Weekly horoscope: ಆದಾಯಕ್ಕಿಂತ ಹೆಚ್ಚು ಖರ್ಚು; ಈ ವಾರದ ನಿಮ್ಮ ಭವಿಷ್ಯ ಹೇಗಿರಲಿದೆ?

ಡಿಸೆಂಬರ್ ಮೊದಲನೇ ವಾರದ ವಾರ ಭವಿಷ್ಯ: ಡಿಸೆಂಬರ್ ತಿಂಗಳ ಮೊದಲ ವಾರ ಗುರುವಿನ ಬದಲಾವಣೆ ಪ್ರಮುಖ ಬದಲಾವಣೆಗೆ ಕಾರಣ. ಸಂತೋಷವು ದುಃಖದಿಂದ ಕೊನೆಯಾಗಬಹುದು. ಅಪ್ರಮತ್ತರಾಗಿ ನಡೆ ನುಡಿಗಳನ್ನು ಇಟ್ಟುಕೊಳ್ಳುವುದು ಬೇಡ. ಮನಸ್ಸು ಹಾಗೂ ಬಾಂಧವ್ಯಗಳ ಏರಿಳಿತಗಳನ್ನು ತಡೆಯುವ ಶಕ್ತಿಯು ದುರ್ಬಲರದ್ದು ಆಗಬೇಕು. ಆರೋಗ್ಯವನ್ನು ಎಲ್ಲ ರಾಶಿಯವರೂ ಬಹಳ ಸೂಕ್ಷ್ಮವಾಗಿ ಗಮನಿಸಕೊಂಡಾಗ ಬರುವ ಆಪತ್ತು ಪರಿಹಾರ. ವಾರ ಶುಭವಾಗಲಿ.

Weekly horoscope: ಆದಾಯಕ್ಕಿಂತ ಹೆಚ್ಚು ಖರ್ಚು; ಈ ವಾರದ ನಿಮ್ಮ ಭವಿಷ್ಯ ಹೇಗಿರಲಿದೆ?
Weekly Horoscope
Updated By: ಸುಷ್ಮಾ ಚಕ್ರೆ

Updated on: Nov 30, 2025 | 5:55 AM

ಮೇಷ ರಾಶಿ :

ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ನಿಮ್ಮ ಕಾರ್ಯಗಳನ್ನು ಹಂಚಿ ನೀವು ನಿಶ್ಚಿಂತರಾಗುವಿರಿ. ಯಾರದೋ ಕೆಲಸವನ್ನು ಮಾಡಿಕೊಡಬೇಕಾಗುವುದು. ಯಾವುದನ್ನು ಯಾವಾಗ ಮಾಡಬೇಕು ಎಂಬ ಚಿಂತೆ ಬರಬಹುದು. ಕೋಪದಿಂದ ನಿಮ್ಮ ನಿಯಂತ್ರಣವನ್ನು ನೀವು ಕಳೆದುಕೊಳ್ಳುವಿರಿ. ಯಾರದೋ ಕೋಪಕ್ಕೆ ಇನ್ಯಾರನ್ನೋ ದೂರುವಿರಿ. ಅಚಾತುರ್ಯದಿಂದ ತಪ್ಪನ್ನು ಮಾಡಿ, ಪಶ್ಚಾತ್ತಾಪ ಪಡುವಿರಿ. ಈ ವಾರ ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಆತಂಕ ಪಡುವಿರಿ. ಕುಟುಂಬದ ಸದಸ್ಯರ ಪ್ರೀತಿಯು ಸಿಕ್ಕಿ ಹರ್ಷಿಸುವಿರಿ. ಆಕಸ್ಮಿಕ ವಾರ್ತೆಯಿಂದ ಉದ್ವೇಗಕ್ಕೆ ಒಳಗಾಗುವಿರಿ. ಸುಖ ಜೀವನದ ನಿರೀಕ್ಷೆಯಲ್ಲಿಯೇ ದಿನವನ್ನು ಕಳೆಯುವಿರಿ. ನಿಮ್ಮ ಕೆಲಸಕ್ಕೆ ಪ್ರಶಂಸೆಯೂ ಸಂಪತ್ತೂ ಸಿಗಲಿದೆ. ಸಂಗಾತಿಯನ್ನು ಸಂತೋಷಪಡಿಸಲು ಏನಾದರೂ ಮಾಡುವಿರಿ.

