Weekly Horoscope: ಮಾರ್ಚ್ 19ರಿಂದ ಮಾರ್ಚ್ 25ರ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?
2023ರ ಮಾರ್ಚ್ 19ರಿಂದ ಮಾರ್ಚ್ 25ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.
ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಭವಿಷ್ಯ (Weekly Horoscope) ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹಾಗೂ ಕುತೂಹಲವಿರುತ್ತದೆ. ಅದರಂತೆ 2023ರ ಮಾರ್ಚ್ 19ರಿಂದ ಮಾರ್ಚ್ 25ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.
ಮೇಷ: ನೂತನ ಶೋಭಕೃತ್ ಸಂವತ್ಸರದಲ್ಲಿ ಎಲ್ಲ ಗ್ರಹರೂ ಶುಭಕರವಾದ ಏಕಾದಶಸ್ಥಾನದ ಫಲವನ್ನು ಕೊಡಲಿ. ಈ ವಾರದ ಮಧ್ಯದಿಂದ ನೂತನ ವರ್ಷದ ಆರಂಭವಾಗಲಿದೆ. ಕುಜ, ಶನಿ, ಬುಧ, ಶುಕ್ರರು ಶುಭಸ್ಥಾನದಲ್ಲಿರಲಿದ್ದು ನಿಮಗೆ ಶುಭಫಲಗಳನ್ನು ನೀಡುವರು. ದ್ವಾದಶದಲ್ಲಿರುವ ಗುರುವು ಇನ್ನೂ ಸ್ವಲ್ಪ ಕಾಲ ದೈವಕಾರ್ಯದ ನಿಮಿತ್ತ ಖರ್ಚು ಮಾಡಿಸುವನು. ಸೂರ್ಯ ಹಾಗೂ ಗುರು ಇಬ್ಬರೂ ದ್ವಾದಶದಲ್ಲಿಯೇ ಇರದ್ದಾರೆ. ತಂದೆಯ ಅನಾರೋಗ್ಯದಿಂದಲೂ ಹಣವನ್ನು ಖರ್ಚು ಮಾಡುವರು. ಆರೋಗ್ಯಕ್ಕೋಸ್ಕರ ಬೆಳಗ್ಗೆ ಸೂರ್ಯನಮಸ್ಕಾರ ಮಾಡಿ.
ವೃಷಭ: ಹೊಸ ಸಂವತ್ಸರವಾದ ಶೋಭಕೃತ್ ಸಂವತ್ಸರವು ಬುಧವಾರದಿಂದ ಆರಂಭವಾಗುತ್ತಿದೆ. ನವಗ್ರಹರೂ ಶುಭವಾದ ಏಕಾದಶಸ್ಥಾನದ ಫಲವನ್ನು ನೀಡಲಿ. ಈ ವಾರ ನಿಮ್ಮ ಏಕಾದಶಸ್ಥಾನದಲ್ಲಿ ಸೂರ್ಯ, ಗುರು ಹಾಗೂ ಬುಧರಿದ್ದು ಮಂಗಳದ ಮಳೆಗರೆಯಲಿದ್ದಾರೆ. ಮನೆಯಲ್ಲಿ ಶುಭಕಾರ್ಯ, ಗೌರವ, ಸಂಪತ್ತುಗಳು ಬರಲಿದೆ. ಸರ್ಕಾರದಲ್ಲಿ ಕೆಲಸಗಳು ಬಾಕಿ ಇದ್ದರೆ ವೇಗವಾಗಿ ಕೆಲಸಗಳು ನೆರವೇರುವುದು. ಸರ್ಕಾರದಿಂದ ಹಣವು ಸಿಗಲಿದೆ. ಬಂಧುಗಳಿಂದ ಕೆಲಸಗಳಿಗೆ ಸಹಕಾರ ಸಿಗಲಿದೆ. ಹೊಸ ವರ್ಷದಂದು ಹೊಸ ಕೆಲಸವನ್ನು ಆರಂಭಿಸಿ. ರಾಜರಾಜೇಶ್ವರಿಯನ್ನು ಸ್ತುತಿ ಮಾಡಿ. ಹೊಸ ವರ್ಷ ಶುಭ ನೀಡಲಿ.
