವಿಭಾಗದಲ್ಲಿ ಪದವಿಯ ಉನ್ನತಿಯನ್ನು ಬಯಸುವಿರಿ. ಬ್ಯಾಂಕ್ ಹುದ್ದೆಯಿಂದ ಕೆಲವು ಕಾಲ ಕೆಳಗಿಳಿಯುವ ಸ್ಥಿತಿ ಬರಲಿದೆ. ವಿರಾಮದ ಸಮಯದಲ್ಲಿ ಖಾಸಗಿ ಕೆಲಸವನ್ನು ಮಾಡಿಸಿಕೊಡುವಿರಿ.
ಮೀನ ರಾಶಿ: ರಾಶಿ ಚಕ್ರದ ಕೊನೆಯ ರಾಶಿಗೆ ಈ ವಾರ ನಿಮಗೆ ಸಮಾಜಸೇವೆಯನ್ನು ಭೌತಿಕವಾಗಿಯಾಗಲಿ, ಸಾಂಪತ್ತಿಕವಾಗಲಿ ಮಾಡುವಿರಿ. ಸುಳ್ಳು ಸುದ್ದಿಯಿಂದ ಹಣವನ್ನು ಕಳೆದುಕೊಂಡು ಸುಮ್ಮನಿರುವಿರಿ. ಉತ್ಪನ್ನಗಳನ್ನು ತಯಾರಿಸುವವರಿಗೆ ಹೆಚ್ಚಿನ ಬೇಡಿಕೆಗಳು ಬರಲಿವೆ.
ಲೋಹಿತ ಹೆಬ್ಬಾರ್ – 8762924271 (what’s app only)