ವೃಷಭ ರಾಶಿ :

ಮೊದಲನೇ ವಾರದಲ್ಲಿ ನಿಮಗೆ ಸಾಮಾಜಿಕ ಕಾರ್ಯವನ್ನು ಮಾಡಲು ಒತ್ತಡವು ಬರಬಹುದು. ನಿಮ್ಮ ವೈಯಕ್ತಿಕ ಕಾರ್ಯಗಳು ಹಲವು ಹಾಗಯೇ ಉಳಿದುಕೊಂಡಿರುವುದು. ಇನ್ನೊಬ್ಬರಿಗೆ ಉಪಕಾರ ಮಾಡಲು ಹೋಗಿ ನೀವು ಸಂಕಷ್ಟಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಸಾಲದ ಬಾಧೆಯು ನಿಮ್ಮ‌ ಮನಸ್ಸನ್ನು ಚುಚ್ಚುವುದು. ಈ ವಾರ ನಂಬಿಕೆಯನ್ನು ನೀವು ಉಳಿಸಿಕೊಳ್ಳುವತ್ತ ಗಮನ ಇರಿಸಿ. ನೆಮ್ಮದಿಗೆ ನಿಮ್ಮದೇ ಮಾರ್ಗವನ್ನು ಅನುಸರಿಸಿ. ಇನ್ನೊಬ್ಬರನ್ನು ಸರಿ ಮಾಡಲು ಹೋಗಿ ನೀವೇ ಹಾಳಾಗಬಹುದು. ಸ್ನೇಹಿತರ ಜೊತೆ ಹೆಚ್ಚಿನ ಸಮಯವನ್ನು ಕಳೆಯಬೇಕು ಎಂದಿದ್ದರೂ ಆಗದು. ಈ ವಾರ ಸಂಸಾರವನ್ನು ಮುನ್ನಡೆಸುವ ಚಾತುರ್ಯವನ್ನು ನೀವು ತಿಳಿದುಕೊಳ್ಳುವಿರಿ. ಗೌಪ್ಯತೆಯ ವಿಚಾರದಲ್ಲಿ ನೀವು ಯಶಸ್ಸನ್ನು ಕಾಯ್ದುಕೊಳ್ಳುವಿರಿ.

ಮಿಥುನ ರಾಶಿ :

ರಾಶಿ ಚಕ್ರದ ಮೂರನೇ ರಾಶಿಯವರಿಗೆ ಜಾಣ್ಮೆಯ ಹೆಜ್ಜೆಯನ್ನು ನೀವು ಇಡಬೇಕಾದೀತು. ಮನೆಯ ಕುಂದು ಕೊರತೆಗಳನ್ನು ವಿಚಾರಿಸುವ ಸಮಯ ನಿಮಗೆ ಸಿಗದು. ಉದ್ಯಮದ ಕಾರಣಕ್ಕೆ ಅಧಿಕ ಸುತ್ತಾಟವು ಇರುವುದು. ಈ ವಾರ ಸರಕು ವ್ಯವಹಾರವು ಕಷ್ಟವಾಗಬಹುದು. ಸಕಾಲಕ್ಕೆ ಭೋಜನವು ನಿಮಗೆ ಮಾಡಲು ಸಾಧ್ಯವಾಗದೇ ಇದ್ದು ಆರೋಗ್ಯವನ್ನು ಹಾಳಾಗುವುದು. ಪ್ರೀತಿಯನ್ನು ನೀವು ಒಪ್ಪಿಕೊಳ್ಳದೇ ನಿಮ್ಮದೇ ವಾದ ಮಾಡುವಿರಿ. ಸಂಗಾತಿಯ ಮಾತುಗಳು ನಿಮಗೆ ಕಿರಿಕಿರಿಯನ್ನು ಕೊಡುವುದು. ನಿಮಗೆ ಅಭದ್ರತೆಯು ಕಾಡಬಹುದು. ಈ ವಾರ ಸಂಗಾತಿಯು ನಿಮಗೆ ಬೇಕಾದ ಹಣವನ್ನು ನೀಡುವರು. ಸಂಶೋದನೆಯು ನಿಮಗೆ ಖುಷಿ ಕೊಡುವುದು. ಸಾಹಿತ್ಯಾಸಕ್ತರಿಗೆ ಅವಕಾಶಗಳು ಬರಬಹುದು.