ಮಿಥುನ: ನವವರ್ಷದ ಆರಂಭದಲ್ಲಿ ನಿಮಗೆ ಎಲ್ಲ ಗ್ರಹರೂ ಏಕಾದಶಸ್ಥಾನದ ಫಲವನ್ನು ಈಯಲಿ. ಕುಜನು ನಿಮ್ಮ ಮನೆಯಲ್ಲಿ ಇದ್ದು ಶರೀರಪೀಡೆಯನ್ನು ಕೊಡುವನು. ಆಯುಧಗಳಿಂದ ಪೆಟ್ಟನ್ನೂ ತಿನ್ನುವಿರಿ. ಏಕಾದಶದ ಶುಕ್ರನು ನಿಮಗೆ ಸಂಪತ್ತಿನ ಅನೇಕ ಅವಕಾಶಗಳನ್ನು ತೋರಿಸುವನು. ಪತ್ನಿ ಅಥವಾ ಪತಿಯಿಂದ ಲಾಭವಾಗಲಿದೆ. ಇನ್ನು ಮುಂದೆ ಸುಖಪಡುವ ದಿನಗಳು ಬರಲಿವೆ. ಶಿಕ್ಷಕವೃತ್ತಿಯವರಿಗೆ ವಿಶೇಷ ಗೌರವವು, ಸರ್ಕಾರದಿಂದ ಉನ್ನತಸ್ಥಾನವೂ ಸಿಗಲಿದೆ. ಧನಲಾಭ, ವೃತ್ತಿಯಲ್ಲಿ ಯಶಸ್ಸು ಸಿಗಲಿದೆ. ವರ್ಷಾಧಿಪತಿಯಾದ ಬುಧನನ್ನು ಸಂಪ್ರಾರ್ಥಿಸಿ. ನೆಮ್ಮದಿ ಸಿಗಲಿದೆ.
ಕರ್ಕಾಟಕ: ನೂತನವರ್ಷಕ್ಕೆ ಶುಭಾಶಯಗಳು. ಎಲ್ಲ ಗ್ರಹರೂ ನಿಮಗೆ ಮಂಗಲವನ್ನು ಉಂಟುಮಾಡಲಿ. ಗ್ರಹರು ನಿಮಗೆ ಅಷ್ಟಮದಲ್ಲಿರುವ ಶನಿಯು ಶುಭಕರನಲ್ಲ. ಮನಸ್ಸಿಗೂ ಬೇಡ ಆಲೋಚನೆಗಳು ಬರಲಿವೆ. ಅತಿಯಾದ ಒತ್ತಡವನ್ನು ದಿನವೂ ಅನುಭವಿಸುವಿರಿ. ಆರೋಗ್ಯವೂ ಹದ ತಪ್ಪು ಮತ್ತಾವುದೋ ಖಾಯಿಲೆಯಾಗಿ ಬದಲಾಗುವುದು. ನಿಮಗೆ ಇಷ್ಟವಿಲ್ಲದ ಕಡೆಗೆ ಸರ್ಕಾರದ ಉದ್ಯೋಗಕ್ಕೆ ಹೋಗಬೇಕಾದೀತು. ಅವಮಾನಗೊಂಡ ಸ್ಥಳದಲ್ಲಿಯೇ ಕೈಚಾಚುವ ಸಂದರ್ಭ ಬರಬಹುದು. ಕುಜನು ದ್ವಾದಶದಲ್ಲಿದ್ದು ಭೂಮಿಯ ವ್ಯವಹಾರದಲ್ಲಿ ನಷ್ಟವನ್ನೂ ಕಲಹವನ್ನೂ ಮಾಡಿಕೊಳ್ಳುವ ಸಾಧ್ಯತೆ ಇದೆ. ಸೂರ್ಯ, ಗುರು, ಬುಧರು ನವಮದಲ್ಲಿದ್ದು ಸ್ವಲ್ಪ ನಿರಾಳತೆ ಇರಲಿದೆ. ಮಂಗಲಮಯಿಯಾದ ಭದ್ರಕಾಳಿಯನ್ನು ಸ್ಮರಿಸಿ.