ಕರ್ಕಾಟಕ ರಾಶಿ :

ಈ ವಾರ ನಿಮ್ಮ ಕೆಲಸಗಳು ಮಂದಗತಿಯಲ್ಲಿಯೇ ಇರಲಿದ್ದು ತಾಳ್ಮೆ ಇರಲಿ. ಯಾರ ಸಹಾಯ‌ವನ್ನು ಪಡೆದರೂ ನಿಮಗೆ ಸಮಾಧಾನ ಇರದು.‌ ಯಾವುದನ್ನೂ ಒಪ್ಪಿಕೊಳ್ಳುವ ಮೊದಲು ನಿಮಗೆ ನಾಲ್ಕು ಬಾರಿ ಯೋಚಿಸಿ. ವೈಯಕ್ತಿಕ ಸಮಸ್ಯೆಯನ್ನು ನೀವು ಯಾರ ಬಳಿಯೂ ಹೇಳಿಕೊಳ್ಳುವುದು ಕಷ್ಟವಾದೀತು. ವ್ಯಾಪಾರದಲ್ಲಿ ನೀವು ಔದಾರ್ಯ ತೋರುವುದು ಬೇಡ. ಜವಾಬ್ದಾರಿಯಿಂದ ಜಾರಿಕೊಳ್ಳುವ ಯೋಚನೆ ಮಾಡುವಿರಿ. ಸುಮ್ಮನೇ ಎಲ್ಲದಕ್ಕೂ ಒಪ್ಪಿಗೆಯನ್ನು ಸೂಚಿಸುವುದು ಬೇಡ. ಈ ವಾರ ಹಲವಾರು ಬಾರಿ ನಿಮ್ಮ‌ ಅಭಿಪ್ರಾಯ ಮುಖ್ಯವಾಗಲಿದೆ. ಇದ್ದ ನಿಮ್ಮ ಸ್ವಭಾವದಲ್ಲಿ ಪರಿವರ್ತನೆ ಕಾಣಿಸಿಕೊಳ್ಳುವುದು. ನಿಮ್ಮ ವಸ್ತುಗಳ ಉಪಯೋಗವನ್ನು ನೀವು ಬಹಳ ನಿರ್ಲಕ್ಷ್ಯದಿಂದ‌ ಮಾಡುವಿರಿ. ಸರಳವಾಗಿ ಮಾತನಾಡುವುದು ನಿಮಗೆ ಬಾರದು. ಸಂಕೀರ್ಣ ಕಾರ್ಯವನ್ನು ಸರಳ ಯೋಚಿಸಿ.

ಸಿಂಹ ರಾಶಿ :

ರಾಶಿ ಚಕ್ರದ ಐದನೇ ರಾಶಿಯವರಿಗೆ ಚರಾಸ್ತಿಯಲ್ಲಿ ನಿಮಗೆ ಸಿಗಬೇಕಾದ ಪಾಲು ಸರಿಯಾಗಿ ಸಿಗದು. ನ್ಯಾಯಾಲಯದ ಮೊರೆ ಹೋಗುವಿರಿ. ಗೃಹೋದ್ಯಮದಲ್ಲಿ ನೀವು ಲಾಭವನ್ನು ಗಳಿಸುವಿರಿ. ಸಣ್ಣ ಸಮಸ್ಯೆಯನ್ನು ನೀವು ದೊಡ್ಡ ಮಾಡಿಕೊಳ್ಳುವಿರಿ. ನಿಮ್ಮ ಶಾಂತವಾದ ಮನಸ್ಸೇ ಹಲವು ಸಮಸ್ಯೆಗಳನ್ನು ದೂರ ಮಾಡುವುದು. ಆನುವಂಶಿಕವಾಗಿ ಬಂದ ರೋಗವು ನಿಮ್ಮಲ್ಲಿ ಕಾಣಿಸಿಕೊಳ್ಳಬಹುದು. ಈ ವಾರ ಪ್ರಾಮಾಣಿಕತೆಯು ನಿಮಗೆ ವರದಾನವಾಗುವುದು. ಅಪರೂಪದ ವ್ಯಕ್ತಿಗಳ ಭೇಟಿಯಾಗಲಿದೆ. ನಿಮ್ಮ ಸರಳತೆಯು ನಿಮಗೆ ಧನಾತ್ಮಕ ಅಂಶಗಳಿಗೆ ಕಾರಣವಾಗುವುದು. ಈ ವಾರ ಯಾರ ಮೇಲಾದರೂ ಮುನಿಸು ತಾತ್ಕಾಲಿಕವಾಗಿ ಬಂದುಹೋದರೆ ತೊಂದರೆಯಾಗದು. ಉಡುಗೊರೆಯನ್ನು ಪಡೆಯಲು ನೀವು ನಿರಾಕರಿಸುವಿರಿ. ನಿಮ್ಮವರೇ ನಿಮಗೆ ತೊಂದರೆಯನ್ನು ಕೊಡುವುದು ನಿಮಗೆ ಬೇಸರವಾಗಬಹುದು.

ಕನ್ಯಾ ರಾಶಿ :

ಆರನೇ ರಾಶಿಯವರಿಗೆ ಈ ವಾರ ಹಣಕಾಸಿನ ವಿಷಯಕ್ಕೆ ಹೊಂದಾಣಿಕೆ ಹೆಚ್ಚಾಗಿರುವುದು. ‌ಭೂಮಿಯ ಖರೀದಿಸಲು ಬಹಳ ಆತುರ ಬೇಡ. ನಿಮ್ಮ ಕಾರ್ಯದಲ್ಲಿ ಪೂರ್ಣ ಜಯವು ಸಿಗದೇ ಹೋಗುವುದು. ಜಾಣ್ಮೆಯಿಂದ ವ್ಯವಹರಿಸಿದರೆ ಲಾಭವಾಗಬಹುದು. ಮಾಡುವ ಕೆಲಸದಲ್ಲಿ ಶ್ರದ್ಧೆಯು ಕಡಿಮೆ ಆಗುವುದು. ಈ ವಾರ ಕಳೆದುಹೋದ ವಿಚಾರಕ್ಕೆ ಸಂಗಾತಿಯ ಜೊತೆ ಪುನಃ ಜಗಳವಾಡುವಿರಿ. ಆದಷ್ಟು ಒಬ್ಬರಾದರೂ ಸುಮ್ಮನಿದ್ದರೆ ಕಲಹವು ಶಾಂತವಾಗುವುದು. ನಿಮ್ಮ ಆಲೋಚನೆಯನ್ನು ಕೆಲವಷ್ಟಕ್ಕೆ ಸೀಮಿತ. ಉತ್ತಮ ವಸ್ತುಗಳು ಸಿಕ್ಕರೂ ಅದನ್ನು ಉಳಿಸಿಕೊಳ್ಳಲು ಕಷ್ಟಪಡುವಿರಿ.‌ ಮೊದಲ ವಾರದಲ್ಲಿ ನಡೆಯುವ ಮನೆಯ ಶುಭ ಕಾರ್ಯಗಳಿಗೆ ನಿಮ್ಮಿಂದ ಸಹಕಾರವು ಸಿಗಲಿದೆ. ಸಹೋದ್ಯೋಗಿಗಳ ಕಾರ್ಯದ ವೇಗವನ್ನು ನೀವು ಹೆಚ್ಚಿಸುವಿರಿ.

ತುಲಾ ರಾಶಿ :

ರಾಶಿ ಚಕ್ರದ ಏಳನೇ ರಾಶಿಯವರಿಗೆ ಈ ವಾರ ನಿಮ್ಮ ಬಗ್ಗೆಯೇ ನೀವು ಎಲ್ಲರಿಗೂ ಹೇಳಿಕೊಳ್ಳುವಿರಿ. ಇದರಿಂದ ನಿಮ್ಮ ಮೇಲಿರುವ ಭಾವನೆಯು ಬದಲಾಗುವುದು. ನಿಮಗೆ ನಿರೀಕ್ಷೆಗೆ ತಕ್ಕ ಗೌರವ ಸಿಗದೇ ಬೇಸರವಾಗುವುದು. ಕೆಲಸಕ್ಕಾಗಿ ಓಡಾಡುವುದು ವ್ಯರ್ಥವೇ ಆಗುವುದು. ನಿಮ್ಮ ಅಧ್ಯಯನವು ಕಡಿಮೆಯಾಗಲಿದೆ. ಈ ವಾರ ತೆಗೆದುಕೊಳ್ಳುವ ನಿಮ್ಮ ನಿರ್ಧಾರವನ್ನು ಮತ್ತೋಬ್ಬರಿಗೆ ಹೇರುವುದು ಬೇಡ. ಅನುಭವಿಗಳ ಮಾರ್ಗದರ್ಶನದಲ್ಲಿ ಮುನ್ನಡೆಯುವಿರಿ. ಆದಷ್ಟು ಸಮಾಧಾನದಿಂದ ಶತ್ರುಗಳನ್ನು ಗೆಲ್ಲಲು ಪ್ರಯತ್ನಿಸಿ. ರಾಜಕೀಯ ಕ್ಷೇತ್ರದಲ್ಲಿ ನಿಮ್ಮ ಮಾತು ನಡೆಯಲಿದ್ದು ಅದನ್ನು ಸದುಪಯೋಗ ಮಾಡಿಕೊಳ್ಳಿ. ಮನೆಯಲ್ಲಿ ನಿಮಗೆ ಕಳ್ಳತನದ ಭಯ.