ಸಿಂಹ: ಶೋಭಕೃತ್ ಸಂವತ್ಸರವು ಈ ವಾರದ ಮಧ್ಯದಿಂದ ಆರಂಭವಾಗಿದ್ದು ಈ ವರ್ಷ ಎಲ್ಲ ಗ್ರಹರೂ ಶುಭವನ್ನೇ ತರಲಿ. ಈ ವಾರ ನಿಮಗೆ ಗುರುಬಲ ಇಲ್ಲದೇ ಇರುವುದರಿಂದ ಅವಮಾನ, ಸಂಪತ್ತು ನಾಶ, ಮಾನಸಿಕ ಕಿರಿಕಿರಿಗಳು ಇರಲಿವೆ. ಒಳ್ಳೆಯ ಸಮಯದ ಪ್ರತೀಕ್ಷೆಯಲ್ಲಿ ಇರಬಹುದಾಗಿದೆ. ಸಪ್ತಮದ ಶನಿಯು ನಿಮ್ಮ ವಿವಾಹಾದಿ ಶುಭಕಾರ್ಯಗಳನ್ನು ವಿಳಂಬಮಾಡಿಸುವನು. ನವಮದಲ್ಲಿರುವ ಶುಕ್ರ ಹಾಗೂ ರಾಹುಗಳು ಮಿಶ್ರವಾದ ಫಲವನ್ನು ನೀಡುವರು. ಧಾರ್ಮಿಕ ಆಚರಣೆಯ ಮೂಲಕ ಸಂಕಷ್ಟವನ್ನು ಪರಿಹರಿಸಿಕೊಳ್ಳಬುದು. ಶಿವಪಂಚಾಕ್ಷರಿಯನ್ನು ಪಠಿಸಿರಿ.
ಕನ್ಯಾ: ಯುಗಾದಿಯ ಶುಭದಿನ ಎಲ್ಲ ಗ್ರಹರೂ ಶುಭವನ್ನೇ ಕೊಟ್ಟು ವರ್ಷವಿಡೀ ಕಾಪಾಡಲಿ. ವಿವಾಹಕ್ಕೆ ಚಿಂತಿಸುತ್ತಿದ್ದರೆ ಶೀಘ್ರವಾಗಿ ವಿವಾಹವನ್ನು ಮಾಡಿಕೊಳ್ಳುವುದು ಉಚಿತ. ಒಳ್ಳೆಯ ಸಂಬಂಧಗಳೂ ನಿಮಗೆ ಬರಲಿದೆ. ಷಷ್ಠದ ಶನಿ ಹಾಗೂ ಅಷ್ಟಮದ ರಾಹುವಿನಿಂದ ಆರೋಗ್ಯವು ವ್ಯತ್ಯಾಸವಾಗಲಿದೆ. ಸಲ್ಲದ ಅಪವಾದಗಳು ಬರುವ ಸಂಭವವಿದೆ. ಆಪ್ತತೆಯನ್ನು ಯಾರೊಂದಿಗೂ ಇಟ್ಟುಕೊಳ್ಳಬೇಡಿ. ರಹಸ್ಯಗಳು ಸೋರಿಕೆಯಾದಾವು. ಆದಷ್ಟು ಜಾಗರೂಕರಾಗಿರಿ. ಅಷ್ಟಮಾಧಿಪತಿಯು ದಶಮಕ್ಕೆ ಬಂದು ವೃತ್ತಿಯಲ್ಲಿ ಅವಮಾನವಾಗುವಂತೆ ಮಾಡುವನು. ಒತ್ತಡವೂ ಇರಲಿದೆ. ನಾಗದೇವರನ್ನು ಪ್ರಾರ್ಥಿಸಿ. ಪರಮೇಶ್ವರನ ಧ್ಯಾನ ಮಾಡಿ.
ತುಲಾ: ಹೊಸ ವರ್ಷವು ನಿಮಗೆ ಶುಭವಾಗಲಿ. ಈ ವಾರ ಮನಸ್ಸಿಗೆ ಅಸಮಾಧಾನ ಕಿರಿಕಿರಿ ಇರಲಿದೆ. ಪಂಚಮದಲ್ಲಿರವ ಶನಿಯು ಮಾನಹಾನಿಯನ್ನು ನಷ್ಟವನ್ನೂ ಮಾಡಿಸುವನು. ಅನೇಕ ಅಡಚಣೆಗಳು ಉಂಟಾಗುವುವು. ಜೀವನವೇ ಬೇಡ ಎನ್ನಿಸುವಷ್ಟು ಹದಗೆಟ್ಟಿರುತ್ತದೆ. ಷಷ್ಠದಲ್ಲಿ ಗುರು ಹಾಗೂ ಶುಕ್ರರು ಇದ್ದು ಇಬ್ಬರೂ ಪ್ರತಿಕೂಲವಾದ ಫಲವನ್ನೇ ಕೊಡುವರು. ಸಂಕಷ್ಟಗಳು ದೂರವಾಗುವ ಕಾಲ ಸನ್ನಿಹಿತವಾಗಿದೆ ಎಂದೇ ಅರ್ಥ. ಮನೆಯಲ್ಲಿ ಸಾಮರಸ್ಯ ಕೊರತೆ ಎದ್ದು ತೋರುವುದು. ಜಗಳವು ಅತಿರೇಕಕ್ಕೆ ಹೋದರೆ ಮೌನವಹಿಸಿ. ಗುರುವಿನ ಅನುಗ್ರಹವನ್ನು ಪಡೆಯಲೇ ಬೇಕು.
ವೃಶ್ಚಿಕ: ಈ ವಾರದ ಮಧ್ಯದಲ್ಲಿ ಹೊಸ ಸಂವತ್ಸರದ ಆರಂಭ. ಬುಧನು ವರ್ಷಾಧಿಪತಿ ಅಗಿದ್ದುದರಿಂದ ನಿಮ್ಮ ರಾಶ್ಯಧಿಪತಿಯು ಬುಧನ ಮನೆಯಲ್ಲಿ ಅಂದರೆ ಅಷ್ಟಮಸ್ಥಾನದಲ್ಲಿ ಇದ್ದಾನೆ. ದೈವೀಬಲವನ್ನು ಪಡೆದು ಕಾರ್ಯಪ್ರವೃತ್ತರಾದರೆ ಒಳ್ಳೆಯದು. ವಿದೇಶಕ್ಕೆ ಹೋಗುವ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ವೃತ್ತಿಯಲ್ಲಿ ಯಶಸ್ಸು ಲಭಿಸಲಿದೆ. ಅವಿವಾಹಿತರಿಗೆ ನಿಧಾನವಾಗಿ ವಿವಾಹ ಭಾಗ್ಯ ಸಿಗಲಿದೆ. ಹಣದ ಹರಿವು ಉತ್ತಮವಾಗಿದ್ದರೂ ಖರ್ಚೂ ಕೂಡ ಇರಲಿದೆ. ಹೊಸ ಯೋಚನೆಗಳನ್ನು ಹುಟ್ಟು ಹಾಕಿಕೊಳ್ಳುವಿರಿ. ಕುಮಾರಸ್ವಾಮಿಯ ಪೂಜೆ, ದರ್ಶನವನ್ನು ಮಾಡಿ.