ವೃಶ್ಚಿಕ ರಾಶಿ :

ಈ ರಾಶಿಯಲ್ಲಿ ಮೂರು ಗ್ರಹರಿದ್ದು ಈ ವಾರದಲ್ಲಿ ಅಧೈರ್ಯಕ್ಕೆ ಆಸ್ಪದ ಆಗದು. ಅಪರಿಚಿತರು ನಿಮಗೆ ಸಲಹೆಯನ್ನು ಕೊಡಬಹುದು. ಯಾರನ್ನೋ ನಂಬುವ ಸ್ಥಿತಿಯನ್ನು ನೀವು ಕಳೆದುಕೊಳ್ಳಬಹುದು. ಶತ್ರುಗಳಿಗೆ ಕಡಿವಾಣ ಹಾಕಲು ನೀವು ಹಣವನ್ನು ಖರ್ಚು ಮಾಡುವಿರಿ. ಉದ್ಯಮವು ಹಳಿಯನ್ನು ತಪ್ಪಿದಂತೆ ಕಾಣಿಸುವುದು. ಹೊರದೇಶಕ್ಕೆ ನೀವು ಹೋಗಬೇಕಾದ ಸ್ಥಿತಿಯು ಬರಬಹುದು. ನಿಮ್ಮ ಮಿತ್ರರ ಸ್ವಭಾವವನ್ನು ನೀವು ತಿಳಿದುಕೊಳ್ಳುವಿರಿ. ಈ ವಾರ ಉದ್ಯಮದ ವೃದ್ಧಿಗೆ ತುರ್ತು ಸಭೆಯನ್ನು ಮಾಡಬೇಕಾದೀತು. ಹೊಸ ವಾಹನ ಖರೀದಿಯ ಪ್ರಸ್ತಾಪವನ್ನು ತಳ್ಳಿಹಾಕುವಿರಿ. ಆರ್ಥಿಕ ಬಲವನ್ನು ನೋಡಿ ಖರ್ಚಿನ ನಿರ್ಧಾರವನ್ನು ಮಾಡಿ. ಈ ವಾರ ಸ್ನೇಹಿತರು ನಿಮ್ಮ ಬಳಿ ಅಲ್ಪ ಆರ್ಥಿಕ ಸಹಾಯವನ್ನು ಕೇಳುವರು.

ಧನು ರಾಶಿ :