ಧನಸ್ಸು : ನೂತನ ವರ್ಷಕ್ಕೆ ಗ್ರಹಗಳು ಅನುಕೂಲಕರವಾಗಿರಲಿ ಎಂಬ ಹಾರೈಕೆ. ವೇತನ ಹೆಚ್ಚಳವಾಗಬಹುದು. ಅವಿವಾಹಿತರಿಗೆ ವಿವಾಹದ ಮಾತುಕತೆಗಳು ನಡೆಯುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಶ್ರಮಕ್ಕೆ ತಕ್ಕ ಫಲವನ್ನು ಪಡೆಯುವರು. ವೃತ್ತಿಯಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಈ ವಾರದ ಕೆಲಸಗಳು ಮನಸ್ಸಿಗೆ ಖುಷಿಯನ್ನು ಕೊಡುವುದು. ಚತುರ್ಥದಲ್ಲಿರುವ ಗುರುವು ಕುಟುಂಬದಿಂದ ಪ್ರೀತಿ ಸಿಗುವಂತೆ ನೋಡಿಕೊಳ್ಳುವನು. ಮನೆಯನ್ನು ಖರೀದಿಸುವ ಮನಸ್ಸು ಇರಲಿದೆ. ಧೈರ್ಯದಿಂದ ಮಾಡಬೇಕಾದ ಕೆಲಸಗಳನ್ನು ಮಾಡುವಿರಿ. ಜಯವೂ ಸಿಗಲಿದೆ. ಮನಸ್ಸಿನಲ್ಲಿ ತಳಮಳವಿದ್ದರೆ ರುದ್ರನ ಸ್ಮರಣೆ ಮಾಡಿ ಪರಿಹರಿಸಿಕೊಳ್ಳಿ.
ಮಕರ: ಶೋಭಕತ್ ಸಂವತ್ಸರದ ಆರಂಭವಾಗಲಿದೆ. ಎಲ್ಲರೂ ಶೂ ಏಕಾದಶಸ್ಥಾನದ ಫಲವನ್ನು ನಿಮಗೆ ಕೊಡಲಿ. ಈ ವಾರ ನಿಮಗೆ ಶುಭಾಶುಭಫಲಗಳೂ ಹೆಚ್ಚಾಗಿ ಇರಲಿದೆ. ಆದಾಯ ಮತ್ತು ಖರ್ಚುಗಳು ಸಮವಾಗಿರಲಿವೆ. ವಾಹನದಿಂದ ಬಿದ್ದು ಗಾಯ ಮಾಡಿಕೊಳ್ಳುವಿರಿ. ಸಾಲವನ್ನು ತೀರಿಸಿಕೊಳ್ಳಲು ಅನುಕೂಲತೆ ಒದಗಿಬರಲುದೆ. ತೃತೀಯದಲ್ಲಿರುವ ಸೂರ್ಯನು ಇರುವುದರಿಂದ ಉತ್ಸಾಹದಿಂದ ಕೆಲಸವನ್ನು ಮಾಡಿ ಮುಗಿಸುವಿರಿ. ದ್ವಿತೀಯದಲ್ಲಿರುವ ಬುಧನು ಸೌಖ್ಯವನ್ನು ಹೆಚ್ಚು ನೀಡುವನು. ನಿಮ್ಮ ಯೋಜನೆಗಳನ್ನು ಪ್ರಾರಂಭ ಮಾಡಿ. ಸಹೋದರರು ಸಹಾಯಾಡಲಿದ್ದಾರೆ. ತಲೆಯಲ್ಲಿ ಒತ್ತಡದಿಂದ ಹಿಂಸೆಯನ್ನು ಅನುಭವಿಸುವಿರಿ. ಶನಿದೇವರಿಗೆ ಪ್ರಿಯವಾದ ಎಳ್ಳೆಣ್ಣೆ ದೀಪವನ್ನು ಬೆಳಗಿ.
ಕುಂಭ : ವರ್ಷವಿಡೀ ಶುಭವಿರಲಿ. ತೃತೀಯದಲ್ಲಿರುವ ಶುಕ್ರನು ಸಹೋದರಿಯಿಂದ ಉತ್ತಮಸಂಪತ್ತನ್ನು ಕೊಡಿಸುವನು. ದ್ವಿತೀಯದಲ್ಲಿರುವ ಗುರು ಹಾಗೂ ಬುಧ, ಸೂರ್ಯರು ವೈಯಕ್ತಿಕವಾದ ಯಶಸ್ಸನ್ನು ಕೊಡುವರು. ಎಲ್ಲ ಗ್ರಹಗಳೂ ಉತ್ತಮಫಲವನ್ನೇ ಕೊಡುತ್ತಾರೆ. ಕಾರ್ಯದ ಒತ್ತಡವೂ ಹೆಚ್ಚಿ, ವೃತ್ತಿಪರರು ಮನೆ ಹಾಗೂ ಕಛೇರಿ ಎರಡನ್ನೂ ಸಮತೋಲನ ಮಾಡಲಾರದೆ ಒದ್ದಾಡುವಿರಿ. ನಿಧಾನಾದ ಕಾರ್ಯವನ್ನು ಕಂಡರೆ ನೀವು ಸಹಿಸಲಾರಿರಿ. ದತ್ತಾತ್ರೇಯ ಸ್ತೋತ್ರ ಪಠಿಸಬೇಕು. ಈ ವಾರ ವೃಥಾ ಅಲೆದಾಟವಿರಲಿದೆ. ನಿದ್ರಾಹೀನತೆಯ ಸಮಸ್ತೆಗಳು ಇರುತ್ತವೆ. ಚತುರ್ಥದಲ್ಲಿರುವ ಕುಜನು ಭೂಮಿಯನ್ನು ಖರೀದಿಸುವಂತೆ ಮಾಡುವನು. ತೃತೀಯದ ರಾಹುವು ಪರಾಕ್ರಮದಿಂದ ಕೆಲಸವನ್ನು ಸಾಧಿಸಿಕೊಡುವನು. ಈಶ್ವರನಿಗೆ ರುದ್ರಾಭಿಷೇಕ ಮಾಡಿ, ಪ್ರಾರ್ಥನೆ ಮಾಡಿ.
ಮೀನ: ನೂತನ ಸಂವತ್ಸರ ನಿಮಗೆ ನೂತನತ್ವವನ್ನು ಕೊಡಲಿ. ದ್ವಾದಶದಲ್ಲಿರುವ ಶನಿಯಿಂದ ಸಂತೋಷವಾಗಲೀ, ಸಮದಮಾನವಾಗಲೀ ಸಿಗದು. ನಿಮ್ಮ ಕಾರ್ಯಗಳು ಶುಭಾಶುಭಮಿಶ್ರವಾಗಿದೆ. ಪರೀಕ್ಷೆಗಾಗಿ ಸಿದ್ಧತೆಯನ್ನು ಮಾಡಿಕೊಳ್ಳುವಾರು. ಈ ವಾರ ಕೆಟ್ಟ ಸುದ್ದಿಗಳು ಬರಲಿದೆ. ಮನೋಬಲ ನಾಶವಾಗಲಿದೆ. ಹಣಕಾಸಿನ ವಿಚಾರದಲ್ಲಿ ಬಹಳ ಗೊಂದಲವಾಗಿರಲಿಲ್ಲ. ದ್ವಿತೀಯದಲ್ಲಿರುವ ಶುಕ್ರನಿಂದ ನೆಮ್ಮದಿಯು ಸಿಗಲಿದೆ. ಸ್ವಲ್ಪ ತಾಳ್ಮೆಯನ್ನು ತಂದುಕೊಳ್ಳಬೇಕು. ಹೊಸ ವರುಷ ಹೊಸ ಹರುಷ ತರಲಿ. ಶನೈಶ್ಚರನಿಗೆ ದೀಪ ಬೆಳಗಿ.
-ಲೋಹಿತಶರ್ಮಾ, ಇಡುವಾಣಿ