ಈ ವಾರ ನೀವು ವೃತ್ತಿಯಲ್ಲು ಹೇಳಿದ್ದಷ್ಟನ್ನೇ ಮಾಡುವ ನಿಮ್ಮ ಸ್ವಭಾವವನ್ನು ಇಟ್ಟುಕೊಳ್ಳುವಿರಿ. ಉದ್ಯೋಗವು ನಿರೀಕ್ಷಿತದಷ್ಟು ಸರಳವಾಗಿ ಇರದು. ಆರ್ಥಿಕತೆಯು ನಿಮ್ಮ ಕೈ ಮೀರಿ, ಖರ್ಚುಮಾಡಬೇಕಾದೀತು. ಸ್ವಂತ ಬುದ್ಧಿಯಿಂದ ನಿಮ್ಮ ಕಾರ್ಯವನ್ನು ಮಾಡಿಕೊಳ್ಳಿ. ನಿಮ್ಮ ಮಾತು ಕೇಳುಗರಿಗೆ ಹೃದ್ಯವಾಗುವುದು. ಅಗ್ನಿಯ ಭೀತಿಯು ನಿಮಗೆ ಅಧಿಕವಾಗಿ ಕಾಡುವುದು. ಈ ವಾರ ಆರ್ಥಿಕ ದೃಢತೆಯನ್ನು ನಿರೀಕ್ಷಿಸದೇ ಕಾರ್ಯವನ್ನು ಆರಂಭಿಸುವಿರಿ. ಆದುದರ ಬಗ್ಗೆ ಆಲೋಚಿಸಿ ಪ್ರಯೋಜನವಿಲ್ಲ. ಮಕ್ಕಳನ್ನು ತಿದ್ದುವುದು ನಿಮಗೆ ಕಷ್ಟವಾದೀತು. ನಿಮ್ಮ‌ ಸ್ವಭಾವವನ್ನು ದುರುಪಯೋಗ ಮಾಡಿಕೊಳ್ಳುವರು. ಈ ವಾರ ಹತ್ತಾರು ವಿಚಾರವು ನಿಮ್ಮ ತಲೆಯಲ್ಲಿ ಓಡಾಡುವುದು. ಯಾವುದೇ ನಿರ್ಧಾರಕ್ಕೆ ಬರುವುದು ಸಾಧ್ಯವಾಗದು. ಗೊಂದಲು ಹೆಚ್ಚಿರುವುದು. ಗಂಭೀರವಾದ ಚಿಂತನೆಯನ್ನು ಮಾಡಲು ಮನಸ್ಸು ಸ್ತಿಮಿತದಲ್ಲಿ ಇರದು.

 

ಮಕರ ರಾಶಿ :

ಹತ್ತನೇ ರಾಶಿಯವರಿಗೆ ಈ ವಾರ ಬಹಳ ಪ್ರಯತ್ನದಿಂದ ವ್ಯಾಪಾರಕ್ಕೆ ವಿದೇಶದ ಸಂಪರ್ಕವು ಸಿಗಲಿದೆ. ತಮ್ಮದೇ ಸಣ್ಣ ಉದ್ಯಮದಿಂದ ಸ್ತ್ರೀಯರು ಹಣವನ್ನು ಗಳಿಸಬಹುದು. ಭೂಮಿಯ ವಿಚಾರವು ಇತ್ಯರ್ಥವಾಗಿ ಮನಸ್ಸಿಗೆ ಸಮಾಧಾನವಾಗಲಿದೆ. ಕೆಲವು ತೊಂದರೆಗಳನ್ನು ನೀವಾಗಿಯೇ ತಂದುಕೊಳ್ಳಲಿದ್ದೀರಿ. ಯೋಗ್ಯವಾದ ಸ್ಥಾನವು ನಿಮಗೆ ಸಿಗಬಹುದು. ವಿಶ್ವಾಸಘಾತದಿಂದ ನಿಮಗೆ ಬೇಸರವಾಗುವುದು. ಆಹಾರವು ಸರಿಯಾಗಿ ಸಿಗದೇ ನಿಮಗೆ ಸಂಕಟವಾಗಬಹುದು. ದುಡಿಮೆಯ ಬೆನ್ನೇರಿ ಸಂಬಂಧಗಳನ್ನು ಸಡಿಲಮಾಡಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಒಮ್ಮನಸ್ಸು ಬರುವುದು ಕಷ್ಟವಾಗುವುದು. ಖಾಸಗಿ ಸಂಸ್ಥೆಯು ನಿಮ್ಮ ಕಾರ್ಯಕ್ಕೆ ಉನ್ನತ ಸ್ಥಾನವನ್ನು ಕೊಡುವುದು. ಈ ವಾರ ಯಾರಿಂದಲೂ ನಿರೀಕ್ಷಿಸುವುದು ಬೇಡ, ಪ್ರಯೋಜನವಾಗದು.

ಕುಂಭ ರಾಶಿ :

ಡಿಸೆಂಬರ್ ಮೊದಲ ವಾರ ಈ ರಾಶಿಯವರು ಮಾತನ್ನು ಆಡಬೇಕಾದ ಸಂದರ್ಭದಲ್ಲಿ ಆಡಿ. ಎಲ್ಲದಕ್ಕೂ ನಿಮ್ಮ ಅಸ್ತಿತ್ವ ತೋರಿಸಬೇಕಿಲ್ಲ. ಉದ್ಯೋಗದ ಕಾರಣಕ್ಕೆ ಮಾಡಿದ ಪ್ರಯಾಣದಿಂದ ಆಯಾಸವಾಗುವುದು. ಆರ್ಥಿಕ ತೊಂದರೆಯನ್ನು ನೀವು ಮನೆಯಲ್ಲಿ ಹೇಳಿಕೊಳ್ಳುವಿರಿ. ಬಂಧುಗಳಿಂದ ಕೆಲಸವು ಹಾಳಾಗಬಹುದು. ಕಾನೂನಿಗೆ ವಿದ್ಧವಾದ ಕಾರ್ಯವನ್ನು ಸಮರ್ಥಿಸಿಕೊಳ್ಳುವಿರಿ. ಈ ವಾರ ನಿಮ್ಮ ಹೂಡಿಕೆಯಲ್ಲಿ ಬಹಳ ಬದಲಾವಣೆ ಕಾಣಿಸುವುದು. ಯಾವುದೇ ಫಲಾಪೇಕ್ಷೆ ಇಲ್ಲದೇ ಸ್ನೇಹಿತರನ್ನು ಸಂಪಾದಿಸಿಕೊಳ್ಳುವಿರಿ. ಮುಂಗೋಪವವನ್ನು ನೀವೇ ಬಲವಂತವಾಗಿ ಕಡಿಮೆ ಮಾಡಿಕೊಳ್ಳುವಿರಿ. ನಿಮ್ಮ ವ್ಯವಹಾರವು ಹೆಚ್ಚು ಚೆನ್ನಾಗಿ ಆಗಲು ದೈವ ಬಲವನ್ನು ಪ್ರಾರ್ಥಿಸಿ.

ಮೀನ ರಾಶಿ :

ಹೊಸ ಉದ್ಯಮದ ಬಗ್ಗೆ ಚಿಂತಿಸಿ ಸ್ಪಷ್ಟ ನಿರ್ಧಾರಕ್ಕೆ ಬರುವಿರಿ. ರೋಗವು ಹೆಚ್ಚಾಗುವ ಸಾಧ್ಯತೆ ಇದೆ. ಯಾರಾದರೂ ನಿಮ್ಮನ್ನು ಎಚ್ಚರಿಸುವರು. ನಿಮ್ಮ ಬಗ್ಗೆ ಸರಿಯಾಗಿ ತಿಳಿಹೇಳುವರು. ದೇಹಾಯಾಸದಿಂದ ಕಷ್ಟವಾಗಲಿದೆ. ಈ ವಾರ ನೀವು ದೇವತಾ ಕಾರ್ಯಗಳು ಸಾಲಾಗಿ ಬರಲಿದ್ದು, ಎಲ್ಲ ಕಡೆ ನಿಮ್ಮ ಹಾಜರಿ ಇರುವುದು. ಮಗ್ನರಾಗುವಿರಿ. ಸಿಟ್ಟಾಗುವ ಸ್ಥಿತಿಯಲ್ಲಿಯೂ ನೀವು ಶಾಂತರಾಗುವಿರಿ. ಮನೆಯ ಕೆಲಸವೆಲ್ಲವೂ ಹಾಗೆಯೇ ಇರಿಸಿಕೊಂಡು ಬಂಧುಗಳ ಮನೆಗೆ ಹೋಗಲಿದ್ದೀರಿ. ರಕ್ಷಣಾವಿಭಾಗದ ಮುಖ್ಯಸ್ಥರಾಗುವ ಸಾಧ್ಯತೆ ಇದೆ. ಉದ್ಯಮದಲ್ಲಿ ಆದಾಯವನ್ನು ಹೆಚ್ಚಿಸಲು ನೌಕರರ ಜೊತೆ ಮಾತನಾಡುವಿರಿ. ಈ ವಾರ ಬಹಳ ಹಳೆಯ ಹಾಗೂ ಆಪ್ತ ಬಂಧುಗಳನ್ನು ಕಳೆದುಕೊಳ್ಳುವಿರಿ. ಮನೆಯ ಕಾರ್ಯವನ್ನು ಸರಿದೂಗಿಸುವುದು ನಿಮಗೆ ಕಷ್ಟ ಎನಿಸಬಹುದು.

-ಲೋಹಿತ ಹೆಬ್ಬಾರ್ – 8762924271 (what’s app